Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಶ್ವ ಪ್ರಸಿದ್ಧ ಭಾರತದ 7 ಗುಹಾಂತರ ದೇವಾಲಯಗಳು
ಭಾರತದಲ್ಲಿ ಸಾಕಷ್ಟು ವೈಶಿಷ್ಟ್ಯಪೂರ್ಣವಾದ ದೇವಾಲಯಗಳಿವೆ. ಅದರಲ್ಲೂ ಅನೇಕ ದೇವಾಲಯಗಳನ್ನು ಪುರಾತನಕಾಲದಲ್ಲಿ ಕಟ್ಟಿಸಲಾಗಿದ್ದು ಹೆಚ್ಚಿನ ದೇವಾಲಯಗಳು ಇಂದಿಗೂ ಅಸ್ತಿತ್ವದಲ್ಲಿದೆ ಮತ್ತೆ ಕೆಲವು ರಾಜರುಗಳ ಆಡಳಿತದ ಕಾಲದಲ್ಲಿ ನಡೆದಂತಹ ಯುದ್ಧ, ಲೂಟಿಗಳಿಂದ ಹಾಳಾಯಿತು, ಮತ್ತೆ ಕೆಲವು ದೇವಾಲಯಗಳು ಸರಿಯಾದ ನಿರ್ವಹಣೆಯಿಲ್ಲದೆ ಪಾಳು ಬಿದ್ದವು.
ಈಗ ಅಸ್ತಿತ್ವದಲ್ಲಿರುವ ದೇವಾಲಯಗಳಲ್ಲಿ ಅಜಂತಾ, ಎಲ್ಲೂರೂ, ಐಹೊಳೆ, ಐಬೀಡು, ಪಟ್ಟದಕಲ್ಲು, ಹಂಪಿ ಹೀಗೆ ಅನೇಕ ದೇವಾಲಯಗಳು ದೇಶ-ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಈ ದೇವಾಲಯಗಳಲ್ಲಿರುವ ಶಿಲ್ಪ ಕಲೆಗಳು ಪ್ರವಾಸಿಗರನ್ನು, ರಸಿಕರನ್ನು ತನ್ನತ್ತ ಸೆಳೆಯುತ್ತಿದೆ.
ಭಾರತದಲ್ಲಿ ದೊಡ್ಡ-ದೊಡ್ಡ ದೇವಲಯಗಳಲ್ಲದೆ ಅನೇಕ ವಿಶಿಷ್ಟವಾದ, ಆಕರ್ಷಕವಾದ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಗುಹಾಂತರ ದೇವಾಲಯಗಳು ಕೂಡ ಸೇರಿವೆ. ಈ ದೇವಾಲಯಗಳು ನೋಡಲು ಅತ್ಯಾಕರ್ಷಕವಾಗಿದ್ದು ಭಕ್ತಾಧಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಈ ಲೇಖನದಲ್ಲಿ ಭಾರತದ ಪ್ರಸಿದ್ಧ ಗುಹಾಂತರ ದೇವಾಲಯಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

ಎಲ್ಲೂರೂ ಗುಹೆ ದೇವಾಲಯ:
ಮಹಾರಾಷ್ಟ್ರದಲ್ಲಿರುವ ಈ ದೇವಾಲಯದಲ್ಲಿ 30ಕ್ಕಿತ ಅಧಿಕ ಗುಹೆಗಳಿವೆ. ಇಲ್ಲಿರುವ ದೇವಾಲಯಗಳು ಹಿಂದೂ, ಜೈನ್, ಬೌದ್ಧ ಧರ್ಮದವರಿಂದ ಪೂಜಿಸಲ್ಪಡುತ್ತಿದೆ. ಇದನ್ನು ವಿಶ್ವ ಪಾರಂಪರೆಯ ಸ್ಥಳವೆಂದು ಗುರುತಿಸಲಾಗಿದೆ.

ಅಜಂತಾ ಗುಹೆಗಳು:
ಈ ದೇವಾಲಯವು ಬೌಧ್ಧ ಚೈತ್ಯಗಳಿಗೆ ಹಾಗೂ ಇಲ್ಲಿನ ಗೋಡೆಗಳಲ್ಲಿನ ಭಿತ್ತಿಚಿತ್ರಗಳಿಂದ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.

ಎಲಿಫೆಂಟಾ ಗುಹೆಗಳು
ಭಾರತ ಮುಂಬೈ ನಗರದ ಸಮೀಪ ಸಾಗರದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿವೆ. ಎಲಿಫೆಂಟಾ ದ್ವೀಪದ ಮೂಲ ಮರಾಠಿ ಹೆಸರು ಘಾರಾಪುರಿ. ಪೋರ್ಚುಗೀಸರು ಈ ಹೆಸರನ್ನು ಎಲಿಫೆಂಟಾಎಂದು ಬದಲಾಯಿಸಿದರು. ೧೯೮೭ರಲ್ಲಿ ಎಲಿಫೆಂಟಾ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.

ಅಮರನಾಥ್ ಗುಹೆ ದೇವಾಲಯ:
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಗುಹೆ ದೇವಾಲಯವಾಗಿದೆ. ಸುಮಾರು 5000 ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು (stalagmite) ಲಿಂಗದ ಆಕಾರವನ್ನು ಹೊಂದಿದ್ದು ಆ ಲಿಂಗವನ್ನು ಪೂಜಿಸಲಾಗುತ್ತಿದೆ.

ಉದಯಗಿರಿ ಗುಹೆ ದೇವಾಲಯ:
ಕಲ್ಲಿನ ಈ ಗುಹೆ ದೇವಾಲಯವನ್ನು 2ನೇ ಚಂದ್ರಗುಪ್ತನ ಕಾಲದಲ್ಲಿ ನವೀಕರಣಗೊಳಿಸಲಾಯಿತು.ಇದನ್ನು ಕ್ರಿ.ಶ 4ರಿಂದ 5ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಪಟ್ಟದ್ಕಲ್ಲು ದೇವಾಲಯ:
ಕಲ್ಲಿನ ಈ ಗುಹೆ ದೇವಾಲಯ ತುಂಬಾ ಪ್ರಸಿದ್ಧವಾಗಿದ್ದು ಇದನ್ನು ಒಂದೇ ಒಂದು ಕಲ್ಲಿನಿಂದ ಕಟ್ಟಲಾಗಿದೆ! ಈ ದೇವಲಯವನ್ನು ಕ್ರಿ.ಶ 8 ನೇ ಶತಮಾನದಲ್ಲಿ ಕಟ್ಟಲಾಗಿದೆ.

ವರಹಾ ಗುಹೆ ದೇವಾಲಯ:
ಈ ದೇವಾಲಯವು ತಮಿಳು ನಾಡಿನಲ್ಲಿದೆ. ಇದನ್ನು ಕ್ರಿ.ಶ. 7ನೇ ಶತಮಾನದಲ್ಲಿ ಕಟ್ಟಲಾಗಿದೆ. ಈ ದೇವಾಲಯದಲ್ಲಿ ವಿಷ್ಣು ಹಾಗೂ ಭೂಮಾತೆಯನ್ನು ಪೂಜಿಸಲಾಗುವುದು.



Click it and Unblock the Notifications
