Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಿಗೂಢ ಸ್ಥಳದಿಂದ 20 ಸಾವಿರ ಮಂದಿ ನಾಪತ್ತೆ..! ಅಲಾಸ್ಕಾ ಟ್ರಯಾಂಗಲ್ ಕಥೆ ಕೇಳಿದ್ದೀರಾ?
ಭೂಮಿಯ ಮೇಲೆ ನಾವು ಎಂತಹ ವಿಚಿತ್ರ ಭೂಪ್ರದೇಶಗಳ ಹೊಂದಿದ್ದೇವೆ ಅಂದ್ರೆ ಅಲ್ಲಿನ ವಿಚಿತ್ರತೆಯ ಕುರಿತು ಆ ಕುತೂಹಲಗಳ ಕುರಿತು ಇಂದಿಗೂ ಉತ್ತರ ಪಡೆಯುವುದು ಕಷ್ಟವಾಗಿದೆ. ಅಲ್ಲಿ ನಡೆಯುವ ವಿಚಿತ್ರ ವಿದ್ಯಮಾನಗಳಿಗೆ ವಿಜ್ಞಾನಿಗಳು ಸಹ ಉತ್ತರ ಕಂಡುಕೊಳ್ಳುವಲ್ಲಿ ವಿಫಲರಾಗಿರುತ್ತಾರೆ. ಇಂತಹ ಹಲವು ಭೂ ಪ್ರದೇಶಗಳು ನಮ್ಮ ನಡುವೆಯೇ ಇವೆ.
ಅದರಲ್ಲಿ ನಾವು ಬಹಳ ಕಾಲದಿಂದಲೂ ಕೌತುಕವಾಗಿ ನೋಡುತ್ತಿರುವುದು ಬರ್ಮುಡಾ ಟ್ರಯಾಂಗಲ್ ಎಂಬ ಪ್ರದೇಶ. ಇಲ್ಲಿನ ನೀರಿನ ಸುಳಿಯ ಹತ್ತಿರ ಹೋದವರು ಯಾರು ಕೂಡ ಬದುಕಿ ಬಂದಿಲ್ಲ ಎಂಬ ವಾದವಿದೆ. ಆದ್ರೆ ಈ ಘಟನೆಗಳಿಗೆ ಕಾರಣ ಏನು ಎಂಬುದನ್ನು ವಿಜ್ಞಾನಿಗಳ ತಂಡ ಬಯಲು ಮಾಡಿತ್ತು. ಅಲ್ಲಿನ ಗುರುತ್ವಾಕರ್ಷಣಾ ಬಲ ಹಾಗೂ ಭೌಗಳಿಕ ರಚನೆಯು ಈ ಎಲ್ಲಾ ವಿದ್ಯಮಾನಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಲಾಗಿತ್ತು.

ಹಾಗೆಯೇ ಇಲ್ಲೊಂದು ಭೂ ಪ್ರದೇಶವೀಗ ಮತ್ತೊಂದು ಬರ್ಮುಡಾ ಟ್ರಯಾಂಗಲ್ ಆಗಿ ಪರಿವರ್ತನೆಗೊಂಡಿದೆ. ಇಲ್ಲಿಯೂ ಕೂಡ ನಿಗೂಢವಾಗಿ ಜನರು ನಾಪತ್ತೆಯಾಗುತ್ತಿದ್ದಾರೆ. ಈವರೆಗೆ ಸುಮಾರು 20 ಸಾವಿರ ಮಂದಿ ಈ ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಗಳಾಗಿದ್ದು ಅವರು ಎಲ್ಲಿದ್ದಾರೆ? ನಾಪತ್ತೆಯಾಗಲು ಕಾರಣವೇನು? ಅವರ ಸುಳಿವು ಕೂಡ ಪತ್ತೆಯಾಗಿಲ್ಲ.
ಏನಿದು ಅಲಾಸ್ಕಾ ಟ್ರಯಾಂಗಲ್?
ಅಲಾಸ್ಕಾ ಉತ್ತರ ಅಮೆರಿಕಾದ ವಾಯುವ್ಯ ತುದಿಯಲ್ಲಿರುವ ಒಂದು ಪುಟ್ಟ ರಾಜ್ಯವಾಗಿದೆ. ಈ ಪುಟ್ಟ ರಾಜ್ಯದ ಒಂದು ಭಾಗದಲ್ಲಿ ಪೆಸಿಫಿಕ್ ಸಮುದ್ರ ಕಾಣಬಹುದು. ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಈ ರಾಜ್ಯವು ಹೆಚ್ಚಾಗಿ ಹಿಮದಿಂದ ಕೂಡಿದೆ. ಆದ್ರೆ ಈ ಅಲಾಸ್ಕಾ ಟ್ರಯಾಂಗಲ್ ಎಂದು ಬಿಂಬಿಸಲಾಗಿರುವ ಸ್ಥಳವು ಉತ್ತರ ತೀರದಲ್ಲಿರುವ ಉಟ್ಕಿಯಾಗ್ವಿಕ್, ದಕ್ಷಿಣದಲ್ಲಿ ಆಂಕೋರೇಜ್ ಮತ್ತು ಜುನೌ ಪ್ರದೇಶವನ್ನು ಸಂಪರ್ಕಿಸುತ್ತದೆ.
ಈ ಮೂರು ಸ್ಥಳಗಳು ಒಂದೇ ಕಡೆ ಬೆರೆಯುವ ಸ್ಥಳವೇ ಈ ಅಲಾಸ್ಕಾ ಟ್ರಯಾಂಗಲ್ ಆಗಿದೆ. 1970ರ ದಶಕದಿಂದೀಚೆಗೆ ಅಲಾಸ್ಕಾದ ಜುನೌ ಬಳಿ ಕನಿಷ್ಠ 20,000 ಜನರು ಕಣ್ಮರೆಯಾಗಿದ್ದಾರೆ ಎಂದು ವರದಿಯೊಂದು ಹೇಳುತ್ತದೆ.
ಈ ಸ್ಥಳ ಪತ್ತೆಯಾಗಿದ್ದು ಯಾವಾಗ?
ಈ ಸ್ಥಳವನ್ನ 1972ರಲ್ಲಿ ಪತ್ತೆ ಮಾಡಲಾಗಿದೆ. ಅಂದರೆ ಈ ಪ್ರದೇಶದಲ್ಲಿ ಈ ರೀತಿ ವಿಚಿತ್ರಗಳು ನಡೆಯುತ್ತಿದೆ ಎಂಬುದು ಆಗ ಗಮನಕ್ಕೆ ಬಂದಿದೆ. ಇದೆ ವರ್ಷ ಇಬ್ಬರು ಪೈಲೆಟ್‌ಗಳಿದ್ದ ಲಘು ವಿಮಾನವೊಂದು ಈ ಸ್ಥಳದಿಂದ ನಾಪತ್ತೆಯಾಗಿತ್ತು. ಯುಎಸ್ ಹೌಸ್ ಮೆಜಾರಿಟಿ ಲೀಡರ್ ಥಾಮಸ್ ಹೇಲ್ ಬಾಗ್ಸ್ ಸೀನಿಯರ್ ಮತ್ತು ಅಲಾಸ್ಕಾ ಕಾಂಗ್ರೆಸ್‌ನ ನಿಕ್ ಬೆಗಿಚ್ ಅವರು ಬೆಗಿಚ್ ಅವರ ಸಿಬ್ಬಂದಿ ರಸೆಲ್ ಬ್ರೌನ್ ಮತ್ತು ಪೈಲಟ್ ಡಾನ್ ಜಾನ್ಜ್ ಅವರೊಂದಿಗೆ ಆಂಕೊರೇಜ್‌ನಿಂದ ಜುನೌಗೆ ಲಘು ವಿಮಾನದಲ್ಲಿ ಹಾರುತ್ತಿದ್ದಾಗ ಕಣ್ಮರೆಯಾದರು. ಅವರನ್ನು ಹುಡುಕಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಆದರೆ ಮೃತದೇಹಗಳು ಅಥವಾ ವಿಮಾನಗಳು ಪತ್ತೆಯಾಗಲಿಲ್ಲ.
ಈ ಸ್ಥಳದಲ್ಲಿ ಎತ್ತರದ ಪರ್ವತಗಳು, ಹವಾಮಾನ ವೈಪರಿತ್ಯಗಳು, ಹಿಮ ಕರಡಿ ಹೀಗೆ ಹಲವು ಕಾರಣಗಳ ಪಟ್ಟಿ ಮಾಡಲಾಗಿದೆ. 1970ರಲ್ಲಿ 25 ವರ್ಷದ ನ್ಯೂಯಾರ್ಕ್ ನಿವಾಸಿ ಗ್ಯಾರಿ ಫ್ರಾಂಕ್ ಎಂಬಾತ ಬೇಟೆಯಾಡಲು ಹೋಗಿದ್ದ ಆತ ಮರಳಿ ಬಂದಿರಲಿಲ್ಲ. ಈ ಪ್ರಕರಣ ಕೂಡ ಬಹಳ ಚರ್ಚೆಗೆ ಕಾರಣವಾಗಿತ್ತು. ಆತನ ಹುಡುಕಾಟಕ್ಕೆ ತಿಂಗಳುಗಳ ಕಾಲ ಸಮಯ ವ್ಯಯಿಸಲಾಗಿತ್ತು. ಆದ್ರೆ ಆತನ ಸುಳಿವು ಸಿಕ್ಕಿರಲಿಲ್ಲ.
ಆದರೆ 1997ರಲ್ಲಿ ಅಲಾಸ್ಕಾದ ಪೊಕ್ರೋಪಿನ್ ನದಿ ತೀರದಲ್ಲಿ ಹತ್ತಾರು ಮಾನವ ತಲೆ ಬುರುಡೆಗಳು ಪತ್ತೆಯಾಗಿತ್ತು. 2002ರಲ್ಲಿ ಈ ತಲೆ ಬುರುಡೆಗಳ ಎಎಸ್‌ಎ ವರದಿ ಸಹ ಹೊರಬಿದ್ದಿತ್ತು. ಈ ತಲೆ ಬುರುಡೆಗಳು ಕರಡಿ ದಾಳಿಯಿಂದ ಉಂಟಾದ ಮಾನವರ ಕಳೆಬರಹ ಎಂಬುದು ಸಹ ಪತ್ತೆಯಾಗಿತ್ತು. ಆದ್ರೆ ಈ 2 ಸಾವಿರ ಮಂದಿ ನಾಪತ್ತೆಯಾಗಿದ್ದರ ಹಿಂದೆ ಸೂಕ್ತ ಕಾರಣ ಮಾತ್ರ ಇಂದಿಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.



Click it and Unblock the Notifications
