Latest Updates
-
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ! -
ಸ್ವಾತಂತ್ರ್ಯ ದಿನದ ಸಂಭ್ರಮ: ಕಡಿಮೆ ಬಜೆಟ್ನಲ್ಲಿ ಆರೋಗ್ಯಕರ 'ತ್ರಿವರ್ಣ' ಉಪಾಹಾರ ತಯಾರಿಸುವುದು ಹೇಗೆ? -
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಹೊಂಬಾಳೆಯ 2 ಸಿನಿಮಾ ಆಸ್ಕರ್ ಅಂಗಳಕ್ಕೆ; ಆಸ್ಕರ್‌ಗೆ ನಾಮಿನೇಟ್ ಆದ ಕನ್ನಡ ಸಿನಿಮಾ ಇಲ್ಲಿವೆ..!
ಯಾವುದೇ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲೋದು ಅಂದ್ರೆ ಅದೊಂದು ಸಾಧನೆ. ಹಾಗೆ ಆಸ್ಕರ್‌ಗೆ ನಾಮ ನಿರ್ದೇಶನ ಆಗೋದು ಕೂಡ ಬಹುದೊಡ್ಡ ಸಾಧನೆಯಾಗಿದೆ. ಹಾಗೆ ಈಗ 98ನೇ ಅಕಾಡೆಮಿ ಅವಾರ್ಡ್ ಹಿನ್ನಲೆ ಭಾರತದ ಹಲವು ಸಿನಿಮಾಗಳು ಈ ಪಟ್ಟಿಗೆ ನಾಮಿನೇಟ್ ಆಗಿವೆ. ಅದ್ರಲ್ಲೂ ರಾಜ್ಯದ ಹೊಂಬಾಳೆ ಫಿಲ್ಮ್ಸ್ ನ ಎರಡು ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿವೆ.
ಹೊಂಬಾಳೆ ಫಿಲ್ಮ್ಸ್‌ನ ಕಾಂತಾರಾ ಚಾಪ್ಟರ್ 1 ಹಾಗೂ ಮಹಾವತಾರ ನರಸಿಂಹ ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಎರಡು ಸಿನಿಮಾಗಳು ಸಾಮಾನ್ಯ ಕೆಟಗರಿಯಲ್ಲಿ ಸ್ಥಾನ ಪಡೆದಿವೆ. ಈ ಎರಡು ಸಿನಿಮಾಗಳ ಜೊತೆಗೆ ಬಾಲಿವುಡ್‌ನ, ಅನುಪಮ್ ಖೇರ್ ಅಭಿನಯದ ತನ್ವಿ: ದಿ ಗ್ರೇಟ್ ಕೂಡ ಮುಂಬರುವ 98 ನೇ ಅಕಾಡೆಮಿ ಪ್ರಶಸ್ತಿಗಳಿಗಾಗಿ ಅತ್ಯುತ್ತಮ ಚಿತ್ರ ರೇಸ್‌ಗೆ ಸೇರಿದೆ.

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಾಪ್ಟರ್ 1, ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ, ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿರುವ ಸಿನಿಮಾಗಳಾಗಿವೆ. ಹೀಗಾಗಿ ಈ ಎರಡು ಸಿನಿಮಾಗಳು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕಥೆ/ಬರವಣಿಗೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಪ್ರಮುಖ ಸಾಮಾನ್ಯ ವಿಭಾಗದಲ್ಲಿ ಪ್ರಶಸ್ತಿ ರೇಸ್‌ನಲ್ಲಿವೆ.
ಹಾಗೆ ಇಶಾನ್ ಖಟ್ಟರ್, ವಿಶಾಲ್ ಜೆಥ್ವಾ ಮತ್ತು ಜಾನ್ವಿ ಕಪೂರ್ ನಟಿಸಿರುವ ಹೋಮ್‌ಬೌಂಡ್, ಈ ವರ್ಷದ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿದೆ. ಈ ಚಿತ್ರವು ಭಾರತದ ಒಂದು ಸಣ್ಣ ಹಳ್ಳಿಯ ಇಬ್ಬರು ಬಾಲ್ಯದ ಸ್ನೇಹಿತರ ಕಥೆಯನ್ನು ಹೇಳುತ್ತದೆ. ಈ ಸಿನಿಮಾಗಳು ಈ ಬಾರಿ ಆಸ್ಕರ್ ಪಡೆಯವ ರೇಸ್‌ನಲ್ಲಿದ್ದು, ನಿರೀಕ್ಷೆ ಹುಟ್ಟಿಸಿವೆ.
ಆಸ್ಕರ್ ಅಂಗಳ ತಲುಪಿದ ಕನ್ನಡ ಸಿನಿಮಾಗಳು ಯಾವುದು?
ಆಸ್ಕರ್ ಪ್ರಶಸ್ತಿ ಪಡೆಯವುದು ಸುಲಭದ ಮಾತಲ್ಲ. ಹಾಗೆ ಆಸ್ಕರ್‌ಗೆ ನಾಮ ನಿರ್ದೇಶನ ಕೂಡ ಬಹಳ ಕಷ್ಟದ ವಿಚಾರ. ಕನ್ನಡ ಸಿನಿಮಾಗಳಿಗೆ ಇದು ಗಗನ ಕುಸುಮ. ಏಕೆಂದರೆ 2015ರಲ್ಲಿ ತೆರೆಕಂಡ ರಂಗಿತರಂಗ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಕಾಣಿಸಿಕೊಂಡಿದ್ದ ಮೊದಲ ಕನ್ನಡ ಸಿನಿಮಾ ಆಗಿದೆ. ಹಾಗೆ ಅದೇ ವರ್ಷ ಕೇರ್ ಆಫ್ ಫುಟ್ ಪಾತ್-2 ಸಹ ಆಸ್ಕರ್ ರೇಸ್‌ನಲ್ಲಿತ್ತು. ಇದಾದ ಬಳಿಕ ವಿಕ್ರಾಂತ್ ರೋಣ, ಕಾಂತಾರ ಈಗ ಕಾಂತಾರ ಚಾಪ್ಟರ್ 1 ಹಾಗೆ ಮಹಾವತಾರ ನರಸಿಂಹ ಈ ಪಟ್ಟಿಯಲ್ಲಿ ಸೇರಿಕೊಂಡಿವೆ.
1983ರಲ್ಲಿ ಮೊದಲ ಆಸ್ಕರ್
ಭಾರತೀಯ ಸಿನಿಮಾಗಳು ಆಸ್ಕರ್ ಅಂಗಳ ತಲುಪುತ್ತಿದ್ದರೂ ಯಾವುದೇ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗುತ್ತಿಲ್ಲ. ಇನ್ನು ಮೊದಲ ಆಸ್ಕರ್ 1983ರಲ್ಲಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಭಾನು ಅಥೈಯಾ ಗಾಂಧಿ ಚಿತ್ರಕ್ಕೆ ಅತ್ಯುತ್ತಮ ವೇಷಭೂಷಣ ವಿನ್ಯಾಸ ಪ್ರಶಸ್ತಿ ಪಡೆದರು, ಇದು ಭಾರತದ ಮೊದಲ ಆಸ್ಕರ್ ಪ್ರಶಸ್ತಿಯಾಗಿದೆ. ಇದಾದ ಬಳಿಕ 1992ರಲ್ಲಿ ನಿರ್ದೇಶಕ ಅತ್ಯಜಿತ್ ರೇ ತಮ್ಮ ಸಿನಿಮಾ ರಂಗದ ಸಾಧನೆಗಾಗಿ ಪ್ರಶಸ್ತಿ ಪಡೆದರು.
ಬಳಿಕ 2009ರಲ್ಲಿ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾ ಮೂರು ವಿಭಾಗದಲ್ಲಿ ಆಸ್ಕರ್ ಪಡೆದು ಅಚ್ಚರಿ ಮೂಡಿಸಿತ್ತು. ಎ.ಆರ್. ರೆಹಮಾನ್, ಗುಲ್ಜಾರ್, ರೆಸುಲ್ ಪೂಕುಟ್ಟಿ ಆಸ್ಕರ್ ಪಡೆದಿದ್ದರು.
ಇದಾದ ಬಳಿಕ 2023ರಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗಾಗಿ ಎಂ.ಎಂ. ಕೀರವಾಣಿ ಮತ್ತು ಚಂದ್ರಬೋಸ್ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಪಡೆದರು.



Click it and Unblock the Notifications