Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
15 ವರ್ಷದ ಬಾಲಕನ ಅಪಹರಿಸಿ ಮದುವೆ..! ಪಕಡ್ವಾ ಆಚರಣೆ ಬಗ್ಗೆ ಗೊತ್ತಾ?
ಮದುವೆ ಎಂಬುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅಲ್ಲದೆ ಯಾರು ಸಹ ಒತ್ತಾಯವಾಗಿ ಒಬ್ಬರನ್ನು ಮದುವೆಯಾಗಲು ಸಾಧ್ಯವಿಲ್ಲ ಮದುವೆಯಾದರು ಆ ಮದುವೆ ಹೆಚ್ಚು ದಿನ ಉಳಿಯುವುದಿಲ್ಲ ಎನ್ನಲಾಗುತ್ತದೆ. ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಪ್ರಾಮುಖ್ಯತೆ ಇದೆ.
ಮದುವೆ ಎಂದರೆ ಮನೆಯ ಹಿರಿಯರೆಲ್ಲರು ನೋಡಿ ಒಪ್ಪಿಕೊಂಡ ಬಳಿಕವಷ್ಟೇ ನಡೆಯುವ ಸಮಾರಂಭ, ಈ ಸಮಾರಂಭ ತಿಂಗಳು ಮೊದಲೆ ಆರಂಭಗೊಳ್ಳುತ್ತದೆ. ಇನ್ನು ಹುಡುಗಿಯ ಮನೆಯಲ್ಲಿ ಈ ಸಂಭ್ರಮ ಮತ್ತಷ್ಟು ಹೆಚ್ಚಾಗಿರುತ್ತದೆ. ಆದ್ರೆ ಇತ್ತೀಚಿಗೆ ನಾವು ಮದುವೆ ಎಂಬ ಸಂಪ್ರದಾಯದಲ್ಲಿ ಬದಲಾವಣೆ ನೋಡುತ್ತಿದ್ದೇವೆ.

ಹುಡುಗಿಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ, ದೇವಾಲಯದಲ್ಲಿ ಮದುವೆಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಇಂತಹ ಘಟನೆಗಳು ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿವೆ. ಆದರೆ ಇಲ್ಲೊಂದು ಘಟನೆ ಈಗ ಎಲ್ಲರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಕೆಲವು ಪ್ರಕರಣದಲ್ಲಿ ಹುಡುಗರು ಹುಡುಗಿಯರನ್ನು ಕಿಡ್ನಾಪ್ ಮಾಡಿ ಮದುವೆಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಹುಡುಗನನ್ನೇ ಕಿಡ್ನಾಪ್ ಮಾಡಲಾಗಿದೆ.
ಆದರೆ ಆ ಹುಡುಗನಿಗೆ ಇನ್ನೂ 15 ವರ್ಷ. ಹೌದು ನೀವು ನಂಬಲೇಬೇಕಾದ ವಿಚಾರವಿದು. 15 ವರ್ಷದ ಬಾಲಕನ ಅಪಹರಿಸಿ ಒತ್ತಾಯವಾಗಿ ಆತನಿಗೆ ಆತನಿಗಿಂತ ಹಿರಿಯ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಬಿಹಾರದ ಗೋಪಾಲಪುರದ ನಿವಾಸಿ ಗನೌರಿ ಠಾಕೂರ್ ಹಾಗೂ ಮೂವರು ಇತರರು ಸೇರಿ ಬಾಲಕನ ಅಪಹರಿಸಿ ಮದುವೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಘಟನೆ ಸಂಬಂಧ ಖೈರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. ಬಿಹಾರದಲ್ಲಿ ಪಕಡ್ವಾ ಎಂಬ ಆಚರಣೆಯೊಂದು ಹಿಂದಿನಿಂದಲೂ ಆಚರಣೆಯಲ್ಲಿದೆ. ಅಂದರೆ ಸರ್ಕಾರಿ ನೌಕರಿಯಲ್ಲಿರುವ ಹುಡುಗನನ್ನು ವಯಸ್ಸಿಗೆ ಬಂದಾಗ ಅಪಹರಿಸಿ ಒತ್ತಾಯವಾಗಿ ಮದುವೆ ಮಾಡುವುದು ಬಿಹಾರದಲ್ಲಿ ಸಾಮಾನ್ಯ ಎನ್ನುವಂತಾಗಿದೆ.
ಆದರೆ ಈ ಪ್ರಕರಣದಲ್ಲಿ 15 ವರ್ಷದ ಬಾಲಕನ್ನು ಅಪಹರಿಸಿ ಮದುವೆ ಮಾಡಲಾಗಿದೆ. ಹುಡುಗನನ್ನು ಮಾತ್ರವಲ್ಲ ಹುಡಗಿಯನ್ನೂ ಸಹ ಒತ್ತಾಯ ಪೂರ್ವಕವಾಗಿ ಈ ಮದುವೆಗೆ ಒಪ್ಪಿಸಲಾಗಿದೆಯಂತೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
15 ವರ್ಷದ ಅಪ್ರಾಪ್ತ ಕುಮಾರ್‌ನನ್ನು ಬಲವಂತವಾಗಿ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಎಲ್ಲರೂ ಸೇರಿ ಆತನನ್ನು ಗೋಪಾಲಪುರಕ್ಕೆ ಕರೆತಂದು ಅಲ್ಲಿ ಕೊಡ್ವತಂಡದ ನಿವಾಸಿಯಾಗಿದ್ದ ಬಾಲಕಿಯೊಂದಿಗೆ ಬಲವಂತದ ಮದುವೆ ಮಾಡಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೇ ಮಾರ್ಚ್ 27 ರಂದು ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ರಿಂಟು ಕುಮಾರ್ ಎಂಬ ಕಂದಾಯ ಅಧಿಕಾರಿ ಬಾಲಕಿಯನ್ನು ಬಲವಂತವಾಗಿ ಮದುವೆಯಾದ ಘಟನೆ ನಡೆದಿತ್ತು. ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷದಲ್ಲಿ ಅಂತಹ ಒಂದು ಡಜನ್ ಪ್ರಕರಣಗಳು ವರದಿಯಾಗಿವೆ.
ಈ ಮದುವೆಗಳು ಹಣಕ್ಕಾಗಿ ಹಾಗೂ ಸರ್ಕಾರಿ ನೌಕರಿ ಮೇಲೆ ನಿರ್ಧರಿತವಾಗುತ್ತಿವೆ. ಬಳಿಕ ಎರಡು ಕುಟುಂಬಗಳ ರಾಜಿ ಸಂಧಾನದ ಮೂಲಕವೇ ಈ ಪ್ರಕರಣಗಳಲ್ಲಿ ಹೆಚ್ಚಿನವು ಬಗೆಹರಿಯುತ್ತವೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನ ಸುತ್ತ ಒಂದಿಷ್ಟು ಮಂದಿ ಸುತ್ತವರೆದಿದ್ದು, ಆತನನ್ನು ಒತ್ತಾಯವಾಗಿ ಬಾಲಕಿ ಕುತ್ತಿಗೆ ತಾಳಿ ಕಟ್ಟಲು ಒತ್ತಾಯಿಸಲಾಗುತ್ತಿದೆ. ಆದರೆ ಆತ ಒಪ್ಪದಿದ್ದಾಗ ಥಳಿಸಲಾಗಿದೆ. ಬಳಿಕ ಆತ ಭಯದಿಂದ ತಾಳಿ ಕಟ್ಟಿರುವುದು ಸಹ ಕಂಡುಬಂದಿದೆ. ಪೊಲೀಸರ ಪ್ರಕಾರ ಇಬ್ಬರು ಅಪ್ರಾಪ್ತರಾಗಿದ್ದು, ಅವರ ವಿಡಿಯೋಗನ್ನ ಎಲ್ಲಿಯೂ ಹಂಚಿಕೊಳ್ಳದಂತೆ ಸೂಚಿಸಿದ್ದಾರೆ. ಆದರೆ ಈ ಮದುವೆ ಮಾಡಿಸುವ ಹಿಂದಿರುವ ಉದ್ದೇಶ ಮತ್ತು ಕಾರಣ ತನಿಖೆಯಿಂದ ತಿಳಿದುಬರಬೇಕಿದೆ ಎಂದಿದ್ದಾರೆ.



Click it and Unblock the Notifications











