Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
11 ವರ್ಷದ ಬಾಲಕನ ಜೀವ ತೆಗೆದ ಇಂಟರ್‌ನೆಟ್..! 'ಕ್ರೋಮಿಂಗ್' ಚಾಲೆಂಜ್‌ಗೆ ಬಲಿ
ಸಾಮಾಜಿಕ ಜಾಲತಾಣಗಳು ಎಷ್ಟೆಲ್ಲಾ ಬೆಳವಣಿಗೆ ಹೊಂದಿವೆ ಎಂದರೆ ಒಬ್ಬರ ಜೀವನ ಅಲ್ಲಿಂದಲೇ ಆರಂಭವಾಗಬಹುದು. ಎಚ್ಚರಿಕೆ ತಪ್ಪಿದರೆ ಒಬ್ಬರ ಜೀವ ಅಲ್ಲಿಯೇ ಅಂತ್ಯವಾಗಬಹುದು. ಏಕೆಂದರೆ ಈ ಮಾಧ್ಯಮಗಳು ಅಷ್ಟೊಂದು ಪರಿಣಾಮಕಾರಿಗಳಾಗಿ ಬೆಳೆದು ನಿಂತಿವೆ. ಅದರಲ್ಲೂ ಯುವ ಸಮೂಹ ಈ ಮಾಧ್ಯಮಗಳಿಗೆ ದಾಸರಾಗುತ್ತಾ ತಮ್ಮ ಜೀವಕ್ಕೇ ಹಾನಿ ಮಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಉದಾಹರಣೆ ಎಂದರೆ ಕೆಲವು ವರ್ಷದ ಹಿಂದೆ ಬ್ಲೂವೇಲ್ ಎಂವ ಗೇಮ್ ಒಂದು ಜೀವಕ್ಕೆ ಅಪಾಯ ತಂದೊಡ್ಡುವಂತೆ ಮಾಡಿದ್ದು ನೆನಪು ಮಾಡಿಕೊಳ್ಳಬಹುದು. ಅದೇ ರೀತಿ ಹಲವು ರೀತಿಯ ಟಿಕ್‌ಟಾಕ್, ರೀಲ್ಸ್ ಚಾಲೆಂಜ್‌ಗಳು ಯುವಕರ ಜೀವ ತೆಗೆದಿವೆ. ಈ ಸಾಲಿಗೀಗ ಹೊಸ ಚಾಲೆಂಜ್ ಒಂದು ಸೇರ್ಪಡೆಯಾಗಿದ್ದು, 11 ವರ್ಷದ ಬಾಲಕನ ಜೀವ ತೆಗೆದಿದೆ.

ಹಾಗಾದರೆ ಏನಿದು ಹೊಸ ಚಾಲೆಂಜ್, ಬಾಲಕನ ಜೀವಕ್ಕೆ ಹಾನಿ ಹಾನಿಯಾಗಿದ್ದು ಹೇಗೆ? ಟಿಕ್‌ಟಾಕ್‌ನಲ್ಲಿ ವೈರಲ್ ಆಗುತ್ತಿರುವ ಈ ಚಾಲೆಂಜ್ ಏನು ಎಂಬುದನ್ನು ನಾವಿಂದು ತಿಳಿಯೋಣ.
ಚೈನಾ ಮೂಲಕ ವಿಡಿಯೋ ಶೇರಿಂಗ್ ಪ್ಲಾಟ್‌ಫಾಮ್ ಆಗಿರುವ ಟಿಕ್‌ಟಾಕ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ವಿದೇಶಗಳಲ್ಲಿ ಈ ಟಿಕ್‌ಟಾಕ್‌ಗೆ ಕೋಟಿ ಕೋಟಿ ಬಳಕೆದಾರರಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋಗಳ ವೀಕ್ಷಣೆ ಮಾಡುತ್ತಾರೆ. ಆದರೆ ಇದೇ ಟಿಕ್‌ಟಾಕ್ ಚಾಲೆಂಜ್ ಒಂದು ಬಾಲಕನ ಜೀವ ತೆಗೆದಿದೆ.
ಇಂಗ್ಲೆಂಡ್‌ನ 11 ವರ್ಷದ ಟಾಮಿ-ಲೀ ಗ್ರೇಸಿ ಬಿಲ್ಲಿಂಗ್ಟನ್ ಎಂಬ ಬಾಲಕ ಸ್ನೇಹಿತರ ಮನೆಗೆ ಉಳಿದುಕೊಳ್ಳಲು ಹೋದಾಗ ಅಚಾತುರ್ಯ ನಡೆದು ಆತ ಮೃತಪಟ್ಟಿದ್ದಾನೆ. ಸ್ನೇಹಿತನ ಮನೆಯಲ್ಲಿ ಆತನಿಗೆ ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಲು ಹೇಳಿದ್ದು ಆತ ಮೃತಪಟ್ಟಿದ್ದಾನೆ ಎಂದು ಬಾಲಕನ ಅಜ್ಜಿ ಪೊಲೀಸರಿಗೆ ದೂರಿ ನೀಡಿದ್ದಾರೆ.
ಕ್ರೋಮಿಂಗ್ ಎಂಬ ಹೊಸ ಚಾಲೆಂಜ್ ಸ್ವೀಕರಿಸಿದ ಬಾಲಕ ಉಸಿರುಗಟ್ಟಿ ಸಾವನಪ್ಪಿರುವುದಾಗಿ ವರದಿಯಾಗಿದೆ. ಟಿಕ್‌ಟಾಕ್ ಮಾಧ್ಯಮದಲ್ಲಿ ಈ ಕ್ರೋಮಿಂಗ್ ಎಂಬ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಲಕ್ಷ ಲಕ್ಷ ವಿಡಿಯೋಗಳು ಹರಿದಾಡುತ್ತಿವೆ.
ಏನಿದು ಕ್ರೋಮಿಂಗ್ ಚಾಲೆಂಜ್
ಕ್ರೋಮಿಂಗ್ ಎಂದರೆ ಅಪಾಯಕಾರಿ ಚಟುವಟಿಕೆಯಲ್ಲಿ ಭಾಗಿಯಾಗುವುದು. ಅಂದರೆ ಮನೆಯಲ್ಲಿ ಸಿಗುವ ಯಾವುದಾದರು ರಾಸಾಯನಿಕವನ್ನು ಮೂಗಿನ ಬಳಿ ಹಿಡಿದು ಉಸಿರು ಎಳೆದುಕೊಳ್ಳುವುದು ಮತ್ತು ಹೊರಬಿಡುವ ಚಾಲೆಂಜ್ ಆಗಿದೆ. ಮನೆಯಲ್ಲಿರುವ ನೈಲ್ ಪಾಲಿಷ್ ರಿಮೂವರ್, ಹೇರ್‌ಸ್ಪ್ರೇ, ಗ್ಯಾಸೋಲಿನ್, ಪೆಟ್ರೋಲ್, ಗಮ್‌ಗಳು, ಪೇಂಟ್, ಮಾರ್ಕರ್ ಹೀಗೆ ಹತ್ತಾರು ರೀತಿಯ ರಾಸಾಯನಿಕ ವಸ್ತುಗಳನ್ನು ಮೂಗಿನ ನೇರವಾಗಿ ಹಿಡಿದು ಉಸಿರು ಎಳೆದುಕೊಳ್ಳುವ ಚಾಲೆಂಜ್ ಆಗಿದೆ.
ಈ ಚಾಲೆಂಜ್‌ನ ಸಾವಿರಾರು ವಿಡಿಯೋಗಳು ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿವೆ. ಇದೇ ಚಾಲೆಂಜ್ ಸ್ವೀಕರಿಸಿದ ಬಾಲಕ ಮೂಗಿನ ನೇರವಾಗಿ ರಾಸಾಯನಿಕ ಹಿಡಿದು ಎಳೆದಿದ್ದಾರೆ. ಇದರಿಂದ ಆತ ಉಸಿರಾಟದ ಸಮಸ್ಯೆ ಎದುರಿಸಿ ಕೆಲವೇ ನಿಮಿಷದಲ್ಲಿ ಪ್ರಜ್ಷಾಹೀನನಾಗಿ ಬಿದ್ದಿದ್ದಾನೆ. ಆದರೆ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ ಎಂದು ತಿಳಿದುಬಂದಿದೆ.
ಬಾಲಕ ಯಾವ ರಾಸಾಯನಿಕ ಬಳಸಿದ್ದ?
ಬಾಲಕ ಈ ಚಾಲೆಂಜ್ ಸ್ವೀಕರಿಸಿ ಯಾವ ರಾಸಾಯನಿಕ ಎಳೆದಿದ್ದ ಎಂಬುದು ಇನ್ನೂ ಸ್ಪಷ್ಟನೆಯಾಗಿಲ್ಲ. ಏಕೆಂದರೆ ಹಲವು ರೀತಿಯ ರಾಸಾಯನಿಕದ ವಾಸನೆಯನ್ನು ಆತ ಮೂಗಿನ ಮೂಲಕ ಎಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರಖರವಾದ ರಾಸಾಯನಿಕದ ಗಾಳಿಯೂ ನೇರವಾಗಿ ಬಾಲಕನ ಮೆದುಳಿಗೆ ತಲುಪಿರಬಹುದು, ಇಲ್ಲವೆ ಶ್ವಾಸಕೋಶದ ಕಾರ್ಯಕ್ಕೆ ಅಡ್ಡಿಪಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲವೆ ರಾಸಾಯನಿಕದ ಗಾಳಿ ಆ ಬಾಲಕನ ದೇಹ ಸೇರಿದ ತಕ್ಷಣ ಹಲವು ಅಂಗಗಳಲ್ಲಿ ಅದರ ಪರಿಣಾಮ ಕಾಣಿಸಿಕೊಂಡಿರಬಹುದು. ಎಲ್ಲಾ ಅಂಗಗಳ ಮೇಲು ಅದರ ಪ್ರಭಾವ ಉಂಟಾದ ಕಾರಣ ಮೆದುಳು ನಿಷ್ಕ್ರಿಯವಾಗೊರಬಹುದು ಎಂದು ಶಂಕಿಸಲಾಗಿದೆ.
ಮಾದಕವಸ್ತು ಬಳಕೆ ಮತ್ತು ಆರೋಗ್ಯದ ವರದಿಯ 2017ರ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, 2015 ರಲ್ಲಿ 12 ರಿಂದ 17 ವರ್ಷ ವಯಸ್ಸಿನ ಸುಮಾರು 684,000 ಹದಿಹರೆಯದವರು ವಿಷಕಾರಿ ರಾಸಾಯನಿಕಗಳನ್ನು ಹಫಿಂಗ್ ಅಥವಾ ಇನ್ಹೇಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ವರದಿಯು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಟ್ಟು 1.8 ಮಿಲಿಯನ್ ಜನರು ಇದಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಕೆಲ ವರ್ಷದ ಹಿಂದೆ ವಾಹನ ಟೈರ್‌ಗಳ ರಿಪೇರಿ ಮಾಡಲು ಬಳಸುವ ಗಮ್‌ಗಳನ್ನು ಡ್ರಗ್ಸ್‌ಗಳಂತೆ ಬಳಸುತ್ತಿದ್ದ ಪ್ರಕರಣಗಳು ಸಹ ವರದಿಯಾಗಿದ್ದವು. ಈ ರೀತಿಯ ವಸ್ತುಗಳಿಂದ ಸಾವು ಸಹ ಉಂಟಾಗಬಹುದು.



Click it and Unblock the Notifications


