Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಒಂದು ಹನಿ ಚೇಳಿನ ವಿಷಕ್ಕೆ 11 ಸಾವಿರ..! ಚಿನ್ನಕ್ಕಿಂತ ದುಬಾರಿ ಬೆಲೆಗೆ ಈ ವಿಷ ಮಾರಾಟವಾಗಲು ಕಾರಣವೇನು?
ಜಗತ್ತಿನಲ್ಲಿ ಚಿನ್ನಕ್ಕಿಂತ ದುಬಾರಿ ವಸ್ತು ಯಾವುದು ಎಂದು ಕೇಳಿದಾಗ ಥಟ್ ಅಂತ ಯಾವ ವಸ್ತುವಿನ ಹೆಸರು ನಮ್ಮ ನೆನಪಿಗೆ ಬರುವುದಿಲ್ಲ. ಆದರೆ ಕೆಲ ವಸ್ತುಗಳು ಚಿನ್ನಕ್ಕಿಂತಲೂ ದುಬಾರಿಯಾಗಿರುತ್ತವೆ, ಇದು ಸಹಜವೆ ಚಿನ್ನಕ್ಕಿಂತಲೂ ದುಬಾರಿಯಾಗಿರುವ ಅದೆಷ್ಟೋ ವಸ್ತುಗಳಿವೆ. ಆದ್ರೆ ನಮಗೆ ತಕ್ಷಣ ಹೇಳಲು ನೆನಪಾಗುವುದಿಲ್ಲ ಅಷ್ಟೆ. ಇನ್ನು ಕೆಲ ಅಪಾಯಕಾರಿ ವಸ್ತುಗಳು ಯಾವಾಗಲೂ ದುಬಾರಿಯಾಗೇ ಇರುತ್ತವೆ. ಇದಕ್ಕೆ ಮಾರಣಾಂತಿಕ ವಿಷಗಳು ಇದಕ್ಕೆ ಹೊರತಾಗಿಲ್ಲ.
ವಿಷ ಎಂದಾಕ್ಷಣ ನಮಗೆಲ್ಲರಿಗೂ ಮೊದಲು ನೆನಪಿಗೆ ಬರುವುದು ಹಾವುಗಳು. ಆದರೆ ಹಾವುಗಳಂತೆಯೇ, ಚೇಳಿನ ವಿಷವು ಅಪಾಯಕಾರಿ, ಆದರೆ ನಾವು ಊಹಿಸುವುದಕ್ಕಿಂತ ಈ ಚೇಳಿನ ವಿಷ ಹೆಚ್ಚು ದುಬಾರಿಯಾಗಿದೆ ಎಂದರೆ ನಂಬುತ್ತೀರಾ? ಹೌದು..ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಚೇಳಿನ ವಿಷವು ವಿಶ್ವದ ಅತ್ಯಂತ ಅಮೂಲ್ಯವಾದ ದ್ರವವಾಗಿದೆ ಏಕೆಂದರೆ ಅದು ಯಾರನ್ನಾದರೂ ಕೊಲ್ಲುವುದರ ಜೊತೆಗೆ ಅನೇಕ ಉಪಯೋಗಗಳನ್ನು ಹೊಂದಿದೆ. ಹೀಗಾಗಿ ಈ ವಿಷಕ್ಕೆ ಚಿನ್ನಕ್ಕಿಂದಲೂ ಹೆಚ್ಚು ಮೌಲ್ಯವಿದೆ.

ಜನ ಸುಲಭವಾಗಿ ಹಣಗಳಿಸುವ ದುರುದ್ದೇಶದಿಂದ ಈ ಚೇಳಿನ ವಿಷದ ಹಿಂದೆ ಬಿದ್ದಿದ್ದಾರೆ. ಆದರೆ ಇದು ಅಷ್ಟೊಂದು ಸುಲಭವಲ್ಲ. ಈ ಚೇಳು ಒಮ್ಮೆ ಕಡಿದರೆ ವ್ಯಕ್ತಿಗೆ ನಿಮಿಷದಲ್ಲೇ ಸಾವು ಬಂದೊದಗುತ್ತದೆ. ಚೇಳುಗಳು ನೀಡಲು ಸಣ್ಣ ಜೀವಿಗಳಾಗಿರಬಹುದು, ಆದರೆ ನೀವು ಅವುಗಳ ಹಿಡಿಯಲು ಯತ್ನಿಸಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಹುದು.
ಡೆತ್‌ಸ್ಟಾಕರ್ ಎಂಬ ಅಪರೂಪದ ಚಿನ್ನದ ಚೇಳು
ಡೆತ್‌ಸ್ಟಾಕರ್ ಚೇಳಿನ ವಿಷವು ತುಂಬಾ ಲಾಭದಾಯಕವಾಗಿದೆ ಮತ್ತು ಇನ್ಸೈಡರ್ ಪ್ರಕಾರ, ಒಂದು ಗ್ಯಾಲನ್ ಸ್ಟಫ್ ನಿಮಗೆ $39 ಮಿಲಿಯನ್ ಹಣ ನೀಡಲಿದೆ. ಇದು ಭಾರತದಲ್ಲಿ ಸರಿಸುಮಾರು 32 ಕೋಟಿ ರೂ. ಡೆತ್‌ಸ್ಟಾಕರ್ ವಿಷದ ಒಂದು ಹನಿಯ ಬೆಲೆ USD 130, ಇದು ಭಾರತೀಯ ರೂಪಾಯಿಗಳಲ್ಲಿ 11,000 ಆಗಿದೆ. ಒಂದು ಚೇಳು ಒಂದು ಬಾರಿಗೆ ಕೇವಲ ಎರಡು ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತದೆ. ಆದಾಗ್ಯೂ, ನೀವು ಅದನ್ನು ಅಂತಹ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತದೆ,
ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಮರುಭೂಮಿಗಳು ಮತ್ತು ಕುರುಚಲು ಕಾಡುಗಳಲ್ಲಿ ಕಂಡುಬರುವ ಡೆತ್‌ಸ್ಟಾಕರ್ ಮನುಷ್ಯನಿಗೆ ತಿಳಿದಿರುವ ಮಾರಕ ವಿಷಗಳಲ್ಲಿ ಒಂದನ್ನು ಉತ್ಪಾದಿಸುವ ಮೂಲಕ ತನ್ನ ಹೆಸರಿಗೆ ತಕ್ಕಂತೆ ಜೀವಿಸುತ್ತದೆ. ಆದರೆ ಇದರ ವಿಷ ನಿಮ್ಮನ್ನು ತಕ್ಷಣ ಕೊಲ್ಲುವುದಿಲ್ಲ ಸಹಿಸಲಾಗಷ್ಟು ನೋವನ್ನು ನೀಡಲಿದೆ. ಈ ಚೇಳು ಕಚ್ಚಿದ ಜಾಗವು ನಿಮ್ಮ ಸ್ಪರ್ಶ ಜ್ಞಾನಕ್ಕೆ ಸಿಗದೆ ಇರಬಹುದು.
ಕ್ಯಾನ್ಸರ್‌ಗೂ ಇದೇ ವಿಷ ಮದ್ದು..!
ಡೆತ್‌ಸ್ಟಾಕರ್ ವಿಷದ ಒಳಗೆ ಕ್ಲೋರೊಟಾಕ್ಸಿನ್ ಎಂಬ ಪೆಪ್ಟೈಡ್ ಇದೆ, ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆ ಸೇರಿದಂತೆ ಹಲವಾರು ವೈದ್ಯಕೀಯ ಪ್ರಗತಿಗಳಲ್ಲಿ ಬಳಸಲ್ಪಡುತ್ತದೆ. ಈ ವಿಷವು ಮೆದುಳಿನ ಗೆಡ್ಡೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಸಹ ತೋರಿಸಿದೆ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ವಿಷವನ್ನು ಸಹ ಬಳಸಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹೀಗಾಗಿ ಈ ಚೇಳಿನ ವಿಷಕ್ಕೆ ಇನ್ನಿಲ್ಲದ ಬೇಡಿಕೆ ಇದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಇದರ ಕಳ್ಳಸಾಗಣೆ, ವಿಷಕ್ಕಾಗಿ ಅನ್ನು ಹುಡುಕಿ ಕೊಲ್ಲುವ ಪ್ರವೃತ್ತಿ ಸಹ ಹೆಚ್ಚಾಗಿದೆ.



Click it and Unblock the Notifications
