Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹುಟ್ಟುಹಬ್ಬದ ಕೇಕ್ ತಂದ ಆಪತ್ತು..! 10 ವರ್ಷದ ಬಾಲಕಿ ಸಾವು..! ಹೇಗೆ ಗೊತ್ತಾ?
ನಾವು ಹುಟ್ಟುಹಬ್ಬ ಆಚರಣೆಗೆ ಬೇಕರಿಯಿಂದ ಕೇಕ್ ಅನ್ನು ತಂದು ಕತ್ತರಿಸಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಕ್ಕಪಕ್ಕದ ಮನೆಯವರಿಗೂ ನೀಡಿ ಸಂಭ್ರಮಿಸುತ್ತೇವೆ. ಅದರಲ್ಲೂ ಮಕ್ಕಳ ಹುಟ್ಟುಹಬ್ಬ ಎಂದರೆ ಅದೊಂದು ಹಬ್ಬದ ವಾತಾವರಣ. ಅಲ್ಲಿ ಪೋಷಕರು ಮನೆಯನ್ನು ಹಬ್ಬದಂತೆ ಅಲಂಕರಿಸಿ ಸಂಭ್ರಮಿಸುತ್ತಾರೆ.
ಇದಲ್ಲದೆ ಮಕ್ಕಳ ಹುಟ್ಟುಹಬ್ಬದಂದು ದೊಡ್ಡ ಹಬ್ಬದಂತೆ ಊರಿನವರನ್ನು ಕರೆದು ಊಟ ಹಾಕಿಸುವ ಸಂಪ್ರದಾಯ, ಆಚರಣೆಯೂ ಇದೆ. ಕೆಲವರು ಇದನ್ನೇ ಪ್ರತಿಷ್ಠೆಯಾಗಿಯೂ ತೆಗೆದುಕೊಂಡಿರುವುದನ್ನು ನಾವು ನೋಡಬಹುದು. ಆದರೆ ಇಲ್ಲೊಂದು ಹುಟ್ಟುಹಬ್ಬದ ಆಚರಣೆ ಈಗ ಸೂತಕದ ಮನೆಯಾಗಿ ಮಾರ್ಪಟ್ಟಿರುವುದು ದುಃಖದ ಜೊತೆ ಅಚ್ಚರಿಗೂ ಕಾರಣವಾಗಿದೆ.

ಹುಟ್ಟುಹಬ್ಬದಂದು ಕೇಕ್ ಸೇವಿಸಿದ ಬಾಲಕಿಯೊಬ್ಬಳು ಮೃತಪಟ್ಟ ದುರಂತವೊಂದು ಸಂಭವಿಸಿದೆ. ಪಂಜಾಬ್‌ನ ಪಟಿಯಾಲದಲ್ಲಿ ಈ ಘಟನೆ ನಡೆದಿದ್ದು, ಆಕೆ ಫುಡ್ ಪಾಯಿಸನ್‌ನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. 10 ವರ್ಷದ ಬಾಲಕಿಯ ಹುಟ್ಟುಹಬ್ಬಕ್ಕಾಗಿ ಮನೆಯವರು ಆನ್‌ಲೈನ್‌ನಲ್ಲಿ ಕೇಕ್ ಅನ್ನು ಆರ್ಡರ್ ಮಾಡಿದ್ದರು ಎಂದು ತಿಳಿದುಬಂದಿದೆ.
ಈ ಕೇಕ್ ಸೇವಿಸಿದ ಬಳಿಕ ಆಕೆ ಸೇರಿ ಮನೆಯವರು ಸಹ ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ದುರಂತ ನಡೆಯುವ ಮುನ್ನ ಮನೆಯವರು ಸೇರಿ ಹುಟ್ಟುಹಬ್ಬ ಆಚರಿಸಿರುವ ವಿಡಿಯೋವನ್ನು ಮನೆಯವರು ಹಂಚಿಕೊಂಡಿದ್ದರು ಅದರಲ್ಲಿ ಎಲ್ಲರು ಸಂತಸದಿಂದ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿರುವುದನ್ನು ಕಾಣಬಹುದು.
ಮಾರ್ಚ್ 24 ರಂದು ರಾತ್ರಿ 7 ಗಂಟೆ ಸುಮಾರಿಗೆ ಅವರು ಕೇಕ್ ಅನ್ನು ಕತ್ತರಿಸಿದರು, ಅದೇ ರಾತ್ರಿ 10 ಗಂಟೆಗೆ ಇಡೀ ಕುಟುಂಬವು ಅಸ್ವಸ್ಥಗೊಂಡಿತು ಎಂದು ಆಕೆಯ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ, ಕೇಕ್ ಸೇವಿಸಿದ ಕೆಲವೇ ನಿಮಿಷದಲ್ಲಿ ವಾಂತಿ ಮಾಡಲು ಪ್ರಾರಂಭಿಸಿದರು. ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳಂತೆ.
ಎಲ್ಲರು ಆಕೆಗೆ ಕೇಕ್ ಅನ್ನು ತಿನ್ನಿಸಿದ್ದರು. ಇದಾದ ನಿಮಿಷದಲ್ಲಿ ಆಕೆ ಸುಸ್ತಾಗಿ ವಾಂತಿ ಮಾಡಿದಳು, ಎಲ್ಲರು ಆಕೆಯನ್ನು ಸ್ವಲ್ಪ ಹೊತ್ತು ಮಲಗಲು ಬಿಡಿ ಎಂದು ಹೇಳಿ ರೂಮಿಗೆ ಕಳುಹಿಸಿದ್ದರು. ಆದರೆ ಮನೆಯವರು ಒಬ್ಬೊಬ್ಬರಾಗಿ ವಾಂತಿ ಮಾಡಲು ಆರಂಭಿಸಿದರು. ಇದಾದ ಕೆಲ ನಿಮಿಷದಲ್ಲೇ ಎಲ್ಲರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದ್ರೆ ಹುಟ್ಟುಹಬ್ಬದಂದು ಹೆಚ್ಚು ಕೇಕ್ ತಿಂದಿದ್ದ ಮಾನ್ವಿ ಮೃತಪಟ್ಟಿದ್ದು ಉಳಿದಂತೆ ಮಾನ್ವಿ ತಂಗಿ, ತಾಯಿ ಸೇರಿ ಹಲವರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. 'ಕೇಕ್ ಕನ್ಹಾ'ನಿಂದ ಆರ್ಡರ್ ಮಾಡಲಾಗಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬೇಕರಿ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶವದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ" ಎಂದು ಪೊಲೀಸರು ಸಹ ಹೇಳಿದ್ದಾರೆ.
ಫುಡ್ ಪಾಯಿಸನ್ ಆಗಲು ಪ್ರಮುಖ ಕಾರಣ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳಾಗಿರುವಂತಹ ಇ ಕೋಲಿ, ಲಿಸ್ಟೇರಿಯಾ, ಮತ್ತು ಸಾಲ್ಮೊನೆಲ್ಲಾಕಮ್ ಇದರಲ್ಲಿ ಪ್ರಮುಖವಾಗಿದೆ. ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಿಡಿಸಿಟಿ ಪ್ರಕಾರ ಸುಮಾರು ಒಂದು ಮಿಲಿಯನ್ ಆಹಾರ ವಿಷವಾಗುವ ಪ್ರಕರಣಗಳು ಪತ್ತೆಯಾಗಿದೆ ಮತ್ತು ಇದರಲ್ಲಿ 20 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಿರುವರು. ಈ ಎಲ್ಲಾ ಪ್ರಕರಣದಲ್ಲಿ ಸಾಲ್ಮೊನೆಲ್ಲಾಕಮ್ ಆಹಾರ ವಿಷವಾಗಲು ಪ್ರಮುಖ ಕಾರಣವಾಗಿದೆ. ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಿ. ಬೊಟುಲಿನಮ್ (ಬೊಟುಲಿಸಮ್) ಆಹಾರ ವಿಷವಾಗಲು ಕಾರಣವಾಗುವಂತಹ ಇತರ ಬ್ಯಾಕ್ಟೀರಿಯಾಗಳಾಗಿವೆ.



Click it and Unblock the Notifications
