Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಮಾಡುವುದೇಕೆ?
ಗಣೇಶ ಚತುರ್ಥಿಯೆಂದರೆ ತುಂಬಾ ದಿನಗಳ ಸಡಗರ-ಸಂಭ್ರಮ. ಕೆಲವು ಕಡೆ 3 ಅಥವಾ 7 ದಿನಗಳಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು, ಆದರೆ ಹೆಚ್ಚಿನ ಕಡೆ ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡಲಾಗುವುದು. ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಏಕೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಈ ವರ್ಷ ಸೆಪ್ಟೆಂಬರ್ 28ಕ್ಕೆ ಅನಂತ ಚತುರ್ದಶಿ, ಇದೇ ದಿನ ಗಣೇಶನನ್ನು ವಿಸರ್ಜನೆ ಮಾಡಲಾಗುವುದು. ಗಣೇಶ ವಿಸರ್ಜನೆ ಅನಂತ ಚತುರ್ದಶಿಯಂದು ಬರುತ್ತದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಚತುರ್ದಶಿ ತಿಥಿ ಬರುತ್ತದೆ, ಇದೇ ದಿನ ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನ ಗಣೇಶೋತ್ಸವ ಮುಕ್ತಾಯವಾಗುವುದು.
ಅನಂತ ಚತುರ್ದಶಿ ತುಂಬಾ ಶುಭ ದಿನ
ಅನಂತ ಚತುರ್ದಶಿಯನ್ನು ತುಂಬಾ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು, ಏಕೆಂದರೆ ಈ ದಿನ ತುಂಬಾ ಶುಭವಾಗಿರುವುದರಿಂದ ಯಾವುದೇ ವಿಶೇಷ ಪೂಜೆಯ ಅವಶ್ಯಕತೆ ಇರುವುದಿಲ್ಲ, ಆದ್ದರಿಂದ ಗಣೇಶನ ವಿಸರ್ಜನೆಗೆ ಈ ದಿನ ತುಂಬಾ ಶ್ರೇಷ್ಠವಾಗಿದೆ.
ಗಣೇಶ ವಿಸರ್ಜನೆಯ ಸಂಪ್ರದಾಯ
ಗಣೇಶ ವಿಸರ್ಜನೆ ಮಾಡಿದಾಗ ಗಣೇಶೋತ್ಸವ ಮುಕ್ತಾಯವಾಗುವುದು. ಈ ದಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ವಿಸರ್ಜನೆ ಮಾಡುವಾಗ ತುಂಬಾ ಸಡಗರ -ಸಂಭ್ರಮದಿಂದ ಬಿಡಲಾಗುವುದು. ಗಣೇಶನನ್ನು ನೀರಿನಲ್ಲಿ ಮುಳುಗಿಸಿದಾಗ ಸ್ವರ್ಗ ಲೋಕಕ್ಕೆ ಗಣೇಶ ಪ್ರಯಾಣ ಶುರು ಮಾಡುತ್ತಾನೆ ಎಂದು ಹೇಳಲಾಗುವುದು. 10 ದಿನ ಆರಾಧಿಸಿದ ಗಣೇಶನನ್ನು ನೀರಿನಲ್ಲಿ ಮುಳುಗಿಸುವಾಗ ಬೇಸರವಾದರೂ ಗಣೇಶನ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂಬ ನಂಬಿಕೆಯಿಂದ ಗಣೇಶನನ್ನು ಕಳುಹಿಸಿ ಕೊಡಲಾಗುವುದು.
ಗಣೇಶ ವಿಸರ್ಜನೆಯ ಮಹತ್ವ
ಗಣೇಶ ಚತುರ್ಥಿ ಆಚರಣೆ ಮನುಷ್ಯನ ಬದುಕಿನ ಅರ್ಥವನ್ನು ತಿಳಿಸುತ್ತದೆ. ಗಣೇಶ ಪ್ರತಿಷ್ಠಾಪನೆ ಹುಟ್ಟು, ಪೂಜೆ ಜೀವನ, ವಿಸರ್ಜನೆ ಸಾವನ್ನು ಸೂಚಿಸುತ್ತದೆ.
ಅನಂತ ಚತುರ್ದಶಿ
ಅನಂತ ಚತುರ್ದಶಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ಶುಭ ದಿನ ಎಂದು ಪರಿಗಣಿಸಲಾಗುವುದು. ಈ ದಿನ ಅನಂತ ಸೂತ್ರವನ್ನು ಕಟ್ಟುವುದಕ್ಕೆ ತುಂಬಾನೇ ಮಹತ್ವವಿದೆ. ಈ ಸೂತ್ರದಲ್ಲಿ ಸಾಕ್ಷಾತ್ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ನಂಬಲಾಗಿದೆ. ಈ ಅನಂತ ಸೂತ್ರವನ್ನು ಶ್ರೀ ವಿಷ್ಣುವಿನ ಪೂಜೆ ಬಳಿಕವಷ್ಟೇ ಕಟ್ಟಬೇಕು. ಈ ಅನಂತ ಸೂತ್ರವನ್ನು ಪುರುಷರು ಬಲಗೈಗೆ, ಮಹಿಳೆಯರಿಗೆ ಎಡಗೈಗೆ ಕಟ್ಟಲಾಗುವುದು. ಯಾರು ಈ ವ್ರತವನ್ನು ಮಾಡುತ್ತಾರೋ ಅವರ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಗಣೇಶನ ಬೀಳ್ಕೊಟ್ಟು ಬರುವಾಗ ಮನಸ್ಸಿಗೆ ಬೇಸರವಾಗುವುದು ಆದರೆ ಮನೆಗೆ ಹಿಂತಿರುಗಿ ಬಂದಾಗ ಶ್ರೀ ವಿಷ್ಣುವಿನ ಆರಾಧನೆ ಮಾಡುವುದರಿಂದ ಮತ್ತೆ ಮನೆಯಲ್ಲಿ ಸಡಗರ -ಸಂಭ್ರಮ ತುಂಬುವುದು.



Click it and Unblock the Notifications
