Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮನೆಯಿಂದ ಹೊರ ಹೋಗುವಾಗ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಅನ್ನೋದು ಇದೇ ಕಾರಣಕ್ಕೆ!
ಭಾರತದಲ್ಲಿ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಇಂದಿಗೂ ಇದೆ. ಶುಭ ಕಾರ್ಯ ಮಾಡುವ ಮುಂಚೆ, ಮನೆಯಿಂದ ಹೊರಗೆ ಹೋಗುವಾಗ ಹೀಗೆ ಪ್ರತಿಯೊಂದು ಶುಭ ಕಾರ್ಯದ ಸಂದರ್ಭದಲ್ಲಿ ದೇವರನ್ನು ಪ್ರಾರ್ಥಿಸುವುದರ ಜೊತೆಗೆ ಮನೆಯಲ್ಲಿ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ.

ಅದು ಅಪ್ಪ- ಅಮ್ಮ, ಅಜ್ಜ- ಅಜ್ಜಿ, ದೊಡ್ಡಪ್ಪ- ದೊಡ್ಡಮ್ಮ ಹೀಗೆ ಒಟ್ಟಿನಲ್ಲಿ ಹಿರಿಯರ ಆಶೀರ್ವಾದವನ್ನು ಪಡೆಯೋದನ್ನು ನಾವು ಮರೆಯೋದಿಲ್ಲ. ಈ ಪದ್ಧತಿಯನ್ನು ಇತ್ತೀಚಿಗೆ ಕೆಲ ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಲ್ಲ. ಸಾವಿರಾರು ವರ್ಷಗಳ ಹಿಂದಿನಿಂದ ಅಂದರೆ ವೈದಿಕ ಕಾಲದಿಂದಲೂ ಈ ಪದ್ಧತಿ ಇದೆ.
ಅಷ್ಟಕ್ಕೂ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಶುರುವಾಗಿದ್ಹೇಗೆ? ಹಿರಿಯರ ಕಾಲು ಮುಟ್ಟಿ ನಮಸ್ಕಾರ ಮಾಡೋದ್ರಿಂದ ಏನೆಲ್ಲಾ ಪ್ರಯೋಜನಗಳು ಇದೆ ಅನ್ನೋದನ್ನು ತಿಳಿಯೋಣ.
ಅಹಂಕಾರ ದೂರವಾಗುತ್ತದೆ!
ಒಬ್ಬ ವ್ಯಕ್ತಿಯು ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸಿದಾಗ ಆ ವ್ಯಕ್ತಿಯ ಅಹಂಕಾರವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಯಾಕಂದ್ರೆ ಹಿರಿಯರ ಪಾದ ಮುಟ್ಟುವ ಸಂದರ್ಭದಲ್ಲಿ ಒರ್ವ ವ್ಯಕ್ತಿಯು ಅವರ ಬುದ್ಧಿವಂತಿಕೆ, ಜ್ಞಾನ, ವಯಸ್ಸು ಮತ್ತು ಅನುಭವಕ್ಕೆ ಗೌರವವನ್ನು ನೀಡುತ್ತಾನೆ. ಇದರ ಪ್ರತಿಯಾಗಿ ಆತ ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುತ್ತಾನೆ.
ವೈಜ್ಞಾನಿಕ ಕಾರಣವೇನು?
ಮಾನವ ದೇಹವು ನಕಾರಾತ್ಮಕ ಮತ್ತು ಧನಾತ್ಮಕ ಪ್ರವಾಹವನ್ನು ಹೊಂದಿರುತ್ತಂತೆ. ದೇಹದ ಎಡಭಾಗವು ನಕಾರಾತ್ಮಕ ಪ್ರವಾಹವನ್ನು ಒಯ್ಯುತ್ತದೆ. ಅದರಂತೆ ದೇಹದ ಬಲಭಾಗವು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಪಾದಗಳನ್ನು ಮುಟ್ಟಿದಾಗ ಎರಡು ದೇಹಗಳು ಪರಸ್ಪರ ಸಂಪರ್ಕಿಸುತ್ತವೆ. ಮತ್ತು ಇದು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಸಂಪೂರ್ಣ ಸರ್ಕ್ಯೂಟ್ ಅನ್ನು ರಚಿಸುತ್ತಂತೆ.
ಒಬ್ಬ ವ್ಯಕ್ತಿಯು ಹಿರಿಯರ ಪಾದಗಳನ್ನು ಮುಟ್ಟಿದಾಗ ಅವನು ಅಥವಾ ಅವಳಲ್ಲಿರುವ ಅಹಂಕಾರ ಮತ್ತು ನಕಾರಾತ್ಮಕತೆ ದೂರವಾಗುತ್ತಂತೆ. ಮತ್ತೊಂದೆಡೆ ಹಿರಿಯರು ಪ್ರೀತಿ ಮತ್ತು ವಾತ್ಸಲ್ಯ ತುಂಬಿದ ಭಾವನೆಗಳಿಂದ ನಿಮ್ಮ ತಲೆಯನ್ನು ಮುಟ್ಟುತ್ತಾರೆ. ಮತ್ತು ನಿಮ್ಮನ್ನು ಆಶೀರ್ವದಿಸುತ್ತಾರೆ. ಈ ಸಂದರ್ಭದಲ್ಲಿ ಹಿರಿಯರಿಂದ ನಿಮಗೆ ಸಕಾರಾತ್ಮಕ ಶಕ್ತಿ ವರ್ಗಾವಣೆ ಆಗುತ್ತದೆ.
ಹಿರಿಯರ ಪಾದಸ್ಪರ್ಶಕ್ಕೂ ಜೈವಿಕ ಮಹತ್ವವಿದೆ ಎಂದು ಹೇಳಲಾಗುತ್ತದೆ. ನರಗಳು ಮಾನವನ ದೇಹದಾದ್ಯಂತ ಹರಡಿಕೊಂಡಿವೆ. ಅವುಗಳಲ್ಲಿ ಕೆಲವು ಕಾಲುಗಳ ಕಾಲ್ಬೆರಳುಗಳಲ್ಲಿ ಮತ್ತು ನಮ್ಮ ಕೈಗಳ ಬೆರಳ ತುದಿಯಲ್ಲಿ ಕೊನೆಗೊಳ್ಳುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿಯ ಬೆರಳುಗಳು ತನ್ನ ಹಿರಿಯರ ಕಾಲ್ಬೆರಳುಗಳನ್ನು ಸ್ಪರ್ಶಿಸಿದಾಗ ಬೆರಳು ಶಕ್ತಿಯ ಗ್ರಾಹಕವಾಗುತ್ತದೆ. ಆ ಮೂಲಕ ಹಿರಿಯರ ದೇಹದಿಂದ ಹೊರಸೂಸುವ ಶಕ್ತಿಯನ್ನು ಸ್ವೀಕರಿಸುತ್ತದೆ. ಅಂದರೆ ಹಿರಿಯರ ಕಾಳ್ಬೆರಳುಗಳಿಂದ ಶಕ್ತಿ ನಿಮಗೆ ವರ್ಗಾವಣೆಯಾಗುತ್ತದೆ.
ಪಾದಗಳನ್ನು ಮುಟ್ಟುವ ಸರಿಯಾದ ವಿಧಾನ ಯಾವುದು?
ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸುವ ಸರಿಯಾದ ವಿಧಾನ ಎಂದರೆ ನಿಮ್ಮ ಮೊಣಕಾಲುಗಳನ್ನು ಬಗ್ಗಿಸದೆ ನಿಮ್ಮ ದೇಹವನ್ನು ವ್ಯಕ್ತಿಯ ಕಡೆಗೆ ಬಗ್ಗಿಸಬೇಕು. ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸಲು ನಿಮ್ಮ ಕೈಯನ್ನು ಮುಂದಕ್ಕೆ ಚಾಚಿ.
ತೋಳುಗಳು ನೇರವಾಗಿ ಮತ್ತು ದೇಹಕ್ಕೆ ಸಮಾನಾಂತರವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಬಲಗೈಯಿಂದ ವ್ಯಕ್ತಿಯ ಎಡ ಬೆರಳನ್ನು ಮತ್ತು ನಿಮ್ಮ ಎಡಗೈಯಿಂದ ವ್ಯಕ್ತಿಯ ಬಲ ಬೆರಳನ್ನು ನೀವು ಸ್ಪರ್ಶಿಸಬೇಕು. ಹಿರಿಯರ ಅಥವಾ ಗೌರವಾನ್ವಿತ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದರಿಂದ ಅವರು ನಿಮಗೆ ಶಕ್ತಿ, ಆರೋಗ್ಯ, ಉತ್ತಮ ಜೀವನ, ಬುದ್ಧಿವಂತಿಕೆ, ಯಶಸ್ಸು ಮತ್ತು ಜ್ಞಾನವನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗುತ್ತದೆ.
ಯಾರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯಬಹುದು!
ಸಾಮಾನ್ಯವಾಗಿ ತಮ್ಮ ತಂದೆ, ತಾಯಿ, ಶಿಕ್ಷಕರು, ಅಜ್ಜಿಯರು, ಚಿಕ್ಕಪ್ಪ, ಚಿಕ್ಕಮ್ಮ, ಹಿರಿಯ ಸಹೋದರರು ಮತ್ತು ಸಹೋದರಿಯರು, ಹಿರಿಯ ಸ್ನೇಹಿತರು ಮತ್ತು ಮಾರ್ಗದರ್ಶಕರು ಅಥವಾ ಗುರುಗಳ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಬಹುದು. ಇದರಿಂದ ನಿಮ್ಮ ಜೀವನದುದ್ದಕ್ಕೂ ಜ್ಞಾನ, ಅನುಭವ, ಮೌಲ್ಯಗಳು ಮತ್ತು ನೀತಿಗಳನ್ನು ಸಂಪಾದಿಸಿದ ವ್ಯಕ್ತಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.
ಹಿರಿಯರ ಆಶೀರ್ವಾದವನ್ನು ಪಡೆಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.



Click it and Unblock the Notifications