Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ನೀವು ಪ್ರೀತಿಸಿದವರನ್ನೇ ಮದುವೆ ಆಗ್ಬೇಕಂದ್ರೆ ನಿತ್ಯ ಈ ದೇವರನ್ನು ಪೂಜಿಸಿ
ಈ ಜಗತ್ತಿನಲ್ಲಿ ಅದೆಷ್ಟೋ ಜನ ಪ್ರೀತಿಯಲ್ಲಿ ಬೀಳುತ್ತಾರೆ. ಅದ್ರಲ್ಲಿ ಕೆಲವೇ ಕೆಲವು ಜನ ಮಾತ್ರ ತಾವು ಇಷ್ಟ ಪಟ್ಟವರನ್ನು ಮದುವೆಯಾಗ್ತಾರೆ. ಇನ್ನೂ ಕೆಲವು ಜನರ ಪ್ರೀತಿ ದುಃಖದಲ್ಲಿ ಕೊನೆಯಾಗುತ್ತದೆ. ನಾವು ಇಷ್ಟ ಪಟ್ಟವರಿಗೆ ನಮ್ಮ ಮೇಲೆ ಪ್ರೀತಿ, ಕಾಳಜಿ ಇರುತ್ತದೆ. ಹಾಗೂ ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಇರುತ್ತಾರೆ. ಇಂತವರ ಜೊತೆಗೆ ಜೀವನ ಪೂರ್ತಿ ಕಳೆಯಬೇಕೆಂಬ ಆಸೆ ನಮಗಿರುತ್ತದೆ.
ಅಷ್ಟಕ್ಕು ನಾವು ಪ್ರೀತಿಸಿದವರನ್ನೇ ಬಾಳ ಸಂಗಾತಿಯಾಗಿ ಪಡೆಯಬೇಕಂದ್ರೆ ನಿತ್ಯ ಈ ದೇವರನ್ನು ಪೂಜೆ ಮಾಡ್ಬೇಕಂತೆ. ಹಾಗಾದ್ರೆ ಪ್ರೀತಿಸಿದವರನ್ನು ಪಡೆಯಲು ಯಾವ ದೇವರುಗಳನ್ನು ಪೂಜೆ ಮಾಡ್ಬೇಕು ಅನ್ನೋದನ್ನು ತಿಳಿಯೋಣ.

ಶ್ರೀ ಕೃಷ್ಣ
ರಾಧಾ ಮತ್ತು ಕೃಷ್ಣನ ಪೌರಾಣಿಕ ಪ್ರೇಮಕಥೆಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿ ಮಾಡುತ್ತಿದ್ದರು. ಹಿಂದೂ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಶ್ರೀಕೃಷ್ಣನನ್ನು ಪ್ರೀತಿ ಮತ್ತು ವಾತ್ಸಲ್ಯದ ದೇವರು ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಹೆಣ್ಣು ಮಕ್ಕಳು ಶ್ರೀಕೃಷ್ಣನಂಥ ವರನನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಯಾರು
ಶ್ರೀ ಕೃಷ್ಣನನ್ನು ಆರಾಧಿಸುತ್ತಾರೋ ಅವರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ತುಂಬಾನೇ ಕಾಳಜಿ ಮಾಡುವ ಜೀವನ ಸಂಗಾತಿಯನ್ನು ಪಡೆಯುತ್ತಾರಂತೆ.
ಮಹಾದೇವ
ಶಿವ ಮತ್ತು ಪಾರ್ವತಿಯ ವಿವಾಹವು ಇಡೀ ವಿಶ್ವದಲ್ಲಿ ಮೊದಲ ಪ್ರೇಮ ವಿವಾಹವಾಗಿದೆ. ಯಾರು ಶಿವನನ್ನು ಪ್ರೀತಿ ಹಾಗೂ ಗೌರವದಿಂದ ಪೂಜಿಸುತ್ತಾರೆಯೋ ಅವರು ಬಯಸಿದ ಸಂಗಾತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಇನ್ನೂ ಸೋಮವಾರದ ದಿನ ಶಿವನಿಗಾಗಿ ಉಪವಾಸ ಕೈಗೊಂಡರು ಉತ್ತಮ ಬಾಳ ಸಂಗಾತಿಯನ್ನು ಪಡೆಯಬಹುದಂತೆ.
ಮಹಾದೇವನು ತನ್ನ ಮಡಿದೆ ಪಾರ್ವತಿಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಿದ್ದನು. ಶಿವ ತನ್ನ ಪೂರ್ತಿ ಜೀವನವನ್ನೇ ಪಾರ್ವತಿಗಾಗಿ ಅರ್ಪಿಸಿದ್ದನು. ಹಿಂದೂ ಪುರಾಣಗಳ ಪ್ರಕಾರ ಶಿವನು ತನ್ನ ಹೆಂಡತಿಯನ್ನು ಅರ್ಧಾಂಗಿ ಕರೆದನು. ಹೀಗಾಗಿ ಪ್ರತಿಯೊಬ್ಬ ಮಹಿಳೆಯೂ ಶಿವನಷ್ಟೇ ಪತ್ನಿಯನ್ನು ಪ್ರೇಮಿಸುವ ಪತಿ ಬೇಕೆಂದು ಬಯಸುತ್ತಾರೆ.
ರತಿ
ಪ್ರಜಾಪತಿ ದಕ್ಷನ ಮಗಳೇ ರತಿ. ರತಿಯನ್ನು ಲೈಂಗಿಕತೆ ಮತ್ತು ಪ್ರೀತಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.ರತಿಯನ್ನು ಯಾರು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷವನ್ನು ನೀಡುವ ಜೀವನ ಸಂಗಾತಿಯನ್ನು ಪಡೆಯಬಹುದಂತೆ. ಇಂದಿಗೂ ಜನ ತಮ್ಮ ಇಷ್ಟಾರ್ಥಗನ್ನು ಈಡೇರಿಸಿಕೊಳ್ಳಲು ರತಿಯನ್ನು ಪೂಜೆ ಮಾಡುತ್ತಾರೆ.
ಕಾಮದೇವ
ಕಾಮದೇವ ಅಥವಾ ಮನ್ಮಥನನ್ನು ಪ್ರೀತಿಯ ದೇವರು ಎಂದು ಕರೆಯುತ್ತಾರೆ. ಯಾರು ಕಾಮದೇವನನ್ನು ಪೂಜೆ ಮಾಡುತ್ತಾರೆಯೋ ಅವರು ಸುಂದರವಾದ, ಉತ್ತಮ ಮನಸ್ಸುಳ್ಳ ಹಾಗೂ ಕರುಣಾಮಯಿ ಜೀವನ ಸಂಗಾತಿಯನ್ನು ಪಡೆಯುತ್ತಾರಂತೆ. ಕಾಮದೇವನ ಆರಾಧನೆ ಮಾಡೋದ್ರಿಂದ ವಿರುದ್ಧ ಲಿಂಗದವರು ನಮ್ಮನ್ನು ನೋಡಿ ಬಹುಬೇಗನೇ ಆಕರ್ಷಿತರಾಗುತ್ತಾರಂತೆ. ಅಷ್ಟೇ ಅಲ್ಲ, ಕಾಮ ದೇವನ್ನು ಪೂಜಿಸಿದರೆ ನಾವು ಇಷ್ಟ ಪಟ್ಟವರು ಖಂಡಿತ ನಮ್ಮವರಾಗುತ್ತಾರಂತೆ.
ಶುಕ್ರದೇವ
ಶುಕ್ರದೇವನು ಸೌಂದರ್ಯ, ಪ್ರೀತಿ, ಲೈಂಗಿಕತೆ, ಸಂತೋಷ, ಅಂತಸ್ತಿನ ಗ್ರಹವಾಗಿದೆ. ಯಾರು ಶುಕ್ರದೇವನನ್ನು ಪೂಜಿಸ್ತಾರೋ ಅವರ ಮೇಲೆ ಶುಕ್ರನ ಆಶೀರ್ವಾದ ಸದಾ ಇರುತ್ತಂತೆ. ಇದರಿಂದ ನಿಮ್ಮ ಬಾಳಿನಲ್ಲಿ ಅದೃಷ್ಟ, ಸಂತೋಷ ಮತ್ತು ಪ್ರೀತಿ ಹೆಚ್ಛಾಗುತ್ತಂತೆ. ಜೊತೆಗೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಉತ್ತಮವಾಗಿರುತ್ತದೆ. ಒಂದು ವೇಳೆ ನಮ್ಮ ಜಾತಕದಲ್ಲಿ ಶುಕ್ರನ ಪ್ರಭಾವ ಸರಿಯಿಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರುತ್ತಂತೆ.
ಶನಿದೇವ
ವೈದಿಕ ಜ್ಯೋತಿಷ್ಯದ ಪ್ರಕಾರ ಚಂದ್ರನನ್ನು ಮನಸ್ಸಿನ ಕಾರಕ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಪ್ರಜ್ಞೆಯನ್ನು ಸೂಚಿಸುತ್ತದೆ. ನಿಮ್ಮ ಜಾತಕದಲ್ಲಿ ನೀವು ಶುಕ್ರನ ಆಶೀರ್ವಾದದ ಜೊತೆಗೆ ನೀವು ಮಂಗಳಕರ ಚಂದ್ರನ ಅನುಗ್ರಹವನ್ನೂ ಹೊಂದಿರಬೇಕು. ಒಂದು ವೇಳೆ ನಿಮ್ಮ ಮೇಲೆ ಚಂದ್ರ ಅನುಗ್ರಹವಿದ್ದರೆ ನೀವು ಮೆಚ್ಚಿದವರನ್ನೇ ಬಾಳ ಸಂಗಾತಿಯನ್ನಾಗಿ ಪಡೆಯುತ್ತೀರಿ. ಅಪ್ಪತಪ್ಪಿ ಚಂದ್ರನ ವಕ್ರದೃಷ್ಟಿ ಇದ್ದರೆ ನಿಮ್ಮ ಹಾಗೂ ಬಾಳ ಸಂಗಾತಿಯ ನಡುವೆ ಸಮನ್ವಯತೆ ಸಾಧಿಸೋದಕ್ಕೆ ಸಾಧ್ಯವೇ ಇಲ್ಲ. ಒಂದಲ್ಲ ಒಂದು ವಿಚಾರಕ್ಕೆ ಮನಸ್ಥಾಪ ಹೆಚ್ಚಾಗುತ್ತದೆ.
ಈ ದೇವರುಗಳ ಅನುಗ್ರಹವಿದ್ದರೆ ನೀವು ಇಷ್ಟಪಟ್ಟವರ ಕೈ ಹಿಡಿಯಬಹುದು. ಹೀಗಾಗಿ ನಿತ್ಯ ಶಿವ ಕೃಷ್ಣ, ರತಿಯನ್ನು ಪೂಜೆ ಮಾಡಿ. ಅವರ ಆಶೀರ್ವಾದಕ್ಕೆ ಪಾತ್ರರಾಗಿ.



Click it and Unblock the Notifications
