Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕನಸಿನ ಪುಸ್ತಕದ ಪ್ರಕಾರ ಕಾರು ಅಪಘಾತದ ಕನಸು ಬಿದ್ದರೆ ಏನರ್ಥ!
ಕನಸು.. ಒಂದು ನಾವು ಕಾಣುವ ಕನಸುಗಳು. ಮತ್ತೊಂದು ನಮಗೆ ಬೀಳುವ ಕನಸುಗಳು. ನಾವು ಕಾಣುವ ಕನಸುಗಳಿಗಿಂತ ನಮಗೆ ಬೀಳುವ ಕನಸುಗಳು ಭಯಾನಕವಾಗಿರುತ್ತದೆ. ನಮಗೆ ಸಿಹಿ ಕನಸುಗಳು ಬೀಳುವುದಕ್ಕಿಂತ ಹೆಚ್ಚಾಗಿ ನಮಗೆ ಭಯ ಹುಟ್ಟುವ ಕನಸುಗಳು ಬೀಳೋದೇ ಹೆಚ್ಚು. ಇಂತಹ ಕನಸುಗಳು ನಮ್ಮ ಮನದಲ್ಲಿ ಹಾಗೆಯೇ ಅಚ್ಚಳಿಯದಂತೆ ಉಳಿದು ಬಿಡುತ್ತೆ.

ನಮಗೆ ಕನಸುಗಳು ಸುಖಾ ಸುಮ್ಮನೆ ಬೀಳೋದಿಲ್ಲ. ಒಂದೊಂದು ಕನಸಿನ ಹಿಂದೆಯೂ ಒಂದೊಂದು ಅರ್ಥ ಇರುತ್ತದೆ. ಅದ್ರಲ್ಲೂ ನಿಮಗೇನಾದ್ರು ರಸ್ತೆ ಅಪಘಾತವಾದಂತೆ ಕನಸು ಬಿದ್ರೆ ಏನರ್ಥ ಗೊತ್ತಾ? ಅಷ್ಟಕ್ಕೂ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತಹ ಕನಸುಗಳು ಬರೋದ್ಯಾಕೆ? ಈ ರೀತಿ ಕನಸುಗಳು ಬಂದರೆ ಅದು ಯಾವುದರ ಸೂಚನೆ ಅನ್ನೋದನ್ನು ತಿಳಿಯೋಣ.
ಕಾರು ಅಪಘಾತದ ಕನಸು ಬೀಳುವುದು!
ಕನಸಿನ ಪುಸ್ತಕದ ಪ್ರಕಾರ ಕನಸಿನಲ್ಲಿ ಕಾರು ಅಪಘಾತವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ನಿಮಗೇನಾದರೂ ಅಂತಹ ಕನಸುಗಳು ಬಿದ್ದರೆ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅಂತಹ ಕನಸುಗಳು ನಿಮಗೆ ಭವಿಷ್ಯದಲ್ಲಿ ಎದುರಾಗುವ ಬಿಕ್ಕಟ್ಟು ಅಥವಾ ವಿಪತ್ತಿನ ಸೂಚನೆಯಾಗಿ ಇರಬಹುದು. ನಿಮಗೇನಾದರೂ ಅಂತಹ ಕನಸುಗಳು ಬಿದ್ದರೆ ನೀವು ಜಾಗರೂಕರಾಗಿರಬೇಕು. ಮತ್ತು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಬೇಕು.
ಕಾರು ಅಪಘಾತದಲ್ಲಿ ಯಾರೋ ಸತ್ತಂತೆ ಕನಸು ಬೀಳೋದು!
ಕಾರು ಅಪಘಾತದಲ್ಲಿ ಯಾರಾದರೂ ಸತ್ತಂತೆ ಕನಸು ಬಿದ್ದರೆ ಅದು ಖಂಡಿತ ಶುಭ ಸೂಚನೆಯಲ್ಲ. ಕನಸಿನ ಪುಸ್ತಕ ಈ ಬಗ್ಗೆ ಏನು ಹೇಳುತ್ತೆ ಎಂದರೆ ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎಂದು ಇದು ಸೂಚಿಸುತ್ತದೆ. ಅಂತಹ ಕನಸುಗಳು ಬಂದಾಗ ನೀವು ಮೊದಲಿಗಿಂತ ಹೆಚ್ಚು ಜಾಗೃತರಾಗಿರಬೇಕು ಮತ್ತು ಪ್ರತಿ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು.
ಅಪಘಾತದಲ್ಲಿ ನಿಮ್ಮಿಂದ ಬೇರೆಯವರಿಗೆ ಹಾನಿಯಾದಂತಹ ಕನಸು!
ಕೆಲವೊಂದು ಸಲ ಅಪಘಾತದಲ್ಲಿ ನಿಮ್ಮಿಂದ ಬೇರೆಯವರಿಗೆ ಹಾನಿಯಾದಂತಹ ಕನಸುಗಳು ಬೀಳಬಹುದು. ಅಂದರೆ ಇದು ನಿಮ್ಮ ತಪ್ಪುಗಳನ್ನು ಸೂಚಿಸುತ್ತದೆ. ನೀವು ಹಿಂದಿನ ತಪ್ಪುಗಳಿಂದ ಪಾಠಗಳನ್ನು ಕಲಿಯುವ ಮೂಲಕ ಮುಂದುವರಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುವುದನ್ನು ಸೂಚಿಸುತ್ತದೆ.
ಬೇರೋಬ್ಬರ ಕಾರು ಅಪಘಾತವಾದಂತೆ ಕನಸು ಬೀಳುವುದು!
ನಿಮ್ಮ ಕನಸಿನಲ್ಲಿ ಬೇರೊಬ್ಬರ ಕಾರು ಅಪಘಾತಕ್ಕೀಡಾಗುವುದನ್ನು ನೀವು ನೋಡಿದರೆ ನಿಮ್ಮಿಂದಾಗಿ ಇತರ ಜನರು ತೊಂದರೆಗೆ ಒಳಗಾಗಬಹುದು ಎಂದರ್ಥ. ನಿಮ್ಮ ಬೇಜವಾಬ್ದಾರಿ ವರ್ತನೆ ಇತರರಿಗೆ ತೊಂದರೆ ಉಂಟುಮಾಡಬಹುದು. ನಿಮಗೆ ಅಂತಹ ಕನಸುಗಳು ಬಿದ್ದರೆ ನೀವು ಕೆಲಸದ ಸ್ಥಳದಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅದು ನಿಮ್ಮನ್ನು ಮತ್ತು ಇತರರನ್ನು ತೊಂದರೆಗೆ ಸಿಲುಕಿಸಬಹುದು.
ಈ ರೀತಿ ಅಪಘಾತದ ಕನಸುಗಳು ಬಂದರೆ ಎಚ್ಚೆತ್ತುಕೊಳ್ಳೋದು ಒಳ್ಳೆಯದು. ಇದು ನಿಮಗೆ ಭವಿಷ್ಯದಲ್ಲಿ ಏನೋ ಕೆಟ್ಟದಾಗುವ ಸೂಚನೆಯನ್ನು ನೀಡುತ್ತದೆ.



Click it and Unblock the Notifications
