Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಜೀವನದಲ್ಲಿ ಸಾಧನೆ ಮಾಡಬೇಕೆನ್ನುವವರು ಈ ಅಭ್ಯಾಸಗಳು ಬಿಟ್ಟು ಬಿಡಿ : ವಿಧುರ ನೀತಿ
ಕೆಲವೊಂದು ಸಲ ಜೀವನದಲ್ಲಿ ಸಂಕಷ್ಟಗಳು ಬಂದಾಗ ಏನು ಮಾಡಬೇಕು ಅನ್ನೋದೇ ತೋಚೋದಿಲ್ಲ. ಸಂಪೂರ್ಣವಾಗಿ ಕುಗ್ಗಿ ಹೋಗುತ್ತೇವೆ. ಇಂತಹ ಸಂದರ್ಭದಲ್ಲಿ ಮಹಾತ್ಮರು ಹೇಳಿಕೊಟ್ಟ ಕೆಲವೊಂದು ಕಿವಿ ಮಾತುಗಳನ್ನು ಕೇಳುವುದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ವಿಧುರ ನೀತಿ ಸಂಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದು ನಡೆಸುತ್ತದೆ.
ಮಹಾಭಾರತ ಕಾಲದಲ್ಲಿ ದೇಶ ಕಂಡ ಮಹಾನ್ ವಿಧ್ವಾಂಸರು ಹಾಗೂ ಅತೀ ಬುದ್ಧಿವಂತನಾಗಿದ್ದ ಇವರು ನ್ಯಾಯ ಹಾಗೂ ಧರ್ಮದ ಪರವಾಗಿ ರೂಪಿಸಿದ ನೀತಿಗಳು ಇಂದಿಗೂ ಪ್ರಚಲಿತದಲ್ಲಿದೆ. ಮನುಷ್ಯರು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಈ ನೀತಿ ಸಹಾಯವಾಗಿದೆ ಅಂದ್ರೆ ತಪ್ಪಾಗೋದಿಲ್ಲ.

ವಿಧುರನ ಪ್ರಕಾರ ಜೀವನದಲ್ಲಿ ಯಶಸ್ಬಿಯಾಗಬೇಕಾದರೆ ಈ ಮೂರು ವಿಚಾರಗಳನ್ನು ಹತ್ತಿರ ಸುಳಿಯಲೇ ಬಿಡಬಾರದು ಅಷ್ಟಕ್ಕು ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವ ಆ ಮೂರು ವಿಚಾರಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಉದಾಸೀನ
ವಿಧುರ ನೀತಿಯಲ್ಲಿ ಮನುಷ್ಯ ಉದಾಸೀನ ಪಟ್ಟರೆ ಏನೆಲ್ಲಾ ತೊಂದರೆಗಳು ಆಗುತ್ತೆ ಅನ್ನೋದ್ರ ಬಗ್ಗೆ ಉಲ್ಲೇಖವಾಗಿದೆ. ನಮ್ಮ ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರೆ ಅಲ್ಲಿ ಪರಿಶ್ರಮ ಇರಲೇಬೇಕು. ಆದರೆ ಯಾವ ವ್ಯಕ್ತಿ ಉದಾಸೀನವನ್ನೇ ಮೈಗೂಡಿಸಿಕೊಳ್ಳುತ್ತಾನೋ ಆತ ಪ್ರಗತಿಯಾಗೋದಕ್ಕೆ ಸಾಧ್ಯವೇ ಇಲ್ಲ. ಉದಾಸೀನ ಮಾಡೋ ವ್ಯಕ್ತಿ ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಾನೆ. ಇದರಿಂದ ಆತ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದವರು ಉದಾಸೀನ ಮಾಡಲೇಬೇಡಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
2. ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಬೇಡಿ
ವಿಧುರನ ಪ್ರಕಾರ ಮನುಷ್ಯನು ದೇವರ ಮೇಲೆ ಎಲ್ಲಾ ಹೊರೆಯನ್ನು ಹಾಕಿ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಅನೇಕ ಜನ ಏನಾದರೂ ಕೆಲಸ ಆಗಬೇಕಾದರೆ ಅಥವಾ ಆತನ ಕಷ್ಟಗಳು ನಿವಾರಣೆ ಆಗಬೇಕಾದರೆ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಸುಮ್ಮನೆ ಕುಳಿತು ಬಿಡುತ್ತಾರೆ. ಯಾವಾಗ ನಮ್ಮ ಪ್ರಯತ್ನ ಇರುತ್ತದೋ ಆಗ ಮಾತ್ರ ದೇವರು ನಮಗೆ ಫಲವನ್ನು ಕರುಣಿಸುತ್ತಾನೆ. ಅದನ್ನು ಬಿಟ್ಟು ಸುಮ್ಮನೆ ಕುಳಿತು ದೇವರೇ ಕಾಪಾಡಪ್ಪಾ ಎಂದು ಹೇಳಿದರೆ ಪ್ರಯೋಜನವಿಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
3. ಅತಿಯಾಸೆ ಬಿಟ್ಟು ಬಿಡಿ
ಮನುಷ್ಯನಿಗೆ ಆಸೆ ಇರಬೇಕೇ ಹೊರತು ಅತಿಯಾಸೆ ಒಳ್ಳೆಯದಲ್ಲ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ. ಕೆಲವರು ಕಡಿಮೆ ಕೆಲಸ ಮಾಡಿ ದೊಡ್ಡ ಸಾಧನೆ ಮಾಡೋದಕ್ಕೆ ಬಯಸುತ್ತಾರೆ. ಇಂತವರು ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೇ ಇಲ್ಲ. ಯಾರು ಶಾರ್ಟ್‌ಕಟ್‌ನಲ್ಲಿ ಸಾಧನೆ ಮಾಡೋದಕ್ಕೆ ಹೋಗುತ್ತಾರೋ ಅವರು ಯಶಸ್ಸು ಪಡೆಯೋದಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನೇ ಎದುರಿಸುತ್ತಾರೆ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ವಿಧುರ ನೀತಿಯಲ್ಲಿ ಉಲ್ಲೇಕವಾಗಿರುವಂತೆ ಕಷ್ಟ ಪಟ್ಟರೆ ಮಾತ್ರ ಸುಖ ಲಭಿಸೋದಕ್ಕೆ ಸಾಧ್ಯ. ಹೀಗಾಗಿ ಶ್ರಮ ಅನ್ನೋದು ಇರಲೇಬೇಕು ಆಗ ಮಾತ್ರ ಸಾಧನೆ ಮೆಟ್ಟಿಲ್ಲು ಹತ್ತೋದಕ್ಕೆ ಸಾಧ್ಯ.



Click it and Unblock the Notifications



