ಮನೆಯಲ್ಲಿ ವಾಸ್ತು ಸಮಸ್ಯೆ ಇದೆಯೇ? ಇದರ ಪರಿಹಾರಕ್ಕೆ ತುಂಬಾ ಸರಳವಾಗಿದೆ ಈ ಫೆಂಗ್‌ಶುಯಿ ಪರಿಹಾರ

ಹೊಸ ಮನೆಗೆ ಹೋಗುತ್ತೇವೆ ಅದು ಸ್ವಂತದ್ದು ಆಗಿರಬಹುದು, ಬಾಡಿಗೆಯದ್ದು ಆಗಿರಬಹುದು. ಅಲ್ಲಿಗೆ ಹೋಗಿ ಸ್ವಲ್ಪ ದಿನಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಶುರುವಾದರೆ ಏಕೋ ಈ ಮನೆಯಲ್ಲಿ ವಾಸ್ತು ದೋಷವಿದೆಯೇ ಎಂಬ ಸಂಶಯ ಬರಲಾರಂಭಿಸುತ್ತದೆ. ವಾಸ್ತು ದೋಷವಿದ್ದರೆ ಆ ಮನೆಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುತ್ತದೆ, ಮನೆಯವರ ಆರೋಗ್ಯ ಸರಿಯಿರಲ್ಲ ಅಥವಾ ಗಂಡ-ಹೆಂಡತಿ ನಡುವೆ ತುಂಬಾನೇ ಭಿನ್ನಾಭಿಪ್ರಾಯ ಹೀಗೆ ಅನೇಕ ಸಮಸ್ಯೆಗಳು ಕಂಡು ಬರುವುದು.

ಈ ರೀತಿಯೆಲ್ಲಾ ಆಗುತ್ತಿದ್ದರೆ ವಾಸ್ತುವೇ ಕಾರಣ ಅಂತಲ್ಲ, ಆದರೆ ಇಷ್ಟು ದಿನ ಇರದ ಸಮಸ್ಯೆಗೆ ಹೊಸ ಮನೆಗೆ ಬಂದಾಗ ಬರುತ್ತಿದ್ದರೆ ಸಹಜವಾಗಿಯೇ ವಾಸ್ತು ದೋಷದಿಂದಿರಬಹುದು ಎಂದು ಭಾವಿಸುತ್ತೇವೆ ಅಲ್ವಾ? ಈ ವಾಸ್ತು ದೋಷ ಹೋಗಲಾಡಿಸಲು ಫೆಂಗ್‌ಶುಯಿನಲ್ಲಿ ತುಂಬಾ ಸರಳ ಪರಿಹಾರವಿದೆ, ಅದೇನೆಂದು ನೋಡುವುದಾದರೆ....

Vastu Dosha: Feng Shui Ways to Cure Vastu Problem In Kannada

ಅಕ್ವೇರಿಯಂ

ಮನೆಯಲ್ಲಿ ಅಕ್ವೇರಿಯಂ ಪಾಸಿಟಿವ್ ಎನರ್ಜಿ ತುಂಬುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ. ನೀವು ಅಕ್ವೇರಿಯಂನಲ್ಲಿ ಓಡಾಡುತ್ತಿರುವ ಮೀನುಗಳನ್ನು ನೋಡುತ್ತಿದ್ದರೆ ಏನೋ ಒಂದು ರೀತಿಯ ಖುಷಿಯಾಗುವುದು, ಮನಸ್ಸಿಗೆ ಮುದ ಅನಿಸುವುದು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಅಕ್ವೇರಿಯಂ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ಅಕ್ವೇರಿಯಂ ಅನ್ನು ಮನೆಯಲ್ಲಿ ಆಗ್ನೇಯ ದಿಕ್ಕಿನಲ್ಲಿಡಬೇಕು. ಅಕ್ವೇರಿಯಂ ಆಯತಾಕಾರದಲ್ಲಿ ಇರಲಿ. ನೀವು ಉತ್ತರ ಭಾಗದಲ್ಲಿ ಇಡುವುದಾದರೆ ರೌಂಡ್‌ ಶೇಪ್‌ನ ಅಕ್ವೇರಿಯಂ ಇಡಿ.

ಗಿಡಗಳು

ಮನೆಯ ಆಗ್ನೇಯ ಭಾಗದಲ್ಲಿ ಗಿಡಗಳನ್ನು ನೆಡಿ ಅಥವಾ ಚಿಕ್ಕ ಗಿಡದ ಕುಂಡಗಳನ್ನು ಇಡಿ. ಇದರಿಂದ ಮನೆ ನೋಡುವುದಕ್ಕೆ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.

ಗಡಿಯಾರ

ಮನೆಯ ಹಾಲ್‌ನ ವಾಯುವ್ಯ ಭಾಗದಲ್ಲಿ ಗಡಿಯಾರವನ್ನು ಇಡಿ. ಇದು ಮನೆಗೆ ಅಲಂಕಾರ ಲುಕ್‌ ನೀಡುವುದು ಮಾತ್ರವಲ್ಲ ಮನೆಗೆ ಶುಭಫಲ ನೀಡಲಿದೆ. ಮನೆಯ ಡೈನಿಂಗ್ ಟೇಬಲ್ ಬಳಿ ಗಡಿಯಾರ ಇಡಬೇಡಿ. ಅಲ್ಲದೆ ಹಾಳಾದ ಗಡಿಯಾರ ಕೂಡ ಮನೆಯಲ್ಲಿ ಇಡಬೇಡಿ.

ಗಾಳಿ, ಬೆಳಕು

ಮನೆಯಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುವಂತಿರಬೇಕು. ಮನೆಗೆ ಈ ಎರಡು ಅಂಶಗಳು ತುಂಬಾನೇ ಅವಶ್ಯಕ. ಮನೆಯಲ್ಲಿ ಬೆಳಕು ಚೆನ್ನಾಗಿ ಬೀಳುವಂತಿರಬೇಕು, ಗಾಳಿ ಚೆನ್ನಾಗಿ ಆಡುವಂತಿರಬೇಕು. ಈ ರೀತಿಯಿದ್ದರೆ ಆ ಮನೆಯಲ್ಲಿ ಪಾಸಿಟಿವ್‌ ಶಕ್ತಿ ಹೆಚ್ಚುವುದು.

ಮನೆಯಲ್ಲಿ ಖುಷಿಯ ಚಿತ್ರಗಳಿರಲಿ

ಮನೆಯ ಗೋಡೆಗಳಲ್ಲಿ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಫೋಟೋಗಳನ್ನು ಇಡಿ. ಚಿತ್ರಗಳನ್ನು ಲಿವಿಂಗ್‌ ರೂಂನ ಪೂರ್ವ ಭಾಗದಲ್ಲಿ ಇಡಿ.

ತುಂಬಾ ಹಸಿರು ಇರಲಿ

ಮನೆಯ ಒಳಗಡೆ ಹಸಿರು ಗಿಡದ ಚಿತ್ರಗಳಿರಲಿ, ಮನೆಯ ಸುತ್ತ ಗಿಡಗಳಿರಲಿ ಇವೆಲ್ಲಾ ಮನೆಗೆ ತುಂಬಾನೇ ಶುಭ ಉಂಟು ಮಾಡುತ್ತದೆ. ಅಲ್ಲದೆ ಅಂಥ ಮನೆಗೆ ಬಂದಾಗ ಮನಸ್ಸಿಗೆ ಒಂದು ರೀತಿಯ ಸಮಧಾನ ಸಿಗುವುದು. ಮನೆಯ ಒಳಗಡೆ ತುಂಬಾ ಕಡು ಬಣ್ಣದ ಅಥವಾ ಚಿತ್ರ-ವಿಚಿತ್ರವಾದ ಚಿಂತೆಗಳನ್ನು ಅಂಟಿಸಬೇಡಿ.

ಹರಿಯುವ ನೀರು

ಮನೆಯಲ್ಲಿ ಹರಿಯುವ ನೀರಿನ ಫೋಟೋ ಅಥವಾ ಮನೆಯ ಒಳಗಡೆ ಫೌಂಟೇನ್‌ ಇವೆಲ್ಲಾ ಇದ್ದರೆ ಮನೆಗೆ ಶುಭ ಉಂಟಾಗುವುದು. ಶುದ್ಧ ನೀರಿನ ಫೋಟೋ ಮನೆಯ ಲಿವಿಂಗ್‌ ರೂಂನಲ್ಲಿ ಹಾಕಿದರೆ ತುಂಬಾ ಶುಭ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.

ಕ್ಯಾಂಡಲ್

ಮನೆಯಲ್ಲಿ ಕ್ಯಾಂಡಲ್ ದಕ್ಷಿಣ, ನೈಋತ್ಯ, ಈಶಾನ್ಯ ಅಥವಾ ಮಧ್ಯಭಾಗದಲ್ಲಿಡಬೇಕು. ಕ್ಯಾಂಡಲ್‌ ಹೋಲ್ಡರ್ ವಿನ್ಯಾಸ ಕೂಡ ಮನಸ್ಸಿಗೆ ಮುಟ್ಟುವಂತಿರಲಿ.

ಟಾಯ್ಲೆಟ್‌ ಮುಚ್ಚಿರಿ

ಮನೆಯ ಒಳಗಡೆ ಟಾಯ್ಲೆಟ್‌ ಇದ್ದರೆ ನೀವು ಟಾಯ್ಲೆಟ್‌ ಬಾಗಿಲು ತೆರೆದಿಡಬೇಡಿ, ಟಾಯ್ಲೆಟ್ ಕಮೋಡ್ ಅಥವಾ ಬಾಗಿಲು ಬಳಸಿದ ಬಳಿಕ ಮುಚ್ಚಬೇಕು. ಹೀಗೆ ಮಾಡುವುದರಿಂದ ನೆಗೆಟಿವ್ ಅಂಶ ಮನೆಯೊಳಗಡೆ ಬರುವುದಿಲ್ಲ ಎಂದು ನಂಬಲಾಗಿದೆ.

ಮನೆಯನ್ನು ಸುಂದರವಾಗಿಡಿ

ಮನೆಯನ್ನು ತುಂಬಾ ಸುಂದರವಾಗಿಡಿ, ಎಲ್ಲಾ ವಸ್ತುಗಳನ್ನು ಸರಿಯಾದ ಜಾಗದಲ್ಲಿಡಿ. ಮನೆಯಲ್ಲಿ ವಸ್ತುಗಳನ್ನು ಹರಡಿ ಇಡುವುದು, ಗಲೀಜಾಗಿ ಇಡುವುದು ಮಾಡಬಾರದು.

ಮನೆಯ ಒಳಗಡೆ ಒಳ್ಳೆಯ ಮ್ಯೂಸಿಕ್ ಇರಲಿ

ಮನೆಯ ಒಳಗಡೆ ಒಳ್ಳೆಯ ಮ್ಯೂಸಿಕ್ ಹಾಕಿ, ಅಲ್ಲದೆ ದೈವಿಕವಾದ ಶಬ್ದಗಳನ್ನು ಬಳಸಿ. ಅಂದರೆ ನಮ್ಮಲ್ಲಿ ಶಂಖ, ಘಂಟೆ ಬಳಸುತ್ತೇವೆ ಅಲ್ಲ ಈ ರೀತಿಯ ಶಬ್ದ ಮನೆಗೆ ಪಾಸಿಟಿವ್ ಎನರ್ಜಿ ತುಂಬುವುದು.
ಮನೆಯಲ್ಲಿ ಈ ಬಗೆಯ ಬದಲಾವಣೆ ಮಾಡಿದರೆ ಮನೆಯ ವಾಸ್ತುದೋಷ ನಿವಾರಣೆಯಾಗುವುದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

English summary

Vastu Dosha: Feng Shui Ways to Cure Vastu Problem In Kannada

Vastu Dosha: How feng shui helps to cure vastu problem, read on.
Story first published: Tuesday, June 6, 2023, 17:30 [IST]
X
Desktop Bottom Promotion