Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
3 ವರ್ಷದ ಮಗುವನ್ನು ಸಾಕಿ ಬೆಳೆಸಿದ ನಾಯಿಗಳ ಹಿಂಡು..! ಈ ಮಲಯಾ ಕಥೆ ನಿಮಗೆ ಗೊತ್ತಾ?
ಮಾನವರ ಮಕ್ಕಳನ್ನು ಪ್ರಾಣಿಗಳು ಸಾಕಿ ಬೆಳೆಸಿದ ಕಥೆಗಳನ್ನು ನಾವು ಸಾಕಷ್ಟು ಕೇಳಿದ್ದೆವು ಅದರಲ್ಲಿ ಕೆಲವು ಸಿನಿಮಾವೂ ಆಗಿವೆ. ಅದರಲ್ಲಿ ಹೆಚ್ಚು ಫೇಮಸ್ ಆಗಿದ್ದು ಜಂಗಲ್ ಬುಕ್. ಅದರಲ್ಲಿ ಮೋಗ್ಲಿ ಎಂಬ ಬಾಲಕನನ್ನು ತೋಳಗಳ ಕುಟುಂಬವೊಂದು ಸಾಕಿ ಸಲಹುತ್ತದೆ. ಆತನಿಗೆ ಓಡಾಡಲು, ಬೇಟೆಯಾಡಲು ಕಲಿಸುತ್ತದೆ, ಹೀಗಾಗಿ ಆತ ಮಾನವ ಸಂಪರ್ಕದಿಂದ ದೂರಾಗಿ ತೋಳಗಳ ಜೊತೆ ಬೆಳೆಯುತ್ತಾನೆ.
ಇದು ಸಿನಿಮಾದಲ್ಲಾದರೆ ನಿಜ ಜೀವನದಲ್ಲೂ ಇಂತಹ ಘಟನೆಗಳ ನಾವು ಕೇಳಿದ್ದೇವೆ, ಪಶ್ಚಿಮ ಬಂಗಾಳದ ಅಮಲ ಮತ್ತು ಕಮಲಾಳ ಕಥೆಯನ್ನೂ ನೀವು ಕೇಳಿರಬಹುದು. ಇದು ಸಹ ಪ್ರಾಣಿಗಳು ಇಬ್ಬರು ಹೆಣ್ಣು ಮಕ್ಕಳ ಬೆಳೆಸಿದ ಕಥೆಯಾಗಿದೆ. ಆದ್ರೆ ಈಗ ಮತ್ತೊಂದು ಇಂತಹದ್ದೆ ಘಟನೆ ವರದಿಯಾಗಿದೆ.
ಒಕ್ಸಾನ ಮಲಯಾ ಎಂಬಾಕೆಯನ್ನು ಬೀದಿ ನಾಯಿಗಳು ಸಾಕಿ ದೊಡ್ಡದು ಮಾಡಿರುವ ಘಟನೆ ಇದು. ಆಕೆಯ ಪೋಷಕರು ಮದ್ಯ ವ್ಯಸನಿಗಳಾಗಿದ್ದು, ಆಕೆಯನ್ನು ಚಿಕ್ಕ ವಯಸ್ಸಿನಲ್ಲಿ ಮನೆಯಿಂದ ಹೊರಹಾಕಿದ್ದರು. ಈ ವೇಳೆ ಬೀದಿ ನಾಯಿಗಳ ಜೊತೆ ಬೆಳೆದು ಆಕೆ ದೊಡ್ಡವಳಾದಳು.

ಈಗ ಆಕೆಗೆ 40 ವರ್ಷ ಮಲಯಾ ಈ ಅವಧಿಯಲ್ಲಿ ಪ್ರಾಣಿಗಳ ಗುಣಲಕ್ಷಣಗಳನ್ನು ಹೊಂದಿದ್ದು, ನಾಯಿಯಂತೆ ಬೊಗಳುತ್ತಾ, ಕೈಗಳ ಬಳಸಿ ನಾಯಿಯಂತೆ ಆಕೆ ನಡೆಯುತ್ತಾಳೆ.
ಏನಿದು ಮಲಯಾ ಕಥೆ..? ಯಾರು ಈ ಮಲಾಯ
ಉಕ್ರೇನಿಯನ್ ಮಹಿಳೆಯಾಗಿರುವ ಮಲಯಾ, ತಾನು ನಾಯಿಗಳೊಂದಿಗೆ ಬೆಳೆದಿದ್ದೇನೆ ಎಂದು ಹೇಳುತ್ತಾರೆ. ಅವಳು ಮೂರು ವರ್ಷದವಳಿದ್ದಾಗ, ಆಕೆಯ ಪೋಷಕರು ಅವಳನ್ನು ಚಳಿಯಲ್ಲಿ ಮನೆಯಿಂದ ಹೊರ ಹಾಕಿದ್ದರು. ಈ ವೇಳೆ ನಾಯಿ ಆಕೆಗೆ ದಾರಿ ತೋರಿಸಿತು. ಆಕೆ ನಾಯಿಯನ್ನು ಹಿಂಬಾಲಿಸಿ ದೊಡ್ಡ ರಿಂಗ್ ಒಳಗೆ ಸೇರಿದಳು. ಇಲ್ಲಿಯೇ ಆಕೆ ಸುಮಾರು 5 ವರ್ಷಗಳ ಕಳೆದಳು.
ಬದುಕುಳಿಯುವ ಸಲುವಾಗಿ ಅವಳು ತನ್ನ ನಾಯಿಯ ಜೊತೆ ಮೋರಿಯಲ್ಲೇ ಉಳಿದಳು, ನಾಯಿಯಂತೆ ಓಡಾಡಿ ಸಿಕ್ಕ ಸಿಕ್ಕ ಆಹಾರ ಸೇವಿಸಿದಳು. ಮೂರರಿಂದ ಒಂಬತ್ತು ವರ್ಷಗಳವರೆಗೆ ತನ್ನ ಜೀವನದ ಮುಂದಿನ ಐದು ವರ್ಷಗಳನ್ನು ನಾಯಿಯ ಪಕ್ಕದಲ್ಲಿ ಕಳೆದಳು. ತನ್ನ ನಾಯಿ ಮತ್ತು ಇತರರು ತನ್ನನ್ನು ನೆರೆಹೊರೆಯ ಸದಸ್ಯರಂತೆ ನಡೆಸಿಕೊಂಡರು ಎಂದು ಮಲಯಾ ಹೇಳಿಕೊಂಡಿದ್ದಾರೆ.
ಪೊಲೀಸರ ಕಣ್ಣಿಗೆ ಬಿದ್ದಿದ್ದಳು ಮಲಯಾ
ಹೀಗೆ ನಾಯಿಯಂತೆ ಬದುಕುತ್ತಿದ್ದ ಆಕೆ ಪೊಲೀಸರ ಕಣ್ಣಿಗೆ ಬಿದ್ದಿದ್ದಳು, ಆಕೆಯ ರಕ್ಷಿಸಲು ಮುಂದಾಗಿದ್ದ ಪೊಲೀಸರು ನಾಯಿಗಳಿಂದ ದಾಳಿಗೆ ಒಳಗಾಗಿದ್ದರು. ಆಕೆಯನ್ನು ನಾಯಿಗಳ ಹಿಡಿತದಿಂದ ರಕ್ಷಿಸುವುದು ದೊಡ್ಡ ಸವಾಲಾಗಿತ್ತು. ಆಕೆ ಸಹ ನಾಯಿಗಳ ಬಿಟ್ಟು ಬರಲು ನಿರಾಕರಿಸಿದ್ದಳು, ಹತ್ತಿರ ಬಂದವರ ಮೇಲೆ ನಾಯಿಯಂತೆ ಕೋಪಗೊಳ್ಳುತ್ತಿದ್ದಳು. ಒಮ್ಮೆ ಪೊಲೀಸರು ಆಕೆಯನ್ನು ನಾಯಿಗಳಿಂದ ಬೇರ್ಪಡಿಸಲು ಯತ್ನಿಸಿದಾಗ ನಾಯಿಗಳ ಗುಂಪು ಪೊಲೀಸರ ಮೇಲೆ ದಾಳಿ ಮಾಡಿದ್ದವಂತೆ. ಇದರಿಂದ ಪೊಲೀಸರು ಅಲ್ಲಿಂದ ತೆರಳಿ ಈ ಕಾರ್ಯಚರಣೆ ಸ್ಪಲ್ಪ ದಿನಗಳ ವರೆಗೆ ಮುಂದೂಡಿದ್ದರಂತೆ.
ನಾಯಿಗಳಿಗೆ ಆಹಾರ ಆಸೆ ತೋರಿಸಿ ಮಲಯಾ ರಕ್ಷಣೆ
ಬಳಿಕ ಪೊಲೀಸರು ನಾಯಿಯ ಹಿಂಡಿನ ಗಮನ ಬೇರೆಡೆ ಸೆಳೆದು ಆಕೆಯನ್ನು ರಕ್ಷಿಸುವ ಯೋಜನೆ ರೂಪಿಸಿದರು. ಹೀಗಾಗಿ ನಾಯಿಗಳಿಗೆ ಹಸಿ ಮಾಂಸದ ಆಸೆ ತೋರಿಸಿ ಅವುಗಳನ್ನು ಬೇರೆಡೆ ಸೆಳೆದು ಆಕೆಯನ್ನು ಅಲ್ಲಿಂದ ಕರೆತಂದಿದ್ದರು. ಬಳಿಕ ಆಕೆಗೆ ಆಪ್ತ ಸಮಾಲೋಚನೆ ನೀಡಲಾಯಿತು. ಆದರೂ ಆಕೆ ಸಾಮಾಜಿಕರಣಕ್ಕೆ ಹೊಂದಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿದ್ದಳು. ಈಗಲೂ ನಾಲ್ಕು ಕಾಲಿನಲ್ಲಿ ನಡೆಯುತ್ತಾಳೆ, ಬೊಗಳುತ್ತಾಳೆ. ಆಹಾರ ಸೇವಿಸುವುದು ಸಹ ನಾಯಿಯಂತೆಯೇ. ಆದರೆ ಹಿಂದಿನ ಕಹಿ ಘಟನೆಗಳನ್ನು ಇಂದಿಗೂ ನೆನಪಿಟ್ಟುಕೊಂಡಿದ್ದಾಳೆ.



Click it and Unblock the Notifications