Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಪರಿಸರ ದಿನ 2021: ಈ ವರ್ಷದ ಥೀಮ್, ಇತಿಹಾಸ ಹಾಗೂ ಮಹತ್ವ
ಮೇ. 5 ವಿಶ್ವ ಪರಿಸರ ದಿನ. ಎಲ್ಲಾ ಬಗೆಯ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಆಶಯದೊಂದಿಗೆ ಪ್ರತೀ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು.

ಈಗ ನಮ್ಮ ಪರಿಸರ ಹೇಗಿದೆ, ಇದನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವ ಎಲ್ಲರಿಗೂ ಗೊತ್ತು. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಜಾಣ ಕುರುಡರಾಗಿ ವರ್ತಿಸುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಎಷ್ಟೋ ಮರ ಗಿಡಗಳನ್ನು ಕಡೆಯಲಾಗಿದೆ, ನದಿ ನೀರುಗಳ ಕಲುಷಿತಗೊಂಡಿವೆ, ವಾಹನಗಳು, ಕೈಗಾರಿಕೆಗಳಿಂದಾಗಿ ಗಾಳಿ ಕಲುಷಿತಗೊಂಡಿದೆ.
ಪರಿಸರ ಕಲುಷಿತವಾದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾದಿತು ಈಗಾಗಲೇ ಎಲ್ಲರ ಅನುಭವಕ್ಕೆ ಬರಲಾರಂಭಿಸಿದೆ. ಮರಗಳು ಕೊಡುವ ಶುದ್ಧ ಆಮ್ಲಜನಕದ ಕೊರತೆಯಾದರೆ ಉಳಿಗಾಲವಿಲ್ಲ ಎಂಬುವುದರ ಅರಿವೂ ಆಗಿದೆ, ಆದ್ದರಿಂದ ಪರಿಸರದ ಬಗ್ಗೆ ಈ ಹಿಂದೆಗಿಂತಲೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ವಿಶ್ವಪರಿಸರದ ದಿನದ ಇತಿಹಾಸ, ಈ ವರ್ಷದ ಥೀಮ್ ಹಾಗೂ ಮಹತ್ವ ಬಗ್ಗೆ ತಿಳಿಯೋಣ:

ಇತಿಹಾಸ
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು 1974ರಲ್ಲಿ ಅಮೆರಿಕದ ಸ್ಲೋಕಾನೆ ನಗರದಲ್ಲಿ ಈ ದಿನವನ್ನು ಮೊದಲಿಗೆ ಆಚರಿಸಲಾಯಿತು. ಅಲ್ಲಿಂದ ಪ್ರತೀವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಒಂದು ಜಾಗತಿಕ ವೇದಿಕೆಯೂ ಆಗಿದೆ. ಪ್ರತೀ ವರ್ಷ 143ಕ್ಕೂ ಅಧಿಕ ದೇಶಗಳು ಇದರಲ್ಲಿ ಭಾಗವಹಿಸುವುದು.
"ನಮಗೆ ಇರುವುದೊಂದೇ ಭೂಮಿ, ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ" ಎಂಬುವುದು ಇದರ ಇದರ ಆಶಯವಾಗಿದೆ.

2021ರ ಥೀಮ್
ಪ್ರತೀ ವರ್ಷ ಒಂದೊಂದು ಥೀಮ್‌ನಲ್ಲಿ ಈ ದಿನವನ್ನು ಆಚರಿಸಲಾಗುವುದು. ಈ ವರ್ಷದ ವಿಷಯವೆಂದರೆ 'ಪರಿಸರ ವ್ಯವಸ್ಥೆ ಪುನಃಸ್ಥಾಪನೆ" ಎಂಬುವುದಾಗಿದೆ.

ಈ ದಿನದ ಮಹತ್ವ
ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ, ಮನುಷ್ಯ ಆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ, ಅನಗ್ಯತವಾಗಿ ಅದನ್ನು ಹಾಳು ಮಾಡದಿರುವುದು ಹಾಗೂ ಪ್ರತೀಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಸಾಕು ಪರಿಸರ ಸಮೃದ್ಧಿಯಾಗಿರುತ್ತದೆ.
ಅನೇಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಭೂಮಿಯನ್ನು ಸೇರುತ್ತಿವೆ, ಇವೆಲ್ಲಾ ಭೂಮಿಗೆ ಮಾರಕವಾಗಿದೆ, ಈ ಬಗ್ಗೆ ಪರಿಣಾಮಕಾರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ, ಅನಗ್ಯತ ತ್ಯಾಜ್ಯ ನದಿಗಳಿಗೆ ಸೇರದಂತೆ ಎಚ್ಚರವಹಿಸಬೇಕಾಗಿದೆ, ಆದಷ್ಟು ವಾಯು ಮಾಲಿನ್ಯ ಕಡಿಮೆ ಮಾಡಬೇಕು. ಗಿಡ ಮರಗಳು ಹೆಚ್ಚಾದರೆ ವಾಯು ಶುದ್ಧವಾಗುವುದು.

ಕೋವಿಡ್ 19ನಿಂದ ಹೆಚ್ಚಾಗಿರುವ ಪ್ಲಾಸ್ಟಿಕ್ ಬಳಕೆ
2018ರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿ ಎಂಬ ಧ್ಯೇಯವನ್ನು ಹೊಂದಿತ್ತು... ಜನರು ಕೂಡ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದರು.. ತರಕಾರಿ ತರಲು, ಸಾಮಾನುಗಳನ್ನು ತರಲು ಕೈ ಚೀಲ ಹಿಡಿದು ಹೋಗುತ್ತಿದ್ದರು. ಇದೀಗ ಕೋವಿಡ್ 19 ಬಂದಾಗಿನಿಂದ ಅಗ್ಯತವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಫೇಸ್ ಶೀಲ್ಡ್ ಬಳಸುವುದು, ಅಲ್ಲದೆ ಮಾಸ್ಕ್, ಗ್ಲೌಸ್ ಅಂಥ ತ್ಯಾಜ್ಯ ಕೂಡ ಹೆಚ್ಚಾಗಿದೆ
ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುವ ಮೂಲಕ ಈ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ.
ಪ್ರತಿಯೊಬ್ಬರು ನಮ್ಮ ಸುತ್ತ-ಮುತ್ತ ಗಿಡ ನೆಟ್ಟು ಬೆಳೆಸೋಣ... ಆಗ ಇಡೀ ನಾಡೇ ಹಸಿರಾಗಿ ಇರುವುದು.



Click it and Unblock the Notifications