Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
'ಮಹಿಳೆಯರ ದಿನ' ವಿಶೇಷ: ಮಹಿಳೆಯರಿಗೆ ಮಾದರಿ ಈ 10 ಮಹಿಳಾ ರತ್ನಮಣಿಗಳು
ಮಹಿಳೆ ಶಕ್ತಿ ಸ್ವರೂಪಿಣಿ, ಆಕೆಯನ್ನು ಅಬಲೆಯೆಂದು ತಪ್ಪಾಗಿ ಅರ್ಥೈಸಲಾಗಿದೆ. ಆಕೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ, ಅದನ್ನು ಈ ಜಗತ್ತಿನಲ್ಲಿ ಅನೇಕ ಮಹಿಳೆಯರು ಸಾಬೀತು ಮಾಡಿದ್ದಾರೆ. ಅನೇಕ ವಿಷಯಗಳಲ್ಲಿ ಮಾದರಿ ವ್ಯಕ್ತಿಗಳಾಗಿದ್ದಾರೆ. ಮನೆಯಲ್ಲಿ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವುದು ಮಾತ್ರವಲ್ಲ, ನಮ್ಮಿಂದಲೂ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಹಾಗಂತ ಅವರ ಸಾಧನೆ ಅಷ್ಟು ಸುಲಭವಾಗಿರಲ್ಲ, ಅನೇಕ ಸವಾಲುಗಳನ್ನು ಮೀರಿ ನಿಂತ ಸಾಧಕಿಯರು ಇವರು. ಇದೀಗ ಕರ್ನಾಟಕ ಮಾತ್ರವಲ್ಲ ದೇಶದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಾಧಕಿಯರು ಪ್ರತಿಯೊಬ್ಬ ಮಹಿಳೆಗೆ ಆತ್ಮಸ್ಥೈರ್ಯ ತುಂಬುವರು. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆ ಸಾಧಕಿಯರ ಪಟ್ಟಿ ನೀಡಿದ್ದೇವೆ ನೋಡಿ:

ಅರುಂಧಿತಿ ನಾಗ್
ಇವರ ಜೀವನ ಅನೇಕ ಹೆಣ್ಮಕ್ಕಳಿಗೆ ಸ್ಪೂರ್ತಿ. ಚಿಕ್ಕ ಪ್ರಾಯದಲ್ಲಿಯೇ ಪತಿಯನ್ನು ಕಳೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟನಾಗಿ ಬೆಳಗುತ್ತಿದ್ದ ಶಂಕರ್ ನಾಗ್ ಅವರ ಪತ್ನಿಯಾಗಿ ನೆಮ್ಮದಿಯಾಗಿದ್ದ ಬದುಕಿನಲ್ಲಿ ದೊಡ್ಡ ಸುಂಟರಗಾಳಿಯೇ ಎದ್ದಿತ್ತು. ಒಂದು ಕಡೆ ಜೀವಕ್ಕೆ-ಜೀವವಾಗಿದ್ದ ಸಂಗಾತಿಯನ್ನು ಕಳೆದುಕೊಂಡ ನೋವು, ಮತ್ತೊಂದೆಡೆ ಪತಿಯ ಕನಸ್ಸು ನನಸು ಮಾಡಬೇಕೆಂಬ ಹಠ. ಅಗಾಧ ನೋವು, ಆರ್ಥಿಕ ಸಂಕಟ ಎಲ್ಲವನ್ನೂ ಎದುರಿಸಿ ತನ್ನ ಕನಸ್ಸಿನ ಕೂಸು ರಂಗ ಶಂಕರ ಕಟ್ಟಿ ಬೆಳೆಸಿದ ಗಟ್ಟಿಗಿತ್ತಿ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡರೂ ಧೃತಿಗೆಡದೆ ಬೆಳೆದ ಸಾಧಕಿ. ಇವರ ಸಾಧನೆಗೆ ಪದ್ಮಶ್ರೀ, ರಾಷ್ಟೀಯ ಸಿನಿಮಾ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ನಿಶಾ ಮಿಲೆಟ್
ನಮ್ಮ ಭಾರತ ಕಂಡ ಅತ್ಯುತ್ತಮವಾದ ಈಜುಗಾರ್ತಿ, ಇವರು ನಮ್ಮ ಬೆಂಗಳೂರಿನವರು ಎಂಬುವುದು ನಾವೆಲ್ಲಾ ಮತ್ತಷ್ಟು ಹೆಮ್ಮೆ ಪಡುವ ವಿಷಯ. 2000 ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಬ್ಬರೇ ಮಹಿಳಾ ಸ್ಪರ್ಧಿ ಇವರಾಗಿದ್ದರು. ಸೀನಿಯರ್ ನ್ಯಾಷನಲ್ ಲೆವಲ್‌ನಲ್ಲಿ ಎಲ್ಲಾ ಫ್ರೀಸ್ಟೈಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. 1998ರ ಏಷ್ಯಾನ್ ಗೇಮ್ಸ್, SAE ಗೇಮ್ಸ್, ಆಫ್ರೋ ಏಷ್ಯಾನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟಿದ್ದಾರೆ. 1999ರಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ 14 ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದರು.

ಮೇಘನಾ ಶ್ಯಾನ್‌ಬೋಘ್
ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್ ಆಗಿದ್ದಾರೆ. ಚಿಕ್ಕದಿರುವಾಗಲೇ ಸಾಹಸ ಇಷ್ಟ ಪಡುತ್ತಿದ್ದ ಮೇಘನಾ ಭಾರತದ 6ನೇ ಮಹಿಳಾ ಫೈಟರ್ ಪೈಲೆಟ್ ಆಗಿದ್ದಾರೆ.

ಪ್ರೇಮಾ ನಂದಾಪಟ್ಟಿ
ಬಿಎಂಟಿಟಿಸಿಯ ಮೊದಲ ಮಹಿಳಾ ಡ್ರೈವರ್ ಆಗಿರುವ ಪ್ರೇಮಾ ನಂದಪಟ್ಟಿ ಪುರುಷರು ಮಾತ್ರ ಬಸ್ ಓಡಿಸುತ್ತಿದ್ದ ಕಾಲದಲ್ಲಿ ಹೆಣ್ಣಿಗೂ ಸಾಧ್ಯ ಎಂದು ತೋರಿಸಿಕೊಟ್ಟವರು. ಗಂಡ ತೀರಿ ಹೋದ ಬಳಿಕ ಮಗನ ಭವಿಷ್ಯಕ್ಕಾಗಿ ಏನಾದರೂ ಕೆಲಸಕ್ಕೆ ಸೇರಬೇಕೆಂದು ಬಯಸಿದಾಗ ಅವರಿಗೆ ಬಸ್ ಡ್ರೈವರ್ ಆಗಬೇಕೆನಿಸಿತು. ಅದರಂತೆ ಡ್ರೈವರ್ ಆಗಿ ಬೆಂಗಳೂರಿನಂಥ ನಗರದಲ್ಲಿ ನಾಜೂಕಾಗಿ ಬಸ್ ಓಡಿಸುವ ಮೂಲಕ ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.

ಬಿ. ಜಯಶ್ರಿ
ಬಿ. ಜಯಶ್ರಿ ಅವರು ಒಬ್ಬ ನಿರ್ದೇಶಕಿ, ರಂಗಕರ್ಮಿ ಹಾಗೂ ಗಾಯಕಿಯಾಗಿ ಕನ್ನಡ ಸಿನಿ ರಂಗಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಇವರು ಬಾಳಿನಲ್ಲಿ ತುಂಬಾ ಕಷ್ಟ ಅನುಭವಿಸಿ ಮೇಲೆ ಬಂದವರು. ಇವರ ಜೀವನಕತೆ ತಿಳಿದರೆ ತುಂಬಾ ಕಷ್ಟದಲ್ಲಿರುವ ಮಹಿಳೆಗೆ ಕೂಡ ನನ್ನಿಂದ ಕೂಡ ಏನಾದರೂ ಸಾಧಿಸಲು ಸಾಧ್ಯ ಎಂಬ ಆತ್ಮವಿಶ್ವಾಸ ತುಂಬುವುದು. ಇವರಿಗೆ 2013ರಲ್ಲಿ ಪದ್ಮಶ್ರಿ ಪ್ರಶಸ್ತಿ ಲಭಿಸಿದೆ.

ಪ್ರೇಮಾ ಕಾರಂತ್
ಕನ್ನಡ ಸಿನಿರಂಗದ ಮೊದಲ ಮಹಿಳಾ ಫಿಲ್ಮಂ ಮೇಕರ್,ಇವರು ಪ್ರಸಿದ್ಧ ರಂಗಕರ್ಮಿಯೂ ಹೌದು. ಮಕ್ಕಳ ನಾಟಕಗಳಿಗೆ ಇವರು ಪ್ರಸಿದ್ಧರು. 1983ರಲ್ಲಿ ಇವರ ಚೊಚ್ಚಲ ನಿರ್ದೇಶನದ ಪಣಿಯಮ್ಮ ಚಿತ್ರ ಬಿಡುಗಡೆಯಾಗಿತ್ತು.

ವೇದಾ ಕೃಷ್ಣ ಮೂರ್ತಿ
ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಿಂಚಿದ ನಮ್ಮ ಕನ್ನಡದ ಹುಡುಗಿ ವೇದಾ ಕೃಷ್ಣ ಮೂರ್ತಿ. ಇವರು 2011ರಲ್ಲಿ ಒನ್‌ಡೇ ಇಂಟರ್‌ನ್ಯಾಷನಲ್ ಮ್ಯಾಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿ ಮೊದಲ ಮ್ಯಾಚ್‌ನಲ್ಲಿಯೇ 51 ರನ್‌ಗಳಿಸಿ ಎಲ್ಲರ ಗಮನ ಸೆಳೆದಿದ್ದರು.

ಸುಧಾ ಮೂರ್ತಿ
ಸುಧಾಮೂರ್ತಿ ಈ ಹೆಸರು ಕೇಳದವರು ಕರ್ನಾಟಕದಲ್ಲಿಯೇ ಇರಲ್ಲ. ಇನ್ಫೋಸಿಸ್‌ನಂಥ ಮಲ್ಟಿ ನ್ಯಾಷನಲ್ ಕಂಪನಿ ಕಟ್ಟಿ ಬೆಳೆಸಲು ನಾರಾಯಣ ಮೂರ್ತಿಯವರಿಗೆ ಬೆನ್ನೆಲುಬಾಗಿ ನಿಂತವರು. ಟೀಚರ್, ಸೋಷಿಯಲ್ ವರ್ಕರ್, ಬರಹಗಾರ್ತಿಯಾಗಿ, ಉತ್ತಮ ಬಾಷಣಗಾರರಾಗಿ, ಮೋಟಿವೇಟ್ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಸುಧಾ ಕೃಷ್ಣಮೂರ್ತಿ ಇವರು ನಮ್ಮ ಭಾರತದ ಹೆಮ್ಮೆಯ ತಾಯಿ ಹಾಗೂ ತಮ್ಮ ಸಾಧನೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ನಮ್ಮಲ್ಲಿ ಒಬ್ಬರಾಗಿ ಬೆರೆಯುವ ಸ್ವಭಾವದ ವ್ಯಕ್ತಿ.

ಸಾಲುಮರದ ತಿಮ್ಮಕ್ಕ
ಮಕ್ಕಳಿಲ್ಲ ಎಂದು ಗಿಡಗಳನ್ನೇ ಮಕ್ಕಳನ್ನಾಗಿ ಪ್ರೀತಿಸಿ, ಬೆಳೆಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ. ಇವರು ಬೆಳೆಸಿದ ಸಾವಿರಾರು ಗಿಡಗಳು ಇಂದು ನೆರಳಿನ ಆಶ್ರಯ ನೀಡುತ್ತಿದೆ.



Click it and Unblock the Notifications











