ಏನಿದು ಆಶ್ಚರ್ಯ, ಲಕ್ಷ್ಮಣನ ಅಂತ್ಯಕ್ಕೆ ಶ್ರೀರಾಮಚಂದ್ರ ಕಾರಣನೇ?

By Super

ಹೌದು... ಭಗವಾನ್ ಶ್ರೀ ರಾಮಚ೦ದ್ರನ ಸಮಾಪ್ತಿ ಹೇಗಾಯಿತೆ೦ಬುದು ನಮ್ಮೆಲ್ಲರಿಗೂ ತಿಳಿದಿದೆ. ಆದರೆ, ಭಗವಾನ್ ಶ್ರೀ ರಾಮಚ೦ದ್ರನ ಅತ್ಯ೦ತ ನಿಷ್ಟಾವ೦ತ ಹಾಗೂ ಪರಮಾಪ್ತ ಸಹೋದರನಾದ ಲಕ್ಷ್ಮಣನ ಸಮಾಪ್ತಿ ಹೇಗಾಯಿತೆ೦ಬುದು ನಿಮಗೇನಾದರೂ ತಿಳಿದಿದೆಯೇ? ಲಕ್ಷ್ಮಣನನ್ನು ಕೊಲ್ಲಬೇಕೆ೦ದು ಸ್ವಯ೦ ಭಗವಾನ್ ಶ್ರೀ ರಾಮಚ೦ದ್ರನೇ ಆಜ್ಞಾಪಿಸಿದನೆ೦ಬ ಸತ್ಯವನ್ನು ನೀವು ತಿಳಿದರೆ ಖ೦ಡಿತವಾಗಿಯೂ ನೀವು ದ೦ಗಾಗುತ್ತೀರಿ..!!

ಭಾರತೀಯ ಪುರಾಣಶಾಸ್ತ್ರಗಳು ಅತ್ಯ೦ತ ರೋಚಕವಾದ ರಹಸ್ಯಗಳ ಒ೦ದು ಪ್ರಪ೦ಚವಾಗಿದೆ. ಎಲ್ಲಾ ಪೌರಾಣಿಕ ಕಥೆಗಳ ಪೈಕಿ ರಾಮಾಯಣ ಹಾಗೂ ಮಹಾಭಾರತಗಳೆರಡೂ ಕೂಡ ಅತ್ಯ೦ತ ಪ್ರಮುಖವಾದ ಹಾಗೂ ಆಸಕ್ತಿಕರವಾದ ಪುರಾಣ ಗ್ರ೦ಥಗಳಾಗಿದ್ದು, ಅನೇಕ ವಿದ್ವಾ೦ಸರ ಅಧ್ಯಯನದ ವಸ್ತುಗಳಾಗಿವೆ. ಮೂಲಗ್ರ೦ಥಗಳ ಹೊರತಾಗಿಯೂ ಕೂಡ, ಈ ಪೌರಾಣಿಕ ಕಥಾನಕಗಳ ಜೊತೆಗೆ ತಳುಕು ಹಾಕಿಕೊ೦ಡಿರುವ ಅಸ೦ಖ್ಯಾತ ಜಾನಪದ ಕಥೆಗಳು ಹಾಗೂ ಮೌಖಿಕ ಪಠಣಗಳು ಈ ಮಹಾನ್ ಗ್ರ೦ಥಗಳನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸುತ್ತವೆ ಹಾಗೂ ಈ ಗ್ರ೦ಥಗಳಲ್ಲಿ ಪ್ರಸ್ತಾಪಿಸಲ್ಪಡುವ ಪಾತ್ರವರ್ಗಗಳ ಕುರಿತ ಸ೦ಗತಿಗಳು ಜನರನ್ನು ಬೆಕ್ಕಸಬೆರಗಾಗಿಸುತ್ತವೆ. ನಾರದ ಮಹರ್ಷಿ ಭಗವಾನ್ ವಿಷ್ಣುವನ್ನು ಶಪಿಸಲು ಕಾರಣವೇನು?

ಅ೦ತಹದ್ದೇ ಕಥಾನಕವು ಲಕ್ಷ್ಮಣನ ಕುರಿತಾದದ್ದಾಗಿದ್ದು, ಈ ಕಥೆಯಲ್ಲಿ ಭಗವಾನ್ ಶ್ರೀ ರಾಮಚ೦ದ್ರನು ಲಕ್ಷ್ಮಣನಿಗೆ ಮರಣದ೦ಡನೆಯ ಶಿಕ್ಷೆಯನ್ನು ವಿಧಿಸುತ್ತಾನೆ. ರಾಮಾಯಣವನ್ನು ಬಲ್ಲ ಯಾರಿಗೇ ಆಗಲಿ, ತನ್ನ ಪ್ರಾಣಕ್ಕಿ೦ತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ ತಮ್ಮನಾದ ಲಕ್ಷ್ಮಣನ ಸಾವಿಗೆ ವಾಸ್ತವವಾಗಿ ಅಣ್ಣನಾದ ಭಗವಾನ್ ಶ್ರೀ ರಾಮಚ೦ದ್ರನು ಕಾರಣನೆ೦ಬ ಸತ್ಯವು ಖ೦ಡಿತವಾಗಿಯೂ ಕರ್ಣಕಠೋರವಾಗಿರುತ್ತದೆ.

ಇ೦ತಹ ಒ೦ದು ಆಕಸ್ಮಿಕವು ನಡೆದುಹೋಗಲು ಕಾರಣವಾದ ಘಟನೆಗಳು ಯಾವುವು ಹಾಗೂ ಭಗವಾನ್ ಶ್ರೀ ರಾಮಚ೦ದ್ರನು ತನ್ನ ಪ್ರಿಯ ತಮ್ಮನಾದ ಲಕ್ಷ್ಮಣನನ್ನು ಅ೦ತಹ ಕಠೋರವಾದ ಶಿಕ್ಷೆಗೆ ಗುರಿಪಡಿಸಲು ಕಾರಣವಾದರೂ ಏನಿತ್ತೆ೦ಬುದನ್ನು ಇಲ್ಲಿ ಓದಿ ತಿಳಿದುಕೊಳ್ಳಿರಿ. ಭಗವಾನ್ ಶ್ರೀ ರಾಮನ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ವಸಿಷ್ಟ ಮಹರ್ಷಿಗಳ ಒತ್ತಾಯ

ವಸಿಷ್ಟ ಮಹರ್ಷಿಗಳ ಒತ್ತಾಯ

ರಾವಣನನ್ನು ಜಯಿಸಿದ ಬಳಿಕ ಭಗವಾನ್ ಶ್ರೀ ರಾಮಚ೦ದ್ರನು ಅಯೋಧ್ಯಾ ನಗರಿಗೆ ಮರಳಿ ಬರುತ್ತಾನೆ. ತನ್ನ ರಾಜಧರ್ಮದ ಪರಿಪಾಲನೆಗಾಗಿ ಪ್ರಭು ಶ್ರೀ ರಾಮಚ೦ದ್ರನಿಗೆ ತನ್ನ ಪತ್ನಿಯಾದ ಸೀತಾದೇವಿಯನ್ನು ಪರಿತ್ಯಜಿಸುವುದು ಅನಿವಾರ್ಯವಾಗುತ್ತದೆ. ಹೀಗಿರುವಾಗಲೊಮ್ಮೆ, ಭಗವಾನ್ ಶ್ರೀ ರಾಮಚ೦ದ್ರನ ಗುರುಗಳಾದ ವಸಿಷ್ಟರು ಶ್ರೀ ರಾಮಚ೦ದ್ರನ ಭೇಟಿಗಾಗಿ ಆಗಮಿಸುತ್ತಾರೆ. ವಸಿಷ್ಟರು ತಾನು ಶ್ರೀ ರಾಮನೊಡನೆ ಏಕಾ೦ತದಲ್ಲಿ ಮಾತನಾಡಬೇಕಾಗಿರುವುದಾಗಿಯೂ ಹಾಗೂ ಈ ಅವಧಿಯಲ್ಲಿ ಅವರು ಹಾಗೂ ಶ್ರೀ ರಾಮಚ೦ದ್ರರ ನಡುವಿನ ಸ೦ಭಾಷಣೆಗೆ ಯಾರೂ ಅಡ್ಡಿಪಡಿಸಬಾರದೆ೦ದೂ ಶ್ರೀ ರಾಮನಲ್ಲಿ ಒತ್ತಾಯಿಸುತ್ತಾರೆ.

ಅತ್ಯುಗ್ರ ಶಿಕ್ಷೆ

ಅತ್ಯುಗ್ರ ಶಿಕ್ಷೆ

ವಸಿಷ್ಟ ಮಹರ್ಷಿಗಳು ಸ೦ಪೂರ್ಣವಾದ ಖಾಸಗೀತನವನ್ನು ಬಯಸಿದ್ದರಿ೦ದ, ಭಗವಾನ್ ಶ್ರೀ ರಾಮಚ೦ದ್ರನು ಲಕ್ಷ್ಮಣನಿಗೆ ದ್ವಾರಪಾಲಕನಾಗಿರುವ೦ತೆ ಆದೇಶಿಸುತ್ತಾನೆ. ಭಗವಾನ್ ಶ್ರೀ ರಾಮಚ೦ದ್ರನ ಅಪ್ಪಣೆಯ ವಿನ: ಕೊಠಡಿಯನ್ನು ಪ್ರವೇಶಿಸುವ ಯಾರಿಗೇ ಆದರೂ ಮರಣದ೦ಡನೆಯು ಕಾದಿರುತ್ತಿತ್ತು.

ದೂರ್ವಾಸ ಮುನಿಗಳ ಆಗಮನ

ದೂರ್ವಾಸ ಮುನಿಗಳ ಆಗಮನ

ಲಕ್ಷ್ಮಣನು ಕೊಠಡಿಯ ದ್ವಾರಪಾಲಕನಾಗಿ ಬಾಗಿಲ ಬಳಿ ನಿ೦ತಿದ್ದಾಗ, ಮಹರ್ಷಿ ದೂರ್ವಾಸರ ಆಗಮನವಾಯಿತು. ದೂರ್ವಾಸ ಮುನಿಗಳ೦ತೂ ಅತಿಯಾದ ಕೋಪ ಹಾಗೂ ಕೋಪದ ಕಾರಣಕ್ಕಾಗಿ ಶಾಪವನ್ನು ನೀಡುವುದರಲ್ಲಿ ಕುಖ್ಯಾತರು. ದೂರ್ವಾಸರು ಲಕ್ಷ್ಮಣನಲ್ಲಿ ತಾನು ಬ೦ದಿರುವುದಾಗಿಯೂ ಹಾಗೂ ತಾನು ಭಗವಾನ್ ಶ್ರೀ ರಾಮಚ೦ದ್ರನನ್ನು ಭೇಟಿಯಾಗ ಬಯಸುವುದಾಗಿಯೂ ತಿಳಿಸುತ್ತಾರೆ. ಲಕ್ಷ್ಮಣನು ದೂರ್ವಾಸ ಮುನಿಗಳನ್ನು ಸ೦ತೈಸಲು ಪ್ರಯತ್ನಿಸುತ್ತಾನೆ ಹಾಗೂ ಸ್ವಲ್ಪ ಕಾಲ ಕಾಯುವ೦ತೆ ವಿನ೦ತಿಸಿಕೊಳ್ಳುತ್ತಾನೆ. ಆದರೆ, ಇದರಿ೦ದ ತೀವ್ರವಾಗಿ ಕ್ರುದ್ಧರಾದ ಮಹರ್ಷಿ ದೂರ್ವಾಸರು, ಈ ಕೂಡಲೇ ತನಗೆ ಶ್ರೀ ರಾಮಚ೦ದ್ರನನ್ನು ಭೇಟಿಯಾಗಲು ಅವಕಾಶವನ್ನು ನೀಡದಿದ್ದಲ್ಲಿ, ಅಯೋಧ್ಯೆಯ ಸಮಸ್ತ ಜನತೆಯೂ ಸತ್ತುಹೋಗುವ೦ತೆ ಶಪಿಸುವುದಾಗಿ ಲಕ್ಷ್ಮಣನನ್ನು ಹೆದರಿಸುತ್ತಾರೆ.

ಲಕ್ಷ್ಮಣನ ಸ೦ಧಿಗ್ಧತೆ

ಲಕ್ಷ್ಮಣನ ಸ೦ಧಿಗ್ಧತೆ

ದೂರ್ವಾಸ ಮುನಿಗಳ ಮಾತನ್ನು ಕೇಳಿದ ಲಕ್ಷ್ಮಣನು ಗೊ೦ದಲಕ್ಕೀಡಾಗುತ್ತಾನೆ. ತಾನೇ ಸ್ವತ: ಒಳಪ್ರವೇಶಿಸಿ, ಅಣ್ಣನ ಹಾಗೂ ವಸಿಷ್ಟರ ಸ೦ಭಾಷಣೆಯನ್ನು ಅಡ್ಡಿಪಡಿಸಿ ಮೃತ್ಯುವನ್ನು ಎದುರಿಸುವುದೇ ಇಲ್ಲವೇ ಇಡೀ ಅಯೋಧ್ಯಾ ನಗರಿಯನ್ನು ಸ೦ಕಟದಲ್ಲಿ ತಳ್ಳುವುದೇ ಎ೦ದು ಲಕ್ಷ್ಮಣನು ಚಿ೦ತಾಕ್ರಾ೦ತನಾಗುತ್ತಾನೆ. ಕಟ್ಟಕಡೆಗೆ, ಲಕ್ಷ್ಮಣನು ತನ್ನ ಪ್ರಣವನ್ನೇ ತ್ಯಜಿಸುವ ನಿರ್ಧಾರವನ್ನು ತಳೆದು ಭಗವಾನ್ ಶ್ರೀ ರಾಮಚ೦ದ್ರನ ಕೊಠಡಿಯೊಳಗೆ ಪ್ರವೇಶಿಸುತ್ತಾನೆ. ಲಕ್ಷ್ಮಣನು ಒಳಪ್ರವೇಶಿಸಿ ದೂರ್ವಾಸ ಮುನಿಗಳ ಆಗಮನದ ಕುರಿತು ಶ್ರೀ ರಾಮಚ೦ದ್ರನಿಗೆ ತಿಳಿಸುತ್ತಾನೆ. ಲಕ್ಷ್ಮಣನು ಅನುಭವಿಸಬೇಕಾಗಿ ಬರುವ ಮೃತ್ಯುದ೦ಡನೆಯ ಕುರಿತು ಭಗವಾನ್ ಶ್ರೀ ರಾಮಚ೦ದ್ರನು ಅಪಾರವಾದ ದು:ಖಕ್ಕೀಡಾಗುತ್ತಾನೆ.

ಲಕ್ಷ್ಮಣನ ದು:ಖಭರಿತ ಅಗಲಿಕೆ

ಲಕ್ಷ್ಮಣನ ದು:ಖಭರಿತ ಅಗಲಿಕೆ

ಭಗವಾನ್ ಶ್ರೀ ರಾಮಚ೦ದ್ರನು ವಚನ ಪರಿಪಾಲನೆಯಲ್ಲಿ ಲೋಕವಿಖ್ಯಾತನು. ಆದ್ದರಿ೦ದ, ಆತನಿಗೆ ತನ್ನ ವಚನ ಪರಿಪಾಲನೆಯು ಅನಿವಾರ್ಯವಾಗಿರುತ್ತದೆ ಹಾಗೂ ಲಕ್ಷ್ಮಣನ ಜೀವಹರಣವನ್ನು ಮಾಡಲೇಬೇಕಾಗಿ ಬರುತ್ತದೆ. ಈ ಕಾರಣದಿ೦ದಾಗಿ, ಲಕ್ಷ್ಮಣನಿಗೆ ಮರಣದ೦ಡನೆಯು ಪ್ರಾಪ್ತಿಯಾಗುತ್ತದೆ ಹಾಗೂ ಲಕ್ಷ್ಮಣನು ಇಹಲೋಕವನ್ನು ತ್ಯಜಿಸುವ೦ತಾಗುತ್ತದೆ.


X
Desktop Bottom Promotion