ಜಗನ್ನಾಟಕ ಸೂತ್ರಧಾರಿ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರು ಇದ್ದರೇ?

ನಮಗೆ ಮಹಾಭಾರತ ಗೊತ್ತಾದ ದಿನದಿಂದಲೂ ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುವ ಒಂದು ಅಂಶವೆಂದರೆ, ಅದು ಶ್ರೀಕೃಷ್ಣನಿಗೆ 16,000 ಪತ್ನಿಯರಿದ್ದರು ಎಂಬ ವಿಷಯ. ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಹೇಳಬೇಕೆಂದರೆ ಈತನಿಗೆ 16,108 ಪತ್ನಿಯರಿದ್ದರು. ನಮಗೆಲ್ಲ ತಿಳಿದಿರುವಂತೆ ಪ್ರಾಚೀನ ಭಾರತದಲ್ಲಿ ಬಹು ಪತ್ನಿತ್ವ ಜಾರಿಯಲ್ಲಿತ್ತು ಮತ್ತು ಅದು ಜನಪ್ರಿಯವಾಗಿತ್ತು ಸಹ. ಹಾಗೆಂದು 16,108 ಜನ ಎಂದರೆ ನಿಜಕ್ಕು ಹುಬ್ಬೇರಿಸುವ ವಿಚಾರವೇ. ಆದರೆ ಶ್ರೀ ಕೃಷ್ಣ ಏಕೆ ಇಷ್ಟು ಜನ ಹೆಂಡತಿಯರನ್ನು ಪಡೆದ ಎಂಬ ಕುರಿತು ಹಲವಾರು ದಂತಕಥೆಗಳಿವೆ.

ಶ್ರೀಕೃಷ್ಣನು ತನ್ನ ಪವಾಡಗಳಿಗಾಗಿ ಹೆಸರುವಾಸಿಯಾಗಿದ್ದ,, ತನ್ನ ಒಳಸಂಚಿಗಾಗಿ ಕಪಟ ನಾಟಕ ಸೂತ್ರಧಾರಿ ಎಂಬ ಅಭಿಧಾನಕ್ಕು ಸಹ ಪಾತ್ರನಾಗಿದ್ದನು. ಈತನು ರಾಧೆಯ ಜೊತೆಗೆ ಹೊಂದಿದ್ದ ಶಾಶ್ವತವಾದ ಪ್ರೇಮ ಎಲ್ಲರಿಗು ಗೊತ್ತಿರುವ ವಿಚಾರವೇ. ಇದರ ಜೊತೆಗೆ ಆತ ಎಂಟು ಮಂದಿ ಸುಂದರ ರಾಜಕುಮಾರಿಯರನ್ನು ಮದುವೆಯಾಗಿದ್ದನು. ಅದಲ್ಲದೆ ಈತನಿಗೆ ಒಂದು ಸಂದರ್ಭದಲ್ಲಿ 16,000 ಜನ ಹೆಂಡತಿಯರು ಸಹ ದೊರೆತರು!.

ಇನ್ನು ನಾವು ಕೆಲವೊಂದು ಪುರಾಣಗಳನ್ನು ಪರಿಶೀಲಿಸಿದರೆ, ಶ್ರೀ ಕೃಷ್ಣನು ರಾಧೆಯನ್ನು ಮದುವೆಯಾಗಿರಲಿಲ್ಲ. ಆದರೆ ಆತ ಇನ್ನುಳಿದ ಎಂಟು ಮಂದಿ ರಾಣಿಯರನ್ನು ಮದುವೆಯಾಗಿದ್ದನು. ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಾಳಿಂದಿ, ಮಿತ್ರವಿಂದಾ, ನಗ್ನಜಿತಿ, ಭದ್ರಾ ಮತ್ತು ಲಕ್ಷ್ಮಣಾ ಈ ಎಂಟು ಜನ ಈತನ ಹೆಂಡತಿಯರು. ಇವರೆಲ್ಲರ ಪೈಕಿ ರುಕ್ಮಿಣಿ ಮತ್ತು ಸತ್ಯಭಾಮರು ಅತ್ಯಂತ ಚಿರಪರಿಚಿತರಾಗಿದ್ದಾರೆ.

ಬನ್ನಿ ಇನ್ನು ಶ್ರೀ ಕೃಷ್ಣ ಹೇಗೆ 16,000 ಜನರನ್ನು ಮದುವೆಯಾದ ಎಂಬ ಕುರಿತು ತಿಳಿದುಕೊಳ್ಳೋಣ. ನಮಗೆಲ್ಲ ತಿಳಿದಿರುವಂತೆ ಶ್ರೀ ಕೃಷ್ಣ ಪವಾಡ ಪುರುಷ. ಈತನ ಜೀವನದಲ್ಲಿ ಏನೇಲ್ಲಾ ನಡೆಯಿತೋ ಅದೆಲ್ಲವು ಲೋಕ ಕಲ್ಯಾಣಾರ್ಥವಾಗಿ ಮತ್ತು ಕಾರ್ಯಕಾರಿಣಿ ಸಂಬಂಧದ ಸಲುವಾಗಿ ನಡೆದವು. ಆದ್ದರಿಂದ 16,108 ಜನ ಪತ್ನಿಯರನ್ನು "ಶ್ರೀ ಕೃಷ್ಣ ಲೀಲೆ"ಯ ಒಂದು ಭಾಗವಾಗಿ ಪರಿಗಣಿಸುವುದು ತಪ್ಪಾಗುತ್ತದೆ. ಆದ್ದರಿಂದ ಯಾವ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣನು 16,000 ಜನ ಮಹಿಳೆಯರನ್ನು ಮದುವೆಯಾದನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು

ನರಕಾಸುರನ ಕಥೆ

ನರಕಾಸುರನ ಕಥೆ

ನರಕಾಸುರನು ಪ್ರಗ್ಜೋತಿಷ್ಯದ ರಾಜ. ಇದು ಈಗಿನ ಅಸ್ಸಾಂ ರಾಜ್ಯದಲ್ಲಿ ಬರುತ್ತದೆ. ಇವನೊಬ್ಬ ಅಸುರ. ಕುತೂಹಲಕಾರಿ ವಿಚಾರವೆಂದರೆ ಈತನು ವಿಷ್ಣುವಿನ ವರಾಹವತಾರದಲ್ಲಿ, ವರಾಹ ಮತ್ತು ಭೂದೇವಿಯರಿಗೆ ಜನಿಸಿದ ಮಗ. ಭೂದೇವಿಯ ಮಗನಾಗಿದ್ದರಿಂದ ಈತನನ್ನು ಭೌಮ ಅಥವಾ ಭೌಮಾಸುರ ಎಂದು ಸಹಾ ಕರೆಯುತ್ತಾರೆ. ಈತನು ಸ್ವರ್ಗ, ಮರ್ತ್ಯ ಮತ್ತು ಪಾತಾಳಗಳನ್ನು ಗೆದ್ದು ಮೂರು ಲೋಕದ ಒಡೆಯನಾಗಿದ್ದ. ಭೂಲೋಕದಲ್ಲಿ ಈತನು 16,000 ಜನ ಯುವರಾಣಿಯರನ್ನು ಅವರ ದೇಶವನ್ನು ಗೆದ್ದು ಬಂಧನದಲ್ಲಿ ಇರಿಸಿಕೊಂಡಿದ್ದ. ಸ್ವರ್ಗದಲ್ಲಿ ಈತ ಇಂದ್ರನ ತಾಯಿಯಾದ ಅದಿತಿಯ ಓಲೆಗಳನ್ನು ಕದ್ದನು. ಇನ್ನು ಪಾತಾಳದಲ್ಲಿ ಈತನು ವರುಣನ ಚಕ್ರಾಧಿಪತ್ಯದ ಕೊಡೆಯನ್ನು ವಶಪಡಿಸಿಕೊಂಡನು. ಜೊತೆಗೆ ಪರ್ವತಗಳ ರಾಜನನ್ನು ಬಂಧಿಸಿ ಕಾರಾಗೃಹದಲ್ಲಿಟ್ಟನು. ಇದೇ ಸಂದರ್ಭದಲ್ಲಿ ಇಂದ್ರನು ಈತನನ್ನು ಸಂಹರಿಸಿ, ಅದಿತಿಯ ಓಲೆಗಳನ್ನು ಮರು ವಶಪಡಿಸಿಕೊಳ್ಳುವಂತೆ ಮತ್ತೆ ಲೋಕಕ್ಕೆ ಶಾಂತಿಯನ್ನು ನೀಡುವಂತೆ ಶ್ರೀ ಕೃಷ್ಣನನ್ನು ಕೇಳಿಕೊಂಡನು. ಹೀಗಾಗಿ ಶ್ರೀ ಕೃಷ್ಣನು ಈ ಅಸುರನನ್ನು ಸಂಹರಿಸಿದನು.

ಸುಲಿಗೆ

ಸುಲಿಗೆ

ನರಕಾಸುರನ ಸಂಹಾರದ ನಂತರ ಭೂಮಿದೇವಿಯು ಆತ ಕದ್ದಿದ್ದ ಎಲ್ಲಾ ವಸ್ತುಗಳನ್ನು ತಿರುಗಿ ನೀಡಿದಳು. ಅದರಲ್ಲಿ ಶ್ರೀ ಕೃಷ್ಣನಿಗೆ 16,000 ಮಹಿಳೆಯರನ್ನು ಸಹ ಭೂದೇವಿ ನೀಡಿದಳು. ಶ್ರೀ ಕೃಷ್ಣನು ಅವರನ್ನು ಬಂಧ ವಿಮುಕ್ತಗೊಳಿಸಿದನು. ಆದರೆ ಅವರು ಅವನನ್ನು ತೊರೆದು ಹೋಗಲಿಲ್ಲ.

ಸಾಮಾಜಿಕ ಕಳಂಕ

ಸಾಮಾಜಿಕ ಕಳಂಕ

ಪ್ರಾಚೀನ ಕಾಲದಲ್ಲಿ ಒಂದು ರಾಜ್ಯದ ಮೇಲೆ ದಾಳಿ ಮಾಡಿದ ರಾಜರು ಆ ರಾಜ್ಯದ ಮಹಿಳೆಯರನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದರು. ಸೋತ ರಾಜರು ಮಹಿಳೆಯರನ್ನು ಪುನಃ ಪಡೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದುದು ಕಡಿಮೆ. ಆದರೆ ಪುನಃ ರಾಜ್ಯ ರಾಜರ ಕೈವಶವಾದರು ಈ ಮಹಿಳೆಯರು ಕಳಂಕಿತರಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ತಮ್ಮನ್ನು ಪರ ಪುರುಷನೊಬ್ಬ ಮುಟ್ಟಿದ ಎಂಬ ಕೊರಗು ಅವರನ್ನು ಜೀವನ ಪರ್ಯಂತ ಕಾಡುತ್ತಿತ್ತು. ನರಕಾಸುರನ ಕಾರಾಗೃಹದಲ್ಲಿದ್ದ 16,108 ಜನ ಮಹಿಳೆಯರಿಗೆ ಇದೇ ಕೊರಗು ಕಾಡುತ್ತಿತ್ತು. ಹಾಗಾಗಿ ಅವರೆಲ್ಲರು ತಮ್ಮನ್ನು ಪತ್ನಿಯರಾಗಿ ಸ್ವೀಕರಿಸು ಎಂದು ಕೃಷ್ಣನ ಮೊರೆ ಹೋದರು.

16,108 ಪತ್ನಿಯರು

16,108 ಪತ್ನಿಯರು

ಹೀಗೆ ಶ್ರೀ ಕೃಷ್ಣನು ಇವರೆಲ್ಲರನ್ನು ಮದುವೆಯಾದನು. ಭಾಗವತ ಪುರಾಣವು ಇವರೆಲ್ಲರನ್ನು ಮದುವೆಯಾದ ನಂತರ ಕೃಷ್ಣನ ಪತ್ನಿಯರ ಜೀವನವನ್ನು ಚಿತ್ರಿಸಿದೆ. ಪ್ರತಿಯೊಬ್ಬ ಉಪಪತ್ನಿಗೆ ಒಂದು ಮನೆಯನ್ನು ನೀಡಲಾಗಿತ್ತು. ಜೊತೆಗೆ ಇವರೆಲ್ಲರಿಗೆ ಸುಮಾರು ನೂರು ಸೇವಕರನ್ನು ಒದಗಿಸಲಾಗಿತ್ತು. ಕೃಷ್ಣನು ತನ್ನನ್ನು ತಾನು ವಿವಿಧ ರೂಪಗಳಾಗಿ ಬೇರ್ಪಡಿಸಿಕೊಂಡು, ಪ್ರತಿಯೊಬ್ಬ ಪತ್ನಿಯ ಜೊತೆಗೆ ರಾತ್ರಿಯ ವೇಳೆಯನ್ನು ಸರದಿ ಪ್ರಕಾರ ಕಳೆಯುತ್ತಿದ್ದ. ಬೆಳಗ್ಗೆ ಈ ಎಲ್ಲಾ ರೂಪಗಳು ಕೃಷ್ಣನಲ್ಲಿ ಐಕ್ಯವಾಗುತ್ತಿದ್ದವು. ಆಗ ಆತ ದ್ವಾರಕಾದ ರಾಜನಾಗಿ ರಾಜ್ಯವನ್ನು ಪಾಲಿಸುತ್ತಿದ್ದ. ಪ್ರತಿಯೊಬ್ಬ ಹೆಂಡತಿಯು ಕೃಷ್ಣನನ್ನು ವೈಯುಕ್ತಿಕವಾಗಿ ಸತ್ಕರಿಸುತ್ತಿದ್ದಳು, ಪೂಜಿಸುತ್ತಿದ್ದಳು, ಆತನಿಗೆ ಸ್ನಾನ ಮಾಡಿಸುತ್ತಿದ್ದಳು, ಉಡುಗೆ ತೊಡಿಸುತ್ತಿದ್ದಳು, ಅಭಿಮಾನ ವ್ಯಕ್ತಪಡಿಸುತ್ತಿದ್ದಳು ಮತ್ತು ಹೂ ಹಾಗು ಹೂಮಾಲೆಗಳ ಉಡುಗೊರೆಯನ್ನು ನೀಡುತ್ತಿದ್ದಳು.

ಪವಾಡ ಪುರುಷ

ಪವಾಡ ಪುರುಷ

ಮತ್ತೊಂದು ಕಥೆಯ ಪ್ರಕಾರ, ಕಲಹ ಪ್ರಿಯನಾದ ನಾರದ ಮಹರ್ಷಿಯು ಒಂದು ದಿನ ಶ್ರೀ ಕೃಷ್ಣನನ್ನು ಕುರಿತು, ತಾನು ಬ್ರಹ್ಮಚಾರಿಯಾದ್ದರಿಂದ ತನಗೆ ಕೃಷ್ಣನ ಬಳಿಯಿರುವ ಸಾವಿರಾರು ಪತ್ನಿಯರಲ್ಲಿ ಒಬ್ಬಳನ್ನು ನೀಡಬೇಕೆಂದು ಕೇಳಿಕೊಂಡನು. ಆಗ ಕೃಷ್ಣನು ತಾನು ಯಾವ ಪತ್ನಿಯ ಬಳಿಯಿಲ್ಲವೋ, ಅವಳನ್ನು ಗೆದ್ದು ಆಕೆಯನ್ನು ವರಿಸಬಹುದೆಂದು ಸಲಹೆ ನೀಡಿದನು. ಆಗ ನಾರದನು ಶ್ರೀ ಕೃಷ್ಣನ 16,108 ಪತ್ನಿಯರ ಮನೆಗೆ ಹೋಗಿ ನೋಡಿದನು. ಶ್ರೀ ಕೃಷ್ಣನು ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದನು. ಹೀಗಾಗಿ ನಾರದನು ಬ್ರಹ್ಮಚಾರಿಯಾಗಿಯೇ ಇರಬೇಕಾಯಿತು.

ಜಗನ್ನಾಟಕ ಸೂತ್ರಧಾರಿ

ಜಗನ್ನಾಟಕ ಸೂತ್ರಧಾರಿ

ಇದೆಲ್ಲವನ್ನು ನೋಡಿದ ಬಳಿಕ ನಾರದನು ಶ್ರೀ ಕೃಷ್ಣನ ಲೀಲೆಯನ್ನು ಅರ್ಥ ಮಾಡಿಕೊಂಡನು. ಆತ ಹೇಗೆ 16,000 ಪತ್ನಿಯರನ್ನು ನಿಭಾಯಿಸುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡನು. ಆದ್ದರಿಂದಲೆ ಶ್ರೀ ಕೃಷ್ಣನನ್ನು ಜಗನ್ನಾಟಕ ಸೂತ್ರಧಾರಿ ಎಂದು ಕರೆಯುವುದು. ಹೀಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕೃಷ್ಣನು 16,000 ಪತ್ನಿಯರನ್ನು ಯಾವುದೇ ಭಾರವಿಲ್ಲದೆ ವರಿಸಿದನಷ್ಟೇ ಅಲ್ಲದೆ, ಸುಖಮಯ ಜೀವನ ಸಹ ನಡೆಸಿದನು.

Story first published: Saturday, January 31, 2015, 16:03 [IST]
X
Desktop Bottom Promotion