Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪೂಜೆ ಆರಂಭಕ್ಕೂ ಮೊದಲು ಶಂಖ ಊದುವುದು ಇದೇ ಕಾರಣಕ್ಕೆ!
ಹಿಂದೂ ಧರ್ಮದಲ್ಲಿ ಶಂಖಕ್ಕೆ ಮಹತ್ವವಾದ ಸ್ಥಾನವಿದೆ. ಪೂಜೆ ಶುರುವಾಗುವುದಕ್ಕಿಂತ ಮೊದಲು 5 ಬಾರಿ ಶಂಖವನ್ನು ಊದಲಾಗುತ್ತದೆ. ಶಂಖವು ಭಗವಾನ್ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಪುರಾಣಗಳ ಪ್ರಕಾರ ವಿಷ್ಣುವು ಹಿರಣ್ಯಕಶುಪುವನ್ನು ಸಂಹರಿಸಲು ಶಂಖವನ್ನು ಊದಿದ್ದನು ಎಂಬ ನಂಬಿಕೆಯಿದೆ.

''ಭಗವಾನ್ ವಿಷ್ಣುವಿಗೆ ಶಂಖ ಬಹಳ ಪ್ರಿಯವಾದುದು. ಮಹಾಭಾರತ ಕಾಲದಲ್ಲಿ ಭಗವಾನ್ ವಿಷ್ಣು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದನೆಂದು ಹೇಳಲಾಗುತ್ತದೆ, ಆತನ ಬಳಿ ಪಾಂಚಜನ್ಯ ಎಂಬ ಶಂಖವಿತ್ತು. ಸಾಗರ ಮಂಥನದ ಸಮಯದಲ್ಲಿ ಹೊರಬಂದ 14 ರತ್ನಗಳಲ್ಲಿ ಶಂಖ ಚಿಪ್ಪು ಕೂಡ ಒಂದು ಎಂದು ನಂಬಲಾಗಿದೆ.''

ಶಂಖದಲ್ಲಿದೆ 7 ರಂಧ್ರಗಳು
ನೀವು ಗಮನಿಸರ್ಬಹುದು ಶಂಖದಲ್ಲಿ ಏಳು ರಂಧ್ರಗಳಿದ್ದು, ಇದರ ಶಬ್ಧವು ಸಮುದ್ರದಾಳದಿಂದ ಬರುವ ಲಯದಂತೆ ಕೇಳಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶಂಖ ಊದುವುದರಿಂದ ಮನೆಯಲ್ಲಿ ಶಾಂತಿ ಸೃಷ್ಟಿಯಾಗಿ ದುಷ್ಟ ಶಕ್ತಿಗಳು ದೂರವಾಗುತ್ತಂತೆ. ಹಾಗಾದ್ರೆ ಪೂಜೆಗೂ ಮೊದಲು ಶಂಖ ಊದೋದ್ಯಾಕೆ? ಇದರ ಮಹತ್ವವೇನು? ಸನಾತನ ಧರ್ಮದಲ್ಲಿ ಈ ಬಗ್ಗೆ ಏನು ಉಲ್ಲೇಖವಾಗಿದೆ? ಎಂಬುದನ್ನು ಹೇಳ್ತೀವಿ.

ಪೂಜೆಗೂ ಮೊದಲೇ ಶಂಖ ಊದಲು ಕಾರಣವೇನು?
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜೆಗೂ ಅದರದ್ದೇ ಆದ ಕಟ್ಟುಪಾಡು, ಆಚಾರ-ವಿಚಾರಗಳನ್ನು ಪಾಲಿಸಲೇಬೇಕು. ಪೂಜೆ ಎಂದರೆ ಕೇವಲ ನಂಬಿಕೆ, ಆಚರಣೆ ಮಾತ್ರವಲ್ಲ. ಬದಲಿಗೆ ನಮ್ಮನ್ನು ಪೊರೆಯುವ ದೇವನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ. ಸನಾತನ ಧರ್ಮದ ಪ್ರಕಾರ ಪೂಜೆಯ ಪುಣ್ಯ ಯಾವ ವ್ಯಕ್ತಿ ಪೂಜೆ ಸಲ್ಲಿಸುತ್ತಾನೋ ಅವನಿಗೆ ಮಾತ್ರವಲ್ಲದೇ ಅವನ ಕುಟುಂಬಸ್ಥರಿಗೂ ಸಲ್ಲುತ್ತದೆ.
"ಯಾವುದಾದರೂ ಶುಭ ಕಾರ್ಯ ನಡೆಯುವ ಮೊದಲು ಪರಮಾತ್ಮನಿಗೆ ಮೊದಲು ಪೂಜೆ ಸಲ್ಲಿಸಿ ನಂತರವೇ ಎಲ್ಲಾ ಕಾರ್ಯ ಆರಂಭವಾಗುತ್ತದೆ. ಅದಕ್ಕೂ ಮೊದಲು ಒಳಗಿರೋ ದುಷ್ಟ ಶಕ್ತಿಗಳು ತೊಲಗಬೇಕು. ದುಷ್ಟ ಶಕ್ತಿ ತೊಲಗಬೇಕೆಂದರೆ ಮೊದಲಿಗೆ ಶಂಖದ ನಾದ ಕೇಳಲೇಬೇಕು. ಶಂಖದಿಂದ ಹೊರಬರುವ ಶಬ್ಧಕ್ಕೆ ದುಷ್ಟ ಶಕ್ತಿಯನ್ನ ದೂರ ಮಾಡುವ ಶಕ್ತಿ ಇದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಪೂಜೆಗೂ ಮೊದಲು ಶಂಖವನ್ನು ಊದುವುದು. "

ಶಂಖದ ಪ್ರಾಮುಖ್ಯತೆ ಹಾಗೂ ಅನುಕೂಲಗಳೇನು?
ಪೂಜೆಗೂ ಮೊದಲು ಶಂಖ ಊದುವುದು ತಲತಲಾಂತರಗಳಿಂದ ಬಂದ ಆಚರಣೆಯಾಗಿದೆ. ಶಂಖದ ನಾದಕ್ಕೆ ದುಷ್ಟಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ಪೂಜಾ ಕೋಣೆಗೆ ಆಗಮನವಾಗುತ್ತದೆ. ಹಾಗಾದ್ರೆ ಇದರ ಪ್ರಾಮುಖ್ಯತೆ ಏನು? ಶಂಖ ಊದುವುದರಿಂದ ಯಾವ ರೀತಿ ಪ್ರಯೋಜನವಾಗಲಿದೆ ಎಂಬುವುದನ್ನು ತಿಳಿಯೋಣ.

ದುಷ್ಟ ಆತ್ಮಗಳನ್ನು ಹೊಡೆದೋಡಿಸುತ್ತದೆ
ಎಲ್ಲಿ ಧನಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ ಋಣಾತ್ಮಕ ಶಕ್ತಿ ಇರಲೇಬೇಕು. ಪುರಾಣಗಳ ಕಥೆ ನಮಗೆಲ್ಲಾ ಗೊತ್ತಿದೆ. ದೇವಾನು ದೇವತೆಗಳಿಗೆ ರಾಕ್ಷಸರು ಯಾವ ರೀತಿ ತೊಂದರೆ ನೀಡಿದ್ದರು ಎಂದು ನಾವು ಕಥೆಗಳ ಮೂಲಕ ಕೇಳಿ ತಿಳಿದುಕೊಂಡಿದ್ದೇವೆ. ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದ ಸಮಯದಲ್ಲಿ ಮನುಷ್ಯ ಸಾಮಾನ್ಯವಾಗಿ ದೇವರ ಮೊರೆ ಹೋಗುತ್ತಾನೆ. ಪೂಜಾ-ಪುನಸ್ಕಾರಗಳನ್ನು ಮಾಡಲು ಮುಂದಾಗುತ್ತಾನೆ. ಇಂತಹ ಸಂದರ್ಭದಲ್ಲೂ ದುಷ್ಟ ಶಕ್ತಿಗಳು ಒಳಹೊಕ್ಕಿ ಬಿಡುತ್ತದೆ. ಹೀಗಾಗಿ ದುಷ್ಟ ಶಕ್ತಿಯನ್ನು ಆಚೆ ಹಾಕಲು ಶಂಖದ ನಾದ ಅಲ್ಲಿ ಕೇಳಲೇಬೇಕು.

ದೇವತೆಗಳಿಗೆ ಗೌರವದ ಪ್ರತೀಕ ಈ ಶಂಖ
ದೇವರಿಗೆ ಹಾಗೂ ದೇವಾಲಯಕ್ಕೆ ಶಂಖದ ಮೂಲಕ ಗೌರವ ಸಮರ್ಪಣೆ ಮಾಡಲಾಗುತ್ತದೆ. ಪೂಜೆಗೂ ಮೊದಲು ನಾವು ದೇವರನ್ನ ಭಕ್ತಿಯಿಂದ ನೆನೆದು ಆವಾಹನೆ ಮಾಡಿಕೊಳ್ಳುತ್ತೇವೆ. ಈ ವೇಳೆ ಶಂಖದ ಮೂಲಕ ನಾವು ಗೌರವ ತೋರಿ ದೇವತೆಗಳನ್ನು ಬರಮಾಡಿಕೊಳ್ಳುತ್ತೇವೆ.

ಹಿಂದೂ ಆಚರಣೆಗಳಲ್ಲಿ ಶಂಖ ಅತೀ ಮುಖ್ಯ
ಹಿಂದೂಗಳ ಯಾವುದೇ ಆಚರಣೆಗಳಾಗಿ ಅಥವಾ ಹಬ್ಬ-ಹರಿದಿನಗಳಲ್ಲಿ ಶಂಖ ಇರಲೇಬೇಕು. ಗಣೇಶ ಚತುರ್ಥಿ, ಕಾರ್ತಿಕ ಪೂರ್ಣಿಮಾ, ಸೂರ್ಯ ದೇವನ ಆಚರಣೆಗೆ, ನವರಾತ್ರಿ, ಪಿತೃ ಪಕ್ಷ, ಹೀಗೆ ಎಲ್ಲಾ ಕಾರ್ಯಕ್ಕೂ ಮೊದಲು ಶಂಖದ ನಾದ ಕೇಳಲೇಬೇಕು.

ಶಂಖ ಊದುವುದರಿಂದ ಆಗುವ ವೈಜ್ಞಾನಿಕ ಅನುಕೂಲಗಳೇನು?
ಶಂಖ ಊದುವುದರಿಂದ ವೈಜ್ಞಾನಿಕ ಅನುಕೂಲಗಳು ಕೂಡ ಇದೆ. ಅವು ಯಾವುದೆಂದರೆ
* ಪ್ರತಿನಿತ್ಯ ಶಂಖ ಊದುವುದರಿಂದ ಮಕ್ಕಳಲ್ಲಿ ತೊದಲುವಿಕೆ ಸಮಸ್ಯೆ ನಿವಾರಣೆ ಆಗುತ್ತದೆ.
* ಶಂಖದ ಭಸ್ಮದಿಂದ ಅನೇಕ ರೋಗಗಳಿಗೆ ಆಯುರ್ವೇದ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಡವೆ, ಆಕ್ನೆ, ಕಿಬ್ಬೊಟ್ಟೆಯ ನೋವು, ಹೃದಯದ ಉರಿ, ಪಿತ್ತಕೋಶದ ಹಿಗ್ಗುವಿಕೆ ಹೀಗೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ.
* ಶಂಖದೊಳಗಡೆ ರಾತ್ರಿಯಿಡೀ ನೀರನ್ನು ಸಂಗ್ರಹಿಸಬೇಕು. ನಂತರ ಈ ನೀರನ್ನು ಬಿಳಿ ಕಲೆ, ಅಲೆರ್ಜಿ ಇರುವ ಜಾಗ, ಕಜ್ಜಿ ಇರುವ ಕಡೆ ಹಚ್ಚುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
* ಶಂಖದೊಳಗಡೆ ರಾತ್ರಿಯಿಡೀ ಸಂಗ್ರಹವಾದ ನೀರಿನಲ್ಲಿ ಎರಡು ಚಮಚ ನೀರನ್ನು ಕುಡಿಯುವುದರಿಂದ ಹೊಟ್ಟೆನೋವು, ಅಜೀರ್ಣ ಸಮಸ್ಯೆ, ಕರುಳಿನ ಸೀಳುವಿಕೆ ಸಮಸ್ಯೆ ನಿವಾರಣೆ ಆಗುತ್ತದೆ.
* ಪ್ರತಿನಿತ್ಯ ಶಂಖ ಊದುವುದರಿಂದ ಹೃದಯದೊಳಗಿರುವ ತಡೆ ( Blockage) ಸಮಸ್ಯೆ, ಉಸಿರಾಟದ ಸಮಸ್ಯೆ ನಿವಾರಣೆ ಆಗುತ್ತದೆ.
ಪ್ರತಿಯೊಂದು ಆಚರಣೆಯ ಹಿಂದೆ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಸನಾತನ ಧರ್ಮದಲ್ಲಿ ಕಾರಣಗಳಿಲ್ಲದೇ ಯಾವುದೇ ಆಚರಣೆ ಜಾರಿಗೆ ಬಂದಿಲ್ಲ. ಇಂದು ನಾವು ಶಂಖದ ಮಹತ್ವ ಹಾಗೂ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ವಿ. ಮುಂದಿನ ದಿನಗಳಲ್ಲಿ ಇಂತಹದ್ದೇ ಮುಖ್ಯವಾದ ಆಚರಣೆಗಳ ಬಗ್ಗೆ ತಿಳಿಸುವ ಪ್ರಯತ್ನ ಖಂಡಿತ ಮಾಡ್ತೀವಿ.



Click it and Unblock the Notifications











