ದೀಪಾವಳಿ 2019: ಹಬ್ಬಕ್ಕೆ ಏಕೆ ಪಟಾಕಿ ಸಿಡಿಸುತ್ತಾರೆ ಗೊತ್ತೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

Deepavali 2019 : Why do we burst crackers? What are the ill effects of fire crackers?

ದೀಪಾವಳಿಯು ಬೆಳಕಿನ ಹಬ್ಬ. ದೀಪಗಳಿಂದ ಶೃಂಗರಿಸಲ್ಪಟ್ಟು, ಅಂಧಕಾರವನ್ನು ದೂರ ಮಾಡುವಂತಹ ಹಬ್ಬ. ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬವು ಈ ಬಾರಿ 25 ಅಕ್ಟೋಬರ್ 2019ರಂದು ಶುಕ್ರವಾರದಿಂದ ಆರಂಭವಾಗುವುದು. ಕರ್ನಾಟಕದಲ್ಲಿ ಪ್ರಮುಖವಾಗಿ ಅಕ್ಟೋಬರ್ 27ರಂದು ನರಕ ಚತುರ್ದಶಿಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ.

ಈ ಹಬ್ಬ ಹೆಸರಿಗೆ ದೀಪಾವಳಿಯಾದರೂ ಪಟಾಜಿಯ ಸದ್ದೇ ಹೆಚ್ಚಿರುತ್ತದೆ. ದೀಪಗಳ ಬೆಳಕಿನ ನಡುವೆ ಪಟಾಕಿ ಕೂಡ ಸಿಡಿಸಲಾಗುತ್ತದೆ. ದೀಪಾವಳಿ ಬಂತೆಂದರೆ ಅದು ಮಕ್ಕಳಿಗೆ ತುಂಬಾ ಸಂಭ್ರಮ. ಯಾಕೆಂದರೆ ಹೊಸ ಬಟ್ಟೆಯ ಜತೆಗೆ ಪಟಾಕಿ ಸಿಡಿಸಲು ಅವಕಾಶ ಸಿಗುವುದು. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವುದು ಯಾಕೆ ಎಂದು ತಿಳಿಯುವ...

ಪಟಾಕಿ ಸಿಡಿಸುವುದು ಯಾಕೆ?

ಪಟಾಕಿ ಸಿಡಿಸುವುದು ಯಾಕೆ?

ಹೆಚ್ಚಾಗಿ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವುದು ಒಂದು ರೀತಿಯ ಸಂಪ್ರದಾಯವಾಗಿದೆ. ಹಬ್ಬ ಕೂಡ ಒಂದು ಸಂಭ್ರಮವೇ ಆಗಿರುವ ಕಾರಣದಿಂದ ಪಟಾಕಿ ಸಿಡಿಸಿ ಇದನ್ನು ಆಚರಿಸ ಲಾಗುವುದು. ದೀಪಾವಳಿ ಸಂಪ್ರದಾಯದಂತೆ ದೀಪಗಳನ್ನು ಹಚ್ಚಿಡುವುದು ಮತ್ತು ಪಟಾಕಿ ಸಿಡಿಸಲಾಗುವುದು. ಪಟಾಕಿ ಸಿಡಿಸದೆ ಇದ್ದರೆ ಆಗ ದೀಪಾವಳಿಯು ಪೂರ್ಣವಾಗುವುದಿಲ್ಲ. ಯುವಕರಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಪಟಾಕಿ ಸಿಡಿಸಿ ಸಂಭ್ರಮಿಸುವರು. ಅದರಲ್ಲೂ ಭಾರತೀಯರು ಪಟಾಕಿ ಸಿಡಿಸುವ ಮೂಲಕ ಹಬ್ಬದ ಸಂಭ್ರಮಾಚರಣೆಯನ್ನು ಇಮ್ಮಡಿಗೊಳಿಸುತ್ತೇವೆ. ನಮ್ಮ ಹಿರಿಯರ ಪ್ರಕಾರ ಪಟಾಕಿ ಸಿಡಿಸಿರುವುದರಿಂದ ದುಷ್ಟಶಕ್ತಿಗಳು ದೂರವಾಗುವುದು ಮತ್ತು ದೀಪಗಳನ್ನು ಬೆಳಗುವ ಕಾರಣದಿಂದಾಗಿ ಒಳ್ಳೆಯತನವನ್ನು ಸ್ವಾಗತಿಸಲಾಗುವುದು. ದೀಪಾವಳಿ ಆಚರಣೆ ಬಗ್ಗೆ ಭಾರತದಲ್ಲಿ ಹಲವಾರು ರೀತಿಯ ಪುರಾಣಗಳು ಇವೆ. ಈ ಲೇಖನದಲ್ಲಿ ಅವುಗಳಲ್ಲಿ ಕೆಲವನ್ನು ತಿಳಿಸಲಾಗಿದೆ.

ದುಷ್ಟ ರಾವಣನ ವಿರುದ್ಧ ರಾಮನ ಗೆಲುವು

ದುಷ್ಟ ರಾವಣನ ವಿರುದ್ಧ ರಾಮನ ಗೆಲುವು

ದುಷ್ಟ ರಾವಣನ ವಿರುದ್ಧ ರಾಮನು ಗೆಲುವು ಪಡೆದು, 14 ವರ್ಷದ ವನವಾಸದ ಬಳಿಕ ತನ್ನ ರಾಜ್ಯಕ್ಕೆ ಸೀತೆ ಮತ್ತು ಲಕ್ಷ್ಮಣನೊಂದಿಗೆ ಮರಳುವ ವೇಳೆ ಅಯೋಧ್ಯೆಯ ಜನರು ದೀಪಗಳನ್ನು ಹಚ್ಚಿಟ್ಟು ರಾಮನ ಸ್ವಾಗತಿಸುವರು.

ಕೃಷ್ಣ ದೇವರು

ಕೃಷ್ಣ ದೇವರು

ಕೃಷ್ಣ ದೇವರು ಮತ್ತು ಅವರ ಪತ್ನಿ ಸತ್ಯಭಾಮೆ, ದುಷ್ಟ ರಾಕ್ಷಸ ನರಕಾಸುರನ ವಿರುದ್ಧ ಗೆಲುವು ಪಡೆಯುವರು. ಆದರೆ ಸಾಯುವ ಮೊದಲು ಕೃಷ್ಣ ದೇವರಲ್ಲಿ ಕ್ಷಮೆಯಾಚಿಸುವ ನರಕಾಸುರ, ತನ್ನ ಜನರು ಪ್ರತೀ ವರ್ಷ ತನ್ನ ಸಾವನ್ನು ತುಂಬಾ ಸಂಭ್ರಮದಿಂದ ಆಚರಿಸಬೇಕು, ಹೊಸ ಬಟ್ಟೆಗಳನ್ನು ಧರಿಸಬೇಕು, ಸಿಹಿ ಹಂಚಿಕೊಳ್ಳಬೇಕು ಮತ್ತು ಪಟಾಕಿ ಸಿಡಿಸಬೇಕು ಎಂದು ಕೇಳಿಕೊಳ್ಳುತ್ತಾನೆ.

ವಿಷ್ಣು ದೇವರು

ವಿಷ್ಣು ದೇವರು

ವಿಷ್ಣು ದೇವರು ವಾಮನ ರೂಪದಲ್ಲಿ ಬಂದು ಸ್ವಲ್ಪ ಅಂಹಕಾರಿಯಾಗಿದ್ದ ಬಲಿ ಚಕ್ರವರ್ತಿಯ ಸಾಮ್ರಾಜ್ಯವನ್ನು ಪಡೆದು ಬಲಿಯ ತಲೆ ಮೇಲೆ ಕಾಲಿಡುವುದು ಮತ್ತು ಆತನಲ್ಲಿದ್ದ ದುಷ್ಟತನವನ್ನು ಹೋಗಲಾಡಿಸುವುದು.

ಮಳೆಯಿಂದಾಗಿ ತತ್ತರಿಸಿ ಹೋಗಿದ್ದ ಗೋಕುಲದ ಜನರನ್ನು ರಕ್ಷಿಸಿದ ಕೃಷ್ಣ

ಮಳೆಯಿಂದಾಗಿ ತತ್ತರಿಸಿ ಹೋಗಿದ್ದ ಗೋಕುಲದ ಜನರನ್ನು ರಕ್ಷಿಸಿದ ಕೃಷ್ಣ

ಇಂದ್ರನಿಂದಾಗಿ ಅಕಾಲಿಕ ಮಳೆಯಿಂದಾಗಿ ತತ್ತರಿಸಿ ಹೋಗಿದ್ದ ಗೋಕುಲದ ಜನರನ್ನು ರಕ್ಷಿಸುವ ಕೃಷ್ಣನು ಗೋವರ್ಧನ ಪರ್ವತವನ್ನು ಕಿರುಬೆರಳಿನಲ್ಲಿ ಎತ್ತಿ, ಜನರು, ಗೋವುಗಳಿಗೆ ಅದರಡಿ ಆಶ್ರಮ ನೀಡುವರು.

ದೀಪಾವಳಿಯು ಲಕ್ಷ್ಮೀ ದೇವಿಯ ಹುಟ್ಟುಹಬ್ಬ

ದೀಪಾವಳಿಯು ಲಕ್ಷ್ಮೀ ದೇವಿಯ ಹುಟ್ಟುಹಬ್ಬ

ದೀಪಾವಳಿಯು ಲಕ್ಷ್ಮೀ ದೇವಿಯ ಹುಟ್ಟುಹಬ್ಬವೆಂದು ಹೇಳಲಾಗುತ್ತದೆ. ಈ ವೇಳೆ ಲಕ್ಷ್ಮೀ ದೇವಿಯು ಪ್ರತಿಯೊಂದು ಮನೆಗೂ ಭೇಟಿ ನೀಡುವರು. ಈ ವೇಳೆ ಲಕ್ಷ್ಮೀ ದೇವಿಯು ಆರೋಗ್ಯ, ಸಂತೋಷ ಮತ್ತು ಸಂಪತ್ತನ್ನು ಕರುಣಿಸುವರು ಎಂದು ಹೇಳಲಾಗುತ್ತದೆ. ಇದೇ ವೇಳೆ ಅವರು ಅಹಂ, ದುರಾಸೆ ಮತ್ತು ಇತರ ದುಷ್ಟಶಕ್ತಿ ನಿವಾರಣೆ ಮಾಡುವರು.

ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು

ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು

ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ದೀಪಾವಳಿಯನ್ನು ಗೆಲುವಿನ ಸಂಭ್ರಮವಾಗಿ ಆಚರಿಸಲಾಗುತ್ತದೆ. ಇದು ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು ಎಂದು ಭಾವಿಸಲಾಗಿದೆ. ದೀಪಾವಳಿ ಆಚರಣೆಗೆ ಕಾರಣಗಳು ಏನೇ ಇದ್ದರೂ ಸಂಭ್ರಮ ಮಾತ್ರ ಒಂದೇ ರೀತಿಯಲ್ಲಿರುವುದು. ಪಟಾಕಿ ಸಿಡಿಸುವ ಮೂಲಕ ಅದರ ಸದ್ದು ಸ್ವರ್ಗದಲ್ಲಿರುವ ದೇವದೇವತೆಗಳನ್ನು ತಲುಪುವುದು ಮತ್ತು ಜನರು ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಂದು ದೇವದೇವತೆಗಳು ಭಾವಿಸುವರು ಎಂದು ಹಿರಿಯರು ಹೇಳುತ್ತಾರೆ.

ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು

ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು

ವಿಜ್ಞಾನಿಗಳ ಪ್ರಕಾರ ಪಟಾಕಿ ಸದ್ದಿನಿಂದ ಉಪಪ್ರಜ್ಞೆಯ ಎಚ್ಚರಿಸುವುದು ಮತ್ತು ಜಾಗೃತಿಗೊಳಿಸುವುದು. ಇದರಿಂದ ವ್ಯಕ್ತಿಯು ತುಂಬಾ ಸಂಭ್ರಮದಲ್ಲಿರುವನು ಮತ್ತು ಸಂಭ್ರಮಾಚರಣೆಯ ವಾತಾವರಣ ನಿರ್ಮಾಣ ಮಾಡುವನು ಎಂದು ಹೇಳುವರು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರ ಹಿಂದೆ ಕೆಲವೊಂದು ವೈಜ್ಞಾನಿಕ ಕಾರಣಗಳು ಕೂಡ ಇದೆ ಎಂದು ಹೇಳಲಾಗುತ್ತದೆ. ಭಾರತದ ಹೆಚ್ಚಿನ ರಾಜ್ಯಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಹವಾಮಾನವು ಬದಲಾಗುವುದು. ಈ ವೇಳೆ ಕೀಟಗಳು ತಮ್ಮ ಸಂತಾನೋತ್ಪತ್ತಿ ಮಾಡುವುದು. ಅದು ತುಂಬಾ ಏರು ಗತಿಯಲ್ಲಿರುವುದು. ಪಟಾಕಿ ಸಿಡಿಸುವ ವೇಳೆ ಹೊರಬರುವಂತಹ ಸಲ್ಫರ್ ಗ್ಯಾಸ್ ನಿಂದಾಗಿ ಕೀಟಗಳ ಸಂತಾನೋತ್ಪತ್ತಿ ತಡೆಯಬಹುದು. ಇದರಿಂದ ಕೀಟಗಳಿಂದ ಬರುವಂತಹ ಕಾಯಿಲೆಗಳನ್ನು ತಡೆಯಬಹುದು. ಕಾರಣಗಳು ಏನೇ ಇರಲಿ, ನೀವು ಮಾತ್ರ ಎಚ್ಚರಿಕೆಯಿಂದ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸಿಕೊಳ್ಳಿ.

English summary

Why do we Burst crackers in Diwali? know the interesting story

Why do we burst crackers? Of course, we burst crackers to celebrate happiest of the occasions and enhance the festivity of the atmosphere. The Bursting of crackers and lighting up of arrays of Diyas are two most important and integral part of Diwali tradition. Diwali would be left incomplete without bursting of crackers to one’s heart content. From youngsters to the adults, we Indians are highly fond of bursting crackers to maximize the experience of the festive celebration.
X
Desktop Bottom Promotion