Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಲಿಯುಗ ಅಂತ್ಯದವರೆಗೂ ಬದುಕಿರುತ್ತಾರೆ ಈ ಸಪ್ತ ಚಿರಂಜೀವಿಗಳು
ಚಿರಂಜೀವಿ ಎಂದರೆ ಸಾವೇ ಇಲ್ಲದ ವ್ಯಕ್ತಿ ಎಂದರ್ಥ. ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಇಂದಿಗೂ ನಮ್ಮೊಂದಿಗೆ ಸಪ್ತ ಚಿರಂಜೀವಿಗಳು ಬದುಕಿದ್ದಾರಂತೆ. ಈ ಏಳು ಜನ ಕಲಿಯುಗ ಅಂತ್ಯದವರೆಗೂ ಇದ್ದು ಸತ್ಯಯುಗದ ಆರಂಭದ ನಂತರವೇ ಇವರ ಅಂತ್ಯ ಎಂದು ನಂಬಲಾಗಿದೆ.
ನಾವು ಪುರಾಣಗಳಿಂದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳುತ್ತೇವೆ. ಇದೇ ಪುರಾಣ ಗ್ರಂಥಗಳೇ ಸಪ್ತ ಚಿರಂಜೀವಿಗಳ ಬಗ್ಗೆ ಹೇಳಿರೋದು. ಕಲಿಯುಗ ಅಂತ್ಯದವರೆಗೂ ನಮ್ಮೊಂದಿಗೆ ಬದುಕಿರೋ ಈ ಚಿರಂಜೀವಿಗಳ ಅಮರತ್ವದ ಹಿಂದೆ ಒಂದು ರೋಚಕ ಕಥೆ ಇದೆ. ಹಾಗಾದ್ರೆ ಯಾರು ಈ ಸಪ್ತ ಚಿರಂಜೀವಿಗಳು? ಇವರು ಎಲ್ಲಿದ್ದಾರೆ? ಇಂದಿಗೂ ಇವರು ಕಲಿಯುಗದಲ್ಲೇ ಅಲೆದಾಡುತ್ತಿರುವುದಕ್ಕೆ ಕಾರಣವೇನು? ಹಾಗಾದರೆ ಈ ಏಳು ಜನರ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲದ ವಿಚಾರವನ್ನು ತಿಳಿಸಿಕೊಡ್ತೀವಿ.

1. ಪರಶುರಾಮ
ಪರಶುರಾಮನನ್ನು ವಿಷ್ಣುವಿನ ಐದನೇ ಅವತಾರವೆಂದು ನಂಬಲಾಗಿದೆ. ಶಿವನು ಪರಶುರಾಮನ ಪ್ರಾಮಾಣಿಕತೆಗೆ ಮೆಚ್ಚಿ ಆತನಿಗೆ ಚಿರಂಜೀವಿಯಾಗಿರು ಎಂದು ವರವನ್ನು ನೀಡಿದನು. ಪರಶುರಾಮನು ಸಪ್ತ ಋಷಿಗಳಲ್ಲಿ ಒಬ್ಬರಾದ ಜಮದಾಗ್ನಿಯ ಮಗನಾಗಿದ್ದು ಆತ ಭೂಮಿಯ ಮೇಲಿರುವ ಎಲ್ಲಾ ಕ್ಷತ್ರಿಯರನ್ನ ಕೊಲ್ಲೋದಾಗಿ ಪ್ರತಿಜ್ಞೆ ಮಾಡಿರುತ್ತಾನೆ. ಕಾರಣ ಕ್ಷತ್ರಿಯ ರಾಜನೊಬ್ಬ ಆತನ ತಂದೆ ಜಮದಾಗ್ನಿಯನ್ನು ಕೊಂದು ಹಾಕಿದ್ದನು. ಅಂದಿನಿಂದ ಪರಶುರಾಮ ಪ್ರತಿಜ್ಞೆ ಕೈಗೊಂಡು ಕ್ಷತ್ರಿಯರ ಸಂಹಾರಕ್ಕೆ ಮುಂದಾಗುತ್ತಾನೆ. ಪರಶುರಾಮನು ಭೂಮಿಯ ಮೇಲಿರುವ ಕ್ಷತ್ರಿಯರನ್ನು ಕೊಲ್ಲುವುದಕ್ಕೆ ಇಂದಿಗೂ ಭೂಮಿಯ ಮೇಲೆ ಬದುಕಿದ್ದಾನೆ ಎಂಬ ನಂಬಿಕೆ ಇದೆ.

2. ವಿಭೀಷಣ
ಲಂಕಾದ ರಾಜನಾಗಿದ್ದ ರಾವಣನ ಕಿರಿಯ ಸಹೋದರನೇ ವಿಭೀಷಣ. ಈತನು ರಾಮ ಹಾಗೂ ರಾವಣನ ಕದನದಲ್ಲಿ ಮಹತ್ವದ ಪಾತ್ರ ವಹಿಸಿದ್ದನು. ರಾವಣನಿಂದ ಅವಮಾನಕ್ಕೆ ಒಳಗಾದ ವಿಭೀಷಣ ರಾಮನ ಸಂಗಡ ಸೇರಿಕೊಂಡಿದ್ದನು. ಹಾಗೂ ರಾವಣನ ಬಲಾಢ್ಯತೆಯ ಕೆಲವೊಂದು ಗುಟ್ಟುಗಳನ್ನು ರಾಮನಿಗೆ ತಿಳಿಸಿದ್ದನು. ಮತ್ತು ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ಸಹಾಯ ಮಾಡಿದ್ದನು. ರಾಮನು ರಾವಣನ ಸಂಹಾರ ಮಾಡಿದ ನಂತರ ವಿಭೀಷಣನಿಗೆ ಲಂಕಾಧಿಪತಿಯ ಪಟ್ಟ ನೀಡಲಾಗಿತ್ತು. ಅಷ್ಟೇ ಅಲ್ಲ, ವಿಭೀಷಣನ ಆಡಳಿತದಲ್ಲಿ ಪ್ರಜೆಗಳು ಸುಖವಾಗಿದ್ದರು ಎಂಬ ಉಲ್ಲೇಖವು ಇದೆ. ಈತನು ರಾಮನಿಂದ ಚಿರಂಜೀವಿಯಾಗಿರು ಎಂಬ ವರವನ್ನು ಪಡೆದಿದ್ದನಂತೆ. ಇಂದಿಗೂ ವಿಭೀಷಣನು ಲಂಕಾವನ್ನು ಕಾಯುತ್ತಿದ್ದಾನೆ ಎಂದು ನಂಬಲಾಗಿದೆ.

3. ವೇದವ್ಯಾಸ
ಮಹಾಭಾರತದ ಸೃಷ್ಟಿಕರ್ತನೇ ವೇದವ್ಯಾಸ. ಹಾಗೂ ಇವರೇ ವೇದಗಳನ್ನು ಸೃಷ್ಟಿಸಿದ್ದಾರೆ ಎಂದು ನಂಬಲಾಗಿದೆ. ವೇದಗಳ ಸಂಯೋಜನೆಯ ನಂತರದ ಕಾಲದಲ್ಲಿ ನಾರದ ಮುನಿಗಳ ಸಲಹೆಯ ಮೇರೆಗೆ ವ್ಯಾಸರು ಶ್ರೀಮದ್ ಭಗವತವನ್ನು ಬರೆದಿದ್ದಾರೆ ಎಂಬ ಉಲ್ಲೇಖವಿದೆ. ಪುರಾಣಗಳ ಪ್ರಕಾರ ವೇದವ್ಯಾಸರು ದ್ವಾಪರ ಕಾಲದಿಂದ ಕಲಿಯುಗ ಅಂತ್ಯದವರೆಗೂ ಬದುಕಿರುತ್ತಾರೆ ಎಂದು ನಂಬಲಾಗಿದೆ.

4. ಬಲಿಚಕ್ರವರ್ತಿ
ಬಲಿಚಕ್ರವರ್ತಿಯು ವಿರೋಚನನ ಮಗ ಹಾಗೂ ಪ್ರಹಲ್ಲಾದನ ಮೊಮ್ಮಗನಾಗಿದ್ದನು. ಬಲಿಯು ಅಸುರರ ಅರಸ ಹಾಗೂ ಉತ್ತಮ ರಾಜನಾಗಿದ್ದನು. ಒಂದು ಸಲ ವಿಷ್ಣುವು ಬಲಿಚಕ್ರವರ್ತಿಯ ಪ್ರಮಾಣಿಕತೆಯನ್ನು ಪರೀಕ್ಷಿಸಲು ವಾಮನನ ವೇಷದಲ್ಲಿ ಅವತರಿಸಿ ಬರುತ್ತಾನೆ. ಹಾಗೂ ಬಲಿಚಕ್ರವರ್ತಿಯಲ್ಲಿ ಮೂರಿಂಚು ಜಾಗವನ್ನು ಕೇಳುತ್ತಾನೆ. ಆಗ ಬಲಿಯು ಮೂರಿಂಚು ತಾನೇ ಎಂದು ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಆಗ ವಾಮನನ ರೂಪದಲ್ಲಿದ್ದ ವಿಷ್ಣುವು ದೈತ್ಯ ಆಕಾರವನ್ನು ತಳೆದು ಒಂದು ಹೆಜ್ಜೆಯನ್ನು ಭೂಮಿಯಲ್ಲಿ ಮತ್ತೊಂದು ಹೆಜ್ಜೆಯನ್ನು ಆಕಾಶದಲ್ಲಿ ಇಡುತ್ತಾನೆ ಹಾಗೂ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಲಿಚಕ್ರವರ್ತಿ ತನ್ನ ತಲೆಯಲ್ಲಿ ಇಡುವಂತೆ ಸೂಚಿಸುತ್ತಾನೆ. ವಿಷ್ಣು ಆತನ ಹೆಜ್ಜೆಯನ್ನು ಬಲಿಚಕ್ರವರ್ತಿಯ ತಲೆಯ ಮೇಲೆ ಇಟ್ಟಿದ್ದೇ ತಡ ಬಲಿಯು ಪಾತಾಳಕ್ಕೆ ಹೋಗುತ್ತಾನೆ. ನಂತರ ಬಲಿಯ ಪ್ರಾಮಾಣಿಕತೆಗೆ ಮೆಚ್ಚಿದ ವಿಷ್ಣುವು ಆತನಿಗೆ ಚಿರಂಜೀವಿಯಾಗಿರು ಎಂಬ ವರವನ್ನು ನೀಡುತ್ತಾನೆ.

5. ಅಶ್ವಥಾಮ
ಅಶ್ವಥಾಮನು ದ್ರೋಣಾಚಾರ್ಯರ ಮಗ ಹಾಗೂ ಮಹಾ ಪರಾಕ್ರಮಿ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿರುದ್ಧವಾಗಿ ಕೆಚ್ಚೆದೆಯಿಂದ ಹೋರಾಡುತ್ತಾನೆ. ಯುದ್ಧದ ವೇಳೆ ಅರ್ಜುನನ ವಿರುದ್ಧ ಪ್ರಯೋಗಿಸಿದ ಬ್ರಹಾಸ್ತ್ರವನ್ನು ಹಿಂಪಡೆಯಲಾಗದೇ ಆ ಬ್ರಹ್ಮಾಸ್ತ್ರ ಉತ್ತರೆಯ ಗರ್ಭವನ್ನು ಹೊಕ್ಕು ಮಗುವಿನ ಸಾವಿಗೆ ಕಾರಣವಾಗುತ್ತದೆ. ನಂತರ ಕೃಷ್ಣ ಆ ಮಗುವನ್ನು ಬದುಕಿಸುತ್ತಾನೆ. ಅಶ್ವಥಾಮನ ನಡೆಯಿಂದ ಕೋಪಗೊಂಡ ಕೃಷ್ಣನು ಆತನಿಗೆ ಕಲಿಯುಗ ಅಂತ್ಯದವರೆಗೆ ರಕ್ತಕಾರಿ ನರಳಾಡುತ್ತಾ ಅಲೆದಾಡು ಎಂದು ಶಾಪ ನೀಡುತ್ತಾನೆ.

6. ಕೃಪಾಚಾರ್ಯ
ಕೃಪಾಚಾರ್ಯರನ್ನು ಬ್ರಹ್ಮನ ನಾಲ್ಕನೇ ಅವತಾರವೆಂದು ನಂಬಲಾಗಿದೆ. ಕೃಪಾಚಾರ್ಯರು ಕೂಡ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿದ್ದರು. ಈತ ಮಹಾಪರಾಕ್ರಮಿಯಾಗಿದ್ದು, ಕುರುಕ್ಷೇತ್ರ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ಕೊನೆಯವರೆಗೂ ಉಳಿದುಕೊಂಡಿದ್ದರು. ಇವರಿಗೆ ಶ್ರೀ ಕೃಷ್ಣನು ಅಮರತ್ವದ ವರವನ್ನು ಕರುಣಿಸಿದ್ದನು. ಈ ಯುದ್ಧದ ಬಳಿಕ ಕೃಪಾಚಾರ್ಯರು ಪಾಂಡವರಿಗೆ ಶರಣಾಗಿ ಅವರ ಜೊತೆಗೆ ಹಸ್ತಿನಾಪುರಕ್ಕೆ ತೆರಳುತ್ತಾರೆ. ನಂತರ ಅರ್ಜುನನ ಮೊಮ್ಮಗನಾದ ಪರೀಕ್ಷಿತನಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ನಂಬಲಾಗಿದೆ.

7. ಹನುಮಂತ
ಅಂಜನಾದೇವನ ಮಗ ರಾಮನ ಭಂಟನೇ ಹನುಮಂತ. ಈತ ಶ್ರೀ ರಾಮನ ಮಹಾನ್ ಭಕ್ತ. ರಾವಣನ ಸಂಹಾರದ ನಂತರ ಹನುಮಂತನು ರಾಮನ ಹೇಳಿಕೆಯಂತೆ ಆಯೋಧ್ಯೆಗೆ ತೆರಳುತ್ತಾನೆ. ಲಂಕಾ ಯುದ್ಧದಲ್ಲಿ ಹನುಮಂತನ ಸಹಾಯಕ್ಕೆ ಮೆಚ್ಚಿದ ಶ್ರೀ ರಾಮನು ಹನುಮಂತನಿಗೆ ಉಡುಗೊರೆಯನ್ನು ಕೊಡಲು ಮುಂದಾಗುತ್ತಾನೆ. ಆದರೆ ಹನುಮಂತನು ಆ ಉಡುಗೊರೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಾನೆ ಮತ್ತು ನಿನ್ನ ಪಾದದಲ್ಲಿ ನನಗೆ ಜಾಗ ಕೊಟ್ಟರೆ ಸಾಕು ಅಂತ ಹನುಮಂತ ಕೇಳಿಕೊಳ್ಳುತ್ತಾನೆ. ಆಗ ಹನುಮಂತನ ಭಕ್ತಿಗೆ ಮೆಚ್ಚಿದ ರಾಮನು ಭೂಮಿಯಲ್ಲಿ ರಾಮನ ಭಕ್ತರಿರುವವರೆಗೆ ಚಿರಂಜೀವಿಯಾಗಿರು ಎಂದು ವರ ಕರುಣಿಸುತ್ತಾನೆ.
ಇವರೇ ಇಂದಿಗೂ ಬದುಕಿರುವ ಸಪ್ತ ಚಿರಂಜೀವಿಗಳು. ಈ ಏಳು ಜನ ಇಂದಿಗೂ ನಮ್ಮೊಂದಿಗೆ ಬದುಕಿದ್ದಾರೆ ಎಂಬ ಉಲ್ಲೇಖವಿದೆ. ಸತ್ಯಯುಗದ ಭೇಟಿಯ ನಂತರವೇ ಇವರ ಅಂತ್ಯ ಎಂಬ ನಂಬಿಕೆಯಿದೆ.



Click it and Unblock the Notifications









