Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಗಣೇಶ ಚತುರ್ಥಿ 2020: ಸಂಕಷ್ಟ ಚತುರ್ಥಿ ವ್ರತ ಮಾಡಿ-ಎಲ್ಲಾ ಸಂಕಷ್ಟ ದೂರವಾಗುತ್ತದೆ

ಪಂಚಾಂಗದ ಪ್ರಕಾರ ಹುಣ್ಣಿಮೆಯ ಅಥವಾ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಆಚರಿಸಲಾಗುವುದು. ಇದು ಗಣಪತಿ ದೇವರಿಗೆ ತುಂಬಾ ಪವಿತ್ರವಾಗಿರುವ ದಿನ. ಸಂಕಷ್ಟಿ ಚತುರ್ಥಿಯಂದು ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬದವರ ಸುಖ, ಸಮೃದ್ಧಿಗಾಗಿ ಉಪವಾಸ ವ್ರತ ಕೈಗೊಳ್ಳುವರು. ಸಂಕಷ್ಟಿಯೆಂದರೆ ಕಠಿಣ ಸಮಸ್ಯೆಯಿಂದ ಹೊರಬರುವುದು ಎಂದರ್ಥವಾಗಿದೆ.
ಉಪವಾಸ ವ್ರತ ಕೈಗೊಳ್ಳುವುದರಿಂದ ಜೀವನದಲ್ಲಿ ಬರುವಂತಹ ಎಲ್ಲಾ ರೀತಿಯ ಸಮಸ್ಯೆಗಳು ಹಾಗೂ ವಿಘ್ನಗಳನ್ನು ಗಣಪತಿ ದೇವರು ನಿವಾರಣೆ ಮಾಡುತ್ತಾರೆ ಎಂದು ನಂಬಲಾಗಿದೆ. ಈ ದಿನ ಜನರು ತುಂಬಾ ಕಠಿಣ ವ್ರತ ಕೈಗೊಳ್ಳುವರು ಮತ್ತು ರಾತ್ರಿ ಚಂದ್ರನ ನೋಡಿದ ಬಳಿಕ ಉಪವಾಸ ಕೈಬಿಡುವರು. ಈ ಸಾಲಿನಲ್ಲಿ ಆಗಸ್ಟ್ 22ರಂದು ಸಂಕಷ್ಟಿ ಚತುರ್ಥಿ ಇೆದೆ
ಪ್ರತೀ ತಿಂಗಳು ಸಂಕಷ್ಟಿ ಚತುರ್ಥಿ ಆಚರಿಸಲಾಗುತ್ತದೆ ಮತ್ತು ಈ ವೇಳೆ ಗಣಪತಿಯನ್ನು ವಿವಿಧ ಹೆಸರು ಮತ್ತು ಪೀಠ(ಕಮಲದ ದಳಗಳು) ಗಳಿಂದ ಪೂಜಿಸಲಾಗುವುದು. ಸಂಕಷ್ಟ ಚತುರ್ಥಿಯಂದು ಗಣೇಶನನ್ನು ಪೂಜಿಸುವ ವೇಳೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಆಗಿರುವ ಕಥೆಯಿದೆ. ಗಣೇಶನನ್ನು ಹೊರತುಪಡಿಸಿ, ಶಿವನನ್ನು ಕೂಡ ಪೂಜಿಸಲಾಗುವುದು. ಸಂಕಷ್ಟಿ ಚತುದರ್ಶಿಯ ಪುರಾಣದ ಬಗ್ಗೆ ತಿಳಿಯುವ....

ಹಿಂದೂ ಸಂಕಷ್ಟ ಚತುದರ್ಶಿಯ ಪುರಾಣ
ಗಣೇಶನ ಕಥೆಯು ಹೆಚ್ಚಿನವರಿಗೆ ತಿಳಿದೇ ಇದೆ. ಪಾರ್ವತಿ ಮಾತೆಯು ತನ್ನ ಮೇಲೆ ಹಚ್ಚಿಕೊಂಡಿರುವ ದಪ್ಪಗಿನ ಪದರವನ್ನು ತೆಗೆದು ಗಣಪತಿಯನ್ನು ರಚಿಸಿ, ಆತನನ್ನು ತನ್ನ ಮಗನೆಂದು ಸ್ವೀಕರಿಸುವಳು. ಒಂದು ದಿನ ಸ್ನಾನ ಗೃಹದ ಹೊರಗಡೆ ಕಾವಲು ಕಾಯುವಂತೆ ಗಣೇಶನಿಗೆ ಪಾರ್ವತಿಯು ಆಜ್ಞೆ ಮಾಡುವಳು. ಶಿವನು ತನ್ನ ಗಣಗಳೊಂದಿಗೆ ಇಲ್ಲಿಗೆ ಬಂದಾಗ ಶಿವನ ಬಗ್ಗೆ ತಿಳಿಯದೆ ಗಣೇಶನು ಪ್ರವೇಶ ನೀಡುವುದಿಲ್ಲ.

ಬ್ರಹ್ಮಾಂಡವನ್ನೇ ನಾಶ ಮಾಡಲು ಪಾರ್ವತಿ ಮುಂದಾದಳು!
ಗಣೇಶನು ತನ್ನ ಮಗನೆಂದು ತಿಳಿಯದೆ ಆತ ಬಾಲಕನ ತಲೆ ಕಡಿಯಲು ತನ್ನ ಗಣಗಳಿಗೆ ಆದೇಶ ನೀಡುವನು. ಗಣೇಶನ ತಲೆ ಕಡಿದಿರುವುದನ್ನು ಕೇಳಿದ ಆದಿಶಕ್ತಿಯ ರೂಪ, ಪಾರ್ವತಿ ದೇವಿಯು ತುಂಬಾ ದುಃಖಿತಳಾಗುವಳು ಮತ್ತು ಕ್ರೋಧಗೊಂಡು ಇಡೀ ಬ್ರಹ್ಮಾಂಡವನ್ನೇ ನಾಶ ಮಾಡಿ ಬಿಡುವುದಾಗಿ ಹೇಳುವಳು. ಆಕೆಯನ್ನು ಒಲಿಸಿಕೊಳ್ಳಲು ಶಿವ ದೇವರು ಗಣೇಶನಿಗೆ ಮರು ಜೀವ ನೀಡುವುದಾಗಿ ಹೇಳುವರು. ಇದರಿಂದಾಗಿ ಗಣೇಶನ ತಲೆಯು ಆನೆಯ ತಲೆಯಾಯಿತು. ಇದರ ಬಳಿಕ ಗಣೇಶನಿಗೆ ಮೊದಲ ಪೂಜೆ ಸಲ್ಲಬೇಕು. ಆತನನ್ನು ಜ್ಞಾನ, ಸುಖ ಹಾಗೂ ಸಮೃದ್ಧಿಯ ದೇವರು ಎಂದು ಪೂಜಿಸಬೇಕೆಂದು ಮಹಾದೇವನು ಆದೇಶ ನೀಡುವನು.

ಎಲ್ಲಾ ದೇವರಿಗಿಂತ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ
ಇದರಿಂದ ಯಾವುದೇ ಕಾರ್ಯ ಮಾಡಬೇಕಾದರೂ ಮೊದಲು ಗಣೇಶನನ್ನು ಪೂಜೆ ಮಾಡಿ ವಿಘ್ನ ನಿವಾರಣೆ ಮಾಡಲಾಗುತ್ತದೆ. ಎಲ್ಲಾ ದೇವರಿಗಿಂತ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಸಂಕಷ್ಟಿ ಚತುರ್ಥಿಯಂದು ಶಿವ ದೇವರು ಹೆಚ್ಚಿನ ಶಕ್ತಿ ನೀಡುವರು. ಇದರಿಂದ ಸಂಕಷ್ಟಿಯಂದು ಸಂಕಷ್ಟಹರ ಅಥವಾ ವಿಘ್ನವಿನಾಶಕನನ್ನು ಪೂಜಿಸಲಾಗುವುದು.

ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆ
ಸಂಕಷ್ಟ ಚತುದರ್ಶಿಯು ತುಂಬಾ ಪವಿತ್ರ ಪೂಜೆಯಾಗಿದೆ. ಈ ಪೂಜೆಯನ್ನು ಕುಟುಂಬದ ಸುಖ, ಸಮೃದ್ಧಿಗಾಗಿ ಮಾಡಲಾಗುತ್ತದೆ. ಸಂಕಷ್ಟಿ ಚತುದರ್ಶಿಯಮದು ಸೂರ್ಯಾಸ್ತದ ಬಳಿಕ ಪೂಜೆ ಮಾಡಲಾಗುವುದು. ಶುದ್ಧೀಕರಿಸಿದ ಬಳಿಕ ಗಣೀಶನ ಮೂರ್ತಿಯನ್ನು ಇಟ್ಟು, ಅದಕ್ಕೆ ಹೂಗಳು ಮತ್ತು ಕದಿಕೆ ಹುಲ್ಲನ್ನು ಇಟ್ಟು ಪೂಜಿಸಲಾಗುತ್ತದೆ. ಈ ವೇಳೆ ಗಣೇಶನಿಗೆ ಮೋದಕ ಮತ್ತು ಲಾಡು ಕೂಡ ಅರ್ಪಿಸಲಾಗುವುದು. ಸೂರ್ಯಾಸ್ತದ ಬಳಿಕ ವ್ರತಕಥೆ ಅಥವಾ ಆ ತಿಂಗಳಿನ ಕಥೆಯ ಮೂಲಕ ಪೂಜೆ ಆರಂಭವಾಗುವುದು. ಕುಟುಂಬವು ಸುಖಸಮೃದ್ಧಿಯಿಂದ ಇರಲಿ ಎಂದು ದಂಪತಿಯು ಈ ಪೂಜೆ ಮಾಡುವರು.



Click it and Unblock the Notifications
