Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೀಪಾವಳಿಗೆ ಈ ವಾಸ್ತು ಟಿಪ್ಸ್ ಪಾಲಿಸಿದರೆ ಹಣ-ಸಂಪತ್ತು ವೃದ್ಧಿಸುವುದು
ದೀಪಾವಳಿ ಹಬ್ಬ ಸಮೀಸುತ್ತಿದ್ದಂತೆ ನಮ್ಮ ಮನ್ಸಿನಲ್ಲಿ ಅದೇನೋ ಸಡಗರ-ಸಂಭ್ರಮ. ಆ ಬೆಳೆಕಿನ ಪ್ರಭೆಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ದೀಪಾವಳಿಗೆ ಹತ್ತು-15 ದಿನಕ್ಕೆ ಮೊದಲೇ ಶಾಪಿಂಗ್ ಶುರುವಾಗುತ್ತೆ, ಇನ್ನು ಮನೆಯನ್ನು ದೀಪಾವಳಿಗೆ ಹೇಗೆ ಅಲಂಕರಿಸಬೇಕೆಂಬುವುದು ಒಂದು ವಾರಕ್ಕೆ ಮೊದಲೇ ಪ್ಲ್ಯಾನ್ ರೆಡಿಯಾಗಿರುತ್ತೆ, ಈಗಾಗಲೇ ಶುರುಕೂಡ ಮಾಡಿರುತ್ತೀರಿ.
ದೀಪಾವಳಿ ಅಂದರೆ ಬದುಕಿನಲ್ಲಿ ನೆಮ್ಮದಿ, ಸಮೃದ್ಧಿಯ ಸಂಕೇತ. ಹಾಗಾಗಿ ದೀಪಾವಳಿಯಲ್ಲಿ ಮನೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ನೀವು ಹೀಗೆಲ್ಲಾ ಮಾಡಿದರೆ ಮನೆಯಲ್ಲಿ ಸಂಪತ್ತು-ಸಮೃದ್ಧಿ ಹೆಚ್ಚುವುದು:

ದೀಪಾವಳಿಗೆ ಮನೆ ಸ್ವಚ್ಛ ಮಾಡಬೇಕು
ದೀಪಾವಳಿಯಲ್ಲಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಮೂಲೆ-ಮೂಲೆಯಲ್ಲೂ ಕ್ಲೀನ್ ಮಾಡಬೇಕು, ಜೇಡರ ಬಲೆ, ಕೀಟಗಳು ಎಲ್ಲವನ್ನು ಹೋಗಲಾಡಿಸಬೇಕು. ಒಟ್ಟಿನಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಮನೆ ತುಂಬಾನೇ ಸ್ವಚ್ಛವಾಗಿರಬೇಕು.

ಬೇಡದ ವಸ್ತುಗಳನ್ನು ಹೊರಹಾಕಿ
ಮನೆಯಲ್ಲಿ ಮುರಿದ ಚೇರ್, ತುಂಬಾ ಹಳೆಯದಾದ ಪಾತ್ರೆಗಳು, ಡಬ್ಬಗಳು ಇವೆಲ್ಲಾ ಇದ್ದರೆ ಅವುಗಳನ್ನ ಹೊರ ಹಾಕಿ. ಮುರಿದು ಹೋದ ವಸ್ತುಗಳನ್ನು ಮನೆಯಲ್ಲಿ ಇಡುವುದು ಮನೆಗೆ ಒಳ್ಳೆಯದಲ್ಲ. ಅವಗಳೆನ್ನೆಲ್ಲಾ ಬಿಸಾಡಿ, ಇದರಿಂದ ಮನೆಯೊಳಗಡೆ ಧನಾತ್ಮಕ ಶಕ್ತಿ ನಾವೇನು ಪಾಸಿಟಿವ್ ವೈಬ್ಸ್ ಎಂದು ಕರೆಯುತ್ತೇವೆ ಅಲ್ವಾ ಅದು ಹೆಚ್ಚಾಗುವುದು.

ಮನೆಯ ಮುಂಭಾಗದಲ್ಲಿ ಏನೂ ಇಡಬೇಡಿ
ಮನೆಯ ಒಳಗಡೆ ಬರುವ ಜಾಗದಲ್ಲಿ ವಸ್ತುಗಳನ್ನು ಇಡಬೇಡಿ. ಮನೆಯ ಹೊಸ್ತಿಲು ಹಾಗೂ ಹಾಲ್ ತುಂಬಾ ಸುಂದರವಾಗಿ ಕಾಣಬೇಕು. ಮನೆಯ ಹೊಸ್ತಿಲು ಅಲಂಕರಿಸಿ. ಮನೆಯ ಮುಂದುಗಡೆ ರಂಗೋಲಿ ಬಿಡಿ. ಮನೆಯ ಹಾಲ್ ಕ್ಲೀನ್ ಹಾಗೂ ಆಕರ್ಷಕವಾಗಿ ಕಾಣುವಂತೆ ಇರಲಿ. ಮನೆ ಚಿಕ್ಕದು-ದೊಡ್ಡದು ಎಂಬುವುದಲ್ಲ, ನಾವು ಮನೆಯನ್ನು ಹೇಗೆ ಇಡುತ್ತೇವೆ ಅನ್ನುವುದು ಮುಖ್ಯವಾಗುತ್ತೆ.

ಮನೆಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡಿ
ಮನೆಯ ಉತ್ತರ ಹಾಗೂ ಈಶಾನ್ಯ ದಕ್ಕಿನಲ್ಲಿ ಯಾವುದೇ ವಸ್ತುಗಳನ್ನು ಇಡಬೇಡಿ, ಅಲ್ಲಿ ಕಸ, ಮುರಿದ ವಸ್ತುಗಳು, ಬೇಡದ ವಸ್ತುಗಳು ಏನೂ ಇಡಬಾರದು. ಹಸಿರು ಗಿಡಗಳಿರಲಿ, ಮನೆಯ ಒಳಗಡೆ ಚಿಕ್ಕ-ಚಿಕ್ಕ ಗಿಡಗಳನ್ನು ಇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ಬೇಗನೆ ಆಕರ್ಷಿತಳಾಗುತ್ತಾಳೆ ಎಂದು ನಂಬಲಾಗಿದೆ.

ಉಪ್ಪು ನೀರು ಚಿಮುಕಿಸಿ
ನೆಯನ್ನು ಸ್ವಚ್ಛ ಮಾಡಿದ ಬಳಿಕ ಒಂದು ಲೋಟ ನೀರಿಗೆ ಕಲ್ಲುಪ್ಪು ಹಾಕಿ ಆ ನೀರನ್ನು ಮನೆಯ ಎಲ್ಲಾ ಕಡೆ ಚಿಮುಕಿಸಿ. ಉಪ್ಪ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ.

ಮನೆಯ ನಾಲ್ಕೂ ದಿಕ್ಕಿಗೂ ದೀಪ ಹಚ್ಚಿ
ದೀಪಾವಳಿಗೆ ನೀವು ದೀಪಗಳನ್ನು ಹಚ್ಚುವಾಗ ಮನೆಯ ನಾಲ್ಕು ದಿಕ್ಕಿಗೆ ಹಚ್ಚಿ.
ದೀಪಾವಳಿಗೆ ದೀಪ ಹಚ್ಚುವಾಗ ಈ ನಿಯಮ ಪಾಲಿಸಿ:
* ದೀಪಾವಳಿಯಂದು ಮೊದಲಿಗೆ ದಕ್ಷಿಣ ದಿಕ್ಕಿನಲ್ಲಿ ದೀಪ ಹಚ್ಚಬಾರದು.
* ದೀಪಾವಳಿಯಂದು ತುಪ್ಪದ ದೀಪ ಹಚ್ಚಿ
* ದೀಪಕ್ಕೆ ಸೂರ್ಯಕಾಂತಿ ಎಣ್ಣೆ ಬಳಸಲೇಬೇಡಿ, ಎಳ್ಳೆಣ್ಣೆ ಬಳಸಬಹುದು.
* ಮೊದಲಿಗೆ ನೀವು ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಬೇಕು.
* ನಂತರ ಹೊಸ್ತಿಲಿನಲ್ಲಿ ಹಣತೆ ಹಚ್ಚಿ, ನಂತರ ಮನೆಯಲ್ಲಿ ನಿಮಗೆ ಬೇಕಾದ ಕಡೆ ಇಡಿ.
ದೀಪಾವಳಿಗೆ ಏನು ಮಾಡಬೇಕು, ಏನು ಮಾಡಬಾರದು?
ಏನು ಮಾಡಬೇಕು?
* ಮನೆಯ ಹೊಸ್ತಿಲು ಹೊಸದಾಗಿರಬೇಕು ಅಥವಾ ಸರಿಪಡಿಸಿರಬೇಕು
* ಲಕ್ಷ್ಮಿ ಪಾದುಕೆಗಳು ಮನೆಯೊಳಗಡೆ ಬರುವಂತೆ ರಂಗೋಲಿ ಹಾಕಬೇಕು
* ದೇವರ ಮೂರ್ತಿ ಸ್ವಚ್ಛಗೊಳಿಸಲು ಸ್ವಚ್ಛವಾದ ಬಟ್ಟೆ ಬಳಸಿ.
ಏನು ಮಾಡಬಾರದು
* ಮನೆಯ ಮುಂಬಾಗಿಲು ಮುಚ್ಚಬೇಡಿ, ಅಲ್ಲದೆ ಮನೆಯ ಬಾಗಿಲು ತೆರೆಯುವಾಗ ಕಿರ್-ಕಿರ್ ಅಂತ ಶಬ್ದ ಮಾಡಬಾರದು
* ಸ್ವಸ್ತಿಕ್, ಓಂ ಹಾಗೂ ರಂಗೋಲಿಯನ್ನು ದಕ್ಷಿಣ, ಪಶ್ಚಿಮ ಭಾಗಕ್ಕೆ ಹಾಕಬಾರದು.
* ಕುಟಂಬಸ್ಥರು ಅಥವಾ ಸ್ನೇಹಿತರಿಗೆ ಆ್ಯಂಟಿಕ್ ವಸ್ತುಗಳನ್ನು ನೀಡಬೇಡಿ.
* ಮನೆಯ ಮುಂದುಗಡೆ ಲಕ್ಷ್ಮಿ ಅಥವಾ ಶ್ರೀ ಗಣಪನ ರಂಗೋಲಿ ಹಾಕಬೇಡಿ.



Click it and Unblock the Notifications