Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿರುವ ಈ ಹಬ್ಬಗಳ ಬಗ್ಗೆ ಕೇಳಿದ್ರೆ, ನೀವು ಅಚ್ಚರಿ ಪಡೋದು ಗ್ಯಾರಂಟಿ!
ವಿವಿಧ ಸಂಸ್ಕೃತಿ-ಸಂಪ್ರದಾಯಗಳ ಗೂಡು ನಮ್ಮ ದೇಶ. ಇಲ್ಲಿನ ಹಬ್ಬ, ಆಚರಣೆ, ಸಂಪ್ರದಾಯಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಲೇ ಇರುತ್ತವೆ. ಸರ್ವಧರ್ಮ ಸಮನ್ವಯತೆಯಿಂದ ಬಾಳುತ್ತಿರುವ ನಮ್ಮ ನಾಡಿನಲ್ಲಿ ಹಬ್ಬಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಹೆಚ್ಚಿನ ಹಬ್ಬಗಳು ಒಂದೇ ರೀತಿಯಾದ ಆಚರಣೆಯನ್ನು ಹೊಂದಿದ್ದರೂ, ಕೆಲವೊಂದು ಹಬ್ಬಗಳು ವಿಶೇಷ, ನಂಬಲಸಾಧ್ಯವಾದಂತಹ ಆಚರಣೆಗಳನ್ನು ಹೊಂದಿರುತ್ತವೆ. ಈ ಆಚರಣೆಗಳನ್ನ ನೋಡಿದಾಗ ಒಮ್ಮೆ ಆಶ್ಚರ್ಯವಾಗದೇ ಇರದು. ಹಾಗಾದ್ರೆ ನಮ್ಮಲ್ಲಿ ಅಚ್ಚರಿ ಹುಟ್ಟಿಸುವಂತಹ ಕೆಲವು ಹಬ್ಬಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಭಾರತದಲ್ಲಿರುವ ಅಸಾಮಾನ್ಯ ಹಬ್ಬಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಥೈಪುಸಂ- ತಮಿಳುನಾಡು:
ತಮಿಳುನಾಡಿನಲ್ಲಿ ಥೈಪುಸಂ ಎಂಬ ವಿಚಿತ್ರವಾದ ಹಬ್ಬವೊಂದನ್ನು ಆಚರಿಸಲಾಗುತ್ತಿದೆ. ಇಲ್ಲಿನ ಭಕ್ತರು ಚರ್ಮ, ನಾಲಿಗೆ, ಬೆನ್ನು ಅಥವಾ ನಾಲಿಗೆಯನ್ನು ಚೂಪಾದ ಕಬ್ಬಿಣದ ಉಂಗುರಗಳಿಂದ ಚುಚ್ಚುಸಿಕೊಂಡು, ಅದರ ಮೂಲಕ ಭಾರವಾದ ವಸ್ತುಗಳನ್ನು ಎಳೆದು ತರುತ್ತಾರೆ. ಥೈಪುಸಂ 48 ದಿನಗಳವರೆಗೆ ಆಚರಿಸುವ ವಿಶಿಷ್ಟ ಹಬ್ಬವಾಗಿದ್ದು, ದೈವಿಕ ಆನಂದವನ್ನು ಆನುಭವಿಸಲು ಭಕ್ತಿಯೊಂದಿಗೆ ಈ ವಿಲಕ್ಷಣ ಪದ್ಧತಿಯನ್ನು ಆಚರಿಸುತ್ತಾರೆ. ಥೈಪುಸಂ ಭಗವಾನ್ ಮುರುಗನ್ ಅಂದರೆ ಶಿವನ ಮಗ ಎಂದು ನಂಬಲಾಗಿದ್ದು, ತಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಂಕೇತವನ್ನು ಹೊಂದಿದೆ. ಭಕ್ತರು ಪ್ರಾರ್ಥನೆ ಮತ್ತು ಉಪವಾಸದೊಂದಿಗೆ ಸುಮಾರು ನಲವತ್ತೆಂಟು ದಿನಗಳ ವ್ರತ ಮಾಡಿ, ಶೋಭಾಯಾತ್ರೆಯಂದು ಈ ರೀತಿ ಚುಚ್ಚಿಕೊಳ್ಳುವ ಸಂಪ್ರದಾಯ ಇದೆ. ಇದು ತಮಿಳುನಾಡು ಸೇರಿದಂತೆ, ಮಲೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್‌ನಂತಹ ಆಗ್ನೇಯ ಏಷ್ಯಾಗಳಲ್ಲಿಯೂ ಪ್ರಸಿದ್ಧಿಯಾಗಿದೆ.

2. ನಾಗರ ಪಂಚಮಿ- ಭಾರತ:
ದೇಶದಾದ್ಯಂತ ಆಚರಿಸಲಾಗುವ ಈ ಹಬ್ಬವು ಪುರಾಣಗಳಲ್ಲಿ ಮಹತ್ತರವಾರ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ, ಮಳೆಗಾಲದಲ್ಲಿ ಆಚರಿಸುವ ಈ ಹಬ್ಬವು ಸಹ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಬೇರೆ ದಿನಗಳಲ್ಲಿ ಹಾವು ಕಂಡರೆ ಭಯ ಪಡುವ ಜನರೇ, ನಾಗರ ಪಂಚಮಿಯಂದು, ಅವುಗಳಿಗೆ ಹಾಗೂ ನಾಗ ಮೂರ್ತಿಗಳಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಹುತ್ತಕ್ಕೆ ಅರಶಿನ ಕುಂಕುಮವನ್ನ ಆರ್ಪಿಸಿ, ನಮ್ಮನ್ನ ಕಾಪಾಡು ಎಂದು ಭಕ್ತರು ಕೇಳಿಕೊಳ್ಳುತ್ತಾರೆ. ಇಂತಹ ಪದ್ಧತಿ ಕೆಲವರಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ.

3. ಮದೈ ಉತ್ಸವ- ಛತ್ತೀಸ್‌ಗಢ:
ಛತ್ತೀಸ್‌ಗಢವು ಜನಪ್ರಿಯ ಬುಡಕಟ್ಟುಗಳ ತಾಣವಾಗಿದೆ. ಮದೈ ಜನಪ್ರಿಯ ಹಬ್ಬವಾಗಿದ್ದರೂ, ದೇಶದ ಇತರ ಭಾಗಗಳ ಜನರಿಗೆ ಅದರ ಬಗ್ಗೆ ತಿಳಿದಿಲ್ಲ. ಈ ಹಬ್ಬದ ಸಮಯದಲ್ಲಿ, ದೇವತೆ ಕೇಶರ್ಪಾಲ್ ಕೇಶರ್ಪಾಲಿನ್ ದೇವಿಗೆ ಜಾನಪದ ನೃತ್ಯ, ಸಂಗೀತ, ಪವಿತ್ರ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಇದರಲ್ಲಿ ಅಚ್ಚರಿಯೆಂದರೆ, ನಮ್ಮ ದೇಶದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವ ಕೆಲವೇ ಕೆಲವು ಹಬ್ಬಗಳಲ್ಲಿ ಇದೂ ಒಂದು. ಈ ಹಬ್ಬವು ಪ್ರಾಣಿಗಳ ಬಲಿಯೊಂದಿಗೆ ಗುರುತಿಸಲ್ಪಟ್ಟಿದ್ದು, ಸಾಮಾನ್ಯವಾಗಿ ಮೇಕೆಯನ್ನು ಬಲಿಕೊಡಲಾಗುತ್ತದೆ.

4. ಸೆಕ್ರೆನಿ ಉತ್ಸವ - ನಾಗಾಲ್ಯಾಂಡ್:
ಸೆಕ್ರೆನಿ ನಾಗಾಲ್ಯಾಂಡ್‌ನ ಅಂಗಮಿ ಬುಡಕಟ್ಟಿನ ಪ್ರಸಿದ್ಧ ಉತ್ಸವವಾಗಿದೆ. ಆತ್ಮ ಮತ್ತು ದೇಹವನ್ನು ಶುದ್ಧೀಕರಿಸಲು ಈ ಹಬ್ಬವು ಆಚರಿಸಲಾಗುತ್ತದೆ. ಜೊತೆಗೆ ಇಡೀ ಗ್ರಾಮದ ಜೀವನವನ್ನು ಪುನರಾರಂಭಿಸಲು ಮತ್ತು ಸ್ವಚ್ಛಗೊಳಿಸಲು ಜೊತೆಗೆ, ಕಳಪೆ ಶಕ್ತಿಯನ್ನು ತೊಡೆದುಹಾಕಲು ಈ ಉತ್ಸವವನ್ನು 10 ದಿನಗಳವರೆಗೆ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಒಂದಾದ ಥೆಕ್ರಾ ಹೈ ಅಸಾಮಾನ್ಯ ಆಚರಣೆಯಾಗಿದ್ದು, ಇದು ಹಳ್ಳಿಯ ಕಿರಿಯರು ಸಾಮೂಹಿಕವಾಗಿ ಕುಳಿತುಕೊಂಡು, ಮಧ್ಯಪಾನದ ಜೊತೆಗೆ ಮಾಂಸಹಾರವನ್ನು ಸೇವಿಸುವ ವಿಧಾನವಾಗಿದೆ. .

5. ತೂಟೆದಾರ ಅಗ್ನಿ ಖೇಳಿ ಸೇವೆ- ಕರ್ನಾಟಕ:
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರ ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ವರ್ಷಂಪ್ರತಿ ಇಲ್ಲಿಯ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವ ಅಂಗವಾಗಿ ಮಹೋತ್ಸವದ ಕೊನೆಯ ದಿನ ಹರಕೆ ಸೇವೆಯ ನಿಮಿತ್ತ ತೂಟೆದಾರ ಅಗ್ನಿ ಖೇಳಿ ಸೇವೆ ನಡೆಯುತ್ತದೆ. ತೂಟೆದಾರ ಎಂದರೆ ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವ ಆಟ. ಜಲ ದುರ್ಗೆಯಾದಂತಹ ದುರ್ಗಾ ಪರಮೇಶ್ವರಿಗೆ ಈ ಆಟ ಇಷ್ಟವಾದ ಕಾರಣ ಈ ಆಟ ನಡೆಯುತ್ತಿದೆ ಎಂದು ಹೇಳಲಾಗಿದೆ.

6. ಲಾತ್ ಮಾರ್ ಹೋಳಿ- ವೃಂದಾವನ:
ಹೋಳಿ ಅಂದರೆ ಬಣ್ಣಗಳ ಹಬ್ಬ. ಆದರೆ ಈ ಲಾತ್‌ಮಾರ್ ಹೋಳಿಯಲ್ಲಿ ಬಣ್ಣಗಳ ಜೊತೆಗೆ, ಕೋಲುಗಳಿಂದಲೂ ಹೋಳಿಯಾಡುತ್ತಾರೆ. ಅಂದರೆ ಇಲ್ಲಿನ ಮಹಿಳೆಯರು ಪುರುಷರಿಗೆ ತಮಾಷೆಯಾಗಿ ಕೋಲುಗಳಿಂದ ಹೊಡೆಯುವುದು. ಪುರುಷರು ಗುರಾಣಿಯಿಂದ ತಮ್ಮನ್ನು ರಕ್ಷಿಸಲು ಪ್ರಯತ್ನಿಸುವುದು. ಇದು ಪ್ರೀತಿ, ವಿನೋದ ಮತ್ತು ಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ಪುರಾಣಗಳ ಪ್ರಕಾರ, ಕೃಷ್ಣನು ತನ್ನ ಪ್ರೀತಿಯ ರಾಧೆಯನ್ನು ಈ ದಿನ ತಮಾಷೆಗಾಗಿ ಚುಡಾಯಿಸಿದನಂತೆ. ಇದನ್ನ ಕಂಡ ಬರ್ಸಾನದ ಹೆಂಗಸರು, ಕೋಪಗೊಂಡು ಕೃಷ್ಣನನ್ನು ಅಲ್ಲಿಂದ ಓಡಿಸಿದರಂತೆ. ಇದರ ಸಂಕೇತವಾಗಿ, ಅಲ್ಲಿ ಪ್ರತಿ ವರ್ಷ ಲಾತ್ ಮಾರ್ ಹೋಳಿ ಆಚರಿಸಲಾಗುತ್ತದೆ.



Click it and Unblock the Notifications