Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನವೆಂಬರ್ 15ಕ್ಕೆ ತುಳಸಿ ವಿವಾಹ : ಸಿದ್ಧಿಗಾಗಿ ಮಾಡಬೇಕಾದ ಹಾಗೂ ಮಾಡಲೇಬಾರದ ಕೆಲಸಗಳ ಪಟ್ಟಿ ಇಲ್ಲಿದೆ
ಹಿಂದೂ ಸಂಸ್ಕೃತಿಯಲ್ಲಿ ತುಳಸಿ ವಿವಾಹಕ್ಕೆ ಬಹಳ ಮಹತ್ವವಿದೆ. ಇದು ಪ್ರಬೋಧಿನಿ ಏಕಾದಶಿಯಂದು ನಡೆಯುವ ಪವಿತ್ರ ಸಮಾರಂಭವಾಗಿದ್ದು, ಈ ಮೂಲಕ ಎಲ್ಲಾ ಶುಭ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.
ಈ ವರ್ಷ ತುಳಸಿ ವಿವಾಹವು ನವೆಂಬರ್ 15ರಂದು ಬಂದಿದ್ದು, ಕುಟುಂಬದಲ್ಲಿ ಸುಖ, ಶಾಂತಿ ಸಮೃದ್ಧಿ ನೆಲೆಸಲು ಹಾಗೂ ಹೆಣ್ಣುಮಕ್ಕಳಿಲ್ಲದವರು ಕನ್ಯಾದಾನದ ಪುಣ್ಯ ಪಡೆಯಲು ತುಳಸಿ ವಿವಾಹವನ್ನು ಆಚರಣೆ ಮಾಡುತ್ತಾರೆ. ಆದರೆ ಈ ಆಚರಣೆ ಮಾಡುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೊತೆಗೆ ಕೆಲ ಕೆಲಸಗಳಿಂದ ದೂರವಿರಬೇಕು. ಹಾಗಾದ್ರೆ ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ತುಳಸಿ ವಿವಾಹ:
ತುಳಸಿ ವಿವಾಹವನ್ನು ಸಾಮಾನ್ಯ ವಿವಾಹಗಳಂತೆಯೇ, ಎಲ್ಲಾ ಆಚರಣೆಗಳನ್ನು ಅನುಸರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಮನೆಗಳನ್ನು ಅಲಂಕರಿಸುವುದರ ಜೊತೆಗೆ ಮಂಗಳಾಷ್ಟಕ ಮಂತ್ರವನ್ನು ಪಠಿಸುವುದರ ಒಳಗೊಂಡಂತೆ ಎಲ್ಲಾ ಸಂಪ್ರದಾಯಗಳೊಂದಿಗೆ ನಡೆಯುತ್ತದೆ. ತುಳಸಿಗೆ ಕೆಂಪು ಚುನರಿ ಮತ್ತು 16 ಅಲಂಕಾರಿಕಾ ವಸ್ತುಗಳನ್ನು ನೀಡಲಾಗುತ್ತದೆ. ಅಗ್ನಿಯನ್ನು (ಅಗ್ನಿ) ಸಾಕ್ಷಿಯಾಗಿ ತೆಗೆದುಕೊಂಡು, ಶಾಲಿಗ್ರಾಮ ಮತ್ತು ತುಳಸಿಯನ್ನು ವಿವಾಹವಾಗುತ್ತಾರೆ. ಕನ್ಯಾದಾನ ಸಮಾರಂಭ ಸೇರಿದಂತೆ ಎಲ್ಲಾ ವಿವಾಹ-ಸಂಬಂಧಿತ ಆಚರಣೆಗಳನ್ನು ಈ ಹಬ್ಬದ ಸಮಯದಲ್ಲಿ ನಡೆಸಲಾಗುತ್ತದೆ. ತುಳಸಿಯನ್ನು ವೃಂದಾ ಎಂದು ಜನಿಸಿದ ಲಕ್ಷ್ಮಿ ದೇವಿಯ ಅವತಾರವೆಂದು ಹೇಳಲಾಗುತ್ತದೆ. ಆದ್ದರಿಂದ, ಪವಿತ್ರ ತುಳಸಿ ಗಿಡವನ್ನು ವಿಷ್ಣುವಿನ ರಕ್ಷಾ ಕವಚ ಎಂದು ಕರೆಯುತ್ತಾರೆ.

ತುಳಸಿ ವಿವಾಹದಂದು ಮಾಡಬೇಕಾದ ಶುಭ ಕಾರ್ಯಗಳು:
1. ತುಳಸಿ ವಿವಾಹದ ದಿನ ಬೆಳ್ಳಿ ತುಳಸಿ ಗಿಡವನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.
2. ದೇವಸ್ಥಾನಕ್ಕೆ ತುಳಸಿ ಗಿಡಗಳನ್ನು ದಾನ ಮಾಡಿ ಮತ್ತು ಹೊಸ ತುಳಸಿ ಗಿಡವನ್ನು ಮನೆಗೆ ತನ್ನಿ.
3. ತುಳಸಿ ವಿವಾಹದ ದಿನ ಸಂಜೆ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತೀರಿ.
4. ತುಳಸಿ ವಿವಾಹದ ದಿನ ಪುಣ್ಯ ಫಲ ಸಿಗಬೇಕೆಂದರೆ ತುಳಸಿಯನ್ನು ದಾನ ಮಾಡಬಹುದು. ಇಲ್ಲಿ ತುಳಸಿ ಗಿಡ ಇಲ್ಲದ ನಿರ್ಗತಿಕರಿಗೆ ತುಳಸಿ ಗಿಡ ಕೊಡಿ, ಇದರಿಂದ ಪುಣ್ಯ ಸಿಗುತ್ತದೆ. ಇದಲ್ಲದೆ, ನೀವು ಬಯಸಿದರೆ, ನೀವು ದೇವಾಲಯದಲ್ಲಿ ತುಳಸಿ ಗಿಡವನ್ನು ಸಹ ದಾನ ಮಾಡಬಹುದು. ಹೀಗೆ ಮಾಡಿದರೆ ತುಳಸಿ ವಿವಾಹದ ಪುಣ್ಯ ಫಲ ಸಿಗುತ್ತದೆ.
5. ತುಳಸಿ ವಿವಾಹದ ದಿನದಂದು ತಾಯಿ ತುಳಸಿಗೆ ಕೆಂಪು ಬಟ್ಟೆ ಅರ್ಪಿಸಬೇಕು.
6. ತುಳಸಿ ಮದುವೆಯ ದಿನ ತುಳಸಿ ಗಿಡಕ್ಕೆ ನೀರು ಹಾಕಿ.

ತುಳಸಿ ವಿವಾಹದಂದು ಮಾಡಬಾರದ ಕೆಲಸಗಳು:
1. ತುಳಸಿ ಎಲೆಗಳನ್ನು ಕೀಳಬೇಡಿ.
ತುಳಸಿ ವಿವಾಹದಂದು ತುಳಸಿ ಗಿಡವನ್ನು ಕಿತ್ತು ಹಾಕಬೇಡಿ.
2. ಮದುವೆಯ ದಿನದಂದು ತುಳಸಿಗೆ ಎಲ್ಲಾ ಮೇಕಪ್ ವಸ್ತುಗಳನ್ನು ಅರ್ಪಿಸಲು ಮರೆಯಬೇಡಿ.
3. ತುಳಸಿ ವಿವಾಹದ ದಿನದಂದು ಮಾಂಸ ಆಹಾರ ಮತ್ತು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಸೇವಿಸಬೇಡಿ.
4. ತುಳಸಿ ವಿವಾಹದ ದಿನದಂದು ನೀವು ಉಪವಾಸ ಮಾಡುತ್ತಿದ್ದರೆ, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಅಥವಾ ನಿಂದನೀಯ ಪದಗಳನ್ನು ಬಳಸಬಾರದು.
5. ತುಳಸಿ ಮದುವೆಯಂದು ಮನೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸಬೇಡಿ.
6. ತುಳಸಿ ಮದುವೆಯ ದಿನ ಅನ್ನವನ್ನು ಸೇವಿಸಬೇಡಿ ಅದು ಅಶುಭವೆಂದು ಪರಿಗಣಿಸಲಾಗಿದೆ.
ಮನೆಯ ಹಿರಿಯರನ್ನು ಅವಮಾನಿಸಬೇಡಿ.



Click it and Unblock the Notifications
