Latest Updates
-
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ
ತಿರುಪತಿ 'ತಿಮ್ಮಪ್ಪನ' ಮೂರ್ತಿಯ ಹಿಂದಿದೆ ಚಿದಂಬರ ರಹಸ್ಯ!

ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ತಮಿಳುನಾಡು. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ.
ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ. ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪಎಂಬ ಇತರ ಹೆಸರುಗಳೂ ಇವೆ. ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತಿಗೆ ಅನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುವಂತಿದೆ. ಬನ್ನಿ ತಿರುಪತಿ ದೇವಾಲಯದ ಕುರಿತು ನಮಗೆ ತಿಳಿಯದೇ ಇರುವ ಅನೇಕ ವಿಚಾರಗಳು ಇನ್ನೂ ಇವೆ, ಅವು ಯಾವುದು ಎಂಬುದನ್ನು ನೋಡೋಣ....

23 ಕಿ.ಮೀ ದೂರದಿಂದ ಬರುತ್ತೆ ಹಾಲು, ಹೂವು, ಬೆಣ್ಣೆ!
ಬಾಲಾಜಿಗೆ ನೈವೇದ್ಯವಾಗಿ ಅರ್ಪಿಸಲು ಬಳಸಲಾಗುವ ಹಾಲು, ಹೂವು, ಬೆಣ್ಣೆ, ತುಪ್ಪ ಮೊದಲಾದವುಗಳನ್ನು ತಿರುಮಲದಿಂದ ಇಪ್ಪತ್ತಮೂರು ಕಿ.ಮೀ ದೂರವಿರುವ ಗ್ರಾಮವೊಂದರಿಂದ ಶತಮಾನಗಳಿಂದ ತರಲಾಗುತ್ತದೆ. ಈ ಗ್ರಾಮದಿಂದ ಬಿಟ್ಟರೆ ಬೇರೆ ಯಾವುದೇ ಮನೆಯ ಸಾಮಾಗ್ರಿಯನ್ನು ಬಳಸಿಕೊಳ್ಳಲಾಗುವುದಿಲ್ಲ. ಸ್ವಾರಸ್ಯವೆಂದರೆ ಈ ಗ್ರಾಮಕ್ಕೆ ಆ ಗ್ರಾಮದ ನಿವಾಸಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವೇ ಇಲ್ಲ! ಈ ಗ್ರಾಮಸ್ಥರೆಲ್ಲಾ ಇಂದಿಗೂ ಆ ಕಾಲದ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಗ್ರಾಮಸ್ಥರು ಸೊಂಟದಿಂದ ಮೇಲೆ ವಸ್ತ್ರವನ್ನು ತೊಡುವುದಿಲ್ಲ.

ದೇವರ ಮೂರ್ತಿಗೆ ಹೊಸ ಧೋತಿ ಹಾಗೂ ಸೀರೆ
ದೇವರ ಮೂರ್ತಿಯನ್ನು ಪ್ರತಿದಿನವೂ ಹೊಸ ಮತ್ತು ಪವಿತ್ರ ಧೋತಿ (ಸೊಂಟದಿಂದ ಕೆಳಗೆ) ಮತ್ತು ಸೀರೆ (ಎದೆಯಭಾಗದಲ್ಲಿ) ಗಳಿಂದ ಅಲಂಕರಿಸಲಾಗುತ್ತದೆ. ಮರುದಿನ ಹೊಸಬಟ್ಟೆಯನ್ನು ತೊಡಿಸುವಾಗ ನಿವಾರಿಸಿದ ನಿನ್ನೆಯ ಉಡುಪುಗಳನ್ನು ಪವಿತ್ರ ಎಂದು ಭಾವಿಸಲಾಗುತ್ತದೆ ಹಾಗೂ ಇವುಗಳನ್ನು ವಿಶೇಷ ಪೂಜೆ ಸಲ್ಲಿಸಿದ ನೂತನ ದಂಪತಿಗಳಿಗೆ ಅರ್ಪಿಸಲಾಗುತ್ತದೆ. ಇದರಿಂದ ಅವರ ದಾಂಪತ್ಯ ಜೀವನ ಸಾವಿನವರೆಗೂ ಸುಖಕರವಾಗಿರುತ್ತದೆ ಎಂದು ಭಕ್ತರು ನಂಬುತ್ತಾರೆ.

ಪ್ರತಿ ಗುರುವಾರದಂದು ನಡೆಯುವ ವಿಸ್ಮಯ!
ಪ್ರತಿ ಗುರುವಾರದಂದು ನಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡನ್ನು ತೇದಿದ ಲೇಪನದಿಂದ ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಒಣಗಿದ ಈ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಿದಾಗ ಒಳಭಾಗದಲ್ಲಿ ಲಕ್ಷ್ಮೀದೇವಿಯ ಚಿತ್ರದ ಬಿಂಬವಿರುವುದು ಗೋಚರಿಸುತ್ತದೆ. ಈ ಚಿತ್ರವನ್ನು ಬಳಿಕ ದೇವಾಲಯದ ಅಧಿಕಾರಿಗಳು ಮಾರಾಟ ಮಾಡುತ್ತಾರೆ.

ಪೂಜೆಯ ಹೂವುಗಳು ಜಲಪಾತಕ್ಕೆ
ಗರ್ಭಗುಡಿಯಲ್ಲಿ ದೇವರ ಪೂಜೆಗಾಗಿ ಬಳಸಲ್ಪಡುವ ಹೂವುಗಳನ್ನು ಅಲ್ಲಿಂದ ಹೊರತರುವ ಮಾತೇ ಇಲ್ಲ. ಏಕೆಂದರೆ ಗರ್ಭಗುಡಿಯ ಹಿಂಭಾಗದಲ್ಲಿ ಚಿಕ್ಕ ಜಲಪಾತವೊಂದಿದ್ದು ಗರ್ಭಗುಡಿಯಿಂದ ನೀರು ನೇರವಾಗಿ ಕೆಳಕ್ಕೆ ಧಾವಿಸುತ್ತದೆ. ಈ ನೀರಿನ ಮೂಲಕವೇ ಎಲ್ಲಾ ಹೂವುಗಳನ್ನು ವಿಸರ್ಜಿಸಲಾಗುತ್ತದೆ.

ವಿಸರ್ಜಿಸಿದ ಹೂವುಗಳು ಮತ್ತೆ ಪ್ರತ್ಯಕ್ಷವಾಗುವುದು ಇಪ್ಪತ್ತು ಕಿ.ಮೀ ದೂರದಲ್ಲಿ
ಆತ್ಮ ಶರೀರವನ್ನು ತೊರೆದ ಬಳಿಕ ಹಿಂದೆ ನೋಡುವ ಪ್ರಮೇಯ ಬರುವುದಿಲ್ಲವಂತೆ. ಇದೇ ರೀತಿಯಲ್ಲಿ ಸ್ವಾಮಿಯ ಪೂಜೆಗಾಗಿ ಉಪಯೋಗಿಸಿದ ಹೂವುಗಳನ್ನು ಸ್ವಾಮಿಯ ವಿಗ್ರಹ ಹಿಂಭಾಗದ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಪೂಜೆಯ ವೇಳೆಯಲ್ಲಿ ಪೂಜಾರಿಗಳು ಆ ದಿನವಿಡೀ ದೇವರ ವಿಗ್ರಹದ ಹಿಂಭಾಗವನ್ನು ನೋಡುವುದಿಲ್ಲ. ಇತ್ತ ವಿಸರ್ಜಿಸಲ್ಪಟ್ಟ ಹೂವುಗಳು ಮತ್ತೆ ಪ್ರತ್ಯಕ್ಷವಾಗುವುದು ಇಲ್ಲಿಂದ ಇಪ್ಪತ್ತು ಕಿ.ಮೀ ದೂರವಿರುವ ವೇರ್ಪಡು ಎಂಬ ಸ್ಥಳದಲ್ಲಿ. ಈ ಸ್ಥಳ ತಿರುಪತಿಯಿಂದ ಕಾಳಹಸ್ತಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿದೆ.

ಸಾವಿರಾರು ವರ್ಷಗಳಿಂದ ಬೆಳಗುತ್ತಿರುವ ದೀಪಗಳು
ಸ್ವಾಮಿಯ ವಿಗ್ರಹದೆದುದು ಉರಿಯುತ್ತಿರುವ ದೀಪ ಸಾವಿರಾರು ವರ್ಷಗಳಿಂದ ಉರಿಯುತ್ತಲೇ ಇದ್ದು ಇದು ನಂದಿದ್ದನ್ನು ಯಾರೂ ಕಂಡಿಲ್ಲ. ಅಷ್ಟೇ ಅಲ್ಲ, ಈ ದೀಪವನ್ನು ಯಾವಾಗ ಬೆಳಗಿಸಲಾಯಿತು ಎಂದು ಸ್ಪಷ್ಟವಾಗಿ ಹೇಳಲೂ ಸಾಧ್ಯವಿಲ್ಲ.

ಸ್ವಾಮಿಯ ವಿಗ್ರಹದೆದುರು ಸೋಲೊಪ್ಪುವ ಕರ್ಪೂರ
ಪಛೈ ಕರ್ಪೂರಂ ಎಂಬುದು ಒಂದು ವಿಧದ ಕರ್ಪೂರವಾಗಿದ್ದು (Cinnamomum camphora) ಥಟ್ಟನೇ ಹೊತ್ತಿ ಉರಿಯವ ವಸ್ತುವಾಗಿದೆ. ಈ ಕರ್ಪೂರವನ್ನು ಯಾವುದೇ ಕಲ್ಲಿಗೆ ಹಚ್ಚಿದರೆ ಕೆಲವೇ ಹೊತ್ತಿನಲ್ಲಿ ಕಲ್ಲಿನಲ್ಲಿ ಬಿರುಕು ಮೂಡುತ್ತದೆ. ಆದರೆ ಈ ಕರ್ಪೂರವನ್ನು ನಿತ್ಯವೂ ದೇವರ ವಿಗ್ರಹಕ್ಕೆ ಲೇಪನದಂತೆ ಸಾವಿರಾರು ವರ್ಷಗಳಿಂದ ಹಚ್ಚುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಹಾನಿಯಾಗಿಲ್ಲ.

ಪ್ರತಿದಿನ ಒಂದೂವರೆ ಲಕ್ಷಕ್ಕೂ ಅಧಿಕ ಲಡ್ಡು ತಯಾರಿ...
ಪ್ರತಿದಿನ ಸರಿಸುಮಾರು ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಿಸುತ್ತಾರೆ ಪ್ರತಿ ದಿನ ಈ ದೇವಸ್ಥಾನದಲ್ಲಿ ಒಂದೂವರೆ ಲಕ್ಷದಷ್ಟು ಲಡ್ಡುಗಳು ತಯಾರಾಗಿ ಭಕ್ತರಿಗೆ ವಿತರಿಸಲ್ಪಡುತ್ತವೆ. ಅಂದರೆ ಪ್ರತಿದಿನ ಈ ದೇವಸ್ಥಾನಕ್ಕೆ ಭೇಟಿ ನೀಡುವ ಸರಿಸುಮಾರು ಐವತ್ತು ಸಾವಿರದಷ್ಟು ಭಕ್ತರು ಸರಾಸರಿ ಮೂರು ಲಾಡುಗಳನ್ನು ಕೊಂಡೊಯ್ಯುತ್ತಾರೆ. ಅದರಲ್ಲಿ ಒಂದು ಲಾಡು ಪೂಜೆಯ ಪ್ರಸಾದದ ರೂಪದಲ್ಲಿ ಉಚಿತವಾಗಿರುತ್ತದೆ.



Click it and Unblock the Notifications











