Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಈ ವಸ್ತುಗಳು ನಿಮ್ಮ ಪರ್ಸ್‌ನಲ್ಲಿ ಇದ್ದರೆ ಲಕ್ಷ್ಮೀ ಒಲಿಯುತ್ತಾಳೆ
ಡುಡ್ಡು, ಹಣ, ಆಸ್ತಿ ಯಾರಿಗೆ ತಾನೇ ಬೇಡ ಹೇಳಿ. ಜಗತ್ತಿನಲ್ಲಿರುವ ಪ್ರತಿಯೊಬ್ಬರು
ದುಡ್ಡಿನ ಹಿಂದೆ ಬಿದ್ದವರೇ. ಎಲ್ಲರೂ ಸಂಪಾದನೆಯನ್ನು ಮಾಡುತ್ತಾರೆ. ಆದರೆ ಅದರಲ್ಲಿ
ಕೆಲವೇ ಕೆಲವು ಜನ ಮಾತ್ರ ದುಡಿದ ದುಡ್ಡನ್ನು ಉಳಿಸಿಕೊಳ್ತಾರೆ.

ಎಷ್ಟು ದುಡಿದರೂ ದುಡ್ಡು ಕೈಯಲ್ಲಿ ನಿಲ್ತಿಲ್ಲ. ಬಹುಶಃ ಈ ಪರ್ಸ್‌ನಲ್ಲೇ ದೋಷ ಇರಬಹುದು
ಅಂತ ಪರ್ಸ್ ಬದಲಾಯಿಸುವವರೂ ಇದ್ದಾರೆ. ಆದರೆ ನಿಮಗೊತ್ತಾ ನಿಮ್ಮ ಪರ್ಸ್ ಯಾವಾಗಲೂ
ತುಂಬಿಕೊಂಡೇ ಇರಬೇಕು ಅಂದ್ರೆ ಏನ್ ಮಾಡ್ಬೇಕು ಅಂತ? ಈ ವಸ್ತುಗಳನ್ನು ನಿಮ್ಮ
ಪರ್ಸ್‌ನಲ್ಲಿ ಇಟ್ಟುಕೊಂಡರೆ ಲಕ್ಷ್ಮೀ ಖಂಡಿತ ಒಲಿಯುತ್ತಾಳೆ. ನಿಮ್ಮ ಜೇಬಿನಲ್ಲಿ
ದುಡ್ಡು ತಪ್ಪೋದೇ ಇಲ್ಲ. ಹಾಗಾದ್ರೆ ನಿಮಗೆ ಅದೃಷ್ಟ ತಂದು ಕೊಡುವ ಆ ವಸ್ತುಗಳು ಯಾವುದು
ಅನ್ನೋದರ ಬಗ್ಗೆ ತಿಳಿಸಿಕೊಡ್ತೀವಿ.
ವಿಷ್ಣು ಮತ್ತು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಿ
ಭಗವಾನ್ ವಿಷ್ಣುವನ್ನು ಗುರುವಾರ ಭಜಿಸುವುದರಿಂದ ಸಂಪತ್ತು, ಅದೃಷ್ಟ, ವೈಭವ ಎಲ್ಲವೂ
ನಿಮ್ಮದಾಗುತ್ತದೆ. ಈ ದಿನ ವಿಷ್ಣುವನ್ನು ನೆನೆದರೆ ನಾವು ಅಂದುಕೊಂಡ ಕೆಲಸಗಳು
ಆಗುತ್ತದೆ. ಯಾಕಂದ್ರೆ ವಿಷ್ಣುವು ಲಕ್ಷ್ಮಿಯ ಪತಿ ನಾವು ವಿಷ್ಣುವನ್ನ ಭಜಿಸಿದರೆ
ಲಕ್ಷ್ಮೀ ಕೃಪಾಕಟಾಕ್ಷವು ಒಲಿಯುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಗುರು ಧೋಷವು
ನಿವಾರಣೆ ಆಗುತ್ತದಂತೆ. ಅದರಲ್ಲೂ ಮುಖ್ಯವಾಗಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲೇಬೇಕು
ಅನ್ನುವವರು ಈ ವಸ್ತುಗಳನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ ಸಾಕು.
ಇದರಲ್ಲಿ ಒಂದು ವಸ್ತುವನ್ನು ಪರ್ಸ್‌ನಲ್ಲಿ ಇಡಿ
* ಗೋಮತಿ ಚಕ್ರ
* ಕವಡೆ (cowrie shell)
* ಅರಶಿನದ ಕೊಂಬು
* ಕೇಸರಿ
* ಕಂಚಿನ ಹಾಳೆ (shriantra made in copper sheet)
* ಲಕ್ಷ್ಮೀ ಇರುವ ಬೆಳ್ಳಿ ನಾಣ್ಯ
ನಿಮ್ಮ ಪರ್ಸ್ ಹೇಗಿರಬೇಕು?
* ಹರಿದ ಪರ್ಸ್ ಬಳಸಬೇಡಿ
* ಅಗತ್ಯವಾದ ವಸ್ತುಗಳು ಮಾತ್ರ ಪರ್ಸ್‌ನಲ್ಲಿ ಇದ್ದರೆ ಸಾಕು
* ಬೇಕಾದ ವಸ್ತುಗಳನ್ನು ಮಾತ್ರ ಪರ್ಸ್‌ನಲ್ಲಿ ಇದ್ದರೆ ಸಾಕು
* ನಿಮ್ಮ ಪರ್ಸ್‌ನಲ್ಲಿ ಧಾರ್ಮಿಕತೆಗೆ ಸಂಬಂಧಿಸಿದ ಯಾವುದೇ ವಸ್ತುಗಳು ಇರಬಾರದು
* ರೋಗಗ್ರಸ್ಥರು ಸತ್ತವರ ಫೋಟೋಗಳನ್ನು ಪರ್ಸ್‌ನಲ್ಲಿ ಇಡಬೇಡಿ
* ಚಿಲ್ಲರೆ ಮತ್ತು ನೋಟುಗಳನ್ನು ಪರ್ಸ್‌ನಲ್ಲಿ ಪ್ರತ್ಯೇಕವಾಗಿ ಇಡುವುದರಿಂದ ಒಳ್ಳೆಯದಾಗುತ್ತಂತೆ
* ಕಪ್ಪು ಬಣ್ಣದ ಪರ್ಸ್ ಬಳಸುವುದು ಶುಭಕರ ಎಂದು ನಂಬಲಾಗಿದೆ.
ಗುರುವಾರ ಈ ವಿಧಾನ ಅನುಸರಿಸಿ
ಶ್ರೀ ಲಕ್ಷ್ಮೀ ಹಾಗೂ ಭಗವಾನ್ ವಿಷ್ಣುವಿಗೆ ಗುರುವಾರದ ದಿನ ಪೂಜೆ ಸಲ್ಲಿಸಿದರೆ
ಸಂಸಾರದಲ್ಲಿ ಸುಖ, ಸಮೃದ್ಧಿ ಪ್ರಾಪ್ತಿಯಾಗಯತ್ತದೆ ಎಂದು ನಂಬಲಾಗಿದೆ. ಹಾಗೂ ಗುರುವಾರ
ಸ್ನಾನ ಮಾಡುವಾಗ ನೀರಿಗೆ ಒಂದು ಚಿಟಿಕೆ ಅರಶಿಣವನ್ನು ಬೆರೆಸಿ ಸ್ನಾನ ಮಾಡಿದರೆ ಉತ್ತಮ.
ಹಾಗೂ ಆ ದಿನ ಹಳದಿ ಬಟ್ಟೆಯನ್ನು ಧರಿಸುವುದರಿಂದ ಮಂಗಳಕರ ಎಂದು ನಂಬಲಾಗಿದೆ.
ಒಟ್ಟಿನಲ್ಲಿ ನಿಮ್ಮ ಜೇಬು ನಿತ್ಯವು ತುಂಬಿರಬೇಕೆಂದರೆ ಮಾಹಾಲಕ್ಷ್ಮಿಯ ಕೃಪಾ ಕಟಾಕ್ಷ
ಇರಲೇಬೇಕು. ನಾವು ಮೇಲೆ ಹೇಳಿರುವ ವಸ್ತುಗಳನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ
ಖಂಡಿತ ಲಕ್ಷ್ಮೀಯ ಅನುಗ್ರಹವಾಗಲಿದೆ ಎಂದು ನಂಬಲಾಗಿದೆ.



Click it and Unblock the Notifications







