Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕಷ್ಟ ನಷ್ಟಗಳಿಂದ ಮುಕ್ತಿಪಡೆಯಲು ಸಂಧ್ಯಾಕಾಲದ ನಾಲ್ಕು ಸೂತ್ರ
ಸಂಜೆಯ ಹೊತ್ತು ಕೆಲವೊಂದು ಮಾಡಬಾರದ ಕೆಲಸಗಳನ್ನು ಮಾಡಲು ಹೋಗಲೇಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದರಿಂದ ನಿಮಗೆ ದೈಹಿಕ ಸಮಸ್ಯೆಗಳು ಆಗುವುದರ ಜೊತೆಗೆ, ಸಂಪತ್ತಿನ ನಷ್ಟವು ಸಹ ಆಗುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಸಂತೋಷಕರ ಮತ್ತು ಶಾಂತಿಯುತವಾದ ಜೀವನಕ್ಕಾಗಿ ಕೆಲವೊಂದು ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಎದುರಿಸುವವರು, "ಮನು ಸಂಹಿತಾ"ದಲ್ಲಿರುವ ಈ ನೀತಿ ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಬನ್ನಿ ಮನು ಸಂಹಿತೆಯಲ್ಲಿ ಬರೆದಿರುವ ಆ ನಿಷಿದ್ಧ ಸಂಗತಿಗಳ ಕುರಿತು ತಿಳಿದುಕೊಂಡು ಬರೋಣ.
ವರಿ ಖಾಲು ಕಾರ್ಯಾನಿ ಸಂಧ್ಯಾಕಾಲೆ ವಿವರ್ಜಯೆತ್
ಆಹಾರಂ ಮೈಥುನಂ ನಿದ್ರಾಂ ಸ್ವದ್ಯಾಚ್ ಚತುರ್ಥಕಂ.

ಮೊದಲ ಕೆಲಸ
ಮನು ಸಂಹಿತೆಯ ಪ್ರಕಾರ ಸಂಜೆ ಆಹಾರವನ್ನು ಸೇವಿಸಬಾರದು. ಇದರಿಂದ ಗ್ಯಾಸ್, ಅಜೀರ್ಣತೆ, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಬರುತ್ತವೆ. ರಾತ್ರಿಯಾಗುವವರೆಗು ಕಾದು ನಂತರ ಆಹಾರ ಸೇವಿಸಿ. ಒಂದು ವೇಳೆ ತುಂಬಾ ಹಸಿವಾಗಿದ್ದಲ್ಲಿ, ಹಣ್ಣು ಅಥವಾ ಹಣ್ಣಿನ ರಸವನ್ನು ಸೇವಿಸಿ.
ಎರಡನೇಯ ಕೆಲಸ
ಸಂಜೆ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ. ಇದಕ್ಕೆ ರಾತ್ರಿಯ ಸಮಯ ಸೂಕ್ತವಾದ ಸಮಯ. ಸಂಜೆ ಮಿಲನದಲ್ಲಿ ತೊಡಗಿಕೊಂಡರೆ, ಗಂಡು ಮತ್ತು ಹೆಣ್ಣು ಇಬ್ಬರ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆಯಂತೆ.
ಜನರ ನಂಬಿಕೆಯ ಪ್ರಕಾರ ಲಕ್ಷ್ಮೀದೇವಿಯು ಸಂಜೆಯ ಸಮಯದಲ್ಲಿ ಭೂಲೋಕವನ್ನು ಸುತ್ತುತ್ತಿರುತ್ತಾಳಂತೆ ಮತ್ತು ನೀವು ಈ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ ಆಕೆ ಅಲ್ಲಿಂದ ತನ್ನ ನೋಟವನ್ನು ಪಕ್ಕಕ್ಕೆ ಸರಿಸುತ್ತಾಳಂತೆ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೋರುತ್ತವೆ.
ಮೂರನೇಯ ಕೆಲಸ
ಸಂಜೆ ಹೊತ್ತು ಯಾರು ನಿದ್ದೆ ಮಾಡುತ್ತಾರೋ, ಅವರಿಗೆ ಇನ್ಸೋಮ್ನಿಯಾ ಬರುತ್ತದೆಯಂತೆ, ಜೊತೆಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡುತ್ತವೆ. ರಾತ್ರಿಯಲ್ಲಿ ಅವರಿಗೆ ನಿದ್ದೆ ಬರುವುದಿಲ್ಲವಂತೆ. ಜೊತೆಗೆ ಮರುದಿನ ಅವರಿಗೆ ಲವಲವಿಕೆ ಕಾಡುತ್ತದೆಯಂತೆ.
ನಾಲ್ಕನೇಯ ಕೆಲಸ
ಸಂಜೆಯ ಸಮಯದಲ್ಲಿ ಯಾರೂ ವೇದಗಳನ್ನು ಓದಬಾರದಂತೆ. ವೇದಗಳನ್ನು ಓದಲು ಬೆಳಗಿನ ಸಮಯ ಪ್ರಶಸ್ತವಾಗಿರುತ್ತದೆಯಂತೆ. ಅದರಲ್ಲೂ ಸೂರ್ಯೋದಯಕ್ಕೆ ಮೊದಲು ಇದನ್ನು ಓದಬೇಕಂತೆ.



Click it and Unblock the Notifications
