Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಓಂಕಾರ ಹಾಗೂ ವೀರಭದ್ರಾಸನ ಹಿಂದಿರುವ ಸ್ವಾರಸ್ಯಕರ ಕತೆಯೇನು?
ಯೋಗ ಎನ್ನುವುದು ಪ್ರಾಚೀನ ವಿದ್ಯೆಯಾಗಿದ್ದು, ಸುಮಾರು 10000 ವರ್ಷಗಳಿಗಿಂತಲೂ ಹಿಂದಿನಿಂದ ಯೋಗಾಭ್ಯಾಸ ಮಾಡಲಾಗುತ್ತಿದೆ.
ಯೋಗದಲ್ಲಿ ಅನೇಕ ಭಂಗಿಗಳಿದ್ದು, ಯೋಗದ ಅನೇಕ ಭಂಗಿಗಳ ಹಿಂದೆ ಒಂದು ಪೌರಾಣಿಕ ಕತೆಯಿದೆ. ಹಲವು ಆಸನಗಳ ಹೆಸರನ್ನು ಉಚ್ಛಾರಣೆ ಮಾಡುವುದು ಅಷ್ಟು ಸುಲಭವಲ್ಲ, ಆ ಆಸನ ಭಂಗಿಯಂತೆ ಅದರ ಹೆಸರು ಉಚ್ಛಾರಣೆ ಮಾಡಲು ಅಭ್ಯಾಸ ಮಾಡಬೇಕಾಗುತ್ತದೆ. ಈ ಯೋಗಿಕ್ ಭಂಗಿಗಳ ಹಿಂದೆ ಪೌರಾಣಿಕ ಕತೆಯಿದೆ.
ಈ ಎಪಿಸೋಡ್‌ನಲ್ಲಿಓಂಕಾರ ಹಾಗೂ ವೀರಭದ್ರಾಸನ ಬಗ್ಗೆ ಹೇಳುತ್ತಿದ್ದೇವೆ. ಈ ಆಸನ ಹೇಗೆ ಬಂತು? ಇದರ ಹಿಂದಿರುವ ಕತೆಯೇನು? ಎಂದು ಹೇಳಿದ್ದೇವೆ ನೋಡಿ.

ಓಂ ಮತ್ತು ವೀರಭದ್ರಾಸನ
ಓಂಕಾರ ಹಾಗೂ ವೀರಭದ್ರಾಸನಕ್ಕೂ ಮುಕ್ಕಣ್ಣ ಶಿವನಿಗೂ ಸಂಬಂಧವಿದೆ. ಶಿವನನ್ನು ಆದಿಯೋಗಿ, ಯೋಗೇಶ್ವರ, ಮಹಾಯೋಗಿ ಎಂದು ಕರೆಯುತ್ತೇವೆ. ಯೋಗದಲ್ಲಿ ಧ್ಯಾನ ಮಾಡುವಾಗ ಹೇಳುವ ಓಂಕಾರ ಕೂಡ ಶಿವ ಸ್ವರೂಪವಾಗಿದೆ.

ಓಂಕಾರ:
ಓಂಕಾರವನ್ನು 3 ಬಾರಿ ಅಥವಾ 108 ಬಾರಿ ಉಚ್ಚಾರಣೆ ಮಾಡಬೇಕು ಎಂದು ಹೇಳುವುದನ್ನು ಕೇಳಿರಬಹುದು. ಅಲ್ಲದೆ ಎಲ್ಲಾ ಮಂತ್ರಗಳನ್ನು ಹೇಳುವ ಮುನ್ನ ಓಂಕಾರ ಹೇಳಲಾಗುವುದು. ಓಂ ಎನ್ನುವುದು ಅಉಮ ಶಬ್ದವಾಗಿದೆ. ಅ ಎನ್ನುವುದು ಬ್ರಹ್ಮನನ್ನು, ಉ ಎನ್ನುವುದು ವಿಷ್ಣುವನ್ನು ಮ ಎನ್ನುವುದು ಶಿವನನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.

ಬಾಹ್ಯಾಕಾಶದಲ್ಲಿ ಓಂ ಶಬ್ದ: ನಾಸಾ ತಿಳಿಸಿದ ಸತ್ಯ
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಓಂ ಎಂಬ ಶಬ್ದ ಬಾಹ್ಯಾಕಾಶದಲ್ಲಿ ಕೇಳಿ ಬರುತ್ತದೆಯಂತೆ. ಹಾಗೆಂದು ನಾಸಾ ಹೇಳಿದೆ. ಅಉಮ ಶಬ್ದ ಸೂರ್ಯನ ಶಬ್ದವಾಗಿದೆ, ಇದು ಬೆಳಕಿನ ಶಬ್ದ ಎಂದು ನಾಸಾ ಹೇಳಿದೆ. ಆದರೆ ನಮ್ಮ ಪುರಾಣಗಳು ಎಷ್ಟೋ ವರ್ಷಗಳ ಹಿಂದೆಯೇ ಓಂ ಶಬ್ದವನ್ನು ಪರಿಚಯಿಸಿದೆ.
ಹಿಂದೂ ಪುರಾಣಗಳ ಪ್ರಕಾರ ಇಡೀ ವಿಶ್ವವೇ ಓಂ ಶಬ್ದದಿಂದ ನಿರ್ಮಿಸಲ್ಪಟ್ಟಿದೆ.

ವೀರಾಭದ್ರಾಸನ ಕತೆ:
ಯೋಗದಲ್ಲಿ ವೀರಾಭದ್ರಾಸನ ತುಂಬಾ ಪ್ರಮುಖವಾದ ಆಸನವಾಗಿದೆ. ಈ ಯೋಗ ಭಂಗಿ ಆರೋಗ್ಯ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಈ ಭಂಗಿಗೂ ಒಂದು ಕತೆಯಿದೆ.
ಬ್ರಹ್ಮ ಶಿವನಿಗೆ ಮದುವೆ ಮಾಡಬೇಕೆಂದು ಯೋಚಿಸಿ, ಅದನ್ನು ಶಿವನಿಗೆ ತಿಳಿಸುತ್ತಾನೆ. ನಂತರ ರಾಜ ದಕ್ಷಾನ ಬಳಿ ಬಂದು ಆತನ ಮಗಳು ಸತಿಯನ್ನು ಶಿವನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾನೆ. ಹೀಗೆ ಸತಿ ಹಾಗೂ ಶಿವನ ಮದುವೆ ತುಂಬ ಅದ್ಧೂರಿಯಾಗಿ ನಡೆಯುತ್ತದೆ.
ಆದರೆ ದಕ್ಷಾನಿಗೆ ಈ ಮದುವೆ ಇಷ್ಟವಿರಲಿಲ್ಲ. ಮೈಗೆ ಬೂದಿ ಮೆತ್ತಿರುವ ಶಿವನನ್ನು ಕಂಡರೆ ದಕ್ಷಾನಿಗೆ ಆಗುತ್ತಿರಲಿಲ್ಲ. ದಕ್ಷಾ ಒಂದು ಯಜ್ಞ ಮಾಡುತ್ತಾನೆ. ಅದಕ್ಕೆ ಮೂರು ಲೋಕದಿಂದ ಎಲ್ಲರನ್ನೂ ಆಹ್ವಾನಿಸುತ್ತಾನೆ, ಆದರೆ ಶಿವ ಹಾಗೂ ಸತಿಯನ್ನು ಆಹ್ವಾನಿಸುವುದಿಲ್ಲ. ಇದನ್ನು ತಿಳಿದ ಸತಿ ಬೇಸಗೊಂಡರೂ ಶಿವನಿಗೆ ಯಜ್ಞದಲ್ಲಿ ನಾವೂ ಪಾಲ್ಗೊಳ್ಳೋಣ ಎಂದು ಹೇಳುತ್ತಾನೆ. ಆದರೆ ಶಿವ ಆ ಯಜ್ಞಕ್ಕೆ ಹೋಗಲು ಒಪ್ಪುವುದಿಲ್ಲ. ಹೀಗಾಗಿ ಸತಿ ಮಾತ್ರ ಹೋಗುತ್ತಾಳೆ.
ಆದರೆ ದಕ್ಷಾ ಯಜ್ಞಕ್ಕೆ ಬಂದ ತನ್ನ ಮಗಳನ್ನು ಅವಮಾನಿಸುತ್ತಾನೆ, ಇದರಿಂದ ಸತಿ ಮನಸ್ಸಿಗೆ ತುಂಬಾ ನೋವುಂಟಾಗುವುದು. ತನಗಾದ ಅವಮಾನ ಸಹಿಸಲು ಸಾಧ್ಯವಿಲ್ಲ ಎಂದು ತನ್ನ ದೇಹ ತ್ಯಾಗ ಮಾಡಲು ನಿರ್ಧರಿಸಿ ಯಜ್ಞದ ಹೋಮಕುಂಡಕ್ಕೆ ಹಾರಿ ದೇಹ ತ್ಯಜಿಸುತ್ತಾಳೆ. ಮತ್ತೊಂದು ಕತೆಯಲ್ಲಿ ಸತಿ ಧ್ಯಾನ ಮಾಡಿ ತನ್ನೊಳಗಿನ ಅಗ್ನಿ ಶಕ್ತಿ ಹೆಚ್ಚಿಸಿ ಸುಟ್ಟು ಭಸ್ಮವಾಗುತ್ತಾಳೆ ಎಂದಿದೆ.

ವೀರಭದ್ರನ ಹುಟ್ಟು
ಸತಿ ದೇಹ ತ್ಯಾಗ ಮಾಡಿದ ಸುದ್ದಿ ತಿಳಿದ ಶಿವ ಕುಸಿದು ಹೋಗುತ್ತಾನೆ, ನಂತರ ಅದಕ್ಕೆ ಕಾರಣವಾದವರ ಮೇಲೆ ಉಗ್ರ ಸಿಟ್ಟು ತಾಳುತ್ತಾನೆ. ಕೋಪದಲ್ಲಿ ತನ್ನ ಒಂದು ಮುಡಿ ಕಿತ್ತು ನೆಲಕ್ಕೆ ಬಿಸಾಡುತ್ತಾನೆ. ಆ ಕೂದಲೇ ಶಕ್ತಿಯುತವಾದ ವೀರಭದ್ರಾ ಹುಟ್ಟುತ್ತಾನೆ. ಈತ ಭೂಮಿಗೆ ಬಂದು ದಕ್ಷಾನ ಕೊಲ್ಲುವುದನ್ನು 3 ಆಸನ ಸೂಚಿಸುತ್ತದೆ.
ವೀರಭದ್ರಾಸನ 1: ವೀರಭದ್ರಾ ತನ್ನ ಹರಿತವಾದ ಖಡ್ಗದ ಮೂಲಕ ಭೂಮಿ ತಲುಪುತ್ತಾನೆ. ಇದನ್ನು ವೀರಭದ್ರಾಸನ ಎಂದು ಕರೆಯಲಾಗುವುದು.
ವೀರಭದ್ರಾಸನ 2: ಭೂಮಿಗೆ ಬಂದ ವೀರಭದ್ರಾ ದಕ್ಷಾನನ್ನು ಹೆದರಿಸುತ್ತಾನೆ.
ವೀರಭದ್ರಾಸನ 3: ದಕ್ಷಾನ ಕತ್ತು ತುಂಡರಿಸುತ್ತಾನೆ.
ನಂತರ ವೀರಭದ್ರಾ ದಕ್ಷಾನನ್ನು ಬೆಂಕಿಗೆ ಬಿಸಾಡುತ್ತಾನೆ. ಆಗ ಅಲ್ಲಿಗೆ ಬಂದ ಶಿವನಿಗೆ ಆ ಜಾಗದಲ್ಲಿ ರಕ್ತ ಕಲೆಗಳನ್ನು ನೋಡಿ ಮನಸ್ಸಿಗೆ ಬೇಸರವಾಗುತ್ತದೆ. ತಾನು ದುಃಖದಲ್ಲಿ ಇದ್ದರೂ ದಕ್ಷಾನಿಗೆ ಜೀವದಾನ ನೀಡಲು ತೀರ್ಮಾನಿಸಿ ದಕ್ಷಾ ಮತ್ತೆ ಬದುಕುವಂತೆ ಮಾಡುತ್ತಾನೆ. ಇಷ್ಟೊತ್ತಿಗೆ ದಕ್ಷಾನಿಗೆ ತಾನು ಮಾಡಿದ ತಪ್ಪಿನ ಅರಿವು ಉಂಟಾಗಿರುತ್ತದೆ.
ಇದು ವೀರಾಭದ್ರಾಸದ ಕತೆ. ಇನ್ನು ನೀವು ಈ ಆಸನ ಮಾಡುವಾಗ ಈ ಕತೆ ನೆನಪಾಗಿ ಮತ್ತಷ್ಟು ವೀರಾವೇಶದಿಂದ ಈ ಭಂಗಿ ಮಾಡುವಿರಿ.

ಕೊನೆಯದಾಗಿ:
ನಾವು ವೀರಭದ್ರಾಸನ ಮಾಡುವಾಗ ಅದು ನಮ್ಮೊಳಗಿನ ವೀರತ್ವ ಎತ್ತಿ ತೋರಿಸುತ್ತದೆ. ನಮ್ಮ ದೇಹ ಮತ್ತಷ್ಟು ಶಕ್ತಿಶಾಲಿಯಾಗುವುದು. ನಮ್ಮ ದೇಹ ಬಲಿಶಾಲಿಯಾಗುವುದು, ಆತ್ಮವಿಶ್ವಾಸ ವೃದ್ಧಿಸುವುದು. ನಮ್ಮಲ್ಲಿರುವ ದೌರ್ಬಲ್ಯ ಮೆಟ್ಟಿ ನಿಲ್ಲಲು ಈ ಆಸನ ಸಹಕಾರಿ. ಇದು ನಮ್ಮಲ್ಲಿ ಧೈರ್ಯ ಹೆಚ್ಚಿಸುತ್ತದೆ, ನಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ತುಂಬುವುದು.



Click it and Unblock the Notifications