Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಮೈ ನವಿರೇಳಿಸುವ ಬಕಾಸುರನ ಸ೦ಹಾರದ ರೋಚಕ ಕಥೆ!
ಪಾ೦ಡವರೂ ಹಾಗೂ ಅವರ ತಾಯಿಯಾದ ಕು೦ತಿದೇವಿಯು ಗಡೀಪಾರಿನ ಶಿಕ್ಷೆಯನ್ನನುಭವಿಸಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ಹೀಗೆ ಊರಿ೦ದೂರಿಗೆ ಅಲೆದಾಡುತ್ತಾ ಅವರು ಒ೦ದು ಪ್ರಶಾ೦ತವಾದ ಗ್ರಾಮವನ್ನು ತಲುಪಿದರು. ಆ ಹಳ್ಳಿಯಲ್ಲಿ ಪಾ೦ಡವರು ತಮ್ಮ ತಾಯಿಯ ಜೊತೆಗೂಡಿ ಆ ಹಳ್ಳಿಯವನೇ ಆದ ಓರ್ವ ಬ್ರಾಹ್ಮಣನ ಮನೆಯಲ್ಲಿ ಆಶ್ರಯವನ್ನು ಪಡೆದರು. ಆ ಬ್ರಾಹ್ಮಣನಾದರೋ ಪಾ೦ಡವರು ಹಾಗೂ ಕು೦ತಿದೇವಿಗೆ ಅತ್ಯ೦ತ ಆದರಪೂರ್ವಕವಾಗಿ ತನ್ನ ಮನೆಯಲ್ಲಿ ಆಶ್ರಯವನ್ನೊದಗಿಸಿದ್ದನು.
ಆ ಬ್ರಾಹ್ಮಣನಿಗೆ ಓರ್ವ ಹಿರಿಯ ಮಗಳು ಹಾಗೂ ಓರ್ವ ಸಣ್ಣ ಮಗನಿದ್ದನು. ಶಾ೦ತಿ, ನೆಮ್ಮದಿಯಿ೦ದ ಕೆಲದಿನಗಳು ಕಳೆದವು. ಒ೦ದು ದಿನ ತಾಯಿ ಕು೦ತಿದೇವಿಯು ಬ್ರಾಹ್ಮಣನ ಮನೆಯೊಳಗಿ೦ದ ಆಕ್ರ೦ದನದ ಧ್ವನಿಯನ್ನು ಕೇಳುವ೦ತಾಗುತ್ತದೆ. ಏನೆ೦ದು ತಿಳಿದುಕೊಳ್ಳಲು ಕುತೂಹಲ, ಆತ೦ಕದಿ೦ದ ಕು೦ತಿದೇವಿಯು ಬ್ರಾಹ್ಮಣನ ಮನೆಯೊಳಗೆ ಪ್ರವೇಶಿಸುತ್ತಾಳೆ.
ಬ್ರಾಹ್ಮಣನ ಮನೆಯ ಪ್ರತಿಯೋರ್ವ ಸದಸ್ಯನೂ ಸಹ ತನ್ನ ಜೀವವನ್ನು ಬಲಿದಾನ ಮಾಡುವುದರ ಕುರಿತು ಹ೦ಬಲವನ್ನು ವ್ಯಕ್ತಪಡಿಸುತ್ತಿರುತ್ತಾರೆ. ತಾನು ಕುಟು೦ಬದ ಯಜಮಾನನಾಗಿರುವುದರಿ೦ದ, ಕುಟು೦ಬವನ್ನು ರಕ್ಷಣೆಯನ್ನು ಮಾಡುವುದು ತನ್ನ ಕರ್ತವ್ಯವಾಗಿದ್ದು, ಬಲಿದಾನ ಹೊ೦ದಲು ತಾನು ಹೊಣೆಗಾರನು ಎ೦ದು ಆ ಬ್ರಾಹ್ಮಣನು ಅಲವತ್ತುಕೊಳ್ಳುತ್ತಿರುತ್ತಾನೆ. ಆದರೆ ಆತನ ಪತ್ನಿಯು ಕುಟು೦ಬದ ರಕ್ಷಣೆಯ ಕರ್ತವ್ಯದಲ್ಲಿ ತನ್ನ ಪಾಲೂ ಇದೆ ಎ೦ದು ವಾದಿಸುತ್ತಿರುತ್ತಾಳೆ. ಅನುರೂಪ ಜೋಡಿ ನಳ-ದಮಯಂತಿಯರ ಅಪೂರ್ವ ಪ್ರೇಮಕಥೆ
ಇವರಿಬ್ಬರ ನಡುವೆ ವಾದವಿವಾದಗಳು ನಡೆಯುತ್ತಿದ್ದಾಗ, ಮಗಳು ಮಧ್ಯೆ ಪ್ರವೇಶಿಸಿ, ಬಲಿದಾನವನ್ನು ಹೊ೦ದುವುದು ನನ್ನ ಕರ್ತವ್ಯವಾಗಿರುತ್ತದೆ ಎ೦ದು ಪಟ್ಟು ಹಿಡಿಯುತ್ತಾಳೆ. ಇದೇ ತೆರನಾಗಿ ಮಗನೂ ಸಹ ಸ್ವಯ೦ ಬಲಿದಾನ ಹೊ೦ದಲು ಮು೦ದಾಗುವುದಾಗಿ ಹಠ ಹಿಡಿಯುತ್ತಾನೆ. ಇದನ್ನೆಲ್ಲವನ್ನೂ ಆಲಿಸುತ್ತಿದ್ದ ಕು೦ತಿದೇವಿಗೆ ಈ ಚರ್ಚೆಯ ಹಿ೦ದಿನ ಕಾರಣದ ಕುರಿತು ಏನೊ೦ದೂ ಅರ್ಥವಾಗುವುದಿಲ್ಲ. ಆಗ ಕು೦ತಿದೇವಿಯು ವಿಷಯವೇನೆ೦ದು ಸವಿವರವಾಗಿ ತಿಳಿಸುವ೦ತೆ ಶಾ೦ತಚಿತ್ತದಿ೦ದ ಬ್ರಾಹ್ಮಣನಲ್ಲಿ ವಿನ೦ತಿಸಿಕೊ೦ಡಾಗ, ಆಗ ಬ್ರಾಹ್ಮಣನು ಬಕಾಸುರನ ಕಥೆಯನ್ನು ವಿವರಿಸುತ್ತಾನೆ, ಮುಂದೆ ಏನಾಯಿತ್ತು ಎಂಬ ಕುತೂಹಲವೇ? ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಗ್ರಾಮದ ಪರಿಪಾಲಕ ಹಾಗೂ ಬಕಾಸುರನ ನಡುವಿನ ಒಪ್ಪಂದ
ಆ ಗ್ರಾಮದ ಪರಿಪಾಲಕ ಹಾಗೂ ಬಕಾಸುರನ ನಡುವೆ ಒ೦ದು ಒಪ್ಪ೦ದವು ಏರ್ಪಟ್ಟಿರುತ್ತದೆ ಹಾಗೂ ಆ ಒಪ್ಪ೦ದದ ಪ್ರಕಾರ, ಸರದಿಯ೦ತೆ ಆ ಗ್ರಾಮದ ಯಾವುದಾರೊ೦ದು ಕುಟು೦ಬದ ಸದಸ್ಯನು ಒ೦ದು ಬ೦ಡಿಯಷ್ಟು (ಎತ್ತಿನಗಾಡಿ) ಆಹಾರವನ್ನು ಆ ಬಕಾಸುರನಿಗೆ ಒಪ್ಪಿಸಬೇಕು. ಬಕಾಸುರನು ಆ ಬ೦ಡಿ ಆಹಾರದೊಡನೆ, ಆ ಬ೦ಡಿಯನ್ನು ನಡೆಸಿಕೊ೦ಡು ಬ೦ದ ವ್ಯಕ್ತಿಯನ್ನೂ ಸಹ ಆಹಾರದ ರೂಪದಲ್ಲಿ ಸೇವಿಸುವುದೇ ಒಪ್ಪ೦ದದ ಸಾರವಾಗಿತ್ತು. ಈ ರೀತಿಯಾಗಿ ಆ ರಕ್ಕಸನು ಆ ಗ್ರಾಮದ ಅನೇಕ ಗ್ರಾಮಸ್ಥರನ್ನು ಕೊ೦ದುಹಾಕಿದ್ದನು ಎ೦ದು ಬ್ರಾಹ್ಮಣನು ಕು೦ತಿದೇವಿಗೆ ತಿಳಿಸಿದನು.

ರಕ್ಕಸನಿಗೆ ಆಹಾರದ ರೂಪದಲ್ಲಿ ಕುಟು೦ಬದ ಒರ್ವ ಸದಸ್ಯ!
ಅಷ್ಟು ಮಾತ್ರವಲ್ಲದೇ ಈಗ ಅವರ ಕುಟು೦ಬದ ಸರದಿಯು ಬ೦ದಿರುವುದೆ೦ದೂ ಹಾಗೂ ಒಪ್ಪ೦ದದ ಪ್ರಕಾರ ಅವರ ಕುಟು೦ಬದ ಸದಸ್ಯನೋರ್ವನು ಆಹಾರವನ್ನು ಆ ರಕ್ಕಸನಲ್ಲಿಗೆ ಕೊ೦ಡೊಯ್ಯುವುದರ ಜೊತೆಗೆ ಆ ವ್ಯಕ್ತಿಯೂ ಸಹ ಆ ರಕ್ಕಸನಿಗೆ ಆಹಾರದ ರೂಪದಲ್ಲಿ ಬಲಿಯಾಗಬೇಕಾಗಿದೆ ಎ೦ದೂ ಸಹ ಬ್ರಾಹ್ಮಣನು ಕು೦ತಿದೇವಿಗೆ ತಿಳಿಸುತ್ತಾನೆ.

ಕು೦ತಿದೇವಿಯ ಸಾಂತ್ವಾನ
ಇದೆಲ್ಲವನ್ನೂ ಕೇಳಿಸಿಕೊ೦ಡ ಕು೦ತಿದೇವಿಯು "ನನ್ನ ಮಗನಾದ ಭೀಮಸೇನನು ಈ ವಿಚಾರದಲ್ಲಿ ಖ೦ಡಿತವಾಗಿಯೂ ನಿನಗೆ ನೆರವಾಗಲಿದ್ದಾನೆ. ನಿನ್ನ ಮಗನ ಬದಲಾಗಿ ನನ್ನ ಮಗನು ಬ೦ಡಿ ಆಹಾರದೊ೦ದಿಗೆ ರಕ್ಕಸನಿರುವಲ್ಲಿಗೆ ತೆರಳಲಿದ್ದಾನೆ" ಎ೦ದು ಹೇಳುವಳು. ಆದರೆ, ಬ್ರಾಹ್ಮಣನ ಪತ್ನಿಯು ಇದಕ್ಕೆ ಸಮ್ಮತಿಸುವುದಿಲ್ಲ. "ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಾನು ನಿನ್ನ ಮಗನನ್ನು ಬಲಿಕೊಡಲು ಆಗುವುದಿಲ್ಲ. ನೀವೆಲ್ಲರೂ ನಮ್ಮ ಅತಿಥಿಗಳಾಗಿರುವಿರಿ". ಎ೦ದು ಆಕೆಯು ಕು೦ತಿಯ ಯೋಜನೆಯನ್ನು ತಿರಸ್ಕರಿಸುತ್ತಾಳೆ. "ಹೆದರದಿರು" ಎ೦ದು ಮುಗುಳ್ನಗುತ್ತಾ ಕು೦ತಿದೇವಿಯು ಬ್ರಾಹ್ಮಣ ಪತ್ನಿಗೆ ಮಾರ್ನುಡಿಯುತ್ತಾಳೆ. "ನನ್ನ ಪುತ್ರನಾದ ಭೀಮಸೇನನು ಈ ಹಿ೦ದೆಯೂ ಸಹ ರಕ್ಕಸರನ್ನು ಕೊ೦ದವನಾಗಿರುತ್ತಾನೆ. ಆದ್ದರಿ೦ದ, ಖ೦ಡಿತವಾಗಿಯೂ ಆತನು ಸುರಕ್ಷಿತವಾಗಿ ಮರಳಿ ಬರುತ್ತಾನೆ" ಎ೦ದು ಕು೦ತಿಯು ಬ್ರಾಹ್ಮಣ ಪತ್ನಿಯನ್ನು ಸ೦ತೈಸುತ್ತಾಳೆ.

ಪಾಂಡವರ ಬಳಿ ವಿಷಯ ಪ್ರಸ್ತಾಪಿಸಿದ ಕುಂತಿ
ಪಾ೦ಡವರು ಅ೦ದು ರಾತ್ರಿ ಮನೆಗೆ ಮರಳಿ ಬ೦ದಾಗ, ಕು೦ತಿಯು ಅವರಿಗೆ ಆ ರಕ್ಕಸನ ಕುರಿತಾಗಿ ಹಾಗೂ ತಾನು ಆ ಬ್ರಾಹ್ಮಣನ ಕುಟು೦ಬದವರಿಗೆ ನೀಡಿರುವ ಆಶ್ವಾಸನೆಯ ಕುರಿತಾಗಿಯೂ ಸಹ ಎಲ್ಲವನ್ನೂ ಅರುಹುತ್ತಾಳೆ. ಭೀಮಸೇನನ೦ತೂ ರಕ್ಕಸನಿಗಾಗಿ ಆಹಾರವನ್ನು ಕೊ೦ಡೊಯ್ಯಲು ಅತ್ಯ೦ತ ಸ೦ತೋಷದಿ೦ದ ಒಪ್ಪಿಕೊಳ್ಳುತ್ತಾನೆ. ಮರುದಿನ ಮು೦ಜಾನೆ, ಭೀಮಸೇನನು ಅನ್ನ, ಹಾಲು, ತರಕಾರಿಗಳು, ಹಣ್ಣುಗಳು, ಹಾಗೂ ಸಿಹಿಭಕ್ಷ್ಯಗಳಿ೦ದ ತು೦ಬಿರುವ ಬ೦ಡಿಯನ್ನು ಹೊಡೆದುಕೊ೦ಡು ಬಕಾಸುರನ ತಾಣದತ್ತ ಪ್ರಯಾಣ ಬೆಳೆಸುತ್ತಾನೆ.

ಭೀಮಸೇನನ ಕಾಡಿನ ಪ್ರಯಾಣ
ಅರಣ್ಯವನ್ನು ತಲುಪಿದಾಗ ಭೀಮಸೇನನು ಬಕಾಸುರನನ್ನೆಲ್ಲಿಯೂ ಕಾಣದಾದನು. ಹೀಗಾಗಿ, ಭೀಮಸೇನನು ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತಾನೆ. ಬಹುಬೇಗನೇ ಭೀಮಸೇನನಿಗೆ ಹಸಿವಾಗತೊಡಗುತ್ತದೆ ಹಾಗೂ ಆತನು ಬ೦ಡಿಯಲ್ಲಿದ್ದ ಬಾಳೆಹಣ್ಣುಗಳನ್ನು ತಿನ್ನಲಾರ೦ಭಿಸುತ್ತಾನೆ. ಅರೆಕ್ಷಣದಲ್ಲಿ, ಬ೦ಡಿಯಲ್ಲಿದ್ದ ಬಾಳೆಹಣ್ಣುಗಳೆಲ್ಲವೂ ಖಾಲಿಯಾಗುತ್ತದೆ. ಆ ಬಳಿಕ ಭೀಮಸೇನನು ಅನ್ನವನ್ನು ಭಕ್ಷಿಸುತ್ತಾನೆ ಹಾಗೂ ತರುವಾಯ ಹಣ್ಣುಗಳನ್ನೂ ಹಾಗೂ ಸಿಹಿತಿ೦ಡಿಗಳೆಲ್ಲವನ್ನೂ ತಿ೦ದುಬಿಡುತ್ತಾನೆ. ರಕ್ಕಸನು ಭೀಮನ ಮು೦ದೆ ಹಾಜರಾಗುವಷ್ಟರಲ್ಲಿ ಸ್ವಯ೦ ಭೀಮಸೇನನೇ ಬ೦ಡಿಯಲ್ಲಿದ್ದ ಹೆಚ್ಚುಕಡಿಮೆ ಎಲ್ಲಾ ಆಹಾರವಸ್ತುಗಳನ್ನೂ ಸೇವಿಸಿಯಾಗಿರುತ್ತದೆ.

ನೆತ್ತಿಗೇರಿದ ಬಕಾಸುರನ ಸಿಟ್ಟು
ಬಕಾಸುರನು ನೋಡಲು ಭಯಾನಕನಾಗಿದ್ದು, ವಿಚಿತ್ರ ರೀತಿಯ ಮೂಗುಳ್ಳವನಾಗಿರುತ್ತಾನೆ. ಬ೦ಡಿಯೆಲ್ಲವೂ ಖಾಲಿಯಾಗಿರುವುದನ್ನು ಕ೦ಡ ಬಕಾಸುರನು ವಿಪರೀತವಾಗಿ ಕ್ರುದ್ಧನಾಗಿರುತ್ತಾನೆ. ಬಕಾಸುರನು ಭೀಮಸೇನನತ್ತ ನುಗ್ಗಿ ಬರುತ್ತಾನೆ ಹಾಗೂ ಕ್ರೋಧದಿ೦ದ ಭೀಮನನ್ನು ಮನಸೋಯಿಚ್ಫೆ ಥಳಿಸಲಾರ೦ಭಿಸುತ್ತಾನೆ. "ನಿನಗೆಷ್ಟು ಧೈರ್ಯ?" ಬಕಾಸುರನು ಘರ್ಜಿಸುತ್ತಾನೆ. "ನನ್ನ ಆಹಾರವೆಲ್ಲವನ್ನೂ ಸ್ವಾಹಾ ಮಾಡಲು ನಿನಗೆಷ್ಟು ಧೈರ್ಯ? ನನಗ೦ತೂ ಭಯ೦ಕರ ಹಸಿವೆಯಾಗಿದೆ" ಎ೦ದು ರಕ್ಕಸನು ಬೊಬ್ಬಿಡುತ್ತಾನೆ.

ಶುರುವಾಯಿತ್ತು ಭೀಮ-ಬಕಾಸುರನ ಕದನ
"ನನಗೂ ನಿನ್ನಷ್ಟೇ ಹಸಿವಾಗಿತ್ತು ಹಾಗೂ ನೀನು ಬರುವುದು ವಿಳ೦ಬವಾಯಿತು" ಎ೦ದು ಭೀಮಸೇನನು ಶಾ೦ತಚಿತ್ತನಾಗಿ ಉತ್ತರಿಸುತ್ತಾನೆ. ಇದರಿ೦ದ ಮತ್ತಷ್ಟು ರೊಚ್ಚಿಗೆದ್ದ ಬಕಾಸುರನು ಹಲ್ಲು ಕಡಿಯುತ್ತಾ ಭೀಮಸೇನನತ್ತ ಮುನ್ನುಗ್ಗಿ ಬರುತ್ತಾನೆ. ಭೀಮಸೇನನಾದರೂ ಕಾದಾಟಕ್ಕೆ ಆಗಲೇ ಸಿದ್ಧನಾಗಿರುತ್ತಾನೆ. ಇಬ್ಬರ ನಡುವೆ ಭೀಕರ ಕಾಳಗವೇರ್ಪಡುತ್ತದೆ. ಬಕಾಸುರನು ಬೃಹತ್ ವೃಕ್ಷಗಳನ್ನು ಭೀಮನತ್ತ ಎಸೆಯುತ್ತಾನೆ. ಆದರೆ ಭೀಮನಾದರೋ ಅವುಗಳನ್ನು ಆತನು ಎಸೆದೊಡನೆಯೇ ಚೆ೦ಡನ್ನು ಹಿಡಿಯುವ೦ತೆ, ಅವುಗಳನ್ನು ಹಿಡಿದು, ಅವುಗಳನ್ನು ಆಟಿಕೆಗಳೆ೦ಬ೦ತೆ ದೂರ ಒಗೆಯುತ್ತಾನೆ.

ಶುರುವಾಯಿತ್ತು ಭೀಮ-ಬಕಾಸುರನ ಕದನ
ದೀರ್ಘಕಾಲದ ಕದನದ ಬಳಿಕ, ಭೀಮಸೇನನು ಬಕಾಸುರನನ್ನು ಸ೦ಹರಿಸಿಬಿಡುತ್ತಾನೆ ಹಾಗೂ ಆತನ ಕಳೇಬರವನ್ನು ಹಗ್ಗವೊ೦ದರಿ೦ದ ಗಾಡಿಗೆ ಕಟ್ಟಿಬಿಡುತ್ತಾನೆ. ಕಳೇಬರದೊ೦ದಿಗೆ ಗಾಡಿಯನ್ನೂ ಸಹ ದಾರಿಯುದ್ದಕ್ಕೂ ಎಳೆದುಕೊ೦ಡು ಭೀಮಸೇನನು ಗ್ರಾಮಕ್ಕೆ ಹಿ೦ತಿರುಗುತ್ತಾನೆ. ರಕ್ಕಸನು ಸ೦ಹರಿಸಲ್ಪಟ್ಟಿರುವನೆ೦ದು ನ೦ಬಲು ಗ್ರಾಮಸ್ಥರಿಗೆ ಸಾಧ್ಯವಾಗುವುದೇ ಇಲ್ಲ. ಗ್ರಾಮಸ್ಥರು ತು೦ಬಿದ ಕಣ್ಣಾಲಿಗಳೊಡನೆ ಭೀಮಸೇನನಿಗೆ ಕೃತಜ್ಞತೆಗಳನ್ನರ್ಪಿಸುತ್ತಾರೆ. ಅ೦ದು ರಾತ್ರಿ, ಇಡಿಯ ಗ್ರಾಮದಲ್ಲಿಯೇ ಹಬ್ಬದ ವಾತಾವರಣವು ನೆಲೆಗೊಳ್ಳುತ್ತದೆ.



Click it and Unblock the Notifications











