Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಭಗವಾನ್ ಕೃಷ್ಣ ಕಾಶಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ ಹಿಂದಿನ ಕಥೆ
ದ್ವಾಪರಯುಗದಲ್ಲಿ ಕೃಷ್ಣನು ಕಂಸನನ್ನು ಮತ್ತು ಜರಾಸಂದನನ್ನು ಕೊಂದು ಭೂಲೋಕದಲ್ಲಿ ಧರ್ಮ ಸ್ಥಾಪನೆ ಮಾಡಿದಂತಹ ಕಥೆಯಿದು. ದ್ವಾಪರಯುಗದಲ್ಲಿ ಮಗದ ರಾಜ ಜರಾಸಂಧನು ಜನರ ಮೇಲೆ ದಬ್ಬಾಳಿಕೆ ಮಾಡಿ ರಾಜ್ಯವನ್ನು ಆಳುತ್ತಿದ್ದ. ಆತನಿಗೆ ಅಸ್ತಿ ಮತ್ತು ಪ್ರಾಸ್ತಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದರು. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಆತ ಮಥುರಾದ ರಾಜನಾಗಿರುವ ಕಂಸನಿಗೆ ಕೊಟ್ಟು ಮದುವೆ ಮಾಡಿದ.

ಕಂಸನು ಕೃಷ್ಣ ದೇವರ ಸೋದರ ಮಾವನಾಗಿದ್ದ. ಕಂಸ ಕೂಡ ಒಬ್ಬ ಸರ್ವಾಧಿಕಾರಿಯಾಗಿದ್ದು, ಅನ್ಯಾಯಗಳನ್ನು ಮಾಡುತ್ತಲಿದ್ದ. ದೇವರನ್ನು ಬಿಟ್ಟು ತನ್ನನ್ನೇ ಪೂಜಿಸಬೇಕು ಮತ್ತು ರಾಜ್ಯದ ಜನರು ತನ್ನ ಹೆಸರಿನಲ್ಲೇ ಜಪ ಮಾಡಬೇಕು ಎಂದು ಆದೇಶ ಹೊರಡಿಸಿದ್ದ. ಕೃಷ್ಣನು ಕಂಸನನ್ನು ಕೊಂದು ಜೈಲಿನಲ್ಲಿದ್ದ ತನ್ನ ತಂದೆತಾಯಿ ಹಾಗೂ ಸಾವಿರಾರು ಮಂದಿಯನ್ನು ಬಿಡುಗಡೆಗೊಳಿಸಿದ್ದ.

ಕಂಸನ ಸಾವಿಗೆ ಜರಾಸಂಧ ಸೇಡು ತೀರಿಸಲು ಬಯಸಿದ
ಭೂಲೋಕದಲ್ಲಿ ನೆಲೆಸಿರುವಂತಹ ಅಧರ್ಮವನ್ನು ಹೋಗಲಾಡಿಸಿ, ಧರ್ಮ ನೆಲೆಗೊಳ್ಳುವಂತೆ ಮಾಡಲು ವಿಷ್ಣು ದೇವರು ಕೃಷ್ಣನ ಅವತಾರದಲ್ಲಿ ಭೂಮಿಗೆ ಇಳಿದರು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇದರಿಂದಾಗಿ ಕೃಷ್ಣ ದೇವರು ಭೂ ಲೋಕದಲ್ಲಿ ಅನ್ಯಾಯ ಮಾಡುತ್ತಿದ್ದ ಸರ್ವಾಧಿಕಾರಿ ರಾಜರನ್ನು ಕೊಲ್ಲಬೇಕಾಗಿತ್ತು. ಕಂಸನನ್ನು ಕೃಷ್ಣನು ಕೊಂದಿದ್ದಾನೆ ಎನ್ನುವ ಸುದ್ದಿ ಕೇಳಿದ ಜರಾಸಂಧನು ತೀವ್ರ ಕೋಪಗೊಂಡ ಮತ್ತು ಕಂಸನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ.

ಕಾಳಿಂಗರಾಜ ಮತ್ತು ಕಾಶಿರಾಜನೊಂದಿಗೆ ಕೈಜೋಡಿಸಿದ ಜರಾಸಂಧ
ಜರಾಸಂಧನು ಕೃಷ್ಣನ ವಿರುದ್ಧ ಯುದ್ಧ ಮಾಡಲು ಕಾಳಿಂಗ ಮತ್ತು ಕಾಶಿ ರಾಜ್ಯಗಳ ದೊರೆಗಳಾಗಿದ್ದ ಕಾಳಿಂಗರಾಜ ಮತ್ತು ಕಾಶಿರಾಜರ ನೆರವು ಪಡೆದ ಮತ್ತು ಕೃಷ್ಣನ ವಿರುದ್ಧ ಯುದ್ಧ ಸಾರಿದ. ಅದಾಗ್ಯೂ, ಈ ಇಬ್ಬರು ರಾಜರನ್ನು ಕೃಷ್ಣನು ಸೋಲಿಸಿದ ಮತ್ತು ಜರಾಸಂಧನು ತನ್ನ ಪ್ರಾಣ ಉಳಿಸಿಕೊಳ್ಳಲು ಪರಾರಿಯಾದ. ಕಾಶಿರಾಜನಿಗೆ ಒಬ್ಬ ಮಗನಿದ್ದ. ಅವನು ತನ್ನ ತಂದೆ ಕಾಶಿರಾಜನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ. ಕೃಷ್ಣನನ್ನು ಸೋಲಿಸಲು ದೊಡ್ಡ ಶಕ್ತಿಯು ಬೇಕಿದೆ ಎಂದು ಆತ ತಿಳಿದುಕೊಂಡ ಮತ್ತು ಇದಕ್ಕಾಗಿ ಆತ ಈಶ್ವರ ದೇವರಿಂದ ವರ ಪಡೆಯಲು ದೊಡ್ಡ ತಪಸ್ಸನ್ನು ಆಚರಿಸಿದ.

ಈಶ್ವರ ದೇವರು ಒಲಿದರು
ಕೆಲವು ವರ್ಷಗಳ ತಪಸ್ಸಿನ ಬಳಿಕ ಶಿವ ದೇವರು ಕಾಶಿರಾಜನ ಮಗನ ತಪಸ್ಸಿಗೆ ಒಲಿದರು ಮತ್ತು ಆತನ ಮುಂದೆ ಬಂದು ಪ್ರತ್ಯಕ್ಷರಾದರು. ತನಗೆ ಕೃಷ್ಣನನ್ನು ಕೊಲ್ಲುವ ಅಸ್ತ್ರ ನೀಡಬೇಕೆಂದು ಕಾಶಿರಾಜನ ಮಗನು ವರ ಕೇಳಿದ. ಇದಕ್ಕಾಗಿ ಶಿವದೇವರು ಆಯುಧವೊಂದನ್ನು ನೀಡುವರು. ಅದಾಗ್ಯೂ, ಪುರೋಹಿತರನ್ನು ಗೌರವಿಸುವವರ ಮೇಲೆ ಈ ಅಸ್ತ್ರ ಪ್ರಯೋಗ ಮಾಡಬಾರದು ಎಂದು ಶಿವ ದೇವರು ಎಚ್ಚರಿಸುವರು.

ಕೃಷ್ಣ ದೇವರು ಕಾಶಿ ಮೇಲೆ ದಾಳಿ ಮಾಡಿದರು
ಕೃಷ್ಣ ದೇವರು ಪುರೋಹಿತರನ್ನು ತುಂಬಾ ಗೌರವಿಸುತ್ತಾರೆಂದು ಕಾಶಿರಾಜನ ಮಗನಿಗೆ ತಿಳಿದಿರಲಿಲ್ಲ. ಸತ್ಯ ತಿಳಿಯದೆ ಆತ ಕೃಷ್ಣನ ಮೇಲೆ ಯುದ್ಧ ಸಾರುತ್ತಾನೆ. ಅದಾಗ್ಯೂ, ಶಿವ ದೇವರು ನೀಡಿರುವಂತಹ ಅಸ್ತ್ರವು ಕೃಷ್ಣ ದೇವರ ಮೇಲೆ ಪರಿಣಾಮ ಬೀರದೆ ಮರಳಿ ಕಾಶಿರಾಜನ ಮಗನಲ್ಲಿಗೆ ಬರುತ್ತದೆ. ಇದೇ ವೇಳೆ ಕೃಷ್ಣ ದೇವರು ಸುದರ್ಶನ ಚಕ್ರ ಬಿಡುವರು. ಸುದರ್ಶನ ಚಕ್ರವು ಕಾಶಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿಬಿಡುವುದು. ಆದರೆ ಈ ಪ್ರದೇಶವು ಮತ್ತೆ ನದಿಗಳಾಗಿರುವ ವಾರ ಮತ್ತು ಅಸಿಯಿಂದಾಗಿ ಪುನರ್ ನಿರ್ಮಾಣವಾಗುವುದು. ಇದರಿಂದಾಗಿ ಇದನ್ನು ವಾರಣಾಸಿ ಎಂದು ಕರೆಯಲಾಗುತ್ತದೆ.



Click it and Unblock the Notifications
