For Quick Alerts
ALLOW NOTIFICATIONS  
For Daily Alerts

  ಬೆರಳು ಯಾವ ಆಕಾರವನ್ನು ಹೊಂದಿದೆ ಎಂದು ನೋಡಿ, ವ್ಯಕ್ತಿತ್ವ ಅರಿಯಿರಿ

  By Deepu
  |

  ನಮ್ಮ ನಡೆ ನುಡಿಗಳು ಎಲ್ಲವೂ ನಾವು ಹುಟ್ಟಿದ ಸಮಯವನ್ನು ಅವಲಂಭಿಸಿರುತ್ತದೆ. ಹಾಗಾಗಿಯೇ ಬದುಕಿನ ಭವಿಷ್ಯವನ್ನು ಅರಿಯಲು ಜಾತಕ ಮತ್ತು ಕುಂಡಲಿಯನ್ನು ವೀಕ್ಷಿಸುತ್ತಾರೆ. ನಮ್ಮ ಕುಂಡಲಿಯನ್ನು ಹೊರತು ಪಡಿಸಿದರೆ ಅಂಗೈ ರೇಖೆಯಿಂದ ಭವಿಷ್ಯವನ್ನು ಹೇಳುವುದುಂಟು. ಹಾಗೆಯೇ ನಮ್ಮ ಬೆರಳಿನ ಆಕಾರದ ಮೇಲೆಯೂ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ?

  ಬೆರಳುಗಳ ಮೇಲಿನ ಮಚ್ಚೆ- ಜಾತಕವನ್ನೇ ಬಿಚ್ಚಿಡುತ್ತದೆ!

  ನಿಜ, ಬೆರಳುಗಳ ಆಕಾರವು ನಮ್ಮ ವ್ಯಕ್ತಿತ್ವ ಏನು ಎನ್ನುವುದನ್ನು ಬಿಚ್ಚಿಡುತ್ತದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿದೆ. ಬೆರಳಿನ ಆಕಾರವು ನಮಗೆ ಯಾವ ಬಗೆಯ ಅನಾರೋಗ್ಯ ಕಾಡುವುದು ಎನ್ನುವುದನ್ನು ಸಹ ಬಹಿರಂಗ ಪಡಿಸುತ್ತದೆ. ಈ ವಿಚಾರವು ನಿಮಗೆ ಆಶ್ಚರ್ಯ ಹಾಗೂ ಕುತೂಹಲ ಮೂಡಿಸುತ್ತಿದ್ದರೆ ಲೇಖನದ ಮುಂದಿರುವ ವಿವರಣೆಯನ್ನು ಓದಿ ತಿಳಿಯಿರಿ.... 

  ಬೆರಳಿನ ಚಿತ್ರ -A ಆಗಿದ್ದರೆ

  ಬೆರಳಿನ ಚಿತ್ರ -A ಆಗಿದ್ದರೆ

  ನೀವು ಸದಾ ದುಃಖ ಮತ್ತು ಒಂಟಿಯಾಗಿರಲು ಇಷ್ಟ ಪಡುವಿರಿ. ನಿಮ್ಮ ಭಾವನೆಯನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನೀವು ಎಷ್ಟು ಪ್ರಭಲರಾಗಿದ್ದೀರಿ ಎನ್ನುವುದನ್ನು ಅರಿತು ಹೊರಗಿನ ಪ್ರಪಂಚಕ್ಕೆ ಪ್ರಸ್ತುತಪಡಿಸಲು ಸೂಕ್ತ ಸಮಯ ತೆಗೆದುಕೊಳ್ಳುವಿರಿ. ಈ ಬಗೆಯವರನ್ನು ಭಾವನಾತ್ಮಕವಾದ ಮೂರ್ಖರು ಎನ್ನಬಹುದು. ನಿಮಗೆ ಹತ್ತಿರವಾದವರಿಗೆ ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರಿಸುವಿರಿ. ಇವರು ಸುಳ್ಳು, ವಂಚನೆ ಮತ್ತು ಬೂಟಾಟಿಕೆಯನ್ನು ದ್ವೇಷಿಸುತ್ತೀರಿ.

  ಬೆರಳಿನ ಚಿತ್ರ -A ಆಗಿದ್ದರೆ (ಮುಂದುವರಿದ ಭಾಗ)

  ಬೆರಳಿನ ಚಿತ್ರ -A ಆಗಿದ್ದರೆ (ಮುಂದುವರಿದ ಭಾಗ)

  ನಿಮ್ಮ ಭಾವನೆಯನ್ನು ಅಷ್ಟು ಸುಲಭವಾಗಿ ತೋರ್ಪಡಿಸುವುದಿಲ್ಲ. ಇವರು ಸೊಕ್ಕಿನ ಅಥವಾ ವಿಲಕ್ಷಣ ವ್ಯಕ್ತಿಯಾಗಿರಬಹುದು. ನಿಮಗೆ ಇಷ್ಟ ಇಲ್ಲದವರು ನೀಡಿದ ಕೆಲಸವನ್ನು ಪೂರ್ತಿಗೊಳಿಸಲು ನಿಮಗೆ ಯಾವುದೇ ಬೇಸರ ಉಂಟಾಗುವುದಿಲ್ಲ ಎಂದು ಹೇಳಬಹುದು.

  ಬೆರಳಿನ ಚಿತ್ರ -B ಆಗಿದ್ದರೆ

  ಬೆರಳಿನ ಚಿತ್ರ -B ಆಗಿದ್ದರೆ

  ಜನರೊಂದಿಗೆ ಬೆರಯುವ ಮುನ್ನ ಸ್ವಲ್ಪ ಸಂಶಯಾಸ್ಪದವಾಗಿ ವರ್ತಿಸುವಿರಿ. ನಿರೀಕ್ಷೆಗಿಂತಲೂ ಹೆಚ್ಚು ನಿಷ್ಠಾವಂತ ವ್ಯಕ್ತಿಯಾಗಿರುತ್ತೀರಿ. ನಿಮ್ಮನ್ನು ಇಷ್ಟ ಪಡುವ ವ್ಯಕ್ತಿಯನ್ನು ಹೆಚ್ಚು ಪ್ರೀತಿಸುವಿರಿ. ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರುವಿರಿ. ಜನರು ನಿಮ್ಮನ್ನು ಅಷ್ಟು ಸೂಕ್ಷ್ಮ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ. ಆದರೆ ನೀವು ಬಹಳ ಸೂಕ್ಷ್ಮ ವ್ಯಕ್ತಿಗಳಾಗಿರುತ್ತೀರಿ. ಇದರಿಂದಾಗಿ ನಿಮ್ಮ ವರ್ತನೆ ಕೊಂಚ ಮೊಂಡು ಸ್ವಭಾವದಿಂದ ಕೂಡಿರುತ್ತದೆ. ಅದನ್ನು ನೀವು ತಿದ್ದಿಕೊಳ್ಳಬಹುದು.

  ಬೆರಳಿನ ಚಿತ್ರ -B ಆಗಿದ್ದರೆ (ಮುಂದುವರಿದ ಭಾಗ)

  ಬೆರಳಿನ ಚಿತ್ರ -B ಆಗಿದ್ದರೆ (ಮುಂದುವರಿದ ಭಾಗ)

  ಒಂಟಿಯಾಗಿರುವಾಗ ಅತ್ಯಂತ ಖುಷಿಯಲ್ಲಿರುತ್ತೀರಿ ಎನ್ನುವ ಹಾಗೆ ನಟಿಸುವಿರಿ. ಆದರೆ ವಾಸ್ತವವಾಗಿ ನಿಮಗೆ ಒಂಟಿಯಾಗಿ ಉಳಿಯುವುದು ಇಷ್ಟವಿರುವುದಿಲ್ಲ. ನೋವಿಗೆ ಒಳಗಾಗುವುದಕ್ಕೆ ಹೆದರುವಿರಿ. ಶಾಂತವಾಗಿರುವಂತೆ ಇರುಲು ಹಾಗೂ ಸ್ವಯಂ ನಿಯಂತ್ರಣದ ಶಕ್ತಿಯು ನಿಮಗಿರುತ್ತದೆ.

   ಬೆರಳಿನ ಚಿತ್ರ-C ಆಗಿದ್ದರೆ

  ಬೆರಳಿನ ಚಿತ್ರ-C ಆಗಿದ್ದರೆ

  ನೀವು ಬಹಳ ಮೃದು ಸ್ವಭಾವದವರಾಗಿರುತ್ತೀರಿ. ಕೋಪವನ್ನುಂಟುಮಾಡುವಂತಹ ಸನ್ನಿವೇಶವನ್ನು ತಪ್ಪಿಸುವಿರಿ. ಜೊತೆಗೆ ಅಂತಹ ಸನ್ನಿವೇಶಗಳನ್ನು ಬಹು ಬೇಗ ಮರೆತು ಬಿಡುತ್ತೇವೆ. ಹೊಸ ಸಂಗತಿಗಳ ಬಗ್ಗೆ ಅನ್ವೇಷಣೆ ನಡೆಸುವುದು ಇಷ್ಟವಿರುವುದಿಲ್ಲ. ಏಕೆಂದರೆ ಹೊಸದನ್ನು ನಿಭಾಯಿಸಲು ಬಯಸುವುದಿಲ್ಲ. ನೀವು ಇತರರ ಅಭಿಪ್ರಾಯವನ್ನು ಗೌರವಿಸುವಿರಿ.

  ಬೆರಳಿನ ಚಿತ್ರ -C ಆಗಿದ್ದರೆ (ಮುಂದುವರಿದ ಭಾಗ)

  ಬೆರಳಿನ ಚಿತ್ರ -C ಆಗಿದ್ದರೆ (ಮುಂದುವರಿದ ಭಾಗ)

  ಬೇರೆಯವರೊಂದಿಗೆ ಹೋರಾಡುವಾಗ ಅಥವಾ ಸಿಟ್ಟು ಮಾಡುವಾಗ ನಿಮ್ಮ ಅಹಂನ ಮಟ್ಟ ಹೆಚ್ಚಾಗಿರುತ್ತದೆ. ಆದರೆ ಜಗಳದ ನಂತರ ಕ್ಷಮೆಯಾಚಿಸಿ, ಮೊದಲಿನ ಸ್ಥಿತಿಗೆ ಮರಳುವ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಸಮಸ್ಯೆಯನ್ನು ಮತ್ತು ಭಾವನೆಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಲು ಇಷ್ಟಪಡುವಿರಿ. ಒಟ್ಟಾರೆಯಾಗಿ ಹೇಳುವುದಾದರೆ ನೀವು ಅತ್ಯಂತ ಮೃದು ಹೃದಯದವರಾಗಿರುತ್ತೀರಿ.

  English summary

  The Shape Of Your Finger Can Help Determine Your Personality

  Do you know that the shape of your finger can reveal a lot about your personality? Researchers have revealed that the shape of the fingers not only reveal about your personality, but it also helps reveal details of your health. All that you need to do is check the shape of your finger and decide on what exactly it means.
  Story first published: Saturday, November 11, 2017, 23:43 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more