Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನವರಾತ್ರಿ ಹಬ್ಬದಂದು ಹೀಗೆಲ್ಲಾ ಮಾಡಬೇಡಿ! ದುರ್ಗೆ ಕುಪಿತಳಾಗುವಳು!
ನವರಾತ್ರಿ ಬಂದೇ ಬಿಟ್ಟಿದೆ. ದೇವಿ ದುರ್ಗೆಯ ಆರಾಧನೆಯ ಹಬ್ಬವಾಗಿರುವಂತಹ ನವರಾತ್ರಿಯು ದೇಶದೆಲ್ಲೆಡೆ ಆಚರಿಸಲ್ಪಡಲಾಗುತ್ತಿದೆ. ನವರಾತ್ರಿಯಲ್ಲಿ ದುರ್ಗೆಯ ಆರಾಧನೆಯೊಂದಿಗೆ ವಿವಿಧ ರೀತಿಯ ಆಹಾರ ತಯಾರಿಸಿ ಹೊಸ ಹೊಸ ವಸ್ತ್ರಗಳನ್ನು ಧರಿಸಲಾಗುವುದು. ದುರ್ಗೆಯ ಅವತಾರವಾಗಿರುವ ಕಾಳಿ ಮತ್ತು ಶಕ್ತಿಯು ಮಹಿಳಾ ಶಕ್ತಿ ಮತ್ತು ಸ್ವಾತಂತ್ರ್ಯದ ಪ್ರತೀಕವಾಗಿದೆ.
ನವರಾತ್ರಿ ವೇಳೆ ಏನು ಮಾಡಬೇಕೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಕೆಲವೊಂದು ಕೆಲಸಗಳನ್ನು ನವರಾತ್ರಿ ವೇಳೆ ಮಾಡಲೇ ಬಾರದು. ಅದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಕೂದಲು ಕತ್ತರಿಸಿಕೊಳ್ಳುವುದು
ನವರಾತ್ರಿ ಸಂದರ್ಭದಲ್ಲಿ ಕೂದಲು ಕತ್ತರಿಸಬಾರದು ಮತ್ತು ಗಡ್ಡ ತೆಗೆಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದುರ್ಗೆಯು ಕುಪಿತಳಾಗುವಳು ಮತ್ತು ನಿಮಗೆ ಕೆಟ್ಟದಾಗಲಿದೆ. ಕಚೇರಿಗೆ ಹೋಗುವಾಗ ಗಡ್ಡ ತೆಗೆಸಿಕೊಳ್ಳುವುದು ಅನಿವಾರ್ಯವಾದರೆ ಕೆಲವು ಸಲ ಇದನ್ನು ತೆಗೆಸಿ. ಆದರೆ ಕೂದಲು ತೆಗೆಸಲು ಹೋಗಬೇಡಿ. ಈ ವೇಳೆ ಮಗುವಿನ ಕೂದಲು ಬೋಳಿಸುವ(ಮುಂಡನ) ಕಾರ್ಯಕ್ರಮ ಇಟ್ಟುಕೊಳ್ಳಬೇಡಿ.

ಕಲಶ
ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಸಂತೋಷವಾಗಿಡಲು ಹೆಚ್ಚಿನವರು ಪ್ರಯತ್ನ ಮಾಡುತ್ತಿರುತ್ತಾರೆ. ಮನೆಯಲ್ಲಿ ಕಲಶ ಸ್ಥಾಪಿಸುವುದು ಇದರಲ್ಲಿ ಒಂದಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಯಾವುದೇ ನೋವಾಗಿದ್ದರೆ ಇದರ ಬಗ್ಗೆ ಹೆಚ್ಚಿನ ಗಮನಹರಿಸುವುದು ಅತೀ ಅಗತ್ಯ. ರಾತ್ರಿ ಹಾಗೂ ಬೆಳಿಗ್ಗೆ ದಿನದ 24 ಗಂಟೆ ಕಾಲ ಉರಿಯುವ ದೀಪ ಹಚ್ಚಬೇಕು. ಇದು ಹಾರಿಹೋಗಬಾರದು. ಈ ವೇಳೆ ಮನೆಯು ಜನರಿಂದ ತುಂಬಿರಲಿ. ಯಾವತ್ತೂ ಮನೆಗೆ ಬೀಗ ಹಾಕಿ ಹೋಗಬೇಡಿ. ಯಾರಾದರೊಬ್ಬರು ಮನೆಯಲ್ಲಿ ಇರಲಿ.

ಮಾಂಸಾಹಾರಿ ಆಹಾರ
ನವರಾತ್ರಿ ವೇಳೆ ಹೆಚ್ಚಿನವರು ಮಾಂಸಾಹಾರದೊಂದಿಗೆ ಮದ್ಯಪಾನ ತ್ಯಜಿಸುವರು. ಈ ವೇಳೆ ಕೆಲವರು ಬೆಳ್ಳುಳ್ಳಿ, ಈರುಳ್ಳಿ ಮತ್ತು ಶುಂಠಿ ಬೆರೆಸಿದಂತಹ ಯಾವುದೇ ಆಹಾರ ಸೇವನೆ ಮಾಡುವುದಿಲ್ಲ. ನವರಾತ್ರಿ ವೇಳೆ ಲಿಂಬೆ ಸೇವನೆ ಮಾಡುವುದು ಕೂಡ ಅಪವಿತ್ರವೆಂದು ಭಾವಿಸಲಾಗಿದೆ. ಅಗತ್ಯವೆಂದಿದ್ದರೆ ಮಾರುಕಟ್ಟೆಯಿಂದ ಲಿಂಬೆ ಜ್ಯೂಸ್ ತನ್ನಿ.

ನಿದ್ರಿಸುವುದು
ಒಂಬತ್ತು ದಿನಗಳ ಕಾಲ ನಿದ್ರೆ ಬಿಟ್ಟು ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಆದರೆ ಒಂಭತ್ತು ದಿನಗಳಲ್ಲಿ ಮಧ್ಯಾಹ್ನದ ವೇಳೆ ಮಲಗಲೇ ಬಾರದು. ನವರಾತ್ರಿ ವೇಳೆ ಉಪವಾಸ ಮಾಡುವಂತಹವರು ಮಧ್ಯಾಹ್ನ ವೇಳೆ ಮಲಗಲೇ ಬಾರದು. ಹೀಗೆ ಮಲಗಿದರೆ ಉಪವಾಸದಿಂದ ಸಿಗುವಂತಹ ಒಳ್ಳೆಯ ಫಲವು ದೂರವಾಗುವುದು. ಉಪವಾಸ ಮಾಡುತ್ತಿದ್ದರೆ ಮಲಗಬೇಡಿ. ನೀವು ಉಪವಾಸ ಮಾಡುತ್ತಲಿದ್ದರೆ ಇಲ್ಲಿ ನಿಮಗಾಗಿ ಕೆಲವೊಂದು ಸಲಹೆಗಳು ಕೆಳಗಿದೆ ಓದಿ.....

ಸ್ವಲ್ಪ ಸ್ವಲ್ಪ ಆಹಾರ
ಸಂಪೂರ್ಣವಾಗಿ ಹಸಿದು ಕುಳಿತುಕೊಳ್ಳುವ ಬದಲು ಸ್ವಲ್ಪ ಸ್ವಲ್ಪ ಆಹಾರ ತಿನ್ನಿ. ಆಹಾರ ಸ್ವಲ್ಪವೇ ತಿನ್ನಿ. ನೀವು ಸಾಮಾನ್ಯವಾಗಿ ತಿನ್ನುವಂತೆ ಉಪವಾಸದ ವೇಳೆ ತಿನ್ನಬೇಡಿ. ಊಟ ಮಾಡಲು ಸೂರ್ಯ ಮುಳುಗುವ ತನಕ ಕಾಯಬೇಡಿ. ಆಹಾರವನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ದಿನವಿಡಿ ಸೇವಿಸಿ.

ನೀರಿನಾಂಶ ಸೇವಿಸಿ
ನಿರ್ಜಲ ವ್ರತ ಮಾಡುವವರು ಮಾತ್ರ ನೀರು ಕುಡಿಯಲ್ಲ. ಆದರೆ ಕೇವಲ ಉಪವಾಸ ಮಾಡುವವರಾದರೆ ನೀರು ಕುಡಿಯಬಹುದು. ನೀರು ಕುಡಿಯುತ್ತಾ ಇದ್ದರೆ ಹಸಿವು ಕಡಿಮೆಯಾಗುವುದು. ಒಂದೇ ಸಲ ನೀರು ಕುಡಿಯಲು ಕಷ್ಟವಾದರೆ, ಸೀಯಾಳ ಮತ್ತು ತಾಜಾ ಹಣ್ಣಿನ ಜ್ಯೂಸ್ ಸೇವಿಸಿ. ಇದು ದೇಹವನ್ನು ತೇವಾಂಶದಿಂದ ಇಡುವುದು.

ತರಕಾರಿಗಳು
ಆಲೂಗೆಡ್ಡೆಯನ್ನು ಉಪವಾಸದ ವೇಳೆ ನೀವು ಸೇವಿಸಬಹುದಾಗಿದೆ. ನೀವು ಯಾವ ರೀತಿಯ ಉಪವಾಸ ಮಾಡುತ್ತಿದ್ದೀರಿ ಎನ್ನುವುದರ ಮೇಲೆ ತರಕಾರಿಗಳಾದ ಟೊಮೆಟೋ, ಪನೀರ್ ಮತ್ತು ಸೋರೆ ಕಾಯಿ ಸೇವಿಸಬಹುದು. ಉಪವಾಸದ ಸಂದರ್ಭದಲ್ಲಿ ಸಾಗು ಸೇವಿಸುವುದು ತುಂಬಾ ಒಳ್ಳೆಯದು. ಇದರಲ್ಲಿ ನಾರಿನಾಂಶ ಅಧಿಕವಾಗಿದೆ.

ಸಕ್ಕರೆ
ಉಪವಾಸದ ವೇಳೆ ಒಂದಲ್ಲಾ ಒಂದು ರೀತಿಯ ಸಿಹಿತಿಂಡಿ ಇದ್ದೇ ಇರುತ್ತದೆ. ಕೆಲವರು ಇದನ್ನು ಅತಿಯಾಗಿ ಸೇವನೆ ಮಾಡುತ್ತಾರೆ. ಆದರೆ ಸಕ್ಕರೆಯು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕರ. ಇಷ್ಟು ಮಾತ್ರವಲ್ಲದೆ ಸಂಸ್ಕರಿಸಿದ ಸಕ್ಕರೆಯಿಂದ ತೂಕ ಹೆಚ್ಚಾಗಬಹುದು. ಉಪವಾಸದ ಬಳಿಕ ಸಿಹಿತಿಂಡಿ ಸೇವಿಸದೆ ಇದ್ದರೆ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಬೆಲ್ಲ ಮತ್ತು ಜೇನುತುಪ್ಪ ಒಳ್ಳೆಯದು. ಇದು ತಾಜಾವಾಗಿದೆಯಾ ಎಂದು ಪರೀಕ್ಷಿಸಿ ಸೇವಿಸಿ.



Click it and Unblock the Notifications
