For Quick Alerts
ALLOW NOTIFICATIONS  
For Daily Alerts

ಮೈಮೇಲೆ ಬಂದು ಆವರಿಸುವ ಭೂತ-ಪ್ರೇತಾತ್ಮ ಓಡಿಸುವ ದೇವಾಲಯಗಳು!

By Deepu
|

ಕೆಲವೊಂದು ಮೂಢನಂಬಿಕೆಗಳು ಈಗಲೂ ಭಾರತದಲ್ಲಿ ಹಾಗೆಯೇ ಉಳಿದುಕೊಂಡಿದೆ. ಕಾನೂನು ಎಷ್ಟೇ ಕಟ್ಟುನಿಟ್ಟಾಗಿದ್ದರೂ ಸಹಿತ ಮೂಢನಂಬಿಕೆಗಳು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಕೆಲವೊಂದು ದೇವಾಲಯಗಳಲ್ಲೂ ಭೂತೋಚ್ಛಾಟನೆಯಂತಹ ಕಾರ್ಯಗಳು ಈಗಲೂ ನಡೆಯುತ್ತದೆ. ಕೆಲವು ದೇಶಗಳಲ್ಲಿ ಭೂತೋಚ್ಛಾಟನೆ ಎನ್ನುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಕ್ರೈಸ್ತ, ಬೌದ್ಧ ಹಾಗೂ ಮುಸ್ಲಿಮರಲ್ಲಿಯೂ ಈ ಪದ್ಧತಿಯಿದೆ.

ಭಾರತದಲ್ಲಿ ಹಲವಾರು ಶತಮಾನಗಳಿಂದಲೂ ಈ ಭೂತೋಚ್ಛಾಟನೆಯು ನಡೆಯುತ್ತಲೇ ಇದೆ. ಭಾರತದಲ್ಲಿ ಕೆಲವೊಂದು ದೇವಾಲಯಗಳಿಗೆ ಈಗಲೂ ಭೂತೋಚ್ಚಾಟನೆಗಾಗಿ ಜನರು ಬರುತ್ತಾರೆ. ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬಂದು ಭೂತೋಚ್ಚಾಟನೆ ಮಾಡಿಸಿಕೊಳ್ಳುವರು. ಭಾರತದಲ್ಲಿ ಯಾವ್ಯಾವ ಜಾಗಗಳಲ್ಲಿ ಭೂತೋಚ್ಚಾಟನೆ ನಡೆಯುತ್ತದೆ ಎನ್ನುವ ಬಗ್ಗೆ ತಿಳಿಯಲು ಉಸಿರುಬಿಗಿಹಿಡಿದುಕೊಂಡು ಮುಂದಕ್ಕೆ ಓದುತ್ತಾ ಸಾಗಿ...

ಹರ್ಜತ್ ಸೈಯದ್ ಅಲಿ ಮಿರಾ ದಾತರ್ ದರ್ಗಾ, ಗುಜರಾತ್

ಹರ್ಜತ್ ಸೈಯದ್ ಅಲಿ ಮಿರಾ ದಾತರ್ ದರ್ಗಾ, ಗುಜರಾತ್

ದರ್ಗಾದ ಸಮೀಪದಿಂದ ಪ್ರಯಾಣಿಸುತ್ತಿದ್ದರೆ ಅಥವಾ ಇದರ ಆಸುಪಾಸಿನಲ್ಲಿ ವಾಸವಾಗಿದ್ದರೆ ಬೊಬ್ಬೆಯ ಸದ್ದು ಕೇಳಿಬರುವುದು. ಪೀಡಿತನ ಕುಟುಂಬದವರು ಒಂದು ತಿಂಗಳಿಗೆ 800 ರೂಪಾಯಿ ಕೊಟ್ಟು ಒಂದು ಕೋಣೆ ಪಡೆಯಬೇಕು. ಇದರ ಬಳಿಕ ಭೂತೋಚ್ಛಾಟನೆ ಕಾರ್ಯ ಆರಂಭವಾಗುತ್ತದೆ. ಹಿಂಸಾತ್ಮಕ ಶಕ್ತಿಗಳನ್ನು ಗೋಡೆಗೆ ಬಡಿಯಲಾಗುತ್ತದೆ. ತಮ್ಮನ್ನು ತಾವೇ ಸರಿಪಡಿಸಿಕೊಳ್ಳಲು ಕೆಲವು ಪೀಡಿತರು ಇಲ್ಲಿನ ನೆಲದ ಮೇಲೆ ಹೊರಳಾಡುವುದನ್ನು ಕಾಣಬಹುದು. ಯಾವುದೇ ಧರ್ಮದವರು ಇಲ್ಲಿಗೆ ಹೋಗಬಹುದು.

ದತ್ತಾತ್ರೇಯ ಮಂದಿರ, ಗಂಗಾಪುರ, ಮಧ್ಯಪ್ರದೇಶ

ದತ್ತಾತ್ರೇಯ ಮಂದಿರ, ಗಂಗಾಪುರ, ಮಧ್ಯಪ್ರದೇಶ

ಪ್ರತೀ ಹುಣ್ಣಿಮೆಯ ದಿನದಂದು ಭೂತ ಪೀಡಿತರು ಇಲ್ಲಿಗೆ ಬಂದು ಭೂತೋಚ್ಛಾಟನೆಯಲ್ಲಿ ತೊಡಗುವರು. ಪೀಡಿತರು ಇಲ್ಲಿ ಬೊಬ್ಬೆ ಹಾಕುತ್ತಾ ಇರುವುದನ್ನು ಕಾಣಬಹುದು. ಭೂತಭಾದೆ ಇರುವವರು ಇಲ್ಲಿ ಕಂಬಗಳಿಗೆ ಹತ್ತುವುದು ಸಾಮಾನ್ಯವಾಗಿದೆ.

Image Source

ಮೆಹಂದಿಪುರ ಬಾಲಾಜಿ ಮಂದಿರ, ರಾಜಸ್ಥಾನ

ಮೆಹಂದಿಪುರ ಬಾಲಾಜಿ ಮಂದಿರ, ರಾಜಸ್ಥಾನ

ಇದು ರಾಜಸ್ಥಾನದ ದೌಸ ಜಿಲ್ಲೆಯಲ್ಲಿದೆ. ಭೂತಭಾದೆ ಇರುವವರು ಬಿಸಿ ನೀರನ್ನು ತಮ್ಮ ಮೇಲೆ ಸುರಿದುಕೊಂಡು ಅಥವಾ ಗೋಡೆಗಳಿಗೆ ತಲೆ ಬಡಿದುಕೊಳ್ಳುತ್ತಾ ದುಷ್ಟಶಕ್ತಿಗಳಿಂದ ದೂರವಾಗಲು ಪ್ರಯತ್ನಿಸುವರು. ಭೂತೋಚ್ಛಾಟನೆಯನ್ನು ಇಲ್ಲಿ ನೇರವಾಗಿ ನೋಡಬಹುದು. ಈ ಸ್ಥಳದ ಸುತ್ತ ಅನೇಕ ಆತ್ಮಗಳಿವೆ ಎಂದು ನಂಬಲಾಗಿದೆ.

Image Source

ನಿಜಾಮುದ್ದೀನ್ ದರ್ಗಾ, ದೆಹಲಿ

ನಿಜಾಮುದ್ದೀನ್ ದರ್ಗಾ, ದೆಹಲಿ

ನಿಜಾಮುದ್ದೀನ್ ದರ್ಗಾವು ಪ್ರವಾಸಿ ತಾಣ ಮಾತ್ರವಲ್ಲದೆ, ಇಲ್ಲಿ ಭೂತೋಚ್ಚಾಟನೆ ಕೂಡ ಮಾಡಲಾಗುತ್ತದೆ. ಪಿಶಾಚಿಗಳಿಂದ ಮುಕ್ತಿ ಪಡೆಯಲು ಹೆಚ್ಚಿನ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂಫಿ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಜನರು ಆಗಮಿಸುವರು. ಆದರೆ ಇಲ್ಲಿ ಮೂಲೆಯಲ್ಲಿ ಇರುವ ಒಂದು ಕೋಣೆಯಿಂದ ಭೂತೋಚ್ಛಾಟನೆ ವೇಳೆ ಬೊಬ್ಬೆ ಕೇಳಿಬರುತ್ತದೆ.

Image Source

ದೇವ್ಜಿ ಮಹಾರಾಜ್ ಮಂದಿರ್, ಮಲಪುರ್, ಮಧ್ಯಪ್ರದೇಶ

ದೇವ್ಜಿ ಮಹಾರಾಜ್ ಮಂದಿರ್, ಮಲಪುರ್, ಮಧ್ಯಪ್ರದೇಶ

ಎಲ್ಲ ಕಡೆಗಳಲ್ಲಿ ಜಾನುವಾರು ಮೇಳ, ಕೃಷಿ ಮೇಳ ನಡೆಯುವಂತೆ ಈ ದೇವಾಲಯದಲ್ಲಿ ಪ್ರತೀ ವರ್ಷ ಭೂತ ಮೇಳ ನಡೆಯುತ್ತದೆ. ಈ ವೇಳೆ ತುಂಬಾ ದೂರದ ಊರುಗಳಿಂದ ಜನರು ಇಲ್ಲಿಗೆ ಆಗಮಿಸುವರು. ಭೂತ ಪೀಡಿತರಿಗೆ ಪೊರಕೆಯಿಂದ ಹೊಡೆಯಲಾಗುತ್ತದೆ. ಪಾದ ಮತ್ತು ಅಂಗೈಯಲ್ಲಿ ಕರ್ಪೂರ ಉರಿಸಲಾಗುತ್ತದೆ.

Image Source

ಹನುಮಾನ್ ಮಂದಿರ, ಸಾಲಂಗಪುರ, ಗುಜರಾತ್

ಹನುಮಾನ್ ಮಂದಿರ, ಸಾಲಂಗಪುರ, ಗುಜರಾತ್

ಶ್ರೀ ಕಷ್ಟ ಭಂಜನ ದೇವ ಹನುಮಾನ್ ಜಿ ಮಂದಿರ ಎಂದು ಕರೆಯಲ್ಪಡುವ ಇಲ್ಲಿಗೆ ಜನರು ಹನುಮಂತ ದೇವರಿಗೆ ಪೂಜೆ ಮಾಡಲು ಮತ್ತು ಭೂತ ಭಾದೆ ದೂರ ಮಾಡಲು ಬರುವರು.

Image Source

English summary

Temples In India That Are Known For Exorcism

In fact, there are several religious places in the country where this takes place even today. People bring their relatives to these shrines and often the person concerned undergoes severe atrocities like inflicting pain on oneself in myraid ways, in the name of penance, in hope to get cured of bad spirits. Let's check out these places in India where exorcism can be witnessed. Sit back for a spooky ride!
X
Desktop Bottom Promotion