Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಅರೆರೇ... ಇವರು ಹೀಗೆ ಬಂದಿರುವುದು ಪರೀಕ್ಷೆಗೆ ಕಾಪಿ ಹೊಡೆಯುವುದು ತಡೆಯಕ್ಕಂತೆ! ಈ ಫನ್ನಿ ಐಡಿಯಾಗೆ ನೆಟ್ಟಿಗರು ಫುಲ್ ಫಿದಾ
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವುದನ್ನು ತಡೆಗಟ್ಟಲು ಶಿಕ್ಷಕರು ತುಂಬಾನೇ ತಲೆಕೆಡಿಸಿಕೊಳ್ಳುತ್ತಾರೆ. ಕೆಲವು ಕಡೆ ವಿದ್ಯಾರ್ಥಿಗಳಿಗೆ ಶೂ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಅವರಲ್ಲಿ ಏನಾದರೂ ಚೀಟಿ ಇದೆಯೇ ಎಂದೆಲ್ಲಾ ಪರೀಕ್ಷಿಸಲಾಗುವುದು.

ಇನ್ನು ಚೀಟಿ ಏನೂ ತರದಿದ್ದರೂ ಪರೀಕ್ಷೆ ಹಾಲ್‌ನಲ್ಲಿ ಕುಳಿತು ಮತ್ತೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ಟೀಚರ್‌ಗೆ ಕಾಣದಂತೆ ಕದ್ದು ನೋಡಿ ಬರೆಯುವುದು ಅಥವಾ ಕಣ್ಸೆನ್ನೆಯಲ್ಲಿ ಫ್ರೆಂಡ್ಸ್ ಹತ್ರ ಕೇಳುವುದು ಮಾಡುತ್ತಾರೆ. ಇದನ್ನು ತಡೆಯಲು ಫಿಲಿಫೈನ್ಸ್ ಕಾಲೇಜಿನಲ್ಲಿ ಮಾಡಿದ ಉಪಾಯ ತುಂಬಾನೇ ವೈರಲ್ ಆಗಿದೆ.

ಕಾಪಿ ತಡೆಗಟ್ಟಲು ಹೆಡ್‌ಗೇರ್
ವಿದ್ಯಾರ್ಥಿಗಳು ಕಾಪಿ ಹೊಡೆಯುವುದನ್ನುತಡೆಗಟ್ಟಲು ಲೆಗಜ್ಪಿ ಸಿಟಿಯಲ್ಲಿರುವ ಕಾಲೇಜಿನಲ್ಲಿ ತಲೆಯನ್ನು ಕವರ್ ಮಾಡುವಂತೆ ಏನಾದರೂ ಧರಿಸಿ ಪರೀಕ್ಷೆ ಬರೆಯಿರಿ ಬೇರೆಯವರ ಉತ್ತರ ಪತ್ರಿಕೆ ನೋಡುವಂತಾಗಬಾರದು ಎಂಬ ಸುಚನೆ ನೀಡಿದ್ದರು.

ಫನ್ನಿ ಹಾಗೂ ಕ್ರಿಯೇಟಿವ್ ಆಗಿ ಚಿಂತಿಸಿದ ವಿದ್ಯಾರ್ಥಿಗಳು
ಪರೀಕ್ಷೆ ಹಾಲ್‌ಗೆ ಬಂದ ವಿದ್ಯಾರ್ಥಿಗಳ ಅವತಾರ ತುಂಬಾನೇ ಫನ್ನಿಯಾಗಿತ್ತು. ಕೆಲವರ ಅವತಾರ ನೋಡಿದರೆ ನಗು ಬಾರದೇ ಇರಲ್ಲ. ಮೊಟ್ಟೆ, ರಟ್ಟು, ಪೇಪರ್ ಎಲ್ಲಾ ಬಳಸಿಕೊಂಡು ಹೆಡ್‌ಗೇರ್ ಮಾಡಿದ್ದು ಇವರ ಅವತಾರಗಳು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಮಕ್ಕಳ ಈ ಐಡಿಯಾಗೆ ಮೆಚ್ಚುಗೆ
ತಾವು ಇತರರನ್ನು ನೋಡಿ ಕಾಪಿ ಹೊಡೆಯುವುದನ್ನು ತಡೆಗಟ್ಟಲು ಮಕ್ಕಳೇ ಮಾಡಿರುವ ಐಡಿಯಾಗೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತದೆ. ಮಕ್ಕಳು ಕಾಪಿ ಹೊಡೆಯದಿರಲು ಮಾಡಿರುವ ಐಡಿಯಾ ಇತರ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಗಮನ ಸೆಳೆಯುತ್ತಿದೆ. ಹೇಗಿದೆ ಈ ಐಡಿಯಾ, ಸೂಪರ್ ಅಲ್ವಾ?



Click it and Unblock the Notifications
