Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೂರಸಂಹಾರ: ಸ್ಕಂದ ಷಷ್ಠಿಯ ದಿನಾಂಕ ಹಾಗೂ ಮಹತ್ವ
ಮುರುಗ, ಕಾರ್ತಿಕೇಯ ಹೀಗೆ ಹಲವು ನಾಮದಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಿಗೆ ಸೂರಸಂಹಾರ ತುಂಬಾ ಮಹತ್ವವಾದ ದಿನ. ಸೂರ ಸಂಹಾರವನ್ನು ಸ್ಕಂದ ಷಷ್ಟಿಯೆಂದು ಆಚರಿಸಲಾಗುವುದು. ದಕ್ಷಿಣ ಭಾರತದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಸ್ಕಂದ ಷಷ್ಠಿಯನ್ನು 6 ದಿನಗಳವರೆಗೆ ಆಚರಿಸಲಾಗುವುದು. ಈ ವರ್ಷ ನವೆಂಬರ್9ರಿಂದು ಆಚರಿಸಲಾಗುವುದು.

ಕಾರ್ತಿಕ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುವ ಹಬ್ಬ
ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಹಬ್ಬ ಪ್ರಾರಂಭವಾಗುತ್ತದೆ. ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ ಇದಾಗಿದೆ.

ಸೂರ ಸಂಹಾರ ದಿನಾಂಕ
ಷಷ್ಠಿ ತಿಥಿ ಪ್ರಾರಂಭ: ನವೆಂಬರ್ 9 ಬೆಳಗ್ಗೆ10:35ಕ್ಕೆ
ಷಷ್ಠಿ ತಿಥಿ ಮುಕ್ತಾಯ: ನವೆಂಬರ್ 10, 8:25ಕ್ಕೆ

ಆಚರಣೆ ಹೇಗೆ ಮಾಡಲಾಗುವುದು?
ಈ ಆಚರಣೆಯಲ್ಲಿ ಭಕ್ತರು ಉಪವಾಸವಿದ್ದು ಸುಬ್ರಮಣ್ಯಸ್ವಾಮಿಯ ಜಪ ಮಾಡುತ್ತಾ ನಿಷ್ಠೆಯಿಂದ ಆಚರಿಸುತ್ತಾರೆ. ಸೂರ ಸಂಹಾರ ಆಚರಿಸುವುದರಿಂದ ಭಕ್ತರಿಗೆ ಒಳ್ಳೆಯ ಫಲ ಸಿಗುವುದು ಎಂಬುವುದು ಸುಬ್ರಮಣ್ಯ ಸ್ವಾಮಿಯ ಭಕ್ತರ ಅಚಲ ನಂಬಿಕೆಯಾಗಿದೆ.

ಸೂರ ಸಂಹಾರದ ಹಿಂದಿರುವ ಪೌರಾಣಿಕ ಕತೆ
ಅತಿ ದೊಡ್ಡದಾದ ಹಾಗು 18 ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ, ಸೂರಪದ್ಮ, ಸಿಂಹಮುಖ ಹಾಗು ತಾರಕಾಸುರ ರಾಕ್ಷಸರು ತಮ್ಮ ಸೈನ್ಯ ಕಟ್ಟಿಕೊಂಡು ದೇವತೆಗೆಳ ಮೇಲೆ ಯುದ್ಧ ಮಾಡಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ. ರಾಕ್ಷಸರು ದೇವತೆಗಳನ್ನು ಹಾಗೂ ಮನುಷ್ಯರನ್ನು ಹಿಂಸೆ ನೀಡುತ್ತಾರೆ. ರಾಕ್ಷಸ ಸೂರಪದ್ಮನು ಶಿವನು ಸತಿಯ ನಂತರ ಐಹಿಕ ಜೀವನವನ್ನು ತ್ಯಜಿಸಿ, ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತು, ತನಗೆ ಶಿವನ ಮಗನಿಂದಲೇ ಸಾವಾಗ ಬೇಕು ಎಂಬ ವರವನ್ನು ತೆಗೆದುಕೊಂಡಿರುತ್ತಾನೆ. ದೇವತೆಗಳು ತಪ್ಪಸ್ಸಿನಲ್ಲಿದ್ದ ಶಿವನ ಪಾದಕ್ಕೆ ಬಿದ್ದು ತಮ್ಮನ್ನು ರಕ್ಷಿಸುವಂತೆ ಕೇಳುತ್ತಾರೆ. ಬ್ರಹ್ಮ ದೇವನ ಸಲಹೆಯ ಮೇರೆಗೆ ದೇವತೆಗಳು ಮನ್ಮಥನ ಸಹಾಯ ಪಡುತ್ತಾರೆ. ಮನ್ಮಥ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸುತ್ತಾನೆ. ಇದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಸುಟ್ಟು ಬೂದಿ ಮಾಡುತ್ತಾನೆ.



Click it and Unblock the Notifications
