Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶಿವಲಿಂಗದ ಮಹತ್ವ
ಭಾರತದಲ್ಲಿ ಶಿವನ ಲಿಂಗಗಳನ್ನು ನೀವು ಹಲವು ಕಡೆ ನೋಡಿರಬಹುದು. ಮಹಿಳೆಯರು ಹಾಲು, ಮೊಸರು, ಜೇನುತುಪ್ಪ ಮತ್ತು ನೀರಿನ ಅಭಿಷೇಕವನ್ನು ಮಾಡುತ್ತಾ ಒಳ್ಳೆಯ ಗಂಡ ಅಥವ ಮಕ್ಕಳಿಗಾಗಿ ಪ್ರಾರ್ಥಿಸುವುದನ್ನು ನೋಡಿರಬಹುದು. ಕಾರಣಗಳು ಏನೇ ಇರಲಿ ಹಿಂದೂಧರ್ಮದಲ್ಲಿ ಲಿಂಗಾರಾಧನೆ ಬಹಳ ಮುಖ್ಯವಾದುದು.
ಹಲವರಿಗೆ ಶಿವ ಲಿಂಗವೆಂದರೇನು ಮತ್ತು ಅದನ್ನು ಏಕೆ ಪೂಜಿಸಬೇಕು ಎಂಬುದರ ಬಗ್ಗೆ ಹಲವು ಪ್ರಶ್ನೆಗಳಿರಬಹುದು. ನಿಮಗೆ ಕೂಡ ಶಿವ ಲಿಂಗದ ಬಗ್ಗೆ ತಿಳಿಯುವ ಕುತೂಹಲವಿದ್ದರೆ ಇದನ್ನು ಓದಿ.
ಸಂಸ್ಕೃತದಲ್ಲಿ 'ಲಿಂಗ' ಎಂದರೆ 'ಸಂಕೇತ' ಎಂದರ್ಥ. 'ಲಿಂಗ'ವು ಶಿವ ಎಂದರೆ ಅಲೌಕಿಕ ಶಕ್ತಿಯನ್ನು ಸೂಚಿಸುತ್ತದೆ. ಲಿಂಗವನ್ನು ಸಾಮಾನ್ಯವಾಗಿ ವೃತ್ತಾಕಾರದ ರಚನೆಯ ಮೇಲೆ ಇಡಲಾಗುತ್ತದೆ. ಇದನ್ನು 'ಯೋನಿ' ಎಂದು ಕರೆಯಲಾಗುತ್ತದೆ. 'ಯೋನಿ' ಹೆಣ್ಣಿನ ಸೃಷ್ಟಿಕ್ರಿಯೆಯ ಶಕ್ತಿಗೆ ಸಂಕೇತವಾಗಿದೆ ಅಥವ ಇದನ್ನು ಪ್ರಕೃತಿ ಎಂದು ಕರೆಯಬಹುದು. ಲಿಂಗ ಮತ್ತು ಯೋನಿಗಳು ಸೃಷ್ಟಿ ಕ್ರಿಯೆಗೆ ಅತ್ಯವಶ್ಯಕವಾದ ಗಂಡು ಮತ್ತು ಹೆಣ್ಣಿನ ಶಕ್ತಿಯನ್ನು ಸೂಚಿಸುತ್ತದೆ.
ಬನ್ನಿ ಶಿವ ಲಿಂಗದ ಮಹತ್ವದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ:

ಮೂಲ
ಅಥರ್ವಣ ವೇದ ಮತ್ತು ಶಿವ ಪುರಾಣದ ಪ್ರಕಾರ ವಿಶ್ವದಲ್ಲಿ ಅಂಧಕಾರ ತುಂಬಿದ್ದಾಗ ಅಲ್ಲಿದ್ದದ್ದು ಉರಿಯುತ್ತಿದ್ದ ಅಂತ್ಯವಿಲ್ಲದ ಕಂಭವೊಂದು ಮಾತ್ರ. ಈ ಕಂಬವೇ 'ಪುರುಷ' ಅಥವ ಪುರುಷ ಶಕ್ತಿ ಇದೇ ಶಿವ. ಆದ್ದರಿಂದಲೇ ಶಿವ ಅಥವ ಈ ಪುರುಷ ಶಕ್ತಿಯನ್ನು 'ಲಿಂಗ' ರೂಪದಲ್ಲಿ ಆರಾಧಿಸಲಾಗುತ್ತದೆ.

ಶಿವನ ಸಂಕೇತ
ಲಿಂಗವು ಶಿವನ ಸಂಕೇತ. ಇದು ದೇವರ ನಿರಾಕಾರ ಸ್ವರೂಪವನ್ನು ಸಂಕೇತಿಸುತ್ತದೆ. ಇದು ಪ್ರಕೃತಿಯ ನಿರಾಕಾರ ತತ್ವವನ್ನು ಸೂಚಿಸುತ್ತದೆ ಮತ್ತು ಮೌನದ ಮೂಲಕ ಮಾತಾಡುತ್ತದೆ. ಶಿವನನ್ನು ಪೂರ್ಣಸ್ವರೂಪಿ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಲಿಂಗವು ವಿಶ್ವವು ಅಂಡಾಣು ರೂಪದಲ್ಲಿ ಅಂದರೆ ವಿಶ್ವವು ಮೊಟ್ಟೆಯ ರೂಪದಲ್ಲಿರುವುದನ್ನು ಸೂಚಿಸುತ್ತದೆ.

ಮೂರು ಭಾಗಗಳು
ಶಿವ ಲಿಂಗದಲ್ಲಿ ಮೂರು ಭಾಗಗಳಿವೆ. ಕೆಳಗಿನ ಭಾಗವನ್ನು 'ಬ್ರಹ್ಮ ಪೀಠ' ಎಂದು ಕರೆಯಲಾಗುತ್ತದೆ, ಮಧ್ಯಭಾಗವನ್ನು 'ವಿಷ್ಣು ಪೀಠ' ಎಂದೂ, ಮೇಲ್ಭಾಗವನ್ನು 'ಶಿವ ಪೀಠ'ವೆಂದು ಕರೆಯಲಾಗುತ್ತದೆ.

ಸ್ಪಟಿಕ ಲಿಂಗ
ಸ್ಪಟಿಕ ಲಿಂಗವನ್ನು ಪೂಜಿಸುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಏಕೆಂದರೆ ಇದಕ್ಕೆ ಬಣ್ಣವಿರುವುದಿಲ್ಲ. ಇದು ತನ್ನ ಸಂಪರ್ಕಕ್ಕೆ ಬಂದ ಯಾವುದೇ ವಸ್ತುವಿನ ಬಣ್ಣವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ 'ನಿರ್ಗುಣ ಬ್ರಹ್ಮ' ತತ್ವವನ್ನು ಪ್ರತಿಪಾದಿಸುತ್ತದೆ. ಇದು ನಿರಾಕಾರ ಶಿವ ತತ್ವದ ಗುಣ.

ಲಿಂಗದ ಮಹತ್ವ
ಶಿವ ಲಿಂಗದಲ್ಲಿ ಹೇಳಲಾಗದ ಹಲವು ನಿಗೂಢ ಅಲೌಕಿಕ ಶಕ್ತಿಗಳಿವೆ. ಶಿವ ಮತ್ತು ಶಕ್ತಿಯರ ಮಿಲನದಿಂದಾಗಿ ಇದರಲ್ಲಿ ಅದ್ಭುತ ಶಕ್ತಿಗಳು ಅಡಕವಾಗಿದೆ. ಇದು ಮನಸ್ಸಿನ ಗಮನಕೇಂದ್ರಿಕರಿಸುವ ಶಕ್ತಿಯನ್ನು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೇವಲ ಕಲ್ಲಲ್ಲ. ಭಕ್ತ ತನ್ನೆಲ್ಲ ಪ್ರಜ್ಞೆಯೊಂದಿಗೆ ಆದಿಭೌತಿಕ ಶಕ್ತಿಯೊಂದಿಗೆ ಅಥವ ದೇವರೊಂದಿಗೆ ನೇರ ಸಂಬಂಧವನ್ನು ಹೊಂದುವ ಒಂದು ಮಾಧ್ಯಮ.



Click it and Unblock the Notifications
