Latest Updates
-
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ?
ಶ್ರಾವಣ ಸೋಮವಾರ ಉಪವಾಸದ ವೇಳೆ ಸೇವಿಸಬಹುದಾದ ಮತ್ತು ಸೇವಿಸಲೇಬಾರದ ಆಹಾರಗಳು
ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಶ್ರಾವಣಮಾಸದ ಸೋಮವಾರದಂದು ಉಪವಾಸ ಮಾಡುವುದು ಸರ್ವಶ್ರೇಷ್ಠ ಎನ್ನಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ, ಶಿವ ಮತ್ತು ಪಾರ್ವತಿಯನ್ನು ಹೆಚ್ಚು ಆರಾಧಿಸುವ ಈ ಮಾಸದಲ್ಲಿ ಇವರ ಕೃಪೆಗೆ ಪಾತ್ರರಾಗಲು ಉಪವಾಸ ಮಾಡುವುದು ವಾಡಿಕೆ.
2021ನೇ ಸಾಲಿನಲ್ಲಿ ಆಗಸ್ಟ್ 9ರಿಂದ ಸೆಪ್ಟೆಂಬರ್ 7ರವರೆಗೆ ಶ್ರಾವಣ ಮಾಸ ಇರಲಿದೆ. ಶ್ರಾವಣ ಮಾಸದಲ್ಲಿ ಉಪವಾದ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಹುದು, ಯಾವ ಆಹಾರಗಳನ್ನು ಸೇವಿಸಲೇಬಾರದು ಎಂಬ ಗೊಂದಲ ಕೆಲವರಿಗೆ ಇರುವುದು ಸಹಜ.
ನಾವಿಂದು ಈ ಲೇಖನದಲ್ಲಿ ಶ್ರಾವಣ ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಹಾಗೂ ಸೇವಿಸಲೇಬಾರದ ಆಹಾರಗಳ ಪಟ್ಟಿಯನ್ನು ನಿಮಗೆ ನೀಡಲಿದ್ದೇವೆ:

ಶ್ರಾವಣ ಸೋಮವಾರ ಸೇವಿಸಬಹುದಾದ ಆಹಾರಗಳು
ಹಣ್ಣು-ಹಾಲಿನ ಪದಾರ್ಥ
* ಉಪವಾಸದ ಸಮಯದಲ್ಲಿ ಫಲಹಾರ, ಅಂದರೆ ಅಕ್ಷರಶಃ ಹಣ್ಣುಗಳ ಸೇವನೆ ಎಂದರ್ಥ. ಹಣ್ಣಿನ ಜ್ಯೂಸ್, ಎಳನೀರು, ನೀರಿನ ಸೇವನೆ ಹೆಚ್ಚು ಮಾಡುವುದು ಉತ್ತಮ.
* ಹಾಲು ಮತ್ತು ಅದರ ಸಂಬಂಧಿತ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಕಾಟೇಜ್ ಚೀಸ್ ಅಥವಾ ಪನೀರ್, ಮನೆಯಲ್ಲಿ ತಯಾರಿಸಿದ ಬೆಣ್ಣೆ (ಯಾವುದೇ ಉಪ್ಪು ಇಲ್ಲದೆ) ಮತ್ತು ತುಪ್ಪ ಸೇವಿಸಬಹುದು.

ತರಕಾರಿ-ಕಾಳುಗಳು
* ಉಪವಾಸ ಮಾಡುವ ವ್ಯಕ್ತಿಯು ಸಿಹಿಗೆಣಸು, ಕೊಲೊಕೇಶಿಯ, ಸೋರೆಕಾಯಿ, ಆಲೂಗಡ್ಡೆಗಳಂತಹ ಕೆಲವು ತರಕಾರಿಗಳನ್ನು ಕೂಡ ತಿನ್ನಬಹುದು.
* ಸಬುದಾನಿ ಅಥವಾ ಸಬ್ಬಕ್ಕಿಯಿಂದ ತಯಾರಿಸಿದ ಎಲ್ಲಾ ಖಾದ್ಯಗಳು, ರಾಜಗೀರ, ಗೆಣಸು, ಕಮಲದ ಹೂವಿನ ಬೀಜ (ಮಕಾನ್), ಮತ್ತು ಹುರುಳಿ ಸೇವಿಸಬಹುದು

ಈ ಮಸಾಲೆ ಪದಾರ್ಥ ಮಾತ್ರ ಸೇವನೆಗೆ ಅರ್ಹ
* ಈ ಸಮಯದಲ್ಲಿ ಎಲ್ಲಾ ರೀತಿಯ ಮಸಾಲೆಗಳನ್ನು ತಪ್ಪಿಸಬೇಕು; ಆದಾಗ್ಯೂ ನೀವು ಕರಿಮೆಣಸು, ಕೊತ್ತಂಬರಿ, ಹಸಿರು ಮೆಣಸಿನಕಾಯಿ, ಒಣಗಿದ ಶುಂಠಿ, ಲವಂಗ, ಏಲಕ್ಕಿ ಮತ್ತು ಜೀರಿಗೆಯನ್ನು ಸೇವಿಸಬಹುದು.
* ನಿಂಬೆಹಣ್ಣು, ಒಣ ಹಣ್ಣುಗಳು (ಡ್ರೈ ಫ್ರೂಟ್ಸ್) ಮತ್ತು ಸಕ್ಕರೆ, ಕಲ್ಲು ಸಕ್ಕರೆ, ತೆಂಗಿನಕಾಯಿ ಮತ್ತು ಕಡಲೆಕಾಯಿಯನ್ನು ಸಹ ಸೇವಿಸಬಹುದು.

ಶ್ರಾವಣ ಸೋಮವಾರ ಸೇವಿಸಬಾರದ ಆಹಾರಗಳು
ಅಕ್ಕಿ-ತಾಮಸಿ ಪದಾರ್ಥ
* ಉಪವಾಸದ ಸಮಯದಲ್ಲಿ, ಯಾವುದೇ ರೀತಿಯ ಧಾನ್ಯಗಳು, ಅಕ್ಕಿ ಮತ್ತು ಬೇಳೆಗಳನ್ನು ಸೇವಿಸಬಾರದು, ಏಕೆಂದರೆ ಅವುಗಳನ್ನು 'ಅನ್ನ' ಎಂದು ಪರಿಗಣಿಸಲಾಗುತ್ತದೆ.
* ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿಯಂತಹ ಕೆಲವು ತರಕಾರಿಗಳನ್ನು ಬಿಸಿ ಅಥವಾ ತಾಮಸಿ ಆಹಾರ ಎಂದು ತಿಳಿದಿರುವುದರಿಂದ ಅವುಗಳನ್ನು ತಪ್ಪಿಸಬೇಕು.
* ಇಂಗು ಮುಂತಾದ ಮಸಾಲೆಗಳು, ಕಲ್ಲಿನ ಉಪ್ಪು, ಕೆಂಪು ಮೆಣಸಿನಕಾಯಿ, ಮೆಂತ್ಯ, ಅರಿಶಿನ ಮತ್ತು ಎಲ್ಲಾ ರೀತಿಯ ಉಪ್ಪನ್ನು ತಪ್ಪಿಸಬೇಕು.
* ಕೆಲವರು ಉಪವಾಸ ಮಾಡುವಾಗ ಬೆಲ್ಲವನ್ನು ಸಹ ತಪ್ಪಿಸಬಹುದು ಎನ್ನುತ್ತಾರೆ.

ಮಾಂಸಾಹಾರಿ ಸೇವನೆ
* ಶಾಖಾಹಾರಿ ಅಂದರೆ, ಚಿಕನ್, ಮಟನ್, ಮೀನು, ಮೊಟ್ಟೆಯಂಥ ಆಹಾರಗಳನ್ನು ಉಪವಾಸದ ವೇಳೇ ಸೇವಿಸಬಾರದು.
* ಯಾವುದೇ ರೀತಿಯ ಬದನೆಕಾಯಿಯನ್ನು ಸೇವಿಸಬಾರದು.
* ಹಸಿರು ಸೊಪ್ಪಿನ ಪದಾರ್ಥಗಳನ್ನು ಸೇವಿಸಬಾರದು.
* ಧೂಮಪಾನ, ಮಧ್ಯಾಪಾನ ಶ್ರಾವಣ ಉಪವಾಸದ ಸಮಯದಲ್ಲಿ ಕಟ್ಟಾಯ ನಿಷಿದ್ಧ.



Click it and Unblock the Notifications