ಕಾಳಿ ದೇವಿ ಬಗ್ಗೆ ಈವರೆಗೂ ಕೇಳಿಲ್ಲದ ಅಚ್ಚರಿಯ ರಹಸ್ಯಗಳು

ಕಾಳಿ ದೇವತೆಯು ಅತ್ಯಂತ ಶಕ್ತಿಯನ್ನು ಹೊಂದಿರುವ ತಾಯಿ. ದುಷ್ಟ ಶಕ್ತಿಯ ನಿಗ್ರಹ ಹಾಗೂ ಸಾಧುಗಳ ಪೋಷಣೆಗಾಗಿ ಅವತರಿಸಿ ಬಂದ ದೇವತೆ ಕಾಳಿ. ಕಾಳಿಯ ರೂಪವು ಭಯಂಕರವಾಗಿದ್ದರೂ ತನ್ನ ಭಕ್ತರ ವಿಷಯದಲ್ಲಿ ಬಹಳ ಮೃದು ಸ್ವಭಾವದವಳು. ಹಿಂದೂ ದೇವತೆಗಳಲ್ಲಿ ಕಾಳಿ ದೇವಿಯು ಅತ್ಯಂತ ಪವಿತ್ರಳು. ದೇವಿಯ ಆರಾಧನೆಗಾಗಿ ಭಾರತದಾದ್ಯಂತ ಕಾಳಿ ದೇವಿಯ ದೇವಸ್ಥಾನ ಇರುವುದನ್ನು ಕಾಣಬಹುದು. ದೇವಿಯ ಆಶೀರ್ವಾದ ಹಾಗೂ ಕೃಪೆಗೆ ಒಳಗಾಗಲು ವಿಶೇಷ ಆರಾಧನೆ ಹಾಗೂ ಉಪವಾಸ ವ್ರತಗಳನ್ನು ಭಕ್ತರು ಕೈಗೊಳ್ಳುತ್ತಾರೆ.

ಕಾಳಿ ದಿ ಮದರ್

ಕಾಳಿ ದಿ ಮದರ್

ದೇವಿಯ ಮಹಿಮೆ ಹಾಗೂ ಶಕ್ತಿಯ ಕುರಿತು ಸಾಕಷ್ಟು ಪುರಾಣ ಇತಿಹಾಸಗಳಿವೆ. ಸ್ವಾಮಿ ವಿವೇಕಾನಂದರು ತಮ್ಮ ನೆಚ್ಚಿನ ದೇವತೆಯ ಕುರಿತು 1898ರಲ್ಲಿ "ಕಾಳಿ ದಿ ಮದರ್" ಎನ್ನುವ ಪದ್ಯವನ್ನು ಬರೆದಿದ್ದರು. ಅದರಲ್ಲಿ ಇರುವ ಕೆಲವು ಸಂಗತಿಗಳು ಅತ್ಯಂತ ಆಸಕ್ತಿದಾಯಕ ವಿಚಾರಗಳಿಂದ ಕೂಡಿವೆ. ಇದು ಕಾಳಿ ದೇವಿಯ ಭಕ್ತರಿಗೆ ವಿಶೇಷ ಬಗೆಯ ಸಂಗತಿಗಳನ್ನು ತೆರೆದಿಡುವುದು. ಕಾಳಿ ದೇವಿಯು ಉಗ್ರ ರೂಪ ಹಾಗೂ ಮಹಾನ್ ಶಕ್ತಿ ದೇವತೆ ಎನ್ನುವುದನ್ನು ಬಿಟ್ಟರೆ ಬಹುತೇಕ ಮಂದಿ ದೇವಿಯ ವಿಶೇಷ ರೂಪ, ಮಹಿಮೆ ಹಾಗೂ ವಿಚಾರಗಳನ್ನು ತಿಳಿದಿಲ್ಲ.

ಕಾಳಿ ದೇವಿಯ ಎರಡು ರೂಪ

ಕಾಳಿ ದೇವಿಯ ಎರಡು ರೂಪ

ಕಾಳಿ ದೇವಿಯನ್ನು ಸಾಮಾನ್ಯವಾಗಿ ಎರಡು ರೂಪದಲ್ಲಿ ಚಿತ್ರಿಸಲಾಗುತ್ತದೆ. ಒಂದು ರೂಪದಲ್ಲಿ ದೇವಿಯು ನಾಲ್ಕು ಕೈಗಳು ಹಾಗೂ ವಿಶೇಷವಾದ ನಾಲ್ಕು ಶಸ್ತ್ರಗಳನ್ನು ಹಿಡಿದು ನಿಂತಿರುವುದು, ಇನ್ನೊಂದು ರೂಪದಲ್ಲಿ ಹತ್ತು ಕೈಗಳು, ಪ್ರತಿಯೊಂದು ಕೈಗಳಲ್ಲೂ ವಿವಿಧ ಶಸ್ತ್ರಗಳನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಅವಳ ಮೈ ಬಣ್ಣ ಕಪ್ಪು ಅಥವಾ ನೀಲಿ ಬಣ್ಣದಲ್ಲಿ ಚಿತ್ರಿಸಲಾಗುತ್ತದೆ. ದೇವಿಯ ಕಣ್ಣುಗಳು ಮಾದಕತೆಯೊಂದಿಗೆ ಕೆಂಪು ಬಣ್ಣದಿಂದ ಕೂಡಿರುತ್ತದೆ. ಸಂಪೂರ್ಣವಾಗಿ ಕೋಪಗೊಂಡಿರುವ ಮುಖದ ಚಿತ್ರ, ಕೂದಲುಗಳು ಕಳಂಕಿತವಾಗಿ ಶೋಭಿಸುತ್ತಿರುತ್ತವೆ. ಸಣ್ಣ ಕೋರೆ ಹಲ್ಲುಗಳು ಬಾಯಿಯಿಂದ ಹೊರಗೆ ಚಾಚಿಕೊಂಡಿರುವಂತೆ ಹಾಗೂ ನಾಲಿಗೆಯನ್ನು ಹೊರಗೆ ಚಾಚಿಕೊಂಡು ಉಬ್ಬಿರುವ ವಿನ್ಯಾಸವನ್ನು ತೋರಿಸುವರು.

ದೇವಿಯ ಬೆತ್ತಲ ರೂಪ

ದೇವಿಯ ಬೆತ್ತಲ ರೂಪ

ಅವಳನ್ನು ಬಹುತೇಕ ಚಿತ್ರದಲ್ಲಿ ಬೆತ್ತಲೆಯ ರೂಪದಲ್ಲಿ ಇರುವಂತೆ ತೋರಿಸಲಾಗುವುದು. ರಾಕ್ಷಸರನ್ನು ಸಂಹರಿಸಿರುವ ತೋಳುಗಳ ಮಾಲೆಯನ್ನೇ ತನ್ನ ಸೊಂಟದ ಭಾಗದಲ್ಲಿ ಸ್ಕರ್ಟ್ ರೂಪದಲ್ಲಿ ಧರಿಸಿರುತ್ತಾಳೆ. ಇವಳು ಅತಿಯಾಗಿ ಸಿಟ್ಟಿಗೆ ಒಳಗಾಗಿದ್ದಾಗ ಅವಳನ್ನು ಅವಳಿಗೇ ನಿಯಂತ್ರಿಸಿಕೊಳ್ಳಲು ಕಷ್ಟವಾಗುವುದು.

ಕಾಳಿ ಶಿವನ ಮೇಲೆ ನಿಂತಿರುವ ಚಿತ್ರಣ

ಕಾಳಿ ಶಿವನ ಮೇಲೆ ನಿಂತಿರುವ ಚಿತ್ರಣ

ಕಾಳಿ ದೇವಿ ಮತ್ತು ಶಿವನ ರೂಪವು ಬ್ರಹ್ಮಾಂಡದಲ್ಲಿ ಸಂಪೂರ್ಣವಾಗಿ ಶುದ್ಧ ಪ್ರಜ್ಞೆಯನ್ನು ಒಳಗೊಂಡಿದೆ. ಕಾಳಿ ದೇವಿಯ ಎಲ್ಲಾ ಹೆಸರುಗಳು ಹಾಗೂ ರೂಪಗಳು ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಕಾಳಿ ದೇವಿಯು ಸಿಟ್ಟಿಗೆ ಒಳಗಾದಾಗ ಅಥವಾ ಉಗ್ರ ರೂಪವನ್ನು ತಾಳಿದಾಗ ಅವಳಲ್ಲಿ ಯಾವುದೇ ನಿಯಂತ್ರಣ ಇರುವುದಿಲ್ಲ. ಆ ಸಂದರ್ಭದಲ್ಲಿ ಅವಳನ್ನು ನಿಯಂತ್ರಿಸಲು ಅಥವಾ ತಣ್ಣಗಾಗಿಸಲು ಅವಳ ಹಾದಿಯಲ್ಲಿ ಶಿವನು ಅಡ್ಡ ಮಲಗುತ್ತಾನೆ. ಅವಳ ಕಾಲುಗಳು ಶಿವನನ್ನು ಸ್ಪರ್ಶಿಸಿದಾಗ ಕೋಪವು ನಿಯಂತ್ರಣಕ್ಕೆ ಬರುವುದು. ಆಗ ಕಾಳಿ ದೇವಿ ಶಾಂತಳಾಗುತ್ತಾಳೆ ಎಂದು ಹೇಳಲಾಗುವುದು.

ಅವಳ ಭಯಾನಕ ರೂಪ

ಅವಳ ಭಯಾನಕ ರೂಪ

ಕಾಳಿ ದೇವಿಯು ಎಡಗಾಲನ್ನು ಮುಂದೆ ಇಟ್ಟು, ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವ ರೂಪವು ಅವಳ ಭಯಾನಕ ರೂಪ ಎನ್ನಲಾಗುತ್ತದೆ. ಶವಸಂಸ್ಕಾರದ ಮೈದಾನಗಳಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುವುದು. ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ದೇವಿ ದಕ್ಷಿಣೇಶ್ವರದಲ್ಲಿ ಸ್ಮಶಾನದ ಕಾಳಿಯನ್ನು ಪೂಜಿಸಿದ್ದರು.

ಶಸ್ತ್ರ ಸಜ್ಜಿತ ಕಾಳಿ

ಶಸ್ತ್ರ ಸಜ್ಜಿತ ಕಾಳಿ

ಮಹಾ ಕಾಳಿಯು ಹತ್ತು ಕೈಗಳಲ್ಲಿ ಹತ್ತು ಬಗೆಯ ಶಸ್ತ್ರಗಳನ್ನು ಹಿಡಿದು ನಿಂತಿರುತ್ತಾಳೆ. ಇವಳು ಹತ್ತು ಮುಖ ಮತ್ತು ಹತ್ತು ಪಾದಗಳನ್ನು ಹೊಂದಿರುತ್ತಾಳೆ. ಮೂರು ಕಣ್ಣುಗಳನ್ನು ಹೊಂದಿರುವ ತಾಯಿಯ ದೇಹದಲ್ಲಿ ಎಲ್ಲಾ ಅಂಗಗಳ ಮೇಲೂ ಆಭರಣಗಳ ಅಲಂಕಾರವನ್ನು ಮಾಡಲಾಗಿರುತ್ತದೆ. ಈ ರೂಪದಲ್ಲಿ ಶಿವನೊಂದಿಗೆ ಯಾವುದೇ ಸಂಬಂಧವಿಲ್ಲ.

ಗಾಢ ಬಣ್ಣದ ದೇವತೆ

ಗಾಢ ಬಣ್ಣದ ದೇವತೆ

ಕಾಳಿ ದೇವಿಯು ಪುರಾಣ ಕಥೆಯ ಪ್ರಕಾರ ಗಾಢವಾದ ಮೈಬಣ್ಣದಿಂದ ಸಂಪೂರ್ಣವಾಗಿ ಸುಂದರಿಯಾಗಿರುತ್ತಾಳೆ. ದೇವಿಯು ಸಿಂಹದ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಿರುತ್ತಾಳೆ. ನಾಲ್ಕು ಕೈಗಳಲ್ಲಿ ಶಸ್ತ್ರಗಳನ್ನು ಮತ್ತು ನೀಲಿ ಕಮಲವನ್ನು ಹಿಡಿದಿರುತ್ತಾಳೆ. ದಟ್ಟವಾದ ಅವಳ ಕೂದಲು ಅನಿಯಂತ್ರಿತವಾಗಿರುತ್ತದೆ. ದೃಢ ಹಾಗೂ ಮೌನದ ಚಿತ್ರವು ದೇವಿಯನ್ನು ಕಂಗೊಳಿಸುವಂತೆ ಮಾಡುವುದು.

ದೇವಿ ಕರುಣಾಮಯಿ

ದೇವಿ ಕರುಣಾಮಯಿ

ಭಯಾನಕ ರೂಪದ ಹೊರತಾಗಿಯೂ ದೇವಿಯು ಅತ್ಯಂತ ಕರುಣಾಮಯಿ. ತನ್ನ ಭಕ್ತರನ್ನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಾಳೆ. ಭಕ್ತರು ಕಾಳಿ ದೇವಿಯನ್ನು ಬ್ರಹ್ಮಾಂಡದ ಮಾತೆ ಎಂದು ಕರೆಯುತ್ತಾರೆ. ಬಂಗಾಳಿ ಸಂತ ರಾಮಕೃಷ್ಣರು ಭಕ್ತರೊಬ್ಬರ ಬಳಿ ಭಕ್ತನೊಬ್ಬ ಕಾಳಿ ದೇವಿಯನ್ನು ಏಕೆ ಪೂಜಿಸುತ್ತೀರಿ ಎಂದು ಕೇಳಿದರು. ಆಗ ಅವರು "ಪ್ರಜೆಗಳು ಕಷ್ಟದಲ್ಲಿ ಇರುವಾಗ ತನ್ನ ದೊರೆಯ ಬಳಿ ಓಡೋಡಿ ಬರುತ್ತಾರೆ. ಹಾಗೆಯೇ ಭಕ್ತರು ತೊಂದರೆಯಲ್ಲಿ ಇರುವಾಗ ತನ್ನ ತಾಯಿ/ ದೇವತೆಯ ಕಡೆಗೆ ಓಡೋಡಿ ಬರುತ್ತಾರೆ. ಕಾಳಿ ದೇವಿ ಅಖಂಡ ಸಚ್ಚಿದಾನಂದ. ನಕ್ಷತ್ರದೊಂದಿಗೆ ಇರುವ ಆಕಾಶವು ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಅಂತೆಯೇ ಸಮುದ್ರದ ನೀರು ಎಲ್ಲವೂ ಒಂದೇ. ಆದರೆ ಆಳಕ್ಕೆ ಹೋದಂತೆ ಸಂಪೂರ್ಣವಾಗಿ ಕತ್ತಲಾಗಿರುತ್ತದೆ. ಈ ಕತ್ತಲನ್ನು ಪ್ರಚೋದಿಸುವವಳು ನನ್ನ ತಾಯಿ ಕಾಳಿ" ಎಂದು ಹೇಳಿದರು.

ಕಾಳಿ ದೇವಿಯ ಶಸ್ತ್ರಾಸ್ತ್ರಗಳು

ಕಾಳಿ ದೇವಿಯ ಶಸ್ತ್ರಾಸ್ತ್ರಗಳು

ಕಾಳಿ ದೇವಿಯು ತನ್ನ ಪ್ರತಿಯೊಂದು ಕೈಗಳಲ್ಲೂ ವಿಶೇಷವಾದ ಶಸ್ತ್ರಾಸ್ತ್ರವನ್ನು ಹಿಡಿದಿಡುವುದನ್ನು ನೋಡಬಹುದು. ಕತ್ತಿ, ತ್ರಿಶೂಲ, ಕತ್ತರಿಸಿದ ತಲೆ, ಬೌಲ್/ ಕಪಾಲವನ್ನು ಹಿಡಿದಿರುತ್ತಾಳೆ. ಖಡ್ಗವು ದೈವಿಕ ಜ್ಞಾನವನ್ನು ಸೂಚಿಸುತ್ತದೆ. ಮಾನವನ ತಲೆಯು ಅಹಂಕಾರದ ನಾಶವನ್ನು ತೋರಿಸುವುದು. ಜೊತೆಗೆ ಮೋಕ್ಷವನ್ನು ಪಡೆಯಲು ದೈವಿಕ ಜ್ಞಾನವನ್ನು ಪಡೆಯಬೇಕು ಎನ್ನುವುದನ್ನು ತಿಳಿಸುತ್ತದೆ. ಇನ್ನೆರಡು ಕೈಗಳು ಅಭಯ ಮತ್ತು ಆರ್ಶೀರ್ವಾದದ ಮುದ್ರೆಯನ್ನು ಸೂಚಿಸುತ್ತದೆ.

ಕಾಳಿ ದೇವಿಯ ರುಂಡಗಳ ಮಾಲೆ

ಕಾಳಿ ದೇವಿಯ ರುಂಡಗಳ ಮಾಲೆ

ಕಾಳಿ ದೇವಿಯ ಕತ್ತಿನಲ್ಲಿ ತಲೆ ಬುರುಡೆಗಳ ಹಾರ ಇರುವುದನ್ನು ಕಾಣಬಹುದು. ಅದು 108 ಅಥವಾ 51 ಸಂಖ್ಯೆಗಳನ್ನು ಒಳಗೊಂಡಿದೆ. 108 ಹಿಂದೂ ಧರ್ಮದಲ್ಲಿ ಶುಭ ಸಂಖ್ಯೆ. ಜಪಮಾಲೆ ಎಣಿಸುವುದು 108 ಬಾರಿ. ದೇವತೆಗಳ ವಿವಿಧ ಹೆಸರುಗಳು ಸಹ 108 ಇರುತ್ತವೆ. 51ರ ಸಂಖ್ಯೆಯು ವರ್ಣಮಾಲೆಯನ್ನು ಪ್ರತಿನಿಧಿಸುತ್ತದೆ. ಸಂಸ್ಕೃತದ ವರ್ಣಮಾಲೆ, ದೇವನಾಗರಿ ಭಾಷೆಗಳಲ್ಲಿ 51 ಅಕ್ಷರ ಇರುವುದನ್ನು ಕಾಣಬಹುದು. ಸಂಸ್ಕೃತವು ಹಿಂದೂಗಳ ಚಲನಶೀಲತೆಯ ಭಾಷೆ ಎಂದು ಕರೆಯುವರು. ಇದರ ಪ್ರತಿಯೊಂದು ಅಕ್ಷರವೂ ಶಕ್ತಿ ಅಥವಾ ಕಾಳಿಯ ಒಂದು ರೂಪ ಎಂದು ನಂಬಲಾಗಿದೆ. ಹಾಗಾಗಿ ಕಾಳಿ ದೇವಿಯನ್ನು ಭಾಷೆ ಹಾಗೂ ಮಂತ್ರಗಳ ರೂಪ ಎಂದು ಕರೆಯುತ್ತಾರೆ.

ಬ್ರಹ್ಮಾಂಡ ಕೊನೆಗೊಂಡರೂ ದೇವಿ ಅಸ್ತಿತ್ವ

ಬ್ರಹ್ಮಾಂಡ ಕೊನೆಗೊಂಡರೂ ದೇವಿ ಅಸ್ತಿತ್ವ

ಕಾಳಿ ದೇವಿಯನ್ನು ಸಾಮಾನ್ಯವಾಗಿ ಬೆತ್ತಲೆಯ ರೂಪದಲ್ಲಿ ಚಿತ್ರಿಸಲಾಗುವುದು. ಇದು ಮಾಯಾ ಶಕ್ತಿ ಮೀರಿರುವುದನ್ನು ಸೂಚಿಸುತ್ತದೆ. ಇವಳು ಶುದ್ಧ ಮತ್ತು ಆನಂದ ಪ್ರಜ್ಞೆಯನ್ನು ಹೊಂದಿದ್ದಾಳೆ. ಇವಳು ಬ್ರಾಹ್ಮಣಳಾಗಿರುವುದರಿಂದ ಅತ್ಯಂತ ಕಪ್ಪಾಗಿ ತೋರಿಸಲಾಗುವುದು. ಇವಳಲ್ಲಿ ಯಾವುದೂ ಶಾಸ್ವತ ಗುಣಗಳಿಲ್ಲ್. ಬ್ರಹ್ಮಾಂಡ ಕೊನೆಗೊಂಡಾಗಲೂ ಕಾಳಿ ದೇವಿ ಅಸ್ತಿತ್ವದಲ್ಲಿ ಇರುತ್ತಾಳೆ ಎನ್ನುವ ನಂಬಿಕೆಯಿದೆ. ಹಾಗಾಗಿ ದೇವಿಗೆ ಬಣ್ಣ, ಬೆಳಕು, ಒಳ್ಳೆಯದ್ದು, ಕೆಟ್ಟದ್ದು ಎನ್ನುವ ಪರಿಕಲ್ಪನೆಗಳು ಯಾವುದೂ ಅವಳಿಗೆ ಸಂಬಂಧಿಸುವುದಿಲ್ಲ. ಅವಳು ಶುದ್ಧ, ಅಘೋಷಿತಳಾದ ಆದಿ ಶಕ್ತಿ ಎಂದು ಪರಿಗಣಿಸಲಾಗುತ್ತದೆ.

ತಿರುವಲಂಗಡು ಕಾಡಿನಲ್ಲಿ ವಾಸಿಸಿದ ಕಾಳಿ

ತಿರುವಲಂಗಡು ಕಾಡಿನಲ್ಲಿ ವಾಸಿಸಿದ ಕಾಳಿ

ದಕ್ಷಿಣ ಭಾರತದ ಕೆಲವು ಸಂಪ್ರದಾಯದ ಕಥೆಗಳು ಶಿವ ಮತ್ತು ಕಾಳಿಯ ನೃತ್ಯ ಕತೆಯನ್ನು ಹೇಳುತ್ತವೆ. ಸುಮಭ ಮತ್ತು ನಿಸುಂಬಾ ಎನ್ನುವ ರಾಕ್ಷಸರನ್ನು ಸೋಲಿಸಿದ ನಂತರ ಕಾಳಿ ದೇವಿಯು ತಿರುವಲಂಕಡು ಅಥವಾ ತಿರುವಲಂಗಡು ಎನ್ನುವ ಕಾಡಿಗೆ ತೆರಳಿದಳು. ನಂತರದ ದಿನದಲ್ಲಿ ಅಲ್ಲಿಯೇ ವಾಸ ಮಾಡಿದಳು ಎನ್ನುವ ಕಥೆಯಿದೆ.

English summary

Shocking secrets of Goddess Kali

A TIME magazine article of October 27, 1947, used Kali as a symbol and metaphor for the human suffering in British India during its partition that year. Swami Vivekananda wrote his favorite poem Kali the Mother in 1898. Title has been given since some of these facts may be shocking for someone, soothing for devotees and interesting for others. Some of these facts may be known to someone but unknown to other.
X
Desktop Bottom Promotion