Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ವಿವಾದದ ಕಿಡಿಯನ್ನು ಹೊತ್ತಿಸಿರುವ ಯೇಸು ಕ್ರಿಸ್ತನ ವಿವಾಹ ರಹಸ್ಯ!
2003ರಲ್ಲಿ ಯಾವಾಗ ಕಾದಂಬರಿಕಾರ ಡಾನ್ ಬ್ರೌನ್ ತನ್ನ ಅತ್ಯಂತ ವಿವಾದಾತ್ಮಕವಾದ ಕಾದಂಬರಿಯಾದ ದ ಡಾ ವಿನ್ಸಿ ಕೋಡ್ ಬಿಡುಗಡೆ ಮಾಡಿದನೊ, ಆಗ ಇಡೀ ವಿಶ್ವವೇ ಬೆರಗಿನಿಂದ ಶಾಕ್ ಆಗಿ ಹೋಯಿತು. ಏಕೆಂದರೆ ಈ ಪುಸ್ತಕವು ಕ್ರೈಸ್ರ ಧರ್ಮದ ಅತ್ಯಂತ ದೊಡ್ಡ ರಹಸ್ಯದ ಕುರಿತು ಚರ್ಚಿಸಲ್ಪಟ್ಟಿತ್ತು. ಈ ಪುಸ್ತಕವು ಯೇಸು ಕ್ರಿಸ್ತನು ಮೇರಿ ಮ್ಯಾಗ್ಡಲೀನ್ ಎಂಬಾಕೆಯನ್ನು ಮದುವೆಯಾಗಿದ್ದನು ಎಂದು ಹೇಳಿತ್ತು. ಈಕೆಯನ್ನು ಕ್ರೈಸ್ತ ಧರ್ಮದ ಇತಿಹಾಸದಾದ್ಯಂತ ಉಪಪತ್ನಿ ಎಂದು ಪರಿಗಣಿಸಿಕೊಂಡು ಬರಲಾಗಿದೆ.
ಇದರ ಜೊತೆಗೆ ಈ ಪುಸ್ತಕವು ಮೇರಿ ಮ್ಯಾಗ್ಡಲೀನ್ ಮತ್ತು ಯೇಸು ಕ್ರಿಸ್ತರಿಗೆ ಒಂದು ಮಗು ಸಹ ಆಗಿತ್ತು ಎಂದು ವಿವರಿಸಿತ್ತು. ಈ ಎಲ್ಲಾ ಹೇಳಿಕೆಗಳನ್ನು ಅಸತ್ಯ ಎಂದು ತಳ್ಳಿಹಾಕಲಾಗಿತ್ತು. ಆದರೆ ಬ್ರಿಟೀಷ್ ಲೈಬ್ರರಿಯ ಕಪಾಟುಗಳಿಂದ ಹೊರಬಿದ್ದ 1,500 ವರ್ಷಗಳ ಹಿಂದಿನ ಹಸ್ತಪ್ರತಿಯೊಂದು ಮತ್ತೊಮ್ಮೆ ಜಗತ್ತನ್ನು ತಲ್ಲಣಗೊಳಿಸಲು ಸಿದ್ಧವಾಗಿದೆ. ಪ್ರೊಫೆಸರ್ ಬ್ಯಾರಿ ವಿಲ್ಸನ್ ಮತ್ತು ಬರಹಗಾರ ಸಿಂಚ ಜಾಕೊಬೊವಿಕ್‍ರವರು ಅರಾಮೈಕ್ ಭಾಷೆಯಿಂದ ಇದನ್ನು ಭಾಷಾಂತರ ಮಾಡಲು ಸುಮಾರು ವರ್ಷಗಳನ್ನೆ ತೆಗೆದುಕೊಂಡಿದ್ದಾರೆ.

ಇದು ಯೇಸು ಕ್ರಿಸ್ತನ ಜೀವನದ ಕುರಿತಾದ ಕೆಲವೊಂದು ಅಘಾತಕಾರಿ ಸತ್ಯಗಳನ್ನು ಹೊರ ಹಾಕುತ್ತದೆ ಎಂದು ಹೇಳಲಾಗುತ್ತದೆ. ಇದು ಯೇಸು ಕ್ರಿಸ್ತನಿಗೆ ಮೇರಿ ಮ್ಯಾಗ್ಡಲೀನ್ ಜೊತೆಗೆ ಮದುವೆಯಾಗಿತ್ತು, ಅವರಿಗೆ ಇಬ್ಬರು ಮಕ್ಕಳಿದ್ದರು ಎಂದು ಹೇಳುತ್ತದೆ. ಈ ಪುಸ್ತಕದ ಹೆಸರನ್ನು ದಿ ಲಾಸ್ಟ್ ಗೋಸ್ಪೆಲ್ ಎಂದು ಇಡಲಾಗಿದೆ.
ಈ ಎಲ್ಲಾ ಹೇಳಿಕೆಗಳು ಸಂಪೂರ್ಣವಾಗಿ ಕ್ರಿ.ಶ.570 ರ ಅರಾಮೈಕ್ ಹಸ್ತಪ್ರತಿಗಳ ಆಧಾರ ಮೇಲೆ ನೀಡಲಾಗಿದೆ. ಬಹುಶಃ ಯೇಸು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನ್ ಈಜಿಪ್ಟಿನ ಫ್ಯಾರೋನ ಮೂಲಕ ಮದುವೆಯಾಗಿರಬಹುದು, ಅವರಿಗೆ ಈ ವಿವಾಹ ಸಂಬಂಧದಿಂದ ಹೊರಗೆ ಇಬ್ಬರು ಗಂಡು ಮಕ್ಕಳಿದ್ದರು. ಹೀಗೆ ಯೇಸು ಕ್ರಿಸ್ತನ ವೈವಾಹಿಕ ಸ್ಥಾನಮಾನದ ಬಗ್ಗೆ ಹೇಳಿಕೆಗಳು ಬರುತ್ತಿರುವುದು ಇದೇ ಮೊದಲೇನಲ್ಲ. ಬನ್ನಿ ಯೇಸು ಕ್ರಿಸ್ತನು ಮದುವೆಯಾಗಿದ್ದನೆ ಇಲ್ಲವೆ ಎಂಬುದರ ಕುರಿತಾಗಿ ಇತಿಹಾಸಕಾರರು ಏನು ಹೇಳುತ್ತಾರೋ, ಕೇಳೋಣ. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!
13ನೇ ಶತಮಾನದ ಸಿಸ್ಟೇರಿಕಲ್ ಸಂತ ಪೀಟರ್ ಆಫ್ ವಾಕ್ಸ್ ಡಿ ಸೆರ್ನಾಯ್ ಒಂದು ಹೇಳಿಕೆಯನ್ನು ನೀಡಿದ್ದನು. ಕ್ಯಾಥರಿಸ್ಟ್ ನಂಬಿಕೆಗಳ ಪ್ರಕಾರ ಯೇಸು ಕ್ರಿಸ್ತನು ಮೇರಿ ಮ್ಯಾಗ್ಡಲೀನ್ ಜೊತೆಗೆ ಒಂದು ಮಟ್ಟದ ಸಂಬಂಧವನ್ನು ಹೊಂದಿದ್ದನು. ಫ್ರೆಂಚ್ ಸಮಾಜವಾದಿ ರಾಜನೀತಿಙ್ಞ, ಲೂಯಿಸ್ ಮಾರ್ಟಿನ್ ತಮ್ಮ ಲೆಸ್ ಎವಂಗೈಲ್ಸ್ ಸಾನ್ಸ್ ಡಿಯು ಎಂಬ ಪುಸ್ತಕದಲ್ಲಿ ಇತಿಹಾಸದಲ್ಲಿದ್ದ ಯೇಸು ಒಬ್ಬ ನಾಸ್ತಿಕವಾದಿ, ಈತನು ಮೇರಿ ಮ್ಯಾಗ್ಡಲೀನ್‍ಳನ್ನು ಮದುವೆಯಾಗಿದ್ದನು ಮತ್ತು ಇವರಿಬ್ಬರು ದಕ್ಷಿಣ ಫ್ರಾನ್ಸ್‌ಗೆ ಬಂದಿದ್ದರು, ಅಲ್ಲಿ ಅವರಿಗೆ ಒಬ್ಬ ಮಗ ಜನಿಸಿದನು ಎಂದು ಹೇಳಿದ್ದಾನೆ.
20ನೇ ಶತಮಾನದಲ್ಲಿ ಡೋನೊವಾನ್ ಜಾಯ್ಸ್ ಬರೆದಿರುವ ದಿ ಜೀಸಸ್ ಸ್ಕ್ರೋಲ್ ಪುಸ್ತಕವು ಮೊಟ್ಟ ಮೊದಲ ಬಾರಿಗೆ ಯೇಸು ಕ್ರಿಸ್ತನ ರಕ್ತ ಸಂಬಂಧದ ಜಾಡುಗಳನ್ನು ಮತ್ತು ಮೇರಿ ಮ್ಯಾಗ್ಡಲೀನ್ ಜೊತೆಗೆ ಆತ ಹೊಂದಿದ್ದ ಸಂಬಂಧವನ್ನು ಕುರಿತು ವಿವರಿಸಿತ್ತು. 1977ರ ಒಂದು ಪುಸ್ತಕವು ಯೇಸು ಕ್ರಿಸ್ತನು ಕಾಶ್ಮೀರದಲ್ಲಿ ನಿಧನ ಹೊಂದಿದನೆಂದು ಹೇಳಿತು. ಜೀಸಸ್, ಮೋಸೆಸ್ ಮತ್ತು ಇಸ್ರೇಲಿನ ಇತರ 10 ಜನ ಕೊನೆಯ ಬುಡಕಟ್ಟ ಜನರು ಕಾಶ್ಮೀರಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ಒಂದು ಕಾಶ್ಮೀರಿ ಹೆಂಗಸನ್ನು ಭೇಟಿ ಮಾಡಿದರು ಮತ್ತು ಹಲವು ಮಕ್ಕಳನ್ನು ಪಡೆದರು ಎಂದು ಆಂಡ್ರಿಯಾಸ್ ಫೇಬರ್-ಕೈಸರ್ ಹೇಳಿಕೆ ನೀಡಿದ್ದರು.
ನಂತರ 1982ರಲ್ಲಿ ಮೈಖೇಲ್ ಬೈಗೆಂಟ್, ರಿಚರ್ಡ್ ಲೇಹ್ ಮತ್ತು ಹೆನ್ರಿ ಲಿಂಕನ್‍ರವರು ಯೇಸು ಕ್ರಿಸ್ತನ ರಕ್ತ ಸಂಬಂಧವನ್ನು ಮತ್ತು ಆತನ ವಂಶವಾಹಿಗಳ ಕುರಿತಾದ ಪ್ರಾಕಲ್ಪನೆಗಳನ್ನು ಜನಪ್ರಿಯಗೊಳಿಸಿದರು. ಯೇಸು ಕ್ರಿಸ್ತನ ರಕ್ತವು ಆಕೆಯ ಮಗಳ ಮೂಲಕ ಹಾದು, ಇಂದಿಗು ಮೆರೊವಿಂಜಿಯನ್ ಸಾಮ್ರಾಜ್ಯದಲ್ಲಿ ಸುರಕ್ಷಿತವಾಗಿದೆ ಎಂದು ಈ ಪುಸ್ತಕದಲ್ಲಿ ವಾದಿಸಲಾಗಿದೆ. ಹೀಗೆ ಪವಿತ್ರವಾದ ರಕ್ತ ಮತ್ತು ಹೋಲಿ ಗ್ರೇಲ್ ಇನ್ನೂ ಉಳಿದಿದೆ ಎಂಬುದು ಇವರ ವಾದ.
ದಿ ಲಾಸ್ಟ್ ಗೋಸ್ಪೆಲ್ ಕುರಿತಾದ ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಯೇಸು ಕ್ರಿಸ್ತನು ಮೇರಿ ಮ್ಯಾಗ್ಡಲೀನ್‍ಳನ್ನು ಮದುವೆಯಾಗಿದ್ದನು ಎಂಬುದಕ್ಕೆ ಹಳೆಯ ಒಡಂಬಡಿಕೆಯಲ್ಲಿಯೇ ರಹಸ್ಯವಾಗಿ ನಮೂದಾಗಿದೆ. ಅದರಲ್ಲಿ ಬರುವ ಜೋಸೆಫ್ ಮತ್ತು ಆತನ ಪತ್ನಿಯಾಸ ಅಸೆನೆಥ್ ನಿಜವಾಗಿ ಯೇಸು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನ್ ಅಂತೆ. ಇದು ಇನ್ನೂ ಮುಂದುವರಿದು, ಯೇಸು ಕ್ರಿಸ್ತನ ಇಬ್ಬರು ಮಕ್ಕಳ ಹೆಸರುಗಳನ್ನು ಸಹ ಹೇಳುತ್ತದೆ ಮತ್ತು ಅವರು ರೋಮನ್ ಸಾಮ್ರಾಜ್ಯದ ಜೊತೆಗೆ ಹೊಂದಿದ್ದ ಪ್ರಭಾವಶಾಲಿ ಸಂಪರ್ಕಗಳ ಕುರಿತು ಸಹ ಹೇಳುತ್ತದೆ.
ದಿ ಲಾಸ್ಟ್ ಗೋಸ್ಪೆಲ್ ಸಂಪೂರ್ಣವಾಗಿ ಸಂಸ್ಕರಿಸಿದ ಪ್ರಾಣಿಯ ಚರ್ಮದ ಮೇಲೆ ಬರೆದ ಚರ್ಚಿನ ಝಕಾರಿಯಾ ರೆಟರ್‌ನ ಇತಿಹಾಸದ ಭಾಷಾಂತರವಾಗಿದೆ. ಇದನ್ನು 1847ರಲ್ಲಿ ಯುನೈಟೆಡ್ ಕಿಂಗ್‍ಡಮ್‍ಗೆ ತರಲಾಯಿತು. ಇದನ್ನು ಮೂಲತಃ ಬ್ರಿಟಿಷ್ ಮ್ಯೂಸಿಯಂ ಈಜಿಪ್ಟಿನ ಮೊನಸ್ಟ್ರಿಯೊಂದರಿಂದ ಖರೀದಿಸಿತ್ತು. ಬಹುತೇಕ ಜನ ವಿದ್ವಾಂಸರು ಇದನ್ನು ಓದಿದ ಮೇಲೆ ಅಷ್ಟೇನು ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ತೆಗೆದು ಹಾಕಿದರು. ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?
ಆದರೆ ದಿ ಲಾಸ್ಟ್ ಗೋಸ್ಪೆಲ್‍ನ ಕೃತಿಕಾರರು ಈ ಹಸ್ತ ಪ್ರತಿಯು ಅತ್ಯಂತ ಮಹತ್ವದ್ದಾಗಿದೆ ಎಂದು ಆರು ವರ್ಷಗಳ ಕಾಲ ಇದರ ಕುರಿತು ಅಧ್ಯಯನ ಮಾಡಿದರು. ಈ ಹಸ್ತ ಪ್ರತಿಯನ್ನು ಸಿರಿಯಾಕ್ (ಯೇಸು ಕ್ರಿಸ್ತನು ಮಾತನಾಡುತ್ತಿದ್ದ ಮಧ್ಯ ಪ್ರಾಚ್ಯದ ಭಾಷೆ) ಭಾಷೆಯಲ್ಲಿ ಚರ್ಮದ ಮೇಲೆ ರಚಿಸಲಾಗಿದೆ. ಇದು ಬ್ರಿಟೀಷ್ ಲೈಬ್ರರಿಯ ದಾಖಲೆಗಳ ಕೋಣೆಯಲ್ಲಿ 20 ವರ್ಷಗಳಿಂದ ಕುಳಿತಿತ್ತು.
ಬಹುತೇಕ ಇನ್ನಿತರ ವಿದ್ವಾಂಸರು ಈ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ. ಇದೇನು ಅಂತಹ " ಗಮನಾರ್ಹವಲ್ಲದ" ಸಂಗತಿ ಎಂದು ಅವರು ಹೇಳಿದ್ದಾರೆ. ಆದರೆ ಮೇರಿ ಮ್ಯಾಗ್ಡಲೀನ್ ಮಾತ್ರ ಒಂದು ಬಗೆಹರಿಸಲಾಗದ ರಹಸ್ಯವಾಗಿ ನಿಲ್ಲುತ್ತಾಳೆ. ಆಕೆಯು ಬೈಬಲ್ಲಿನ ಒಂದು ಪ್ರಮುಖ ಪಾತ್ರವಾಗಿ ನಿಲ್ಲುತ್ತಾಳೆ. ಆಕೆಯ ಸುತ್ತ ಹಲವಾರು ಊಹಾ ಪೋಹಗಳು ಸುತ್ತುತ್ತವೆ. ಮಹಾಭಾರತದ ಯುದ್ಧವನ್ನು ಒಂದು ನಿಮಿಷದಲ್ಲಿ ಮುಗಿಸಿಬಿಡುವವನ್ನಾಗಿದ್ದ ಯೋಧ
ಹಲವಾರು ಊಹಾ ಪೋಹಗಳು ಆಕೆಯನ್ನು ಬೆಂಬಲಿಸುತ್ತವೆ. ಆದರೆ ಕೊನೆಗೆ, ಇವು ಊಹಾ ಪೋಹಗಳಾಗಿಯೇ ಉಳಿಯುತ್ತವೆ. ಸತ್ಯ ಅಥವಾ ಅಸತ್ಯವೋ ಗೊತ್ತಿಲ್ಲ, ದಿ ಲಾಸ್ಟ್ ಗೋಸ್ಪೆಲ್ ಮತ್ತೆ ಜನರ ಮೆದುಳನ್ನು ಕಲಕಿದೆ. ಯೇಸು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನ್‍ರ ಮದುವೆ ಮತ್ತು ಅವರಿಗೆ ಮಕ್ಕಳಿದ್ದ ಮಹತ್ವದ ಸಂಗತಿಗಳು ಇಡೀ ವಿಶ್ವದಲ್ಲಿಯೇ ವಿವಾದದ ಕಿಡಿಯನ್ನು ಹೊತ್ತಿಸಿವೆ.



Click it and Unblock the Notifications



