Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಿವನಿಗೆ ಸಂಬಂಧಿಸಿದ ಈ ರಹಸ್ಯಗಳು ನಿಮಗೆ ಗೊತ್ತೇ?
"ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕ್ಕೆ ಸಾಟಿ ಬೇರೆಯಿಲ್ಲ" ಅದೆಂತಹ ಸಂಕಷ್ಟದ ಪರಿಸ್ಥಿತಿಯೇ ಬರಲಿ ಒಂದು ಬಾರಿ ಶಿವನನ್ನು ಭಕ್ತಿಯಿಂದ ನೆನೆದರೆ ಸಾಕು ಬೆಟ್ಟದ ಹಾಗೇ ಬಂದಂತಹ ಸಂಕಷ್ಟಗಳೆಲ್ಲಾ ಮಂಜಿನ ಹಾಗೆ ಕರಗಿ ಹೋಗುತ್ತದೆ.

ಶಿವನನ್ನು ನೀಲಕಂಠ, ಪರಮೇಶ್ವರ, ಮಂಜುನಾಥ ಹೀಗೆ ನಾನಾ ಹೆಸರುಗಳಿಂದ ಸಂಭೋದಿಸಲಾಗುತ್ತದೆ. ಸೋಮವಾರದ ದಿನ ಶಿವನಿಗೆ ಪ್ರೀಯವಾದ ದಿನ. ಈ ದಿನ ಬೆಳಗ್ಗೆ ಎದ್ದು ಶಿವನನ್ನು ನೆನೆದರೆ ಇಷ್ಟಾರ್ಥಗಳೆಲ್ಲಾ ಸಿದ್ಧಿಸುತ್ತದೆ. ಮಹಾದೇವನ ಬಗ್ಗೆ ಅನೇಕ ಕಥೆಗಳನ್ನು ನೀವು ಕೇಳಿರ್ತೀರಾ ಆದರೆ ನೀಲಕಂಠೇಶ್ವರನ ಬಗ್ಗೆ ನಿಮಗೆ ತಿಳಿಯದೇ ಇರುವ ಕೆಲ ರಹಸ್ಯ ಸಂಗತಿಗಳು ಇದೆ. ಹಾಗಾದ್ರೆ ಯಾವುದು ಆ ರಹಸ್ಯ ವಿಚಾರಗಳು ಅನ್ನೋದನ್ನ ತಿಳಿಸ್ತೀವಿ.

ಅಮರನಾಥ ಗುಹೆಯ ರಹಸ್ಯ
ಶಿವನ ಭಕ್ತರಿಗೆ ಅಮರನಾಥ ಗುಹೆಯು ತುಂಬಾನೇ ಮುಖ್ಯವಾದ ಜಾಗ. ಇದರ ಹಿಂದೆ ಒಂದು ದೊಡ್ಡ ಕಥೆ ಇದೆ. ಒಂದು ಬಾರಿ ದೇವಿ ಪಾರ್ವತಿಯು ಶಿವನಲ್ಲಿ ಹುಟ್ಟು ಸಾವಿನ ಕುರಿತು ಪ್ರಶ್ನಿಸುತ್ತಾಳೆ. ಎಲ್ಲರಿಗೂ ಸಾವಿದೆ. ಆದರೆ ನೀವು ಮಾತ್ರ ಹೇಗೆ ಅಮರರಾಗಿದ್ದೀರಿ ಎಂದು ಪ್ರಶ್ನಿಸುತ್ತಾಳೆ. ಆ ಪ್ರಶ್ನೆಗೆ ಉತ್ತರಿಸಲು ಶಿವ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಾನೆ. ಆದರೆ ಪಟ್ಟು ಬಿಡದ ದೇವಿ ಪಾರ್ವತಿ ಪದೇ ಪದೇ ಈ ಬಗ್ಗೆ ಪ್ರಶ್ನಿಸುತ್ತಿರುತ್ತಾಳೆ. ಅಂತಿಮವಾಗಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಲು ಒಪ್ಪಿಕೊಳ್ಳುತ್ತಾನೆ. ಈ ಕಥೆಯನ್ನೇ ಅಮರಕಥಾ ಎಂದು ಹೇಳಲಾಗುತ್ತದೆ. ಪುರಾಣಗಳಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ.
ಪಾರ್ವತಿಯ ಹಠಕ್ಕೆ ಮಣಿದು ಶಿವ ಅಮರತ್ವ ಕಥೆ ಹೇಳಲು ಒಪ್ಪುತ್ತಾನೆ. ಪಾರ್ವತಿಗೆ ಅಮರತ್ವದ ರಹಸ್ಯ ಹೇಳಲು ಸಿದ್ಧನಾದ ಶಿವ ಇದಕ್ಕಾಗಿ ಸೂಕ್ತ ಸ್ಥಳಕ್ಕಾಗಿ ಶೋಧ ನಡೆಸುತ್ತಾನೆ. ತನ್ನ ವಾಹನ ನಂದಿ, ಪಾರ್ವತಿ ಮತ್ತು ಗಣೇಶನೊಂದಿಗೆ ಪ್ರಯಾಣ ಆರಂಭಿಸುವ ಶಿವ ಅಮರನಾಥ ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಬಳಿಕ ನಂದಿಯನ್ನು ಬೈಲ್ ಗಾಮದ ಬಳಿ ಬಿಟ್ಟು ತೆರಳುತ್ತಾನೆ. ನಂತರ ಪುತ್ರ ಗಣೇಶನನ್ನು ಮಹಾಗುಣ ಪರ್ವತದಲ್ಲಿ ಬಿಟ್ಟು, ತನ್ನ ಕೊರಳಲ್ಲಿರುವ ಹಾವುಗಳನ್ನು ಶೇಷನಾಗ ಸಾಗರದಲ್ಲಿ ಬಿಡುತ್ತಾನೆ. ಬಳಿಕ ಪಂಚಭೂತಗಳನ್ನು ಪಂಜ ತಾರಿಣಿಯಲ್ಲಿ ಬಿಡುತ್ತಾನೆ. ಬಳಿಕ ತಾಂಡವ ನೃತ್ಯದಲ್ಲಿ ಪಾಲ್ಗೊಳ್ಳುವ ದಂಪತಿಗಳು ಅಮರನಾಥ ಗುಹೆಗೆ ಬರುತ್ತಾರೆ. ಆಗ ಶಿವ ತನ್ನ ರುದ್ರ ಎಂಬ ಕಾಲಾಗ್ನಿಯನ್ನು ಕರೆದು ತಾನು ಹೇಳುವ ರಹಸ್ಯವನ್ನು ಯಾವ ಜೀವಸಂಕುವೂ ಕೇಳಬಾರದು ಎಂದು ಅಜ್ಞೆಯನ್ನು ಮಾಡುತ್ತಾನೆ. ಹಾಗೂ ಗುಹೆಯ ಸುತ್ತಮುತ್ತ ಇರುವ ಎಲ್ಲ ಜೀವ ಸಂಕುಲಗಳನ್ನು ನಾಶ ಮಾಡು ಎಂದು ಕಾಲಾಗ್ನಿಗೆ ಶಿವನು ಆದೇಶ ಮಾಡುತ್ತಾನೆ.
ಶಿವನ ಆಜ್ಞೆಯಂತೆ ರುದ್ರ ಎಂಬ ಕಾಲಾಗ್ನಿ ಗುಹೆಯ ಸುತ್ತಮುತ್ತ ಇರುವ ಎಲ್ಲ ಜೀವ ಸಂಕುಲವನ್ನು ನಾಶಪಡಿಸುತ್ತಾ ಹೋಗುತ್ತದೆ. ಇದಾದ ಬಳಿಕ ಪರಮೇಶ್ವರನು ಪಾರ್ವತಿಗೆ ಜೀವನ ಮತ್ತು ಅಮರತ್ವವನ್ನು ಭೋಧಿಸುತ್ತಾನೆ. ಇದರ ನಡುವೆ ಒಂದು ಪಾರಿವಾಳ ಬದುಕುತ್ತದೆ. ಈ ಪಾರಿವಾಳವು ಕಾಲಾಗ್ನಿಯ ಜ್ವಾಲೆಗೆ ಸಿಲುಕದೆ ಗುಹೆಯಲ್ಲಿ ಒಂದು ಪಾರಿವಾಳವು ಮೊಟ್ಟೆ ಇಡುತ್ತದೆ. ಭೋದನೆ ಬಳಿಕ ಇದನ್ನು ಶಿವ ಗಮನಿಸುತ್ತಾನೆಯಾದರೂ, ಅದನ್ನು ನಾಶಪಡಿಸುವುದಿಲ್ಲ. ಬದಲಿಗೆ ಅದನ್ನು ಶಿವ ರಕ್ಷಿಸುತ್ತಾನೆ. ನೀವೇನಾದರೂ ಅಮರನಾಥ ಯಾತ್ರೆ ಕೈಗೊಂಡರೆ ಆ ಗುಹೆಯಲ್ಲಿ ಈಗಲೂ ಎರಡು ಪಾರಿವಾಳಗಳನ್ನು ನೋಡಬಹುದು. ಇನ್ನೂ ಈ ಜಾಗದಲ್ಲಿ ಚಳಿಗಾಲದಲ್ಲಿ ತೀವ್ರ ಚಳಿ ಇದ್ದು, ಮನುಷ್ಯರೇ ಯಾತ್ರೆ ವೇಳೆ ಚಳಿ ತಡೆಯಲಾರದೆ ಸಾವನ್ನಪ್ಪುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಪಾರಿವಾಳಗಳು ಮಾತ್ರ ಜೀವಂತವಾಗಿರುತ್ತದೆ.

ವಿಷ್ಣುವಿಗೆ ಸುದರ್ಶನ ಚಕ್ರ ನೀಡಿದ ಶಿವ
ಶಿವ ಮತ್ತು ವಿಷ್ಣುವಿನ ಸುದರ್ಶನ ಚಕ್ರದ ಕಥೆಯನ್ನು ನೀವು ಕೇಳಿರ್ತೀರ. ಪುರಾಣಗಳ ಪ್ರಕರಣ ವಿಷ್ಣವಿಗೆ ಈ ಸುದರ್ಶನ ಚಕ್ರ ನೀಡಿದ್ದು ಬೇರ್ಯಾರು ಅಲ್ಲ ಮಹಾದೇವನೇ ನೀಡಿರೋದು. ಲೋಕಕಲ್ಯಾಣಕ್ಕಾಗಿ ಶೀವ ಸುದರ್ಶನ ಚಕ್ರವನ್ನು ಹಸ್ತಾಂತರಿಸುತ್ತಾನೆ. ಭೂಮಿಯ ಮೇಲೆ ರಾಕ್ಷಸರ ಅಟ್ಟಹಾಸ ಹೆಚ್ಚಾಗಿತ್ತು. ಈ ವೇಳೆ ರಾಕ್ಷಸರು ಸ್ವರ್ಗಲೋಕವನ್ನು ತಲುಪಿದಾಗ, ಎಲ್ಲಾ ದೇವತೆಗಳು ಭಯಭೀತರಾಗಿ ವಿಷ್ಣುವಿನ ಬಳಿಗೆ ಹೋಗಿ ರಾಕ್ಷಸರನ್ನು ಸೋಲಿಸಲು ದೈವಿಕ ಆಯುಧಕ್ಕಾಗಿ ಹುಡುಕಾಟ ನಡೆಸುತ್ತಾರೆ. ದೈವಿಕ ಆಯುಧಕ್ಕಾಗಿ ವಿಷ್ಣುವು ಶಿವನನ್ನು ಪೂಜಿಸುತ್ತಾನೆ. ಪೂಜೆಯಲ್ಲಿ ವಿಷ್ಣುವು ಸಾವಿರ ಕಮಲದ ಹೂ ಅರ್ಪಿಸಿ ಭಕ್ತಿಯಿಂದ ಪೂಜಿಸುತ್ತಿರುತ್ತಾನೆ. ಬೇಕಂತಲೆ ಈ ವೇಳೆ ಶಿವ ಸಾವಿರದಲ್ಲಿ ಒಂದು ಕಮಲದ ಹೂ ಅನ್ನು ಬಚ್ಚಿಡುತ್ತಾನೆ.
ಪೂಜೆಯಲ್ಲಿ ಮಘ್ನನಾಗಿದ್ದ ವಿಷ್ಣವಿಗೆ ಒಂದು ಕಮಲದ ಹೂ ಇಲ್ಲದಿರುವುದು ಗೊತ್ತೇ ಆಗುವುದಿಲ್ಲ. ಕೊನೆಗೂ ಹೂವು ಸಿಗದೇ ಇದ್ದಾಗ ತನ್ನ ಕಣ್ಣನ್ನೇ ವಿಷ್ಣುವು ಶೀವನಿಗೆ ಅರ್ಪಿಸುತ್ತಾನೆ. ವಿಷ್ಣು ಭಕ್ತಿಗೆ ಮೆಚ್ಚಿದ ಶಿವ ತನಗೆ ಬೇಕಾದ ವರ ಕೇಳುವಂತೆ ವರ ಕೊಡುತ್ತಾನೆ. ಆಗ ವಿಷ್ಣುವು ರಾಕ್ಷಸರನ್ನು ಕೊಲ್ಲಲು ಶಿವನಿಂದ ಮಹಾ ಆಯುಧವನ್ನು ಕೇಳುತ್ತಾನೆ. ವಿಷ್ಣುವಿನ ಭಕ್ತಿಗೆ ಮೆಚ್ಚಿದ್ದ ಶಿವ ತಾನೇ ತಯಾರಿಸಿದ ಸುದರ್ಶನ ಚಕ್ರವನ್ನು ಶ್ರೀ ಹರಿ ವಿಷ್ಣುವಿಗೆ ನೀಡುತ್ತಾನೆ.

ಶಿವನ ಪರೀಕ್ಷೇಯಲ್ಲಿ ಗೆದ್ದ ಪಾರ್ವತಿ
ಒಂದು ಬಾರಿ ಶಿವನು ಪಾರ್ವತಿಯನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಶಿವನು ಒರ್ವ ಬ್ರಾಹ್ಮಣ ರೂಪದಲ್ಲಿ ಪಾರ್ವತಿ ದೇವಿಯ ಬಳಿಗೆ ಹೋಗುತ್ತಾನೆ. ಬ್ರಾಹ್ಮನು ಪಾರ್ವತಿಯ ಬಳಿ ಕೇಳುತ್ತಾನೆ ನೀನು ಯಾಕೆ ಏನು ಇಲ್ಲದ ಭಿಕ್ಷುಕ ಶಿವನನ್ನು ಮದುವೆಯಾಗುತ್ತಿದ್ದೀಯಾ ಎಂದು. ಆಕೆ ಕೋಪಗೊಂಡ ಪಾರ್ವ ಹೇಳುತ್ತಾಳೆ ನಾನು ಮದುವೆಯಾದರೆ ಅದು ಶಿವನನ್ನು ಮಾತ್ರ ಎಂದು. ಪಾರ್ವತಿಯ ಈ ಮಾತನ್ನು ಮೆಚ್ಚಿದ ಶಿವ ಮಾತೆ ಪಾರ್ವತೆ ದೇವಿಯನ್ನು ಮದುವೆಯಾಗಲು ಒಪ್ಪುತ್ತಾನೆ.
ಹೀಗೆ ಹೇಳುತ್ತಾ ಹೋದರೆ ಮಹಾದೇವನ ಬಗ್ಗೆ ಸಾವಿರಾರು ರಹಸ್ಯಗಳೇ ಇದೆ. ಕೆಲವು ಮಾತ್ರ ಉಲ್ಲೇಖವಾಗಿದ್ದು, ಅದನ್ನು ನಾವು ಓದಿ ತಿಳಿದುಕೊಳ್ಳಬಹುದು.



Click it and Unblock the Notifications