ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ

By Super

ಶ್ರಾವಣಮಾಸವು ಹಿಂದೂ ಪಂಚಾಂಗದಲ್ಲಿಯೇ ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ಮಾಸದಲ್ಲಿ ಶಿವನು ಭೂಮಿಯ ಜೊತೆಗೆ ತನ್ನ ಅವಿನಾಭಾವ ಸಂಬಂಧವನ್ನು ತೋರಿದ್ದಾನೆ. ಹಾಗಾಗಿ ಈ ಮಾಸದಲ್ಲಿ ವ್ರತ ಮತ್ತು ಪೂಜೆಗಳಲ್ಲಿ ತೊಡಗಿಸಿಕೊಂಡು ಆತನನ್ನು ಆರಾಧಿಸಿದರೆ ಶಿವನ ಆಶೀರ್ವಾದ ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರಾವಣ ಮಾಸದ ಸೋಮವಾರಗಳು ಹೆಂಗಳೆಯರ ಪಾಲಿಗೆ ಅತ್ಯಂತ ಮುಖ್ಯವಾದುದಾಗಿದೆ. ಏಕೆಂದರೆ ಇವರು ತಮಗೆ ಅನುರೂಪನಾದ ವರ ಸಿಗಲೆಂದು ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಲೆಂದು ಶಿವನನ್ನು ಪ್ರಾರ್ಥಿಸುವ ಮಾಸ ಇದಾಗಿದೆ. ಶ್ರಾವಣ ಮಾಸದ ಮಹತ್ವವನ್ನು ಅರಿತುಕೊಳ್ಳಿ

ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದು ಇತರ ಸಮಯಕ್ಕಿಂತ ನೂರಾ ಎಂಟು ಪಟ್ಟು ಹೆಚ್ಚು ಫಲಪ್ರದ ಎಂದು ಪುರಾಣಗಳು ತಿಳಿಸುತ್ತವೆ. ಇದೇ ಕಾರಣಕ್ಕೆ ಕೋಟ್ಯಂತರ ಹಿಂದೂ ಭಕ್ತರು ಈ ಮಾಸದ ಮೊದಲ ಸೋಮವಾರವನ್ನು 'ಶ್ರಾವಣ ಸೋಮವಾರ ವ್ರತ' ದ ರೂಪದಲ್ಲಿ ಆಚರಿಸುತ್ತಾರೆ. ಈ ವ್ರತದಲ್ಲಿ ಇಡಿಯ ದಿನ ಉಪವಾಸವಿರುವುದು ಮತ್ತು ಪೂಜೆಯನ್ನು ನಿರ್ವಹಿಸುವುದು ಎಂಬ ಎರಡು ಅಂಗಗಳಿವೆ.

ಒಂದು ವೇಳೆ ನೀವೂ ಶಿವನ ಅನುಗ್ರಹವನ್ನು ಪಡೆಯಬಯಸುವಿರಾದರೆ ಈ ತಿಂಗಳಿಡೀ ಹೇಗೆ ಕಾರ್ಯನಿರ್ವಹಿಸಬೇಕೆಂದು ಕೆಳಗಿನ ಸ್ಲೈಡ್ ಶೋ ನಿಮಗೆ ಮಾರ್ಗದರ್ಶನ ನೀಡುತ್ತದೆ: ಶ್ರಾವಣ ಮಾಸದ ವಿಶೇಷ: ಬೈದ್ಯನಾಥ ಶಿವನ ಕಥೆ

ಮೊದಲು ಗಣಪತಿಯನ್ನು ಪ್ರಾರ್ಥಿಸಿ

ಮೊದಲು ಗಣಪತಿಯನ್ನು ಪ್ರಾರ್ಥಿಸಿ

ಪ್ರಾತಃಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮತ್ತು ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಪ್ರಥಮವಾಗಿ ಗಣೇಶನನ್ನು ಪ್ರಾರ್ಥಿಸಿ. ಬಳಿಕ ಓಂನಮಃಶಿವಾಯ ಪಠಿಸುವ ಮೂಲಕ ಶಿವನನ್ನು ಪ್ರಾರ್ಥಿಸಿ.

ಮೊದಲು ಗಣಪತಿಯನ್ನು ಪ್ರಾರ್ಥಿಸಿ

ಮೊದಲು ಗಣಪತಿಯನ್ನು ಪ್ರಾರ್ಥಿಸಿ

ಪೂಜೆಗೆ ಬಿಲ್ವಪತ್ರೆ, ಬಿಳಿಯ ಹೂಗಳು, ನೀರು, ಜೇನು ಮತ್ತು ಹಾಲನ್ನು ಅರ್ಪಿಸಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಶಿವಲಿಂಗವಿದ್ದರೆ ನೀರಿನ, ಜೇನಿನ ಅಥವಾ ಹಾಲಿನ ಅಭಿಶೇಕವನ್ನೂ ಮಾಡುವುದರಿಂದ ಹೆಚ್ಚಿನ ಅನುಗ್ರಹ ಪಡೆಯಬಹುದು.

ಇಡಿಯ ದಿನ ಉಪವಾಸವಿರಿ

ಇಡಿಯ ದಿನ ಉಪವಾಸವಿರಿ

ಶ್ರಾವಣ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ. ಈ ಅವಧಿಯಲ್ಲಿ ಮಹಾ ಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಇಡಿಯದಿನ ಸಾಧ್ಯವಾದಷ್ಟು ಪಠಿಸಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಡಿಯ ದಿನ ಉಪವಾಸವಿರಿ

ಇಡಿಯ ದಿನ ಉಪವಾಸವಿರಿ

ಕೆಲವು ಪ್ರದೇಶದಲ್ಲಿ ಉಪವಾಸದ ಅವಧಿಯಲ್ಲಿ ಕೇವಲ ಶ್ವೇತವಸ್ತ್ರವನ್ನು ಧರಿಸುತ್ತಾರೆ. ಒಂದು ವೇಳೆ ಇಡಿಯ ದಿನ ಪೂರ್ಣಪ್ರಮಾಣದಲ್ಲಿ ಉಪವಾಸವಿರಲು ಸಾಧ್ಯವಾಗದಿದ್ದರೆ ಕನಿಷ್ಠ ಪ್ರಮಾಣದ ಹಣ್ಣುಗಳನ್ನು ಸೇವಿಸಬಹುದು. ಕೆಲವು ಭಕ್ತರು ಇಡಿಯ ದಿನ ಶಿವಪುರಾಣವನ್ನು ಓದುತ್ತಾರೆ. ಗಂಗಾನದಿಯ ತಟದ ಊರಿನವರು ಗಂಗಾಜಲದಿಂದ ತಮ್ಮ ಮನೆಯ ಶಿವಲಿಂಗಕ್ಕೆ ಅಭಿಶೇಕ ನೀಡುತ್ತಾರೆ.

ಸಂಜೆ ಶಿವನ ಪೂಜೆಯೊಂದಿಗೆ ಉಪವಾಸ ಪೂರ್ಣಗೊಳಿಸಿ

ಸಂಜೆ ಶಿವನ ಪೂಜೆಯೊಂದಿಗೆ ಉಪವಾಸ ಪೂರ್ಣಗೊಳಿಸಿ

ಸೂರ್ಯಾಸ್ತದ ಸಮಯದಲ್ಲಿ ಪೂಜಾಗೃಹದಲ್ಲಿದ್ದು ಶಿವನ ಪೂಜೆಯೊಂದಿಗೆ ಉಪವಾಸವನ್ನು ಸಂಪನ್ನಗೊಳಿಸಿ. ಕೆಲವರು ಈ ದಿನದಂದು ಶಿವನ ದರ್ಶನ ಮಾಡುವುದು ಶ್ರೇಯಸ್ಕರ ಎಂದು ನಂಬುತ್ತಾರೆ. ಆದರೆ ಮನೆಯಲ್ಲಿಯೂ ಉಪವಾಸವನ್ನು ಸಂಪನ್ನಗೊಳಿಸುವುದು ಸಮಾನವಾದ ಅನುಗ್ರಹಕ್ಕೆ ಕಾರಣವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಜೆ ಶಿವನ ಪೂಜೆಯೊಂದಿಗೆ ಉಪವಾಸ ಪೂರ್ಣಗೊಳಿಸಿ

ಸಂಜೆ ಶಿವನ ಪೂಜೆಯೊಂದಿಗೆ ಉಪವಾಸ ಪೂರ್ಣಗೊಳಿಸಿ

ಇನ್ನೂ ಕಠಿಣ ಉಪವಾಸವಿರುವ ಮನಸ್ಸುಳ್ಳವರು ಮರುದಿನ ಬೆಳಗ್ಗಿನವರೆಗೂ ಯಾವುದೇ ಆಹಾರವನ್ನು ಸೇವಿಸದೇ ಒಂದು ಇಡಿಯ ದಿನ ಉಪವಾಸವಿರುತ್ತಾರೆ.

ಬೆಳಗಿನ ಸಮಯದಲ್ಲಿ ಶಿವಾಲಯಕ್ಕೆ ಭೇಟಿ ನೀಡಿ

ಬೆಳಗಿನ ಸಮಯದಲ್ಲಿ ಶಿವಾಲಯಕ್ಕೆ ಭೇಟಿ ನೀಡಿ

ಶ್ರಾವಣ ಮಾಸದಾದ್ಯಂತ ಬೆಳೆಗ್ಗಿನ ಹೊತ್ತು ನಿಮಗೆ ಹತ್ತಿರದ ಶಿವಾಲಯಕ್ಕೆ ಭೇಟಿ ನೀಡುವುದು ಶ್ರೇಯಸ್ಕರವಾಗಿದೆ. ಈ ಅವಧಿಯಲ್ಲಿ ಶಿವಪೂಜೆ ನಡೆಸಿ ನೀರು ಮತ್ತು ಕರಿಎಳ್ಳಿನ ತರ್ಪಣೆ ನೀಡುವುದು ಉತ್ತಮ. ಮುಂದೆ ಓದಿ

ಬೆಳಗಿನ ಸಮಯದಲ್ಲಿ ಶಿವಾಲಯಕ್ಕೆ ಭೇಟಿ ನೀಡಿ

ಬೆಳಗಿನ ಸಮಯದಲ್ಲಿ ಶಿವಾಲಯಕ್ಕೆ ಭೇಟಿ ನೀಡಿ

ಪೂಜೆ ಮುಗಿದ ತಕ್ಷಣ ಮನೆಗೆ ಹಿಂದಿರುಗದೇ ಕೊಂಚ ಹೊತ್ತು ಒಳಗೇ ಕುಳಿತು ಓಂನಮಃಶಿವಾಯ ಮಂತ್ರವನ್ನು ಸಾಕಷ್ಟು ಬಾರಿ ಪಠಿಸಿ.

ಪ್ರತಿದಿನ ನದಿಗೆ ಭೇಟಿನೀಡಿ ಮೀನುಗಳಿಗೆ ಆಹಾರ ನೀಡಿ

ಪ್ರತಿದಿನ ನದಿಗೆ ಭೇಟಿನೀಡಿ ಮೀನುಗಳಿಗೆ ಆಹಾರ ನೀಡಿ

ಈ ತಿಂಗಳಿನ ಎಲ್ಲಾ ದಿನಗಳಲ್ಲಿ ನಿಮ್ಮ ಊರಿಗೆ ಸಮೀಪದ ನದಿತಟಕ್ಕೆ ಬಂದು ಮೀನುಗಳಿಗೆ ಹಿಟ್ಟಿನುಂಡೆಗಳ ಆಹಾರ ನೀಡಿ. ನಿಮ್ಮಲ್ಲಿರುವ ಅಷ್ಟೂ ಆಹಾರವನ್ನು ಮೀನುಗಳು ತಿನ್ನುವವರೆಗೆ ಶಿವನನ್ನು ಆರಾಧಿಸಿ. ಈ ಮೂಲಕ ನಿಮ್ಮ ಜೀವನದಲ್ಲಿ ಹೆಚ್ಚಿನ ಧನಾಗಮನಕ್ಕೆ ಶಿವನ ಅನುಗ್ರಹ ದೊರಕುತ್ತದೆ.

ಅವಿವಾಹಿತರಾಗಿದ್ದರೆ ಕೇಸರಿ ಬೆರೆತ ಹಾಲು ಅರ್ಪಿಸಿ

ಅವಿವಾಹಿತರಾಗಿದ್ದರೆ ಕೇಸರಿ ಬೆರೆತ ಹಾಲು ಅರ್ಪಿಸಿ

ಒಂದು ವೇಳೆ ನೀವು ಅವಿವಾಹಿತರಾಗಿದ್ದರೆ ಈ ತಿಂಗಳಿಡೀ, ಸಾಧ್ಯವಾದರೆ ಪ್ರತಿದಿನಕ್ಕೆ ಒಂದು ಬಾರಿ ಕೇಸರಿ ಮಿಶ್ರಣ ಮಾಡಿದ ಹಾಲನ್ನು ಶಿವನಿಗೆ ಅರ್ಪಿಸಿ. ಇದರಿಂದ ಸಂಪ್ರೀತನಾಗುವ ಶಿವ ನಿಮಗೆ ಸೂಕ್ತ ವರ/ವಧುವನ್ನು ಪಡೆಯಲು ನೆರವಾಗುವನು.

ದನಗಳಿಗೆ ಹಸಿಹುಲ್ಲು ತಿನ್ನಿಸಿ

ದನಗಳಿಗೆ ಹಸಿಹುಲ್ಲು ತಿನ್ನಿಸಿ

ಈ ತಿಂಗಳಿಡೀ, ಸಾಧ್ಯವಾದರೆ ಪ್ರತಿದಿನ ಹಸಿಹುಲ್ಲನ್ನು ದನಗಳಿಗೆ ತಿನ್ನಿಸಿ. ನಿಮ್ಮ ಕೈಯಾರೆ ತಿನಿಸಿದರೆ ಇನ್ನೂ ಉತ್ತಮ. ಇದರಿಂದ ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿತುಳುಕುತ್ತಿರುತ್ತದೆ.

ತಿಂಗಳಿಡೀ ಹಸಿದವರಿಗೆ ಅನ್ನಸಂತರ್ಪಣೆ ನೀಡಿ

ತಿಂಗಳಿಡೀ ಹಸಿದವರಿಗೆ ಅನ್ನಸಂತರ್ಪಣೆ ನೀಡಿ

ಈ ತಿಂಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಹಸಿದವರಿಗೆ ಆಹಾರವನ್ನು ದಾನ ಮಾಡಿ. ಪ್ರತಿದಿನವೂ ಅಗತ್ಯವಿದ್ದವರಿಗೆ ನೀಡುವುದು ಇನ್ನೂ ಉತ್ತಮ. ಮುಂದೆ ಓದಿ

ತಿಂಗಳಿಡೀ ಹಸಿದವರಿಗೆ ಅನ್ನಸಂತರ್ಪಣೆ ನೀಡಿ

ತಿಂಗಳಿಡೀ ಹಸಿದವರಿಗೆ ಅನ್ನಸಂತರ್ಪಣೆ ನೀಡಿ

ಇದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಧಾನ್ಯಗಳ ಕೊರತೆಯಾಗದು. ಅಲ್ಲದೇ ನಿಮ್ಮ ಮನೆಯಲ್ಲಿರುವ ನಿಮ್ಮ ವಂಶಜರ ಆತ್ಮಗಳೂ ಶಾಂತಿಯಿಂದಿರುತ್ತವೆ.

ಪ್ರತಿದಿನ ಇಪ್ಪತ್ತೊಂದು ಬಿಲ್ವಪತ್ರೆ ಎಲೆಗಳ ಮೇಲೆ ಮಂತ್ರ ಬರೆದು ಅರ್ಪಿಸಿ

ಪ್ರತಿದಿನ ಇಪ್ಪತ್ತೊಂದು ಬಿಲ್ವಪತ್ರೆ ಎಲೆಗಳ ಮೇಲೆ ಮಂತ್ರ ಬರೆದು ಅರ್ಪಿಸಿ

ಪ್ರತಿದಿನ ಇಪ್ಪತ್ತೊಂದು ಬಿಲ್ವಪತ್ರೆ ಎಲೆಗಳ ಮೇಲೆ ಚಂದನದ ಕಡ್ಡಿಯಿಂದ ಓಂನಮಃಶಿವಾಯ ಮಂತ್ರ ಬರೆದು ಶಿವಲಿಂಗಕ್ಕೆ ಅರ್ಪಿಸಿ.

ರುದ್ರಾಕ್ಷವನ್ನು ಅರ್ಪಿಸಿ

ರುದ್ರಾಕ್ಷವನ್ನು ಅರ್ಪಿಸಿ

ಜೊತೆಗೇ ಪ್ರತಿದಿನ ಒಂದು ಮುಕ್ತಿ ರುದ್ರಾಕ್ಷವನ್ನೂ ಅರ್ಪಿಸಿ. ಇದರಿಂದ ನಿಮ್ಮ ಮನೋಕಾಮನೆಗಳು ನೆರವೇರುತ್ತವೆ.

ಪ್ರತಿದಿನ ಗೋಮೂತ್ರವನ್ನು ಮನೆಯಿಡೀ ಸಿಂಪಡಿಸಿ

ಪ್ರತಿದಿನ ಗೋಮೂತ್ರವನ್ನು ಮನೆಯಿಡೀ ಸಿಂಪಡಿಸಿ

ಒಂದು ವೇಳೆ ನಿಮಗೆ ಯಾವುದೇ ತೊಂದರೆಯಿದ್ದರೆ ಪ್ರತಿದಿನ ನಿಮ್ಮ ಮನೆಯ ಒಳಭಾಗವನ್ನು ಗೋಮೂತ್ರದಿಂದ ಸಿಂಪಡಿಸಿ. ಶೀಘ್ರವೇ ನಿಮ್ಮ ತೊಂದರೆಗಳೆಲ್ಲಾ ನಿವಾರಣೆಯಾಗುವುವು.

X
Desktop Bottom Promotion