Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು

ನವರಾತ್ರಿಯು ಒಂದು ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಆಷಾಢ, ಚೈತ್ರ, ವಸಂತ ಹಾಗೂ ಶರಧಿ ನವರಾತ್ರಿಯಂದು ಆಚರಿಸಲಾಗುತ್ತದೆ. ಆಷಾಢ ಮತ್ತು ವಸಂತದ ಸಮಯದಲ್ಲಿ ಬರುವ ನವರಾತ್ರಿಯು ಅಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಅದನ್ನು ಗುಪ್ತ ನವರಾತ್ರಿ ಎಂದು ಸಹ ಕರೆಯಲಾಗುವುದು. ಇನ್ನೆರಡು ನವರಾತ್ರಿಯನ್ನು ಹೆಚ್ಚು ಸಡಗರ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಆಚರಿಸಲಾಗುತ್ತದೆ. ಅವು ಭಾರತದ ಅತ್ಯಂತ ಜನಪ್ರಿಯ ಉತ್ಸವದಲ್ಲಿ ಒಂದು ಎಂದು ಹೇಳಲಾಗುವುದು. ಮಹಾ ನವರಾತ್ರಿ ಎಂದು ಕರೆಯಲ್ಪಡುವ ಶರಧಿ ನವರಾತ್ರಿಯು ಈ ವರ್ಷ ಅಂದರೆ 2018ರಲ್ಲಿ ಅಕ್ಟೋಬರ್ 10 ರಿಂದ ಅಕ್ಟೋಬರ್ 18ರ ವರೆಗೆ ಆಚರಿಸಲಾಗುವುದು. ನಂತರ ಅಕ್ಟೋಬರ್ 19ರಂದು ದಸರಾ ಎಂದು ಆಚರಿಸಲಾಗುತ್ತದೆ.

ಭಕ್ತರ ಬದುಕಲ್ಲಿ ಹೊಸ ಚೈತನ್ಯ ಹಾಗೂ ಬೆಳಕನ್ನು ನೀಡುವ ದೇವಿಯ ಈ ವ್ರತಾಚರಣೆಯು ಅತ್ಯಂತ ಮಂಗಳಕರವಾದದ್ದು. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಈ ವರ್ಷ ಅಂದರೆ 2018ರ ನವರಾತ್ರಿಯು ಅತ್ಯಂತ ಮಂಗಳಕರ ಘಟನೆಯೊಂದಿಗೆ ಕೂಡಿದೆ ಎನ್ನಲಾಗುವುದು. ಈ ವಿಷಯಗಳ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ದುರ್ಗಾ ದೇವಿಯ ನವರಾತ್ರಿಯ ವಾಹನ
ಪ್ರತಿವರ್ಷದ ನವರಾತ್ರಿಯಂದು ದುರ್ಗಾ ದೇವಿ ತನ್ನ ವಾಹನದ ಮೇಲೆ ಬರುತ್ತಾಳೆ. ಅಂತೆಯೇ ನವರಾತ್ರಿ ಮುಗಿದ ತಕ್ಷಣ ಪುನಃ ತನ್ನ ವಾಹನವನ್ನು ಬದಲಿಸುತ್ತಾಳೆ ಎನ್ನುವ ನಂಬಿಕೆಯಿದೆ. ದೇವಿ ಆಗಮಿಸುವ ವಾಹನಗಳು ವಿವಿಧ ಬಗೆಯಾಗಿದ್ದು, ಅವು ಒಂದೊಂದು ಸೂಚನೆ ಅಥವಾ ಮಾಹಿತಿಯನ್ನು ನೀಡುತ್ತವೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಿಯು ಈ ವರ್ಷ ದೋಣಿಯ ಮೇಲೆ ಸವಾರಿಯನ್ನು ಕೈಗೊಂಡಿದ್ದಾಳೆ. ಇದು ಅತ್ಯಂತ ಮಂಗಳಕರವಾದ ಸಂಗತಿ ಎಂದು ಹೇಳಲಾಗುವುದು. ಜ್ಯೋತಿಷ್ಯದ ಪ್ರಕಾರ ದೇವಿ ಸಿಂಹ, ಕುದುರೆ, ಆನೆ, ದೋಣಿಯನ್ನು ಆಯ್ಕೆ ಮಾಡಿಕೊಂಡರೆ ಅದು ಶುಭ ಸಂಕೇತ ಎನ್ನುವರು. ದೋಣಿಯು ಒಂದು ಸುಗ್ಗಿಯನ್ನು ಪ್ರತಿಬಿಂಬಿಸುತ್ತದೆ. ಆನೆಯು ಸಮೃದ್ಧಿ ಹಾಗೂ ಶ್ರಮದ ಕೆಲಸವನ್ನು ಪ್ರತಿಬಿಂಬಿಸುವ ಸಂಕೇತವಾಗಿರುತ್ತದೆ.

ಒಂಬತ್ತು ದಿನದ ನವರಾತ್ರಿ
ಹಿಂದೂ ಪಂಚಾಂಗದ ಪ್ರಕಾರ ತಿಥಿಯನ್ನು ಆಧರಿಸಿ ನವರಾತ್ರಿಯನ್ನು ಆಚರಿಸಲಾಗುವುದು. ಹಾಗಾಗಿ ನವರಾತ್ರಿ ಆಚರಿಸುವ ದಿನಗಳ ಸಂಖ್ಯೆಯಲ್ಲಿ ಬದಲಾವಣೆ ಇರುತ್ತದೆ. ದೇವಿಯ ಎಲ್ಲಾ ಒಂಬತ್ತು ರೂಪಗಳು ಆರಾಧಿಸಲ್ಪಟ್ಟಿವೆಯಾದರೂ ದಿನಗಳ ಸಂಖ್ಯೆಯಲ್ಲಿ ಎಂಟು, ಒಂಬತ್ತು ಅಥವಾ ಹತ್ತು ದಿನಗಳು ಬರಬಹುದು. ಈ ವರ್ಷ ನವರಾತ್ರಿಯನ್ನು 9 ದಿನಗಳ ಕಾಲ ಆಚರಿಸಲಾಗುವುದು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುವುದು.

ಮೂರು ಮಂಗಳಕರ ಘಟನೆಗಳು
ಈ ವರ್ಷದ ನವರಾತ್ರಿಯಲ್ಲಿ ಮೂರು ಮಂಗಳಕರವಾದ ಯೋಗಗಳು ಸಮಭವಿಸುತ್ತವೆ. ರಾಜಯೋಗ, ಸರ್ವತ್ ಸಿದ್ಧಿಯೋಗ ಮತ್ತು ಅಮೃತ್ ಯೋಗವು ಈ ವರ್ಷ ಸಂಭವಿಸುತ್ತದೆ. ಈ ಯೋಗದಿಂದ ವರ್ಷದಲ್ಲಿ ಹೊಸ ಮನೆ, ಯೋಜನೆ, ಹೊಸ ಮನೆ ಪ್ರವೇಶ ಸೇರಿದಂತೆ ವಿವಿಧ ಬಗೆಯ ಮಂಗಳಕರವಾದ ಸಂಗತಿ ಸಂಭವಿಸುವುದು ಎನ್ನಲಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಾಂಕಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಅಕ್ಟೋಬರ್ 10- ಪ್ರತಿಪಾದ ರವಿ ಯೋಗ
- ಅಕ್ಟೋಬರ್ 12- ಚತುರ್ಥಿ ರವಿ ಯೋಗ.
- ಅಕ್ಟೋಬರ್ 13- ಪಂಚಮಿ ರವಿ ಯೋಗ.
- ಅಕ್ಟೋಬರ್ 14 - ಶಶಿ ರವಿಯೋಗ, ಸರ್ವತ್ ಸಿದ್ಧಿಯೋಗ.
- ಅಕ್ಟೋಬರ್ 15- ಸಪ್ತಮಿ ರವಿಯೋಗ.

ಜ್ಯೋತಿಷ್ಯ ಮನೆಯಲ್ಲಿ ಶುಕ್ರ ಗ್ರಹ
ನವರಾತ್ರಿಯ ಸಮಯದಲ್ಲಿ ಶುಕ್ರನು ತನ್ನದೇ ಆದ ಜ್ಯೋತಿಷ್ಯ ಮನೆಯಲ್ಲಿ ನೆಲೆಸಿದ್ದಾನೆ. ಇದನ್ನು ಮಂಗಳಕರವಾದ ಯೋಗ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮದಿಂದ ಜನರು ಎಲ್ಲಾ ಬಗೆಯ ಸಾಹಸಗಳಲ್ಲಿ ಯಶಸ್ಸನ್ನು ಹೊಂದಲು ಸಹಾಯ ಮಾಡುವುದು. ವಿಶೇಷವಾಗಿ ವಿವಾಹದ ಜೀವನದಲ್ಲಿ ಶುಕ್ರನು ಸಂತೋಷ ಹಾಗೂ ನೆಮ್ಮದಿಯನ್ನು ನೀಡುವನು. ಶುಕ್ರನು ತನ್ನ ಸ್ವಂತ ಮನೆಯಲ್ಲಿಯೇ ಇರುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುವುದು.

ನವರಾತ್ರಿಯ ಗುರುವಾರದ ಪೂಜೆಯ ಪ್ರಾಮುಖ್ಯತೆ
ನವರಾತ್ರಿಯ ಗುರುವಾರದ ಪೂಜೆಯು ಹೆಚ್ಚು ಉತ್ತಮವಾದದ್ದು. ಈ ವರ್ಷದ ನವರಾತ್ರಿಯ ಪೂಜೆಯು ಎರಡು ಗುರುವಾರವನ್ನು ಒಳಗೊಂಡಿದೆ. ಹಾಗಾಗಿ ಈ ಗುರುವಾರದ ನವರಾತ್ರಿ ಪೂಜೆ ಹಾಗೂ ಉಪವಾಸ ವ್ರತವು ಹೆಚ್ಚು ಮಂಗಳಕರವಾದದ್ದು ಎಂದು ಹೇಳಲಾಗುತ್ತದೆ.



Click it and Unblock the Notifications
