Latest Updates
-
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ!
Rama Navami 2022 : ಶ್ರೀ ರಾಮ ನವಮಿ ದಿನಾಂಕ, ರಾಮನ ಪೂಜೆಗೆ ಶುಭ ಮುಹೂರ್ತ
ಪ್ರತೀವರ್ಷ ಚೈತ್ರ ಶುಕ್ಲ ನವಮಿ ಅಂದರೆ ಚೈತ್ರ ಮಾಸದ 9ನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುವುದು. ಈ ದಿನ ಶ್ರೀ ರಾಮ ಜನಿಸಿದ ದಿನ, ಶ್ರೀ ರಾಮನನ್ನು ಶ್ರೀ ವಿಷ್ಣುವಿನ 7ನೇ ಅವತಾರವಾಗಿದೆ. ಚೈತ್ರ ಮಾಸದ ಹಬ್ಬಗಳ ಮುನ್ನುಡಿಯಾಗಿ ಶ್ರೀ ರಾಮ ನವಮಿಯನ್ನು ಆಚರಿಸಲಾಗುವುದು. ಅದಾದ ಬಳಿಕ ಚೈತ್ರ ನವರಾತ್ರಿ ಅಥವಾ ವಸಂತ ನವರಾತ್ರಿ ಆರಂಭ.
2022ರಲ್ಲಿ ಶ್ರೀ ರಾಮ ನವಮಿ ಯಾವಾಗ ಆಚರಿಸಲಾಗುವುದು, ಪೂಜಾ ಮುಹೂರ್ತ ಯಾವಾಗ, ಪೂಜೆಯ ವಿಧಿ ವಿದಾನಗಳೇನು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿ ಇದೆ ನೋಡಿ:

ಶ್ರೀ ರಾಮ ನವಮಿ 2022
ಚೈತ್ರ ಮಾಸದ ನವಮಿ ಈ ತಿಂಗಳು ಏಪ್ರಿಲ್ 10ಕ್ಕೆ ಬಂದಿದೆ. ಈ ದಿನದಂದು ಶ್ರೀ ರಾಮನ ಜನ್ಮ ದಿನವನ್ನು ಆಚರಿಸಲಾಗುವುದು.

ಶುಭ ಮುಹೂರ್ತ
ನವಮಿ ತಿಥಿ ಪ್ರಾರಂಭ: ಏಪ್ರಿಲ್ 9ರ ರಾತ್ರಿ 01:23ಕ್ಕೆ
ನವಮಿ ತಿಥಿ ಮುಕ್ತಾಯ: ಏಪ್ರಿಲ್ 11 ಮುಂಜಾನೆ 03:15ಕ್ಕೆ

ರಾಮ ನವಮಿ ಮಹತ್ವ:
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಶ್ರೀರಾಮ ನವಮಿ ತಿಥಿಯಲ್ಲಿ ಜನಿಸಿದರೆಂದು ನಂಬಲಾಗಿದೆ. ಅಯೋಧ್ಯೆಯಲ್ಲಿ ರಾಮ ನವಮಿ ಆಚರಣೆಗಳು ಅತ್ಯಂತ ಗಮನಾರ್ಹವಾದುದು ಏಕೆಂದರೆ ಇದು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ರಾಮ ನವಮಿ ಸಮಯದಲ್ಲಿ ಭಕ್ತರು ದೂರದ ಸ್ಥಳಗಳಿಂದ ಅಯೋಧ್ಯೆಗೆ ಬರುತ್ತಾರೆ. ಶ್ರೀ ರಾಮ ಮಂತ್ರಗಳನ್ನು ಜಪಿಸುವುದರಿಂದ ಎಲ್ಲ ಪಾಪಗಳನ್ನು ಕಳೆದು, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.

ರಾಮನವಮಿ ಪೌರಾಣಿಕ ಇತಿಹಾಸ:
ಪೌರಾಣಿಕ ಕತೆಯ ಪ್ರಕಾರ ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುತ್ತಾನೆ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯ ಪಾಯಸವನ್ನು ನೀಡಿ ಪತ್ನಿಗೆ ನೀಡುವಂತೆ ಹೇಳುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ರಾಮ ನವಮಿ ಆಚರಣೆ
ಈ ದಿನ ಶ್ರೀ ರಾಮನ ಭಕ್ತರು ಪವಿತ್ರ ಸ್ನಾನ ಮಾಡಿ ಶ್ರೀ ರಾಮನ ದೇವಾಲಯಕ್ಕೆ ಅಥವಾ ರಾಮ ಜನ್ಮ ಸ್ಥಳವಾದ ಅಯೋಧ್ಯೆಗೆ ಭೇಟಿ ಕೊಡುತ್ತಾರೆ. ಶ್ರೀರಾಮನ ರಥೋತ್ಸವ ಕೂಡ ಆಚರಿಸಲಾಗುವುದು. ಹಲವು ಕಡೆ ಪಾನಕ ಮಾಡಿ ಜನರಿಗೆ ನೀಡಲಾಗುತ್ತದೆ. ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅವನ ಭಕ್ತರ ಅಚಲ ನಂಬಿಕೆ. ಕಷ್ಟಗಳನ್ನು ಗೆಲ್ಲುವ ಶಕ್ತಿ ಶ್ರೀರಾಮ ಜಪದಿಂದ ಸಿಗುತ್ತದೆ.



Click it and Unblock the Notifications