Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಕರ ಸಂಕ್ರಾಂತಿ ಹಬ್ಬದಂದು ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ
ಮಕರ ಸಂಕ್ರಾಂತಿ ಎನ್ನುವುದು ಹಿಂದೂಗಳಿಗೆ ತುಂಬಾ ಪವಿತ್ರ ಹಾಗೂ ಶುಭವನ್ನು ಉಂಟು ಮಾಡುವಂತಹ ಹಬ್ಬವಾಗಿದೆ. ಗ್ರೆಗೊರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಲ್ಲಿ ಬರುವಂತಹ ಈ ಹಬ್ಬವು ಸೂರ್ಯನು ಪಥ ಬದಲಾಯಿಸುವಂತಹ ದಿನವಾಗಿದೆ. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಬೆಳೆಸುವನು. ಇದರಿಂದಾಗಿ ಮಕರ ಸಂಕ್ರಾಂತಿಯು ಬೇರೆಲ್ಲಾ ಸಂಕ್ರಾಂತಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು. ಮಕರ ಸಂಕ್ರಾಂತಿ ವೇಳೆಯಲ್ಲಿ ಕುಂಭ ಮೇಳವು ಆರಂಭವಾಗುವುದು. ಇದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.
ಮಕರ ಸಂಕ್ರಾಂತಿಯನ್ನು ದೇಶದ ವಿವಿಧೆಡೆಗಳಲ್ಲಿ ಹಲವಾರು ರೀತಿಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಒಂದೊಂದು ರಾಜ್ಯದಲ್ಲಿ ಆಚರಣೆಗಳು ಬದಲಾಗುತ್ತಾ ಹೋಗುತ್ತದೆ. ಹೆಚ್ಚಾಗಿ ಮಕರ ಸಂಕ್ರಾಂತಿಯು ಜನವರಿ 14ರಂದು ಬರುವುದು. ಆದರೆ ಈ ವರ್ಷ ಮಕರ ಸಂಕ್ರಾಂತಿಯು ಜನವರಿ 15ರಂದು ಬಂದಿದೆ. ಜನವರಿ 14ರಂದು ರಾತ್ರಿ ವೇಳೆ ಮಕರ ಸಂಕ್ರಾಂತಿಯು ಆರಂಭವಾಗುವ ಕಾರಣದಿಂದಾಗಿ ಜನವರಿ 15ರಂದು ಇದನ್ನು ಆಚರಿಸಿಕೊಳ್ಳಲಾಗುತ್ತಿದೆ. ಈ ಹಬ್ಬವು ವ್ಯಕ್ತಿಯೊಬ್ಬನ ಜೀವನದಲ್ಲಿ ಹೊಸತನ ಹಾಗೂ ಶಕ್ತಿ ತುಂಬುವುದು.

ಮಕರ ಸಂಕ್ರಾಂತಿಯು ವ್ಯಕ್ತಿ ಹಾಗೂ ಸಂಪೂರ್ಣ ಸಮಾಜಕ್ಕೆ ತುಂಬಾ ಲಾಭಕಾರಿಯಾಗಿರುವುದು. ಇದರಿಂದ ಕ್ರಮಬದ್ಧವಾಗಿ ಮಕರ ಸಂಕ್ರಾಂತಿ ಆಚರಣೆ ಮಾಡಿದರೆ ಅದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುವುದು ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯಂದು ನೀವು ಮಾಡಬಾರದ ಕೆಲವೊಂದು ಕೆಲಸಗಳನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಲು ಸಿದ್ಧರಾಗಿ...

ಒರಟುತನ ಪ್ರದರ್ಶಿಸುವುದು ರಾಕ್ಷಸರ ಗುಣ
ಮಕರ ಸಂಕ್ರಾಂತಿಯು ತುಂಬಾ ಪವಿತ್ರವಾದ ಹಬ್ಬ ಮತ್ತು ಈ ದಿನದಂದು ಜನರು ತುಂಬಾ ಸಂಭ್ರಮ ಹಾಗೂ ಉಲ್ಲಾಸದ ಆರಂಭ ಪಡೆಯಲು ಬಯಸುವರು. ನೀವು ಕೆಟ್ಟದಾಗಿ ಮಾತನಾಡಿದರೆ ಆಗ ಸುತ್ತಲು ನಕಾರಾತ್ಮಕತೆ ಹಬ್ಬಲಿದ್ದೀರಿ. ಯಾವುದೇ ವ್ಯಕ್ತಿಯು ಈ ದಿನ ತಾಜಾ ಆರಂಭವನ್ನು ಮಾಡಲು ಬಯಸುವುದಾದರೆ ಆಗ ಆತನೊಂದಿಗೆ ತುಂಬಾ ಒರಟಾಗಿ ಮಾತನಾಡಿದರೆ, ಇದರಿಂದ ಆತನಿಗೆ ಪ್ರೇರಣೆ ಇಲ್ಲದಂತೆ ಮಾಡಬಹುದು. ಇದರಿಂದ ಆತ ಅಥವಾ ಆಕೆಯ ಯಶಸ್ಸಿಗೆ ದೊಡ್ಡ ಮಟ್ಟಿನ ತಡೆಯಾಗಬಹುದು. ತುಂಬಾ ನಯವಿನಯದಿಂದ ಮಾತನಾಡುವಂತಹ ವ್ಯಕ್ತಿಗಳನ್ನು ಸೂರ್ಯದೇವರು ತುಂಬಾ ಪ್ರಶಂಸೆ ಮಾಡುವರು. ಸೂರ್ಯ ದೇವರ ಆಶೀರ್ವಾದ ಪಡೆಯುವಂತಹ ವ್ಯಕ್ತಿಯು ತುಂಬಾ ಆತ್ಮವಿಶ್ವಾಸ ಮತ್ತು ಸಮಾಜದಲ್ಲಿ ಪ್ರತಿಷ್ಠೆ ಪಡೆಯುವರು ಎಂದು ಹೇಳಲಾಗುತ್ತದೆ. ಸೂರ್ಯದೇವರು ಅತಿಯಾದ ಒರಟುತನವನ್ನು ಇಷ್ಟಪಡುವುದಿಲ್ಲ.

ವಿವೇಕದಿಂದ ಬಟ್ಟೆ ಧರಿಸಬೇಕು
ಭಾರತದಲ್ಲಿ ಹೆಚ್ಚಾಗಿ ಹಬ್ಬಗಳು ಬಂದರೆ ಮಹಿಳೆಯರು ತುಂಬಾ ಶೃಂಗಾರ ಮಾಡಿಕೊಂಡು, ಆಭರಣ ಧರಿಸಿ ಬಣ್ಣ ಬಣ್ಣದ ದುಬಾರಿ ಬಟ್ಟೆಗಳನ್ನು ಧರಿಸುವರು. ಆದರೆ ಮಕರ ಸಂಕ್ರಾಂತಿಯಂದು ಹೀಗೆ ಮಾಡಬಾರದು. ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿರುವ ಕಾರಣದಿಂದಾಗಿ ಜನರು ಇದನ್ನು ತುಂಬಾ ಸರಳವಾಗಿ ಆಚರಣೆ ಮಾಡುವರು. ಅತಿಯಾಗಿ ಶೃಂಗಾರ ಮಾಡಿಕೊಂಡರೆ ಆಗ ಈ ಹಬ್ಬದ ಪ್ರಾಮುಖ್ಯತೆಯು ಕಳೆದುಹೋಗುವುದು. ಈ ಹಬ್ಬವನ್ನು ಹೆಚ್ಚಾಗಿ ಕೃಷಿ ಕುಟುಂಬಗಳು ಆಚರಿಸುತ್ತವೆ. ಇದು ಸುಗ್ಗಿ ಋತುವಿನ ಕೊನೆಯ ದಿನವೆಂದು ಹೇಳಲಾಗುತ್ತದೆ. ಇದರಿಂದ ಇದು ಕೃಷಿಕರಿಗೆ ಮೀಸಲಾಗಿದೆ.

ಮರಗಳನ್ನು ಕಡಿಯಬಾರದು
ಪ್ರಕೃತಿಯಲ್ಲಿರುವಂತಹ ಮರಗಳನ್ನು ಹಿಂದೂಗಳು ಹೆಚ್ಚಾಗಿ ಆರಾಧಿಸುವರು. ಕೆಲವೊಂದು ಮರಗಳನ್ನು ದೇವರ ಪ್ರತಿರೂಪವೆಂದು ಭಾವಿಸಲಾಗುತ್ತದೆ. ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬ ಆಗಿರುವ ಕಾರಣದಿಂದಾಗಿ ಇದನ್ನು ಹಸಿರು ಹಾಗೂ ಮರಗಳ ಆರಾಧಿಸಲು ಕೂಡ ಬಳಸಲಾಗುತ್ತದೆ. ಈಗಷ್ಟೇ ಕಟಾವು ಮಾಡಲಾಗಿರುವಂತಹ ಬೆಳೆಗಳಿಗೆ ಇಲ್ಲಿ ಗೌರವ ನೀಡಲಾಗುತ್ತದೆ. ಈ ದಿನ ಮರಗಳನ್ನು ಕಡಿಯುವುದು ನಿಷಿದ್ಧವಾಗಿದೆ. ಮಕರ ಸಂಕ್ರಾಂತಿಯಂದು ಯಾರೂ ಮರಗಳನ್ನು ಕಡಿಯಲು ಹೋಗಬೇಡಿ.

ಮಾಂಸಾಹಾರ ಅಥವಾ ಮದ್ಯಪಾನ ಮಾಡಬೇಡಿ
ಎಲ್ಲಾ ಹಿಂದೂ ಹಬ್ಬಗಳಂತೆ ಮಾಂಸಾಹಾರ ಮತ್ತು ಮದ್ಯಪಾನ ಮಾಡುವುದು ಮಕರ ಸಂಕ್ರಾಂತಿಯಂದು ನಿಷಿದ್ಧವಾಗಿದೆ. ಇದರೊಂದಿಗೆ ನೀವು ಧೂಮಪಾನ ಕೂಡ ಮಾಡಬಾರದು. ಈ ಶುಭ ದಿನದಂದು ಮಾಂಸಾಹಾರ ಸೇವನೆ ಮಾಡದೆ ಸೌಹಾರ್ದತೆಯನ್ನು ಪ್ರದರ್ಶನ ಮಾಡಬೇಕು. ಇದರಿಂದ ಪ್ರಕೃತಿ ಕೂಡ ನಮಗೆ ಒಲಿಯುವುದು. ಈ ದಿನವು ಸಂಪೂರ್ಣವಾಗಿ ಸೂರ್ಯ ದೇವರಿಗೆ ಮೀಸಲಾಗಿರುವ ಕಾರಣದಿಂದ ಈ ದಿನ ಹೆಚ್ಚಿನ ಜನರು ಸೂರ್ಯ ದೇವರ ಆರಾಧನೆ ಮಾಡುವರು. ಈ ದಿನದಂದು ಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಮಾಡುವುದು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ.



Click it and Unblock the Notifications
