Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ನಾಗರ ಪಂಚಮಿ 2020: ನಾಗ ಪಂಚಮಿಯಂದು ಸರ್ಪದೋಷ ಇದ್ದವರು ಹೀಗೆ ಮಾಡಿ
ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲ್ಪಡುವ ಹಬ್ಬ ನಾಗರ ಪಂಚಮಿ, ಶ್ರಾವಣ ಮಾಸದಲ್ಲಿ ಬರುವ ಸಾಲು ಹಬ್ಬಗಳ ಪಟ್ಟಿಯಲ್ಲಿ ಬರುವ ಮೊದಲನೇ ಹಬ್ಬ.
ಈ ದಿನ ಹಾವಿಗೆ ಹಾಲೆರೆದು, ಪೂಜೆ ಮಾಡಿ ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344
ನಾಗರ ಪಂಚಮಿಯಂದು ಮಣೆ ಮೇಲೆ ಚಂದನ ಅಥವಾ ಅರಿಶಿಣದಿಂದ ನವನಾಗಗಳ ಆಕೃತಿ ಬರೆದು ಪೂಜೆ ಮಾಡುವ ಪದ್ಧತಿ ಇದೆ, ಅಥವಾ ನಾಗರ ಕಲ್ಲು ಅಥವಾ ನಾಗದೇವನ ಚಿತ್ರಕ್ಕೆ ಪೂಜೆ ಮಾಡಬಹುದು. ಈ ದಿನ ನಾಗದೇವನಿಗೆ ಅರಳು ಮತ್ತು ಹಾಲನ್ನು ನೈವೇದ್ಯವೆಂದು ಅರ್ಪಿಸಬೇಕು. ನಾಗದೇವನಿಗೆ ಈ ದಿನ ಧೂರ್ವೆಯನ್ನು ಸಹ ಅರ್ಪಿಸಲಾಗುತ್ತದೆ.
2020ನೇ ಸಾಲಿನ ನಾಗರ ಪಂಚಮಿಯ ಈ ಸಂದರ್ಭದಲ್ಲಿ ರಾಶಿಚಕ್ರಗಳಿಗೆ ಸರ್ಪದೋಷ ಇದ್ದರೆ ಇದನ್ನು ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ, ಬನ್ನಿ ಮುಂದೆ ತಿಳಿಯೋಣ.

ಮೇಷ ರಾಶಿಗೆ ಪರಿಹಾರ
ಕಾಳಪರ್ಪ ದೋಷದಿಂದ ಇರುವ ಮೇಷ ರಾಶಿಯವರು ನಾಗಪಂಚಮಿಯಂದು ಹಸುವಿಗೆ ಬಾರ್ಲಿಯನ್ನು ಆಹಾರವಾಗಿ ನೀಡಬೇಕು. ಇದನ್ನು ಮಾಡುವುದರಿಂದ ನೀವು ಈ ಸರ್ಪದೋಷದಿಂದ ಮುಕ್ತರಾಗುತ್ತೀರಿ ಮತ್ತು ನೀವು ಶಿವನ ಆಶೀರ್ವಾದವನ್ನೂ ಪಡೆಯುತ್ತೀರಿ.

ವೃಷಭ ರಾಶಿಗೆ ಪರಿಹಾರ
ವೃಷಭ ರಾಶಿಯವರು ನಾಗಪಂಚಮಿಯಂದು ದೇವಾಲಯಕ್ಕೆ ಅಥವಾ ಯಾವುದೇ ಧಾರ್ಮಿಕ ಸ್ಥಳಕ್ಕೆ ಬಿಳಿ ಧ್ವಜವನ್ನು ಅರ್ಪಿಸಬೇಕು. ನೀವು ಇದನ್ನು ಮಾಡುವುದರಿಂದ ಸರ್ಪ ದೋಷದಿಂದ ವಿಮುಕ್ತಿ ಪಡೆಯುವಿರಿ.

ಮಿಥುನ ರಾಶಿಗೆ ಪರಿಹಾರ
ಮಿಥುನ ರಾಶಿಯವರು ಈ ದಿನದಂದು ಹಸುವಿಗೆ ಹೆಸರುಕಾಳನ್ನು ದಾನವಾಗಿ ನೀಡಬೇಕು ಮತ್ತು ಹಸುವಿನಿಂದ ಆಶೀರ್ವಾದ ಪಡಯಬೇಕು. ಈ ಮೂಲಕ ಶುಭ ಫಲಗಳನ್ನು ನೀವು ನಿರೀಕ್ಷಿಸಬಹುದು.

ಕರ್ಕ ರಾಶಿಗೆ ಪರಿಹಾರ
ಕರ್ಕ ರಾಶಿಯವರು ನಾಗಪಂಚಮಿ ದಿನದಂದು ಶಿವಲಿಂಗಕ್ಕೆ ಪಂಚಾಮೃತದಿಂದ ಅಭಿಷೇಕವನ್ನು ಅರ್ಪಿಸಿ, ನಾಗದೇವತೆವನ್ನು ಪೂಜಿಸಬೇಕು.

ಸಿಂಹ ರಾಶಿಗೆ ಪರಿಹಾರ
ನಾಗ ಪಂಚಮಿಯ ದಿನ ಸಿಂಹ ರಾಶಿಯವರು ಬಾರ್ಲಿ ಅಕ್ಕಿಯನ್ನು ಹಸುವಿನ ಮೂತ್ರದಿಂದ ಸ್ವಚ್ಛಗೊಳಿಸಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಅರಳಿ ಮರದ ಕೆಳಗೆ ಇಡಬೇಕು. ನೀವು ಇದನ್ನು ಮಾಡುವುದರಿಂದ ನಿಮ್ಮ ಜಾತಕದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ.

ಕನ್ಯಾ ರಾಶಿಗೆ ಪರಿಹಾರ
ಸರ್ಪ ದೋಷ ಇರುವ ಕನ್ಯಾ ರಾಶಿಯವರು ಬೆಳ್ಳಿ ಸರ್ಪ ಜೋಡಿಯನ್ನು ಶಿವನ ದೇವಸ್ಥಾನಕ್ಕೆ ನೀಡಬೇಕು ಅಥವಾ ಶಿವ-ಪಾರ್ವತಿಯನ್ನು ಪೂಜಿಸುವ ಮೂಲಕ ಉಪವಾಸ ಮಾಡಬಹುದು.ಇದರಿಂದ ನಿಮ್ಮ ರಾಶಿಗಿರುವ ದೋಷ ಪರಿಹಾರವಾಗುತ್ತದೆ.

ತುಲಾ ರಾಶಿಗೆ ಪರಿಹಾರ
ಸರ್ಪ ದೋಷದಿಂದ ಬಳಲುತ್ತಿರುವ ತುಲಾ ರಾಶಿಯವರು ನಾಗರ ಪಂಚಮಿಯಂದು ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಬೇಕು ಮತ್ತು ನಾಗದೇವತೆಗೆ ಹಾಲನ್ನು ಅರ್ಪಿಸಬೇಕು.

ವೃಶ್ಚಿಕ ರಾಶಿಗೆ ಪರಿಹಾರ
ವೃಶ್ಚಿಕ ರಾಶಿಯವರು ಹಸುವಿನ ಗಂಜಲವನ್ನು ಸ್ನಾನದ ನೀರಲ್ಲಿ ಬೆರೆಸಿ ಅದರಲ್ಲಿ ಸ್ನಾನ ಮಾಡಬೇಕು. ಸಾಧ್ಯವಾದರೆ ಒಂದು ಜೋಡಿ ಹಾವನ್ನು ಮಾರಾಟಗಾರರಿಂದ ಖರೀದಿಸಿ ಕಾಡಿನಲ್ಲಿ ಬಿಡಿ. ಇದು ನಿಮ್ಮ ಜೀವನದಲ್ಲಿ ಎದುರಾಗಿರುವ ಕಾಳ ಸರ್ಪ ದೋಷಕ್ಕೆ ಅತ್ಯುತ್ತಮ ಪರಿಹಾರವಾಗಿದೆ, ಇದರ ನಂತರ ಶೀಘ್ರವೇ ಶುಭಫಲ, ಸುದ್ದಿಗಳನ್ನು ನೀವು ಪಡೆಯಬಹುದು.

ಧನು ರಾಶಿಗೆ ಪರಿಹಾರ
ಧನು ರಾಶಿಯವರು ನಾಗಪಂಚಮಿಯಂದು ಬಾರ್ಲಿ ಅಕ್ಕಿಯನ್ನು ನದಿಗೆ ಹಾಕಬೇಕು. ಶಿವ ಮತ್ತು ನಾಗದೇವತೆಗೆ ಶ್ರೀಗಂಧವನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ನಿಮಗೆ ಉತ್ತಮವಾಗಲಿದೆ.

ಮಕರ ರಾಶಿಗೆ ಪರಿಹಾರ
ಮಕರ ರಾಶಿಯವರು ನಾಗಪಂಚಮಿಯಂದು ಶಿವನಿಗೆ ರುದ್ರಾಭಿಷೇಕವನ್ನು ಅರ್ಪಿಸಿ ಮತ್ತು ರುದ್ರನನ್ನು ಪಠಿಸಿ. ಇದರಿಂದ ಕಾಳ ಸರ್ಪದೋಷದ ಜತೆಗೆ ಇತರೆ, ಎಲ್ಲಾ ದೋಷಗಳಿಂದಲೂ ಮುಕ್ತಿ ಸಿಗಲಿದೆ.

ಕುಂಭ ರಾಶಿಗೆ ಪರಿಹಾರ
ನಾಗಪಂಚಮಿ ದಿನದಂದು ಶಿವನ ದೇವಸ್ಥಾನಕ್ಕೆ ಹೋಗಿ ಗಂಗಾ ನೀರಿನಿಂದ ಅಭಿಷೇಕ ಮಾಡಿಸಿ ಮತ್ತು ನಾಗ ದೇವತೆಗೆ ಹಾಲು ಅರ್ಪಿಸಬೇಕು. ಇದನ್ನು ಮಾಡುವುದರಿಂದ ದೋಷ ವಿಮುಕ್ತಿ ಜತೆಗೆ ಶನಿ ದೇವರ ಆಶೀರ್ವಾದವನ್ನೂ ಪಡೆಯುತ್ತೀರಿ.

ಮೀನ ರಾಶಿಗೆ ಪರಿಹಾರ
ಮೀನ ರಾಶಿಯವರು ನಾಗಪಂಚಮಿಯಂದು ಮೀನುಗಳಿಗೆ ಒಂದು ಹಿಡಿ ಹಿಟ್ಟನ್ನು ಆಹಾರವಾಗಿ ನೀಡಿ. ಇದರಿಂದ ಸರ್ಪ ದೋಷ ಹಾಗೂ ಗುರುಗಳ ಆಶೀರ್ವಾದವನ್ನೂ ಪಡೆಯುತ್ತೀರಿ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications