Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಸೈತಾನನ ಚಿಹ್ನೆಗಳ ಹಿಂದಿರುವ ವಿಸ್ಮಯಕಾರಿ ರಹಸ್ಯಗಳು
ಸೈತಾನನ ಪರಿಕಲ್ಪನೆಯು ಬಹುತೇಕ ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ರೂಢಿಯಲ್ಲಿದೆ. ದೈವಶಕ್ತಿ ಮತ್ತು ದುಷ್ಟಶಕ್ತಿಗಳ ಆಲೋಚನೆಯು ಊಹೆಗು ನಿಲುಕದ ಕಾಲದಿಂದ ಚಾಲ್ತಿಯಲ್ಲಿವೆ. ನಮ್ಮ ನಂಬಿಕೆಯನ್ನು ರೂಪಿಸುವ ವ್ಯವಸ್ಥೆಗಳು ಸೈತಾನನಂತಹ ಸಂಗತಿಗಳನ್ನು ವಿಚಿತ್ರ ಸಂಗತಿಗಳನ್ನು ನಂಬುವಂತಹ ಹಾದಿಯಲ್ಲಿ ನಮ್ಮನ್ನು ಕರೆದೊಯ್ದಿದ್ದಾರೆ. ಕೆಲವೊಮ್ಮೆ ಇಂತಹವುಗಳನ್ನು ಉತ್ಪ್ರೇಕ್ಷೆ ಎಂದು ಬಿಟ್ಟು ಬಿಡಬಹುದು, ಆದರೆ ಕೆಲವೊಮ್ಮೆ ಇವುಗಳು ನಮಗೆ ಅರ್ಥವೇ ಆಗದ ಅಮೂರ್ತ ಪರಿಕಲ್ಪನೆಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ.

ಅದೇನೆ ಇರಲಿ ಸೈತಾನ ಮತ್ತು ದುಷ್ಟ ಶಕ್ತಿಗಳು ಯಾವಾಗಲು ಮನುಷ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಪರಿಕಲ್ಪನೆಗಳಾಗಿವೆ. ಈ ಸೈತಾನನು ಹಲವಾರು ಸಂಕೇತಗಳಿಗೆ ಜನ್ಮ ನೀಡಿದ್ದಾನೆ ಎಂಬುದು ಒಂದು ನಂಬಿಕೆ. ಈ ಸಂಕೇತಗಳನ್ನು ಸೈತಾನನ ಸಂಕೇತಗಳು ಎಂದು ಗುರುತಿಸಲಾಗುತ್ತದೆ. ಪುಟ್ಟದಾದ ರೆಡ್ ಹಾರ್ನ್ ಕೇಳಲು ಹಾಸ್ಯಾಸ್ಪದವಾಗಿ ಕಂಡರು, ಜನರಿಗೆ ಈ ಹೆಸರು ಕೇಳಿದ ಕೂಡಲೆ ದುಷ್ಟ ಶಕ್ತಿಯ ಪರಿಕಲ್ಪನೆ ಮತ್ತು ಭೀತಿ ಕಾಡುತ್ತದೆ. ಹೀಗೆ ಸೈತಾನ ಎನ್ನುವ ಪದವು ಮಾನವರನ್ನು ಆಶಾಭಂಗ ಮಾಡುವಂತಹ, ದಿಕ್ಕು ತಪ್ಪಿಸುವಂತಹ ಸ್ಥಿತಿಯನ್ನು ಸೂಚಿಸುತ್ತದೆ. ದೈವಿಕ ಶಕ್ತಿ ಹೊಂದಿರುವ ಭಾರತದ ಆರು ವೃಕ್ಷಗಳು
ಕುತೂಹಲಕಾರಿ ವಿಚಾರವೇನೆಂದರೆ ಸೈತಾನನು ದೇವರ ಅವಕೃಪೆಗೆ ಪಾತ್ರನಾದ ಒಬ್ಬ ದೇವದೂತ. ಹೀಗೆ ಅವಕೃಪೆಗೆ ಪಾತ್ರನಾದ ನಂತರ ಆತನು ಮಾನವರನ್ನು ಪಾಪ ಮಾಡಲು ಪ್ರಚೋದಿಸಲು ತೊಡಗಿದನಂತೆ. ಕೆಲವೊಂದು ರಹಸ್ಯ ಪಂಥಗಳು ಸೈತಾನನ್ನು ವಿಮೋಚಕ ಶಕ್ತಿಯನ್ನಾಗಿ ನೋಡುತ್ತಾರೆ. ಹಾಗಾಗಿ ಅವರು ಸೈತಾನನ್ನು ತಮ್ಮ ಎಲ್ಲಾ ದುಃಖಗಳಿಂದ ಪಾರು ಮಾಡು ಎಂದು ಆರಾಧಿಸುತ್ತಾರೆ. ಅವರು ಹಂಚಿಕೊಳ್ಳುವ ಭಾವನೆಗಳ ವೈಶಿಷ್ಟ್ಯಗಳು ಸೈತಾನನ ಅಸ್ತಿತ್ವ ಮತ್ತು ಸಂಕೇತಗಳೊಂದಿಗೆ ಸಂಬಂಧ ಹೊಂದಿರುತ್ತವೆ. ಇಲ್ಲಿ ನಾವು ಸೈತಾನನ ಸಂಕೇತಗಳ ಸುತ್ತ ಹರಡಿಕೊಂಡಿರುವ ರಹಸ್ಯಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ತಲೆಕೆಳಗಾದ ನಕ್ಷತ್ರ (ಪೆಂಟಾಗ್ರಾಮ್)
ಸಾಮಾನ್ಯವಾದ ಪೆಂಟಾಗ್ರಾಮ್ ಐದು ಕಾಲುಗಳನ್ನು ಹೊಂದಿದ್ದು, ಮೇಲ್ಮುಖವಾಗಿ ಮುಖ ಮಾಡಿ ನಿಂತಿರುತ್ತದೆ. ಆದರೆ ಸೈತಾನನ ಪಂಥದವರು ತಲೆಕೆಳಗಾದ ಪೆಂಟಾಗ್ರಾಮನ್ನು ತಮ್ಮ ನಾಸ್ತಿಕತೆಯ ಸಂಕೇತವಾಗಿ ಬಳಸುತ್ತಾರೆ. ಇದರ ನಾಲ್ಕು ಬಾಹುಗಳು ಮಾನವನನ್ನು ಮತ್ತು ತಲೆಯನ್ನು ಹಾಗು ಲೌಕಿಕ ಜಗತ್ತಿನ ನಾಲ್ಕು ಅಂಶಗಳನ್ನು ಹಾಗೂ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಇದು ಮಾನವನನ್ನು ಮತ್ತು ಪರಿಸರವನ್ನು ಸಹ ಗೌರವಿಸುವ ಸಂಕೇತವಾಗಿ ಪೂಜಿಸಲ್ಪಡುತ್ತದೆ. ಇದು ದೇವರ ವಿರುದ್ಧದ ಪ್ರತಿಭಟನೆಯ ಸ್ವರೂಪದಲ್ಲಿ ರೂಪುಗೊಂಡಿದೆ.
ಸೈತಾನನ ಶಿಲುಬೆ
ಇದನು ಲೆವಿಯಥಾನ್ ಕ್ರಾಸ್ ಎಂದು ಸಹ ಕರೆಯುತ್ತಾರೆ. ಬಹುತೇಕ ಜನರು ತಲೆಕೆಳಗಾದ ಶಿಲುಬೆಯನ್ನು ಸೈತಾನನ ಶಿಲುಬೆಯೆಂದು ನಂಬುತ್ತಾರೆ. ಆದರೆ ಇದು ಸತ್ಯವಲ್ಲ. ಸೈತಾನನ ಶಿಲುಬೆಯು ಕೆಳಭಾಗದಲ್ಲಿ ಅನಂತತೆಯ ಸಂಕೇತವನ್ನು ಮತ್ತು ಎರಡು ಶಿಲುಬೆಗಳು ಮೇಲ್ಮುಖವಾಗಿ ಮುಖ ಮಾಡಿರುವಂತೆ ಕಾಣಿಸುತ್ತವೆ. ಡಬಲ್ ಕ್ರಾಸ್ ಗಂಡು ಮತ್ತು ಹೆಣ್ಣುಗಳ ನಡುವಿನ ಹೊಂದಾಣಿಕೆಯನ್ನು ಮತ್ತು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಅನಂತತೆಯ ಸಂಕೇತವು ಶಾಶ್ವತವಾದ ವಿಶ್ರಾಂತಿಯನ್ನು/ ಸಂತೋಷವನ್ನು ಪ್ರತಿಬಿಂಬಿಸುತ್ತದೆ. ಆದರೆ ಲಾವೆಯಿಂದ ಈ ಸಂಕೇತವು ಶಾಶ್ವತವಾದ ಖಂಡನೆಯ ಸಂಕೇತವಾಗಿ ಬಳಸಲ್ಪಟ್ಟಿತು. ಈ ಲೆವಿಯಥಾನ್ ಕ್ರಾಸ್ ಅನ್ನು ಸೃಷ್ಟಿಸಿ, ಬಳಸಿದ್ದು ನೈಟ್ಸ್ ಟೆಂಪ್ಲರ್. ಮುಂದೆ ಚರ್ಚ್ ಆಫ್ ಸ್ಯಾಟನ್ ಸ್ಥಾಪಕನಾದ ಅಂಟಾನ್ ಲಾವೆಯು ಇದನ್ನು ಅಳವಡಿಸಿಕೊಂಡನು.
ಸಂಖ್ಯೆ 666
ಬುಕ್ ಆಫ್ ರೆವೆಲೆಷನ್ ಪ್ರಕಾರ ಸಂಖ್ಯೆ 666 ದೆವ್ವ ಅಥವಾ ಸೈತಾನನ ಸಂಖ್ಯೆಯಾಗಿದೆ. ಸೈತಾನನ ಅನುಯಾಯಿಗಳು ಈ ಸಂಖ್ಯೆಯನ್ನು ದೇವರ ವಿರುದ್ಧದ ದಂಗೆಯ ಸಂಕೇತವಾಗಿ ಹೆಮ್ಮೆಯಿಂದ ಬಳಸುತ್ತಾರೆ.
ಸಿಜಿಲ್ ಆಫ್ ಲುಸಿಫೆರ್
ಸಿಜಿಲ್ ಆಫ್ ಲುಸಿಫೆರ್ ಒಂದು ಸಂಕೇತವಾಗಿದ್ದು, ಇದು ಪಾಪಗ್ರಸ್ತ ದೇವದೂತರ ಯುವರಾಜನಾದ ಲುಸಿಫೆರ್‌ನನ್ನು ಪ್ರತಿನಿಧಿಸುತ್ತದೆ. ಇದೊಂದು ಮಾಯಾ ಸಂಕೇತವಾಗಿದ್ದು, ವಾಮಾಚರ ಮಾಡುವವರು ಈ ಸಂಕೇತವನ್ನು ಭೂತಗಳ ಆವಾಹನೆಗಾಗಿ ಬಳಸುತ್ತಾರೆ. ಭೂತಗಳನ್ನು ಆವಾಹಿಸಿದ ನಂತರ ಇವರಿಬ್ಬರು ಸೇರಿ ಅವರ ಕೋರಿಕೆಗಳನ್ನು ನೆರವೇರಿಸಿಕೊಳ್ಳಲು ಕೆಲಸ ಮಾಡುತ್ತಾರೆ. ಶ್ರೀಕೃಷ್ಣ ರಾಸಲೀಲೆಗೆ ಸಂಬಂಧಪಟ್ಟ ಅಚ್ಚರಿಯ ಕಥೆಗಳು
ಹಾವು
ಹಾವು ಸಹ ಸೈತಾನನ ಅತ್ಯಂತ ಪ್ರಸಿದ್ಧವಾದ ಸಂಕೇತವಾಗಿದೆ. ಈಡನ್ ಪಾರ್ಕಿನಲ್ಲಿ ನಿಷೇಧವೆನಿಸಿದ್ದ ಸೇಬನ್ನು ರುಚಿನೋಡುವಂತೆ ಮಾಡಿ ಮಾನವ ಕುಲವನ್ನು ಅವನತಿಗೆ ತಂದಿದ್ದು ಇದೇ ಹಾವು. ಹಾವು ನಮ್ಮ ಬೆನ್ನು ಮೂಳೆಯಲ್ಲಿರುವ ಜಾಗೃತಗೊಳ್ಳಲು ಕಾಯುತ್ತಿರುವ ಕುಂಡಲಿನಿ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸೈತಾನವಾದವು ಸಹ ತನ್ನ ಒಳಗೆ ಬುಸುಗುಡುವ ಹಾವಿನಂತೆಯೇ ಕಾದು ಕುಳಿತಿದೆ ಎಂದು ಇದು ಪ್ರತಿನಿಧಿಸುತ್ತದೆ.



Click it and Unblock the Notifications





