Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಶಿವರಾತ್ರಿಯಂದು ಈ ಕಾರ್ಯಗಳನ್ನು ತಪ್ಪಿಯೂ ಮಾಡದಿರಿ
ಫೆಬ್ರವರಿ 18 ರಂದು ಶನಿವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಫಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಮಹಾಶಿವ ರಾತ್ರಿ ಆಚರಿಸಲಾಗುವುದು.

ಶಿವರಾತ್ರಿಯಂದು ಉಪವಾಸ ವ್ರತ ಮಾಡಿ, ಜಾಗರಣೆ ಇದ್ದು ಶಿವನ ಜಪ ಮಾಡುತ್ತಾ ಈ ದಿನವನ್ನು ಕಳೆಯಬೇಕು. ಶಿವರಾತ್ರಿಯನ್ನು ಹೇಗೆ ಆಚರಿಸಬೇಕೆಂಬ ನಿಯಮಗಳಿವೆ. ಅದೇ ರೀತಿ ಈ ಶುಭ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಈ ಲೇಖನದಲ್ಲಿ ಶಿವರಾತ್ರಿಯಂದು ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಶಿವರಾತ್ರಿಯಂದು ಕಪ್ಪು ಬಟ್ಟೆ ಧರಿಸಬೇಡಿ
ಕಪ್ಪು ಬಣ್ಣವನ್ನು ಶಿವರಾತ್ರಿಯಂದು ಧರಿಸಬೇಡಿ. ಶನಿ ದೇವಾಲಯಕ್ಕೆ ಹೋಗುವಾಗ ಅಥವಾ ಅಯ್ಯಪ್ಪ ದೇವಾಲಯಕ್ಕೆ ಹೋಗುವಾಗ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಶಿವನ ದೇವಾಲಯಕ್ಕೆ ಹೀಗುವಾಗ ಕೆಂಪು, ಹಳದಿ, ಪಿಂಕ್ ಈ ಬಣ್ಣದ ಉಡುಪು ಧರಿಸಿ.

ಈ ಆಹಾರ ಸೇವಿಸಬೇಡಿ
ಈ ದಿನ ಅಕ್ಕಿ, ಗೋಧಿ, ಧಾನ್ಯಗಳು ಈ ರೀತಿಯ ಆಹಾರ ಸೇವಿಸಬಾರದು. ಈ ದಿನ ಒಂದೋ ಕಟ್ಟು ನಿಟ್ಟಿನ ಉಪವಾಸ ವ್ರತ ಮಾಡಬೇಕು, ಇಲ್ಲದಿದ್ದರೆ ನೀರು, ಹಣ್ಣು ಇವಷ್ಟೇ ಸೇವಿಸಬೇಕು.

ಹಿರಿಯರಿಗೆ ಅಗೌರವ ತೋರಬಾರದು
ಶಿವರಾತ್ರಿಯಂದು ಮನೆಯಲ್ಲಿ ಹಿರಿಯರಿಗೆ ಅಗೌರವ ತೋರಬೇಡಿ ಹಾಗೂ ಮನೆಯಲ್ಲಿ ಕೋಪದಿಂದ ಕಿರಾಚಾಡುವುದು ಏನೂ ಮಾಡಬಾರದು. ಈ ದಿನ ಶಿವನ ಧ್ಯಾನದಲ್ಲಿ ಕಳೆಯುವುದರಿಂದ ಮನ-ಮನೆ ಆಹ್ಲಾದಕರವಾಗಿರುತ್ತೆ.

ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು
ದೇವಾಲಯಕ್ಕೆ ಹೋದಾಗ ದೇವರಿಗೆ ಅರ್ಪಿಸಿದ ಪ್ರಸಾದ ಸೇವಿಸುತ್ತೇವೆ. ಆದರೆ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದ ಸೇವಿಸಬಾರದು ಎಂಬ ನಿಯಮವಿದೆ.

ಶಿವನಿಗೆ ತುಳಸಿ ಅರ್ಪಿಸಬಾರದು
ಹಿಂದೂ ಪೌರಾಣಿಕ ಕತೆಯ ಪ್ರಕಾರ ತುಳಸಿ ವಿಷ್ಣುವಿಗೆ ಅರ್ಪಿತಳು. ಆದ್ದರಿಂದ ಯಾವುದೇ ಕಾರಣಕ್ಕೆ ತುಳಸಿಯನ್ನು ಶಿವನಿಗೆ ಅರ್ಪಿಸಬಾರದು. ಯಾವುದೇ ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.

ಅರಿಶಿಣವನ್ನು ಶಿವಲಿಂಗಕ್ಕೆ ಹಚ್ಚಬಾರದು
ಅರಿಶಿಣ ಪುರುಷ ತತ್ವವನ್ನು ಕುಗ್ಗಿಸುತ್ತೆ,ಅರಿಶಿಣವನ್ನು ಸ್ತ್ರೀಯರಿಗೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಮಹಾದೇವನನ್ನು ಪ್ರಾರ್ಥಿಸುವಾಗ ಅರಿಶಿಣ ಬಳಸಬಾರದು.

ಚಂಪಾ, ಕೇದಗೆ ಹೂ ಬಳಸಬಾರದು
ಶಿವ ಈ ಎರಡೂ ಹೂಗಳಿಗೆ ಶಾಪ ನೀಡಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎರಡು ಹೂಗಳನ್ನು ಬಳಸುವಂತಿಲ್ಲ.



Click it and Unblock the Notifications
