Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ರಾಶಿಯವರ ಮೇಲೆ ಶಿವನ ವಿಶೇಷ ಕೃಪೆಯಿರುತ್ತಂತೆ
ಶಿವನ ನಂಬಿದವರನ್ನುಎಂದಿಗೂ ಕೈ ಬಿಡಲ್ಲ ಎಂಬುವುದು ಶಿವನ ಭಕ್ತರದ ಅನುಭವದ ಮಾತುಗಳು. ಶಿವನ ಮೇಲೆ ಭಾರ ಹಾಕಿ ಭಕ್ತಿಯಿಂದ ಪೂಜಿಸಿ ಎಷ್ಟೋ ಕಷ್ಟಗಳಿಂದ ಮುಕ್ತರಾದವರು ಇದ್ದಾರೆ. ಎಲ್ಲವೂ ಒಂದು ನಂಬಿಕೆ, ಆ ನಂಬಿಕೆ ಬಲವಾಗಿದ್ದರೆ ಅದರ ಶಕ್ತಿ ಇದ್ದೇ ಇರುತ್ತದೆ. ಶಿವನ ಪ್ರೀತಿ, ಕರುಣೆ, ಕೃಪೆ ಎಲ್ಲವೂ ಅವನ ಪೂಜಿಸುವವರ ಮೇಲಿರುತ್ತದೆ.
ಜ್ಯೋತಿಷ್ಯ ಪ್ರಕಾರ ಕೆಲವೊಂದು ರಾಶಿಗಳ ಮೇಲೆ ಶಿವನ ಅನುಕಂಪ ವಿಶೇಷವಾಗಿ ಇರುತ್ತದೆಯಂತೆ, ಶಿವನಿಗೆ ಇಷ್ಟವಾದ ಆ ರಾಶಿಗಳೆಂದರೆ

ಮೇಷ ರಾಶಿ
ಮೇಷ ರಾಶಿಯವರು ವಿಶೇಷವಾಗಿ ಶಿವನ ಆಶೀರ್ವಾದವನ್ನು ಹೊಂದಿದ್ದಾರೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಮೇಷ ರಾಶಿಯವರು ಪ್ರತಿದಿನ ಶಿವನನ್ನು ಪೂಜಿಸಬೇಕು. ಮೇಷ ರಾಶಿಯ ಜನರು ನಿಯಮಿತವಾಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ದೊರೆಯುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಜನರು ಶಿವನ ರೂಪಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಈ ರಾಶಿಯವರುಯಾವಾಗಲೂ ದುಃಖದಲ್ಲಿ ಅಥವಾ ಸಂತೋಷದಲ್ಲಿ ಭಗವಾನ್ ಶಿವನನ್ನು ಜಪಿಸುತ್ತಲೇ ಇರುತ್ತಾರೆ, ಆದ್ದರಿಂದ ಶಿವನು ಅವರ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ. ಈ ರಾಶಿಯ ಜನರು ಪ್ರತಿ ಸೋಮವಾರ ಶಿವ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸುವುದರಿಂದ ಮತ್ತಷ್ಟು ಒಳ್ಳೆಯದಾಗುತ್ತದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಶಿವನು ತುಂಬಾ ಕರುಣೆ ತೋರುತ್ತಾನೆ. ಇವರಿಗೆ ಶಿವನ ಮೇಲೆ ತುಂಬಾ ಭಕ್ತಿ. ಇವರು ಶಿವನಿಗಾಗಿ ಹಬ್ಬ-ಹರಿದಿನಗಳಲ್ಲಿ ತುಂಬಾ ನಿಷ್ಠೆಯಿಂದ ಪೂಜೆ ಮಾಡುತ್ತಾರೆ, ಉಪವಾಸ ಮಾಡುತ್ತಾರೆ. ಈ ರಾಶಿಯವರ ಮೇಲೆ ಶಿವನಿಗೆ ವಿಶೇಷ ಕರುಣಿಯಿರುತ್ತದೆ.

ಮಕರ ರಾಶಿ
ಕರ ರಾಶಿಯವರಿಗೆ ಶಿವನ ವಿಶೇಷ ಆಶೀರ್ವಾದವಿದೆ. ಮಕರ ರಾಶಿಯವರು ಪ್ರತಿದಿನ ಶಿವನ ಆರಾಧನೆ ಮಾಡಬೇಕು. ಮಕರ ರಾಶಿಯವರು 'ಓಂ ನಮಃ ಶಿವಾಯ' ಜಪ ಮಾಡಬೇಕು. ಭಗವಾನ್ ಶಂಕರನ ಭಕ್ತಿಯಿಂದ ಪೂಜಿಸಿದರೆ ಅವನ ಕೃಪೆಯಿಂದ ಈ ರಾಶಿಯವರು ಪ್ರತಿಯೊಂದು ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯ ಜನರು ಶಿವನಿಗೆ ಪ್ರಿಯರು. ಕುಂಭ ರಾಶಿಯ ಜನರು ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಕುಂಭ ರಾಶಿಯವರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಬಹುದ್ವಾರಿ ದಾನ ಮಾಡುವುದರಿಂದ ಬಹುಮುಖ ಫಲಿತಾಂಶಗಳು ದೊರೆಯುತ್ತವೆ.
ಕುಂಭ ರಾಶಿಯ ಜನರು ಶಿವನಿಗೆ ಪ್ರಿಯರು. ಕುಂಭ ರಾಶಿಯ ಜನರು ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಕುಂಭ ರಾಶಿಯವರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ ನೀವು ದಾನ ಮಾಡುವುದರಿಂದ ಬಹುಮುಖ ಫಲಿತಾಂಶಗಳು ದೊರೆಯುತ್ತವೆ.



Click it and Unblock the Notifications
