Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಸಮಾಜದಲ್ಲಿ ನಮಗೆ ಗೌರವ ಸಿಗಬೇಕೆಂದರೆ ನಮ್ಮ ವರ್ತನೆ ಹೇಗಿರಬೇಕು?
ನಾವು ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುವುದನ್ನು ತಿಳಿದರೆ ಸಮಾಜದಲ್ಲಿ, ನಮ್ಮ ಆಪ್ತ ವಲಯದಲ್ಲಿ ನಮ್ಮ ಗೌರವ ಹೆಚ್ಚಾಗುವದರ ಜೊತೆಗೆ ನಮ್ಮ ಮಾತಿನ ತೂಕ ಕೂಡ ಹೆಚ್ಚುವುದು. ಗೌರವ ಎಂಬುವುದನ್ನು ನಾವು ಬೇರೆಯವರ ಬಳಿ ಕೇಳಿ ಪಡೆದುಕೊಳ್ಳಲು ಸಾಧ್ಯವಿಲ್ಲ, ಅವರಾಗಿಯೇ ನೀಡುವಂತಿರಬೇಕು. ಅವರು ಗೌರವ ನೀಡಬೇಕೆಂದರೆ ನಮ್ಮ ವರ್ತನೆ ಬೇರೆಯವರು ನಮ್ಮನ್ನು ಗೌರವದಿಂದ ಕಾಣುವಂತೆ ಇರಬೇಕು.
ಈ ಸಮಾಜದಲ್ಲಿ ನಾವು ಜೀವಿಸುವಾಗ ಕೆಲವೊಂದು ಸಾಮಾಜಿಕ ನಿಯಮಗಳನ್ನು ಅರಿತುಕೊಂಡರೆ ನಮ್ಮಿಂದ ಬೇರೆಯವರಿಗೆ ಬೇಸರವಾಯ್ತಲ್ಲಾ ಎಂದು ನಿಂತಿಸಬೇಕಾಗಿಲ್ಲ. ನಾವಿಲ್ಲಿ ತುಂಬಾ ಸರಳವಾದ ಹಾಗೂ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಕೆಲವೊಂದು ನಡವಳಿಕೆ ಬಗ್ಗೆ ಹೇಳಿದ್ದೇವೆ ನೋಡಿ...

ಸಮಾಜದಲ್ಲಿ ನಮ್ಮ ವರ್ತನೆ ಹೀಗಿರಲಿ
1. ಒಬ್ಬರಿಗೆ ಒಮ್ಮೆ ಕಾಲ್ ಮಾಡಿ ರಿಸೀವ್ ಮಾಡದಿದ್ದಾಗ ಮತ್ತೊಮ್ಮೆ ಪ್ರಯತ್ನಿಸುವುದು ಸಹಜ, ಆಗಲೂ ರಿಸೀವ್ ಮಾಡದಿದ್ದರೆ ಮತ್ತೆ ಕಾಲ್ ಮಾಡುವುದು ಸಭ್ಯತೆ ಅಲ್ಲ, ಅವರಿಗೆ ನಿಮ್ಮ ಕಾಲ್‌ಗಿಂತಲೂ ಮಹತ್ವವಾದದ್ದು ಬೇರೇನೋ ಇದೆ ಎಂದು ಊಹಿಸಿ.
2. ಯಾರ ಬಳಿಯಾದರೂ ಹಣ ಪಡೆದುಕೊಂಡಿದ್ದರೆ ಅವರು ಕೇಳುವ ಮುನ್ನ ಅಥವಾ ಹೇಳಿದ ಸಮಯಕ್ಕೆ ಹಿಂತಿರುಗಿಸಿ. ನಿಮ್ಮ ನಡವಳಿಕೆ ಹಾಗೂ ಆತ್ಮ ಗೌರವ ಎತ್ತಿ ತೋರಿಸುತ್ತದೆ. ಹಣ ಮಾತ್ರವಲ್ಲ ಗಿಫ್ಟ್, ಲಂಚ್ ಪಾರ್ಟಿ ಇಂಥವುಗಳ ವಿಷಯಲದಲ್ಲೂ ಹೀಗೆ ವರ್ತಿಸಬೇಕು.
3. ಯಾರಾದರೂ ಲಂಚ್ ಅಥವಾ ಡಿನ್ನರ್ ಪಾರ್ಟಿಗೆ ಕರೆದರೆ ಮೆನುವಿನಲ್ಲಿರುವ ದುಬಾರಿ ಆಹಾರಕ್ಕೆ ಆರ್ಡರ್ ಮಾಡಬೇಡಿ.

ಸಮಾಜದಲ್ಲಿ ನಮ್ಮ ವರ್ತನೆ ಹೀಗಿರಲಿ
4. ಯಾರ ಬಳಿಯೂ ವಿಚಿತ್ರವಾದ ಪ್ರಶ್ನೆ ಕೇಳಬಾರದು ಅಂದ್ರೆ ನಿಮಗೆ ಇನ್ನೂ ಮದುವೆಯಾಗಿಲ್ವಾ? ಅಥವಾ ನಿಮಗೆ ಇನ್ನೂ ಮಕ್ಕಳಾಗಿಲ್ವಾ? ಇನ್ನೂ ಕಾರು ತಗೊಂಡಿಲ್ವಾ? ಇವೆಲ್ಲಾ ನಮ್ಮ ಸಮಸ್ಯೆಯಲ್ಲ, ಅದರಿಂದ ನಮಗೇನು ಆಗಬೇಕಾಗಿಯೂ ಅಲ್ಲ, ಮತ್ಯಾಕೆ ಅಂಥ ಪ್ರಶ್ನೆಗಳಿಂದ ಬೇರೆಯವರ ಮನಸ್ಸು ನೋಯಿಸುವುದು.
5. ನೀವು ಡೋರ್ ತಾಟುವಾಗ ನಿಮ್ಮ ಹಿಂದೆ ಯಾರಾದರೂ ಹಿಂದೆ ಅವರಿಗೆ ಡೋರ್ ಓಪನ್ ಇಡಿ, ಅವರು ದೊಡ್ಡವರು ಆಗಿರಲಿ, ಚಿಕ್ಕವರು ಆಗಿರಲಿ, ಬವರು ಆಗಿರಲಿ, ಶ್ರೀಮಂತರಾಗಿರಲಿ ಯಾವುದೇ ಬೇಧ ತೋರಿಸಬೇಡಿ.

ಸಮಾಜದಲ್ಲಿ ನಮ್ಮ ವರ್ತನೆ ಹೀಗಿರಲಿ
6. ನೀವು ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ನಿಮ್ಮ ಫ್ರೆಂಡ್ ಬಿಲ್ ಪಾವತಿಸಿದರೆ ಮುಂದಿನ ಬಾರಿ ನೀವು ಪಾವತಿಸಿ.
7. ಬೇರೆಯವರ ಅಭಿಪ್ರಾಯವನ್ನೂ ಗೌರವಿಸಿ. ನಿಮಗೆ 6 ಸಂಖ್ಯೆ ಕಂಡದ್ದು ಬೇರೆಯವರಿಗೆ 9 ರೀತಿ ಕಾಣುವುದು. ಅಲ್ಲದೆ ನೀವೇ ಯಾವುದಾದರೂ ನಿರ್ಧಾರಕ್ಕೆ ಬರುವ ಬದಲು ಮತ್ತೊಬ್ಬರ ಅಭಿಪ್ರಾಯ ಪಡೆಯಿರಿ.
8. ಬೇರೆಯವರು ಮಾತನಾಡುವಾಗ ಮಧ್ಯ ಬಾಯಿ ಹಾಕಬೇಡಿ, ಅವರ ಮಾತು ಪೂರ್ಣಗೊಳಿಸಿದ ಬಳಿಕ ಮಾತನಾಡಿ.
9. ನೀವು ಯಾರನ್ನಾದರೂ ತಮಾಷೆ ಮಾಡಿದಾಗ ಅವರಿಗೆ ಇಷ್ಟವಾಗದಿದ್ದರೆ ಮತ್ತೆ ಮಾಡಬೇಡಿ.

ಸಮಾಜದಲ್ಲಿ ನಮ್ಮ ವರ್ತನೆ ಹೀಗಿರಲಿ
10. ಸಾರ್ವಜನಿಕವಾಗಿ ಹೊಗಳಿ, ಟೀಕೆ ಮಾಡುವಾಗ ಅವರು ಮಾತ್ರ ಕೇಳಿಸುವಂತೆ ಹೇಳಿ.
11. ಯಾರ ಮೈ ತೂಕದ ಬಗ್ಗೆ ಕಮೆಂಟ್ ಮಾಡಬೇಡಿ. ದಪ್ಪಗಿದ್ದೀಯಾ ಎಂದು ಹೇಳುವುದಕ್ಕಿಂತ ಮೈಕೈ ತುಂಬಿ ಚೆನ್ನಾಗಿದ್ದೀಯ ಅಂತ ಹೇಳಿ.
12. ನಿಮ್ಮ ಬಳಿ ಸಹದ್ಯೋಗಿ ವೈದ್ಯರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಹೇಳಿದಾಗ ಏನು ಕಾಯಿಲೆ ಅಂತ ಕೇಳಬೇಡಿ. ಹುಷಾರು... ಹೋಗಿ ಬನ್ನಿ ಅನ್ನಿ, ಅವರಿಗೆ ಹೇಳಬೇಕೆನಿಸದರೆ ಹೇಳುತ್ತಾರೆ.
13. ಯಾರಾದರೂ ಅವರ ಮೊಬೈಲ್‌ನಲ್ಲಿ ಫೋಟೋ ತೋರಿಸಿದಾಗ ಸ್ವೈಪ್ ಲೆಫ್ಟ್ ಅಥವಾ ರೈಟ್ ಮಾಡಬೇಡಿ, ಅವರ ಮೊಬೈಲ್‌ನಲ್ಲಿ ಏನಿದೆ ಎಂಬುವುದು ಯಾರಿಗೆ ಗೊತ್ತು, ಆದ್ದರಿಂದ ಅವರು ತೋರಿಸಿದ ಫೋಟೋ ಮಾತ್ರ ನೋಡಿ.

ಸಮಾಜದಲ್ಲಿ ನಮ್ಮ ವರ್ತನೆ ಹೀಗಿರಲಿ
14. ಗುಮಸ್ತನಾಗಲಿ, ಸಿಇಒ ಆಗಿರಲಿ ಎಲ್ಲರನ್ನೂ ಗೌರವದಿಂದ ಕಾಣಿ. ವಯಸ್ಸಿನಲ್ಲಿ ಹಿರಿಯರನ್ನು ಗೌರವಿಸಿ.
15. ನಿಮನ್ನು ಕೇಳದೇ ಇದ್ದರೆ ಯಾರಿಗೂ ಸಲಹೆ ನೀಡಲು ಹೋಗಬೇಡಿ.
16. ನಿಮ್ಮ ಸ್ನೇಹಿತರನ್ನು ತುಂಬಾ ಸಮಯದ ಬಳಿಕ ಮೀಟ್ ಮಾಡುವಾಗ ಅವರ ಸ್ಯಾಲರಿ, ಆರ್ಥಿಕತೆ ಬಗ್ಗೆ ಕೇಳಬೇಡಿ.
17. ಅನಗ್ಯತ ಮೂಗು ತೂರಿಸುವ ಅಭ್ಯಾಸ ಒಳ್ಳೆಯದಲ್ಲ.
18. ಬಡವರ ಬಳಿ ನಿಮ್ಮ ಶ್ರೀಮಂತಿಕೆಯ ಬಗ್ಗೆ ಹೇಳಬೇಡಿ ಅಲ್ಲದೇ ನಿಮ್ಮ ಮಕ್ಕಳ ಬಗ್ಗೆಯೂ ಯಾರಲ್ಲಿ ಅಧಿಕ ಹೇಳಬೇಡಿ.
19. ಯಾರಾದರೂ ಗುಡ್ ಮೆಸೇಜ್ ಕಳುಹಿಸಿದರೆ ಧನ್ಯವಾದ ಅಂತ ಕಳುಹಿಸಿ.



Click it and Unblock the Notifications
